ಪ್ರತಿಭಟನೆ ಕುಳಿತಿದ್ದ ಹಿಂದೂ ನಾಯಕನ ಮೇಲೆ ಗುಂಡಿನ ದಾಳಿ, ಹಾಡಹಗಲೇ ನಡೆಯಿತು ಭೀಕರ ಹತ್ಯೆ!
ಪಂಜಾಬ್‌ನ ಅಮೃತಸರದಲ್ಲಿ ಭೀಕರ ಹತ್ಯೆ ನಡೆದಿದೆ. ದೇವಸ್ಥಾನದ ಆಡಳಿತ ಸಮಿತಿ ವಿರುದ್ಧ ಹೋರಾಟ ನಡೆಸುತ್ತಿದ್ದ ಹಿಂದುತ್ವದ ಫೈರ್ ಬ್ರ್ಯಾಂಡ್ ಎಂದೇ ಗುರುತಿಸಿಕೊಂಡಿದ್ದ ಸಿಧೀರ್ ಸುರಿ ಮೇಲೆ ಗುಂಡಿನ ದಾಳಿ ನಡೆದಿದೆ. ಭೀಕರ ದಾಳಿಯಲ್ಲಿ ಸುಧೀರ್ ಸುರಿ ಹತ್ಯೆಯಾಗಿದ್ದಾರೆ.
ಅಮೃತಸರ(ನ.04): ದೇವಸ್ಥಾನ ಆಡಳಿತ ಮಂಡಳಿಯಲ್ಲಿ ನಡೆಯುತ್ತಿದ್ದ ಅವ್ಯವಹಾರದ ವಿರುದ್ದ ಧ್ವನಿ ಎತ್ತಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಹಿಂದೂ ನಾಯಕ ಸುಧಿರ್ ಸುರಿ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆದಿದೆ. ಪಂಜಾಬ್‌ನ ಅಮೃತಸರದ ಪಕ್ಕದಲ್ಲಿರುವ ದೇವಸ್ಥಾನದ ಎದುರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಗುಂಡಿನ ದಾಳಿ ನಡೆಸಲಾಗಿದೆ. ಪ್ರತಿಭಟನೆ ವೇಳೆ ಸುಧೀರ್ ಸುರಿಗೆ ಪೊಲೀಸ್ ಭದ್ರತೆ ನೀಡಲಾಗಿತ್ತು. ಆದರೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದೆ. ಇದರಲ್ಲಿ ಎರಡು ಗುಂಡುಗಳು ಸುಧೀರ್ ಎದೆಗೆ ತುಗುಲಿದೆ. ಇದರಿಂದ ಸುಧೀರ್ ಸುರಿ ಹತ್ಯೆಯಾಗಿದ್ದಾರೆ. ಅಮೃತ ಸರದಲ್ಲಿ ಶಿವ ಸೇನೆ ಎಂಬ ಸಂಘಟನೆ ಸಂಸ್ಥಾಪಕರಾಗಿದ್ದಾರೆ. ತಮ್ಮ ಶಿವ ಸೇನಾ ಸಂಘಟನೆಗಳ ಮೂಲಕ ಅಮೃತಸರ ಸೇರಿದಂತೆ ಪಂಜಾಬ್‌ನ ಬಹುತೇಕ ಭಾಗದಲ್ಲಿ ಹಿಂದೂ ಪರ ಹೋರಾಟಗಳನ್ನು ನಡೆಸಿದ್ದಾರೆ. ಮತಾಂತರ ವಿರುದ್ಧ, ದೇವಸ್ಥಾನಗಳ ಪಾವಿತ್ರ್ಯತೆ ಕಾಪಾಡಿಕೊಳ್ಳುವ ಕುರಿತು ಹೋರಾಟ ನಡೆಸಿದ್ದಾರೆ.
ದೇವಸ್ಥಾನದ(Temple) ಹೊರಭಾಗದಲ್ಲಿ ದೇವರ ಮೂರ್ತಿಗಳ ಭಾಗಗಳು ಪತ್ತೆಯಾಗಿತ್ತು. ದೇವಸ್ಥಾನದ ಆಡಳಿತ ಮಂಡಳಿ ಅವ್ಯವಾಹಾರ ನಡೆಸಿದೆ. ದೇವರ ಮೂರ್ತಿಗಳನ್ನು ಧ್ವಂಸ ಮಾಡಲಾಗಿದೆ. ಮೂರ್ತಿಗಳ ಮೇಲಿನ ಚಿನ್ನಾಭರಣಗಳು ನಾಪತ್ತೆಯಾಗಿದೆ. ಇದರ ವಿರುದ್ಧ ತನಿಖೆಯಾಗಬೇಕು. ದೇವಸ್ಥಾನದ ಮೂರ್ತಿಗಳ ಭಾಗಗಳು ಆವರಣದಲ್ಲಿ ಪತ್ತೆಯಾಗಿದ್ದು ಹೇಗೆ ಎಂದು ಹಲವು ಪ್ರಶ್ನೆಗಳನ್ನು ಮಂದಿಟ್ಟು ಸುಧೀರ್ ಸುರಿ(Sudhir Suri protest) ಪ್ರತಿಭಟನೆ ನಡೆಸುತ್ತಿದ್ದರು. ನಿನ್ನೆ(ನ.03) ರಾತ್ರಿ ಈ ಕುರಿತು ದೇವಸ್ಥಾನದ ಆಡಳಿತ ಮಂಡಳಿ ಜೊತೆ ಮಾತುಕತೆಗೆ ಮುಂದಾಗಿದ್ದರು. ಆದರೆ ಆಡಳಿತ ಮಂಡಳಿ ಸದಸ್ಯರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಹೀಗಾಗಿ ಇಂದು ಬೆಳಗ್ಗೆಯಿಂದ ದೇವಸ್ಥಾನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಭೀಕರ ಘಟನೆ, ಸಮಾಜವಾದಿ ಪಕ್ಷದ ನಾಯಕ, ಪತ್ನಿ, ತಾಯಿಗೆ ಗುಂಡಿಕ್ಕಿ ಹತ್ಯೆ!
ಪ್ರತಿಭಟನೆ ವೇಳೆ ಜನರ ನಡುವಿನಿಂದ ಬಂದು ಏಕಾಏಕಿ ಸುಧೀರ್ ಸುರಿ ಮೇಲೆ ಗುಂಡು(Attack) ಹಾರಿಸಲಾಗಿದೆ. ನಾಲ್ಕು ಸುತ್ತು ಗುಂಡು ಹಾರಿಸಲಾಗಿದೆ. ಪೊಲೀಸ್ ಭದ್ರತೆ(Police Security) ನೀಡಿದ್ದರೂ ಗುಂಡಿನ ದಾಳಿ ನಡೆದಿದೆ. ತೀವ್ರ ರಕ್ತಸ್ರಾವಗೊಂಡಿತು. ತಕ್ಷಣವೇ ಸುಧೀರ್ ಅವರನ್ನು ಆಸ್ಪತ್ರೆ ದಾಖಲಿಸಲಾಗಿದೆ. ಆದರೆ ಅಷ್ಟರೊಳಗೆ ಸುಧೀರ್ ಸುರಿ(Sudhir suri Shot dead) ಪ್ರಾಣ ಪಕ್ಷಿ ಹಾರಿಹೋಗಿದೆ.
ಗಂಡಿನ ದಾಳಿ ಆರಂಭಗೊಳ್ಳುತ್ತಿದ್ದಂತೆ ಬೆಂಬಲಿಗರು ಅಲರ್ಟ್ ಆಗಿದ್ದಾರೆ. ಆದರೆ ರಕ್ಷಣೆ ಕೊಡುವ ಮೊದಲೇ ಸುಧೀರ್ ಸುರಿ ಗುಂಡೇಟು ತಗುಲಿದೆ. ಇತ್ತ ಹಲವು ಬೆಂಬಲಿಗರು ಗುಂಡಿನ ದಾಳಿ ನಡೆಸಿದ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯಿಂದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.