ಅ.25ಕ್ಕೆ ಪ್ರಧಾನಿ ಮೋದಿ ಯುಪಿಗೆ ಭೇಟಿ, 9 ಮೆಡಿಕಲ್ ಕಾಲೇಜು ಸೇರಿ ಹಲವು ಯೋಜನೆಗಳ ಉದ್ಘಾಟನೆ!

By Suvarna NewsFirst Published Oct 24, 2021, 5:45 PM IST
Highlights
  • ನಾಳೆ ಪ್ರಧಾನಿ ಮೋದಿ ಉತ್ತರ ಪ್ರದೇಶಕ್ಕೆ ಭೇಟಿ
  • ಆತ್ಮನಿರ್ಭರ್ ಸ್ವಸ್ತ್ ಭಾರತ್ ಯೋಜನೆ ಆರಂಭ
  • ಆರೋಗ್ಯ ಕ್ಷೇತ್ರದ ಹಲವು ಯೋಜನೆಗಳ ಉದ್ಘಾಟನೆ

ನವದೆಹಲಿ(ಅ.25): ದೇಶಾದ್ಯಂತ ಆರೋಗ್ಯ ಕ್ಷೇತ್ರದ(Health Sector) ಮೂಲ ಸೌಕರ್ಯ ಬಲಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ(Narendra Modi) ನಾಳೆ(ಅ.25) ಉತ್ತರ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಬೆಳಗ್ಗೆ 1030ಕ್ಕೆ ಪ್ರಧಾನಿ ಮೋದಿ ಸಿದ್ದಾರ್ಥನಗರದಲ್ಲಿ 9 ವೈದ್ಯಕೀಯ ಕಾಲೇಜು(Medical College) ಉದ್ಘಾಟಿಸಲಿದ್ದಾರೆ. ಇದರ ಜೊತೆಗೆ ಆರೋಗ್ಯ ಕ್ಷೇತ್ರದ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಲಸಿಕಾ ತಯಾರಕರ ಜೊತೆ ಮೋದಿ ಮಾತುಕತೆ; ಪ್ರಧಾನಿ ಕೊಂಡಾಡಿದ ಆದರ್ ಪೂನಾವಲ್ಲ!

ಉತ್ತರ ಪ್ರದೇಶದಲ್ಲಿ ಮೋದಿ, ಪ್ರಧಾನ ಮಂತ್ರಿ ಆತ್ಮನಿರ್ಭರ್ ಸ್ವಸ್ತ್ ಭಾರತ್ ಯೋಜನೆ (PMASBY) ಪ್ರಾರಂಭಿಸಲಿದ್ದಾರೆ. PMASBY ಮೂಲಕ ದೇಶದಾದ್ಯಂತ ಆರೋಗ್ಯ ರಕ್ಷಣಾ ಮೂಲಸೌಕರ್ಯವನ್ನು ಬಲಪಡಿಸುವ ಅತಿದೊಡ್ಡ ಪ್ಯಾನ್-ಇಂಡಿಯಾ ಯೋಜನೆ ಇದಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ವೃದ್ಧಿಸುವ ಮಹತ್ವದ ಯೋಜನೆ ಇದಾಗಿದೆ.

ಜನರ ಬೆಂಬಲದಿಂದ ಎಲ್ಲವೂ ಸಾಧ್ಯ: ಲಸಿಕೆ ವಿಚಾರದಲ್ಲಿ ಎಲ್ಲರ ಲೆಕ್ಕಾಚಾರ ಉಲ್ಟಾ ಮಾಡಿದ ಭಾರತ!

ವೈದ್ಯಕೀಯ ಕಾಲೇಜು ಉದ್ಘಾಟನೆ ಬಳಿಕ 1.15ಕ್ಕೆ ಮೋದಿ ವಾರಣಾಸಿಯಲ್ಲಿ PMASBY ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ವಾರಣಾಸಿಯಲ್ಲಿ  5200 ಕೋಟಿ ರೂಪಾಯಿಗಳ ವಿವಿದ ಅಭಿವೃದ್ಧಿ ಯೋಜನೆ ಉದ್ಘಾಟಿಸಲಿದ್ದಾರೆ. PMASBY ಅಡಿಯಲ್ಲಿ  ಗ್ರಾಮೀಣ ಪ್ರದೇಶಗಳಲ್ಲಿನ ಕ್ರಿಟಿಕಲ್ ಕೇರ್ ಸೌಲಭ್ಯ, ಪ್ರಾಥಮಿಕ ಆರೈಕೆ ಸೌಲಭ್ಯ, 17,788 ಗ್ರಾಮೀಣ ಆರೋಗ್ಯ, ಎಲ್ಲಾ ರಾಜ್ಯಗಳಲ್ಲಿ 1,024 ನಗರ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ ಸ್ಥಾಪನೆಯೂ ಸೇರಿದೆ.

'ಟೀಂ ಇಂಡಿಯಾ ಜಗತ್ತಿಗೆ ಶಕ್ತಿ ತೋರಿಸಿದೆ' ಲಸಿಕಾ ಅಭಿಯಾನಕ್ಕೆ ಮೋದಿ ಧನ್ಯವಾದ

4 ಹೊಸ ರಾಷ್ಟ್ರೀಯ ವೈರಾಲಜಿ ಸಂಸ್ಥೆ, WHO ಆಗ್ನೇಯ ಏಷ್ಯಾ ಪ್ರದೇಶದ ಪ್ರಾದೇಶಿಕ ಸಂಶೋಧನಾ ವೇದಿಕೆ, 9 ಜೈವಿಕ ಸುರಕ್ಷತೆ III ಪ್ರಯೋಗಾಲಯಗಳು, 5 ಹೊಸ ಪ್ರಾದೇಶಿಕ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಮೆಟ್ರೋಪಾಲಿಟನ್, ಜಿಲ್ಲೆ, ಪ್ರಾದೇಶಿಕ, ಮತ್ತಷ್ಟು ರಾಷ್ಟ್ರೀಯ ಮಟ್ಟದಲ್ಲಿ ಪ್ರಯೋಗಾಲಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಮೂಲಕ ದೇಶದಲ್ಲಿನ ಆರೋಗ್ಯ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸುವ ಗುರಿಯನ್ನು  PMASBY ಇಟ್ಟುಕೊಂಡಿದೆ. ಇದೇ ವೇಳೆ  ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳನ್ನು ಸಂಪರ್ಕಿಸಲು ಸಮಗ್ರ ಆರೋಗ್ಯ ಮಾಹಿತಿ ಪೋರ್ಟಲ್  ಎಲ್ಲಾ ರಾಜ್ಯಕ್ಕೆ ವಿಸ್ತರಿಸಲಾಗುತ್ತಿದೆ.

ಕುಶಿನಗರ ಏರ್‌ಪೋರ್ಟ್‌ ಉದ್ಘಾಟಿಸಿದ ಪಿಎಂ ಮೋದಿ, ಶ್ರೀಲಂಕಾದಿಂದ ಬಂದ ಮೊದಲ ವಿಮಾನ!

PMASBY ಯೋಜನೆ ಅಡಿ ದೇಶದ ಆರೋಗ್ಯ ಕ್ಷೇತ್ರವನ್ನು ಬಲಪಡಿಸಲಾಗುತ್ತಿದೆ. 17 ಹೊಸ ಸಾರ್ವಜನಿಕ ಆರೋಗ್ಯ ಘಟನ ಕಾರ್ಯಾಚರಣೆ ಹಾಗೂ ಸದ್ಯ ಇರುವ 33 ಸಾರ್ವಜನಿಕ ಆರೋಗ್ಯ ಘಟಗಳನ್ನು ಮೇಲ್ದರ್ಜೆಗೆ ಏರಿಸುವ ಗುರಿ ಹೊಂದಿದೆ. ಇದರ ಜೊತೆಗೆ ಆರೋಗ್ಯ ತುರ್ತುಪರಿಸ್ಥಿತಿಯನ್ನು ಎದುರಿಸಲು ತರಬೇತಿಿ ಪಡೆದ ಆರೋಗ್ಯ ಕಾರ್ಯಕರ್ತರನ್ನು ನಿರ್ಮಿಸಲು ಕೆಲಸ ಮಾಡಲಿದೆ.
 

click me!