
ನವದೆಹಲಿ(ಜೂ.07): ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ವಿಶೇಷವಾಗಿ ರೂಪಿಸಲಾಗಿರುವ 1, 2, 5, 10 ಮತ್ತು 20 ರು. ಮುಖಬೆಲೆಯ ನಾಣ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಇಲ್ಲಿ ಬಿಡುಗಡೆ ಮಾಡಿದರು.
ನಾಣ್ಯದ ಮೇಲೆ ‘ಆಜಾದಿ ಕಾ ಅಮೃತ ಮಹೋತ್ಸವ’ ಎಂಬ ಡಿಸೈನ್ ರೂಪಿಸಲಾಗಿದೆ. ಈ ನಾಣ್ಯಗಳನ್ನು ಅಂಧರು ಕೂಡಾ ಸುಲಭವಾಗಿ ಗುರುತಿಸುವ ರೀತಿಯಲ್ಲಿ ತಯಾರಿಸಲಾಗಿದೆ. ಇವು ಸ್ಮರಣಾರ್ಥ ನಾಣ್ಯಗಳಲ್ಲ. ಚಲಾವಣೆಗೆಂದೇ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಕಾಶ್ಮೀರ ನಿಭಾಯಿಸಲು ಬಿಜೆಪಿಗೆ ಸಾಧ್ಯವಿಲ್ಲ: ಕೇಜ್ರಿವಾಲ್ ವಾಗ್ದಾಳಿ
ನಾಣ್ಯ ಬಿಡುಗಡೆ ಮಾಡಿ ಮಾತನಾಡಿದ ಮೋದಿ ‘ಹೊಸ ಸರಣಿಯ ನಾಣ್ಯಗಳು ಜನರಿಗೆ ಅಮೃತ ಕಾಲದ ಗುರಿಗಳನ್ನ ನೆನಪಿಸುವುದರ ಜೊತೆಗೆ ದೇಶದ ಅಭಿವೃದ್ಧಿ ದಿಕ್ಕಿನಲ್ಲಿ ಮಾಡಬೇಕಾದ ಕೆಲಸಗಳ ಬಗ್ಗೆ ಉತ್ತೇಜಿಸಲಿದೆ’ ಎಂದು ಹೇಳಿದರು.
ಇದರ ನಡುವೆಯೇ ಎಕ್ಸಿಸ್ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ತಮ್ಮ ಆಯ್ದ ಶಾಖೆಗಳಲ್ಲಿ ನಾಣ್ಯಗಳನ್ನು ಚಲಾವಣೆಗಾಗಿ ವಿತರಿಸಲಿವೆ.
ಎಥೆನಾಲ್ ಮಿಶ್ರಣ ಗುರಿ ಸಾಧಿಸಿದ ಭಾರತ: ಮೋದಿ ಹರ್ಷ
ಈ ನಾಣ್ಯಗಳ ಪೈಕಿ 20 ರು. ನಾಣ್ಯ ಹಳೆಯ ವಿನ್ಯಾಸದಲ್ಲಿ 2019ರಲ್ಲೇ ಚಲಾವಣೆಗೆಂದು ಲೋಕಾರ್ಪಣೆಗೊಂಡಿತ್ತು. ಆದರೆ ಅದು ಹೆಚ್ಚು ಚಲಾವಣೆಗೆ ಬಂದಿರಲಿಲ್ಲ
ಭಾರತದ ಬ್ಯಾಂಕುಗಳು ಜಾಗತಿಕ ವಹಿವಾಟಿನ ಭಾಗವಾಗಲಿ: ಮೋದಿ
ಭಾರತದ ಬ್ಯಾಂಕ್ ಮತ್ತು ಕರೆನ್ಸಿಯನ್ನು ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಪೂರೈಕೆ ಜಾಲದ ಪ್ರಮುಖ ಭಾಗವಾಗಿ ಮಾಡುವ ಅವಶ್ಯಕತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಅಲ್ಲದೆ ಹಣಕಾಸು ಸಂಸ್ಥೆಗಳು ನಿರಂತರವಾಗಿ ಉತ್ತಮ ಹಣಕಾಸು ಮತ್ತು ಕಾರ್ಪೊರೆಟ್ ಆಡಳಿತಕ್ಕೆ ಒತ್ತು ನೀಡಬೇಕು ಎಂದು ಕರೆಕೊಟ್ಟಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೆಟ್ ಸಚಿವಾಲಯ ಹಮ್ಮಿಕೊಂಡಿರುವ ವಿಶೇಷ ಸಪ್ತಾಹ ಯೋಜನೆಗೆ ಸೋಮವಾರ ಇಲ್ಲಿ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ ‘ಭಾರತ ಈಗಾಗಲೇ ಹಣಕಾಸು ಒಳಗೊಳ್ಳುವಿಕೆಯ ಹಲವು ವೇದಿಕೆಗಳನ್ನು ಸೃಷ್ಟಿಸಿದೆ. ಇಂಥ ವೇದಿಕೆಗಳ ಗರಿಷ್ಠ ಸದ್ಭಳಕೆ ನಿಟ್ಟಿನಲ್ಲಿ ಅವುಗಳ ಕುರಿತು ಅರಿವು ಮೂಡಿಸುವ ಅವಶ್ಯಕತೆ ಇದೆ. ಜೊತೆಗೆ ಇಂಥ ಹಣಕಾಸು ಒಳಗೊಳ್ಳುವಿಕೆಯ ಪರಿಹಾರಗಳನ್ನು ಜಾಗತಿಕ ಮಟ್ಟದಲ್ಲೂ ವಿಸ್ತರಿಸುವ ಕೆಲಸ ಆಗಬೇಕಿದೆ’ ಕರೆ ಕೊಟ್ಟಿದ್ದಾರೆ.
‘ನಮ್ಮ ಬ್ಯಾಂಕ್‌ಗಳು ಮತ್ತು ಕರೆನ್ಸಿಯನ್ನು ಜಾಗತಿಕ ವಹಿವಾಟು ಮತ್ತು ಪೂರೈಕೆ ಜಾಲದ ಪ್ರಮುಖ ಭಾಗವನ್ನಾಗಿ ಮಾಡುವುದು ಹೇಗೆ ಎಂಬುದರ ಬಗ್ಗೆಯೂ ನಾವು ಒತ್ತು ನೀಡಬೇಕಿದೆ. ಏನಾನನ್ನಾದರೂ ಸಾಧಿಸಲು ಭಾರತ ಸಾಮೂಹಿಕವಾಗಿ ನಿರ್ಧರಿಸಿದರೆ, ಆಗ ಭಾರತ ಇಡೀ ವಿಶ್ವಕ್ಕೆ ಒಂದು ಹೊಸ ಭರವಸೆಯಾಗಿ ಹೊರಹೊಮ್ಮಬಲ್ಲದು ಎಂಬುದನ್ನು ನಾವು ಕಳೆದ 8 ವರ್ಷಗಳಲ್ಲಿ ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದ್ದೇವೆ. ಇಂದು, ಇಡೀ ವಿಶ್ವ ನಮ್ಮನ್ನು ಕೇವಲ ಓರ್ವ ಬಳಕೆದಾರನಾಗಿ ನೋಡದೆ, ಭಾರೀ ಬದಲಾವಣೆ, ಸೃಜನಾತ್ಮಕ, ನವೀನ ವ್ಯವಸ್ಥೆಯ ಭರವಸೆಯೆಂದು ಗಮನಿಸುತ್ತಿದೆ’ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ