ಜೈಲುವಾಸಿ ಸಿಧು ವೈದ್ಯಕೀಯ ಪರೀಕ್ಷೆಗಾಗಿ ಚಂಡೀಗಢ ಆಸ್ಪತ್ರೆಗೆ ದಾಖಲು

Published : Jun 07, 2022, 06:25 AM ISTUpdated : Jun 07, 2022, 06:57 AM IST
 ಜೈಲುವಾಸಿ ಸಿಧು ವೈದ್ಯಕೀಯ ಪರೀಕ್ಷೆಗಾಗಿ ಚಂಡೀಗಢ ಆಸ್ಪತ್ರೆಗೆ ದಾಖಲು

ಸಾರಾಂಶ

* ಪಟಿಯಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು  * ಜೈಲುವಾಸಿ ಸಿಧು ವೈದ್ಯಕೀಯ ಪರೀಕ್ಷೆಗಾಗಿ ಚಂಡೀಗಢ ಆಸ್ಪತ್ರೆಗೆ ದಾಖಲು * ಹೆಪಟಾಲಜಿ ವಿಭಾಗದಲ್ಲಿ ಸಿಧು ಅವರಿಗೆ ಪರೀಕ್ಷೆ

ಚಂಡೀಗಢ/ ಪಟಿಯಾಲ(ಜೂ.07): 34 ವರ್ಷಗಳ ಹಿಂದಿನ ರಸ್ತೆ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟಿಯಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಸೋಮವಾರ ಚಂಡೀಗಢ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಂಡೀಗಢದ ಪೋಸ್ಟ್‌ ಗ್ರಾಜುಯೇಟ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಎಜುಕೇಶನ್‌ ಅಂಡ್‌ ರಿಸಚ್‌ರ್‍ನ ಹೆಪಟಾಲಜಿ ವಿಭಾಗದಲ್ಲಿ ಸಿಧು ಅವರಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಪಟಿಯಾಲ ಜೈಲಿನಿಂದ ಬಿಗಿ ಭದ್ರತೆಯೊಂದಿಗೆ ಸಿಧು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರನ್ನು ಇನ್ನೂ ಹೆಚ್ಚಿನ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಗೋಧಿ ನಂಗೆ ಅಲರ್ಜಿ, ಸ್ಪೆಷಲ್ ಡಯಟ್ ಫುಡ್ ಕೊಡಿ: ಜೈಲಲ್ಲಿ ಸಿಧು ಬೇಡಿಕೆ

ಇದಕ್ಕೂ ಮೊದಲು 2 ವಾರಗಳ ಹಿಂದೆ ಅವರನ್ನು ಪಟಿಯಾಲದ ರಾಜಿಂದ್ರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿಧು ಅವರು ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಮತ್ತು ಪಿತ್ತಕೋಶ ರೋಗದಿಂದ ಬಳಲುತ್ತಿದ್ದಾರೆ. 1988ರಲ್ಲಿ ನಡೆದ ರಸ್ತೆ ಹೊಡೆದಾಟ ಪ್ರಕರಣದಲ್ಲಿ ವೃದ್ಧನೊಬ್ಬನ ಸಾವಿಗೆ ಕಾರಣವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಧು ಅವರಿಗೆ ಸುಪ್ರೀಂ ಕೋರ್ಚ್‌ 1 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಜೈಲಿನಲ್ಲಿ ಸಿಧುಗೆ ಕ್ಲರ್ಕ್ ನೇಮಕ!

 1988ರ ರಸ್ತೆ ಹೊಡೆದಾಟದ ಪ್ರಕರಣದಲ್ಲಿ ಜೈಲು ಸೇರಿರುವ ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಅವರನ್ನು ಪಟಿಯಾಲಾ ಕೇಂದ್ರೀಯ ಜೈಲಿನಲ್ಲಿ ಗುಮಾಸ್ತನಾಗಿ ನೇಮಕ ಮಾಡಲಾಗಿದೆ.

ಜೈಲಿನ ನಿಯಮಗಳ ಪ್ರಕಾರ ಕೈದಿಗಳನ್ನು ಕೌಶಲ್ಯರಹಿತ, ಅರೆ ಕೌಶಲ್ಯವುಗಳ್ಳ ಹಾಗೂ ಕೌಶಲ್ಯ ಹೊಂದಿದ ಕೈದಿಗಳನ್ನಾಗಿ ವರ್ಗೀಕರಿಸಲಾಗುತ್ತದೆ. ಜೈಲಿನಲ್ಲಿ ಮಾಡಿದ ಕೆಲಸಕ್ಕೆ ಅನುಗುಣವಾಗಿ ಕೌಶಲ್ಯರಹಿತ, ಅರೆ ಕೌಶಲ್ಯವುಗಳ್ಳ ಹಾಗೂ ಕೌಶಲ್ಯ ಹೊಂದಿದ ಕೈದಿಗಳಿಗೆ ಕ್ರಮವಾಗಿ ದಿನಕ್ಕೆ 40 ರು., 50 ರು. ಹಾಗೂ 60 ರು. ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಿಧು ಅವರನ್ನು ಕ್ಲರ್ಕ್ ಆಗಿ ನೇಮಕ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೊದಲು ಸಿಧುಗೆ 3 ತಿಂಗಳು ಕೆಲಸದ ತರಬೇತಿ ನೀಡಲಾಗುವುದು. ನಂತರ ಅವರ ವೇತನವನ್ನು ನಿರ್ಧರಿಸಲಾಗುವುದು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಶರಣಾದ ಸಿಧು ಪಟಿಯಾಲ ಸೆಂಟ್ರಲ್ ಜೈಲಿಗೆ, ಒಂದೇ ಜೈಲಿನಲ್ಲಿ ಇಬ್ಬರು ಬದ್ಧ ವೈರಿಗಳು!

ಜೈಲಿನಲ್ಲೇ ವಿಶೇಷ ಆಹಾರ:

ಐಶಾರಾಮಿ ಸ್ಪಾದಲ್ಲಿರವಂತೆ ಸಿಧು ಅವರ ಡಯೆಟ್‌ ಚಾರ್ಚ್‌ ತಯಾರಿಸಲಾಗಿದೆ. ಆರೋಗ್ಯ ತಪಾಸಣೆಯ ನಂತರ ವೈದ್ಯರ ಶಿಫಾರಸಿನ ಮೇರೆಗೆ ಸಿಧುಗೆ ಜೈಲಿನಲ್ಲಿಯೇ ವಿಶೇಷ ಆಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಸಿಧು ಆಪ್ತರು ತಿಳಿಸಿದ್ದಾರೆ.

ಬೆಳಿಗ್ಗೆ ಎದ್ದಿದ್ದೇ ಒಂದು ಕಪ್‌ ರೋಸ್‌ಮೆರಿ ಚಹಾ ಅಥವಾ ಒಂದು ಗ್ಲಾಸು ಎಳೆನೀರು ಕುಡಿಯುತ್ತಾರೆ. ಬೆಳಿಗ್ಗಿನ ಉಪಹಾರಕ್ಕಾಗಿ ಇವರಿಗೆ ಒಂದು ಗ್ಲಾಸು ಕೆನೆರಹಿತ ಹಾಲು, ಒಂದು ಟೇಬಲ್‌ ಸ್ಪೂನ್‌ನಷ್ಟುಅಗಸೆ/ಸೂರ್ಯಕಾಂತಿ ಅಥವಾ ಚಿಯಾ ಬೀಜಗಳು, 5-6 ಬಾದಾಮಿ, ಅಕ್ರೋಟು ಹಾಗೂ 2 ಪೀಕನ್‌ ನಟ್‌ಗಳನ್ನು ನೀಡಲಾಗುತ್ತದೆ. ಊಟಕ್ಕೂ ಮೊದಲು ಅವರಿಗೆ ಒಂದು ಗ್ಲಾಸು ಬೀಟರೂಟ್‌/ ಸೌತೆಕಾಯಿ/ ಮೂಸಂಬಿ/ ನೆಲ್ಲಿಕಾಯಿ/ ಹಳದಿ/ ಕ್ಯಾರೆಟ್‌ ಅಥವಾ ಅಲೊವೆರಾ ಜ್ಯೂಸ್‌ ಅನ್ನು ನೀಡಲಾಗುತ್ತದೆ. ಇದರೊಂದಿಗೆ ಕಲ್ಲಂಗಡಿ, ಕಿವಿ, ಸ್ಟ್ರಾಬೆರಿ, ಪೇರಲೆ, ಸೇಬು ಇವುಗಳಲ್ಲಿ ಪ್ರತಿ ದಿನವೂ ಒಂದೊಂದು ಹಣ್ಣಿನಂತೇ ನೀಡಲಾಗುತ್ತದೆ. ಇದರೊಂದಿಗೆ ಕಪ್ಪು ಕಡಲೆ (25 ಗ್ರಾಂ), ಹೆಸರು ಬೇಳೆ (25 ಗ್ರಾಂ)ಯೊಂದಿಗೆ ಸೌತೆಕಾಯಿ/ ಟೊಮೊಟೊ/ ಅರ್ಧ ನಿಂಬೆ ಹಣ್ಣು/ ಅವಕಾಡೊ ಹಣ್ಣನ್ನು ನೀಡಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!