ದೇಗುಲದಲ್ಲಿ ನಡೆಯಿತು ವಿಚಿತ್ರ : ಚಿನ್ನದ ಸರ ಕಳೆದುಕೊಂಡಾಕೆಗೆ ಸಿಕ್ತು ಚಿನ್ನದ ಬಳೆ

Suvarna News   | Asianet News
Published : Mar 15, 2022, 11:20 AM ISTUpdated : Mar 15, 2022, 11:30 AM IST
ದೇಗುಲದಲ್ಲಿ ನಡೆಯಿತು ವಿಚಿತ್ರ : ಚಿನ್ನದ ಸರ ಕಳೆದುಕೊಂಡಾಕೆಗೆ ಸಿಕ್ತು ಚಿನ್ನದ ಬಳೆ

ಸಾರಾಂಶ

ದೇಗುಲದಲ್ಲಿ ಚಿನ್ನದ ಸರ ಕಳೆದುಕೊಂಡಿದ್ದ ಮಹಿಳೆ ಸುಭದ್ರೆ ಚಿನ್ನದ ಸರ ಕಳೆದುಕೊಂಡವರು ತನ್ನ ಕೈಯಲ್ಲಿದ್ದ 2 ಬಳೆ ಬಿಚ್ಚಿಕೊಟ್ಟ ಅಪರಿಚಿತ ಮಹಿಳೆ

ಕಾಲ ಎಷ್ಟೇ ಮುಂದುವರೆದರು ಮಾನವೀಯತೆ ಇನ್ನೂ ಸತ್ತಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಈಗ ಕೇರಳದ ಕೊಲ್ಲಂ (Kollam) ಜಿಲ್ಲೆಯ ಪತ್ತನಪುರಂನಲ್ಲಿರುವ (Pathanapuram) ಪಟ್ಟಾಜಿ ದೇವಿ ದೇವಸ್ಥಾನವು (Pattazhi Devi temple) ಮಾನವೀಯತೆ ಮೇಲಿನ ನಂಬಿಕೆಯನ್ನು ಪುನರುಜ್ಜೀವನಗೊಳಿಸುವ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ.

ಈ ದೇವಸ್ಥಾನದಲ್ಲಿ ತಿರುವಾತಿರ ಉತ್ಸವದ ಸಮಯದಲ್ಲಿ, ಈ ಕಾರ್ಯಕ್ರಮಕ್ಕೆ ಬಂದ ಓರ್ವ ಮಹಿಳೆ ದೇವಸ್ಥಾನದೊಳಗೆ  ತನ್ನ ಚಿನ್ನದ ಸರವನ್ನು ಕಳೆದುಕೊಂಡಿದ್ದಾಳೆ. ಬಹುಶಃ ಅದು ಕಳ್ಳತನವಾಗಿರುವ ಅಥವಾ ಎಲ್ಲೋ ಬಿದ್ದು ಹೋಗಿರುವ ಸಾಧ್ಯತೆ ಇದೆ. ಸುಭದ್ರೆ (Subhadra) ಎಂಬವರೇ ತಮ್ಮ  2 ಪವನ್ ಚಿನ್ನದ ಸರ ಕಳೆದುಕೊಂಡವರು.

Kashi Vishwanath: ಕಾಶಿ ವಿಶ್ವನಾಥನ ಗರ್ಭಗುಡಿಗೆ ಮೋದಿ ತಾಯಿಯ ತೂಕದಷ್ಟು ಚಿನ್ನದ ಲೇಪನ!

ಶನಿವಾರ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬೆಲೆಬಾಳುವ ಆಭರಣ ಕಳೆದುಕೊಂಡಿದ್ದರಿಂದ ಸಂಕಟಕ್ಕೀಡಾದ ಅವರು ಅಲ್ಲೇ ಜೋರಾಗಿ ಅಳಲು ಶುರು ಮಾಡುತ್ತಾರೆ. ಈ ವೇಳೆ ಸುಭದ್ರೆ ಅಳುವುದನ್ನು ನೋಡಿದ ಇನ್ನೊಬ್ಬ ಮಹಿಳೆ ಅವಳನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ. ಅಲ್ಲದೇ ದೇವಾಲಯದಿಂದ ಹೊರಡುವ ಮೊದಲು ಅವರು ಆಕೆಗೆ  ಅವರ ಬಳಿ ಇದ್ದ ಎರಡು ಚಿನ್ನದ ಬಳೆಗಳನ್ನು ಕೊಟ್ಟು ಹೋಗಿದ್ದಾರೆ. ಈ ಎರಡು ಬಳೆಗಳನ್ನು ಮಾರಾಟ ಮಾಡಿ ಚಿನ್ನದ ಸರ ಖರೀದಿಸುವಂತೆ ಆ ಮಹಿಳೆ ಸುಭದ್ರೆಗೆ ಹೇಳಿದ್ದಾಳೆ. ಅಲ್ಲದೇ ದೇವರಿಗೆ ಮುಂದೆ ದೇವರಿಗೆ ಚಿನ್ನದ 'ಪೊಟ್ಟು' ಮಾಡಿ ಸಮರ್ಪಿಸುವಂತೆ ಸಲಹೆ ನೀಡಿದ್ದಾರೆ. 

ಬಡವರಿಗೆ ಸಹಾಯ ಮಾಡಲು ಮನೆಯನ್ನೇ ಅಡವಿಟ್ಟ ಬಿಹಾರದ ಚಹಾ ಮಾರಾಟಗಾರ 
 

ಶುಭ ಕಾರ್ಯದ ಸುದ್ದಿ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳು ಮತ್ತು ದೇವಾಲಯದ ಅಧಿಕಾರಿಗಳು ನಷ್ಟದಲ್ಲಿರುವ ಮಹಿಳೆಗೆ ತನ್ನ ಬಳೆಗಳನ್ನು ದಾನ ಮಾಡಿದ ಪುಣ್ಯ ಮಹಿಳೆಯ ಹುಡುಕಾಟದಲ್ಲಿದ್ದಾರೆ. ಆದರೆ ಅವರಿನ್ನು ದೇಗುಲ ಸಮಿತಿಯವರ ಕೈಗೆ ಸಿಕ್ಕಿಲ್ಲ. ಒಟ್ಟಿನಲ್ಲಿ ದಾನದ ವಿಚಾರದಲ್ಲಿ ಬಲಗೈಲ್ಲಿ ಕೊಟ್ಟಿದ್ದು ಎಡಗೈಗೂ ತಿಳಿಯಬಾರದು ಎಂಬ ಮಾತಿದೆ. ಆ ಮಾತಿಗೆ ಈ ಪುಣ್ಯಾತ್ಮ ಮಹಿಳೆ ಬದ್ಧರಾದಂತಿದೆ. 

ಕಳ್ಳತನದ ಮಾಂಗಲ್ಯಸರ ವಾಪಸ್; ಕಳ್ಳನನ್ನು ಕ್ಷಮಿಸಿ ಮಾನವೀಯತೆ ಮೆರೆದ ದಂಪತಿ..!

ಕೊರೋನಾ ಎರಡನೇ ಅಲೆ ವೇಳೆ ಸೋಂಕಿತರಾಗಿ ಚಿಕಿತ್ಸೆಗೆ ದಾಖಲಾಗಿದ್ದ ವೃದ್ಧೆಯೊಬ್ಬರ ಕತ್ತಿನಲ್ಲಿದ್ದ 3 ಲಕ್ಷ ಮೌಲ್ಯದ ಚಿನ್ನದ ಸರ ಕಳವು ಮಾಡಿದ್ದ ಖಾಸಗಿ ಆಸ್ಪತ್ರೆಯ ನೌಕರನೊಬ್ಬ ಎಂಟು ತಿಂಗಳ ಬಳಿಕ ಬ್ಯಾಡರಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದ ಘಟನೆ ಕೆಲ ದಿನಗಳ ಹಿಂದೆ ನಡೆದಿದೆ. ಜಾಲಹಳ್ಳಿ ಕ್ರಾಸ್‌ ಸಮೀಪ ನಿವಾಸಿ ಇಮ್ತಿಯಾಜ್‌ ಬಂಧಿತನಾಗಿದ್ದು(Arrest), ಆರೋಪಿಯಿಂದ 70 ಗ್ರಾಂ ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ. ಬ್ಯಾಡರಹಳ್ಳಿ ಸಮೀಪ ಕೆಂಪೇಗೌಡ ನಗರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಈ ಕಳ್ಳತನ(Theft) ನಡೆದಿತ್ತು. ಇತ್ತೀಚೆಗೆ ಆಸ್ಪತ್ರೆ ಸಿಬ್ಬಂದಿಯನ್ನು ಮತ್ತೆ ವಿಚಾರಣೆಗೆ ಒಳಪಡಿಸಿದಾಗ ಆರೋಪಿ(Accused) ಸಿಕ್ಕಿಬಿದ್ದ ಎಂದು ಪೊಲೀಸರು(Police) ಹೇಳಿದ್ದಾರೆ.

ಇದಕ್ಕೂ ಮೊದಲು ಕೂಡ ವಿಚಿತ್ರ ಘಟನೆಯೊಂದು ನಡೆದಿತ್ತು. ತಪ್ಪು ಮಾಡಿದ ವ್ಯಕ್ತಿಗೆ ಪಶ್ಚಾತ್ತಾಪ ಹೇಗೆ ಕಾಡುತ್ತದೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ. ಕೊರೊನಾ ಸಂಕಷ್ಟದಿಂದ ಆರ್ಥಿಕ ಸಮಸ್ಯೆ ಉಂಟಾಗಿ, ಬೇರೆ ದಾರಿ ಕಾಣದೇ ಕಳ್ಳತನಕ್ಕೆ ಇಳಿದ ವ್ಯಕ್ತಿ, ಪಶ್ಚಾತ್ತಾಪಪಟ್ಟು ಕೊನೆಗೆ ಕದ್ದಿದ್ದ ಮಾಂಗಲ್ಯ ಸರವನ್ನು ಸುವರ್ಣ ನ್ಯೂಸ್‌ಗೆ ತಲುಪಿಸಿರುವ ಅಪರೂಪದ ಘಟನೆ ಕೆಲದಿನಳ ಹಿಂದೆ ನಡೆದಿತ್ತು. ಆತನ ಕೋರಿಕೆ ಮೇರೆಗೆ ಸುವರ್ಣ ನ್ಯೂಸ್ ತಂಡ ಪೊಲೀಸರ ನೆರವಿನಿಂದ ವಾರಸುದಾರರಾದ ಇಂದಿರಾನಗರದ ಕಸ್ತೂರಿ, ಬಾಲಸುಬ್ರಹ್ಮಣ್ಯ ದಂಪತಿಗೆ ಹಸ್ತಾಂತರಿಸಲಾಯಿತು. ಆ ದಂಪತಿ ಕದ್ದಿದ್ದ ವ್ಯಕ್ತಿಯನ್ನು ಕ್ಷಮಿಸಿ ಮಾನವೀಯತೆ ಮೆರೆದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!
ನಾವ್ಯಾರಿಗೂ ಕಮ್ಮಿ ಇಲ್ಲ ಬ್ರೋ... ಆಹಾ ಭಾರತೀಯ ನಾರಿ ಕುಡಿದು ರಾಪಿಡೋ ಏರಿ ಬಿದ್ದಳು ಕೆಳಗೆ ಜಾರಿ: ವೀಡಿಯೋ