ಪಾಕಿಸ್ತಾನ ಅಭಿವೃದ್ಧಿಗೆ ಧುರಂಧರ್-2 ಲಾಭದಲ್ಲಿ ₹500 ಕೋಟಿ ಕೊಡಿ: ರಸ್ತೆ, ಮೂಲಸೌಕರ್ಯಕ್ಕೆ ಭಿಕ್ಷೆ ಬೇಡಿದ ಪಾಕಿಗಳು!

Published : Mar 29, 2026, 06:56 PM ISTUpdated : Mar 29, 2026, 07:06 PM IST
Dhuranhdr Movie Pakistan

ಸಾರಾಂಶ

1000 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್ ಮಾಡಿ ಸೂಪರ್ ಹಿಟ್ ಆಗಿರುವ ಬಾಲಿವುಡ್ ಸಿನಿಮಾ 'ಧುರಂಧರ್ 2' ಚಿತ್ರತಂಡದ ಮುಂದೆ ಪಾಕಿಸ್ತಾನದ ಲೈರಿ ನಿವಾಸಿಗಳು ಒಂದು ವಿಚಿತ್ರ ಬೇಡಿಕೆ ಇಟ್ಟಿದ್ದಾರೆ. ನಮ್ಮೂರಿನ ಕಥೆ ಇಟ್ಟುಕೊಂಡು ಮಾಡಿದ ಸಿನಿಮಾದ ಲಾಭದಲ್ಲಿ ನಮಗೂ ₹500 ಕೋಟಿ ಪಾಲು ಕೊಡಿ ಎಂದು ಕೇಳಿದ್ದಾರೆ.

ದುರಂಧರ್ ಸಿನಿಮಾವನ್ನ ಪಾಕಿಸ್ತಾನದ ಲೈರಿ ಪ್ರದೇಶವನ್ನ ಆಧಾರವಾಗಿ ಇಟ್ಟುಕೊಂಡು ನಿರ್ಮಾಣ ಮಾಡಿದ್ದೀರಿ. ಇದೀಗ ದುರಂಧರ್ ಮತ್ತು ದುರಂಧರ್: ದಿ ರಿವೇಂಜ್ ಎರಡೂ ಭಾಗಗಳು ಭರ್ಚಜರಿ ಯಶಸ್ಸು ಕಂಡಿವೆ. ಈ ಸಿನಿಮಾಗೆ ಬಂದಿರುವ 1000 ಕೋಟಿ ರೂ. ಹಣದಲ್ಲಿ ನಮಗೂ 500 ಕೋಟಿ ರೂ. ಕೊಟ್ಟುಬಿಡಿ. ಕಾರಣ ನೀವು ನಮ್ಮ ಊರು ಲೈರಿ ಹೆಸರಿನಲ್ಲಿ ಸಿನಿಮಾ ಮಾಡಿದ್ದು, ಇಲ್ಲಿನ ರಸ್ತೆ ಹಾಗೂ ಮೂಲ ಸೌಕರ್ಯಗಳನ್ನು ನಾವು ಅಭಿವೃದ್ಧಿ ಮಾಡುತ್ತೇವೆ ಎಂದು ಪಾಕಿಸ್ತಾನಿ ಪ್ರಜೆಗಳು ಬೇಡಿಯೊಡ್ಡಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ರಿಲೀಸ್ ಆಗಿದ್ದ ಬಾಲಿವುಡ್ ಸಿನಿಮಾ 'ಧುರಂಧರ್' ಭಾರತೀಯ ಚಿತ್ರರಂಗದ ಅತಿದೊಡ್ಡ ಹಿಟ್‌ಗಳಲ್ಲಿ ಒಂದಾಗಿತ್ತು. ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರ ಸುಮಾರು 1400 ಕೋಟಿ ರೂಪಾಯಿ ಗಳಿಸಿತ್ತು. ಈ ಭರ್ಜರಿ ಯಶಸ್ಸಿನ ನಂತರ, ಕೇವಲ 3 ತಿಂಗಳಲ್ಲೇ ಅದರ ಸೀಕ್ವೆಲ್ ಥಿಯೇಟರ್‌ಗಳಿಗೆ ಲಗ್ಗೆ ಇಟ್ಟಿದೆ. ಇಷ್ಟು ಬೇಗ ಒಂದು ಸೀಕ್ವೆಲ್ ಬರುವುದು ಬಹುಶಃ ಭಾರತೀಯ ಸಿನಿಮಾದಲ್ಲೇ ಮೊದಲು. 'ಧುರಂಧರ್: ದಿ ರಿವೆಂಜ್' ಅಂತ ಹೆಸರಿಟ್ಟಿರೋ ಈ ಎರಡನೇ ಭಾಗ, ಮೊದಲ ಭಾಗಕ್ಕಿಂತಲೂ ದೊಡ್ಡ ಹಿಟ್ ಆಗಿದೆ. ಕೇವಲ ಒಂದೇ ವಾರದಲ್ಲಿ ಗ್ಲೋಬಲ್ ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ 1000 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಸಿನಿಮಾದ ಯಶಸ್ಸಿನ ಬೆನ್ನಲ್ಲೇ, ಪಾಕಿಸ್ತಾನದ ಲೈರಿ ನಿವಾಸಿಗಳು ಒಂದು ಇಂಟ್ರೆಸ್ಟಿಂಗ್ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ನಮ್ಮಲ್ಲಿ ರಸ್ತೆ ಸೇರಿ ಮೂಲ ಸೌಕರ್ಯಗಳೇ ಇಲ್ಲ

'ಧುರಂಧರ್' ಸರಣಿಯ ಎರಡೂ ಭಾಗಗಳ ಪ್ರಮುಖ ಕಥಾಹಂದರ ಪಾಕಿಸ್ತಾನದ ಕರಾಚಿ ಬಳಿಯ ಲೈರಿ ಪ್ರದೇಶ. ಆದರೆ, ಸಿನಿಮಾದಲ್ಲಿ ಲೈರಿಯನ್ನು ತೋರಿಸಲು ಬೇರೆ ಕಡೆ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ. ಈಗ, ತಮ್ಮೂರಿನ ಹೆಸರಿನಲ್ಲಿ ಬಂದ ಸಿನಿಮಾದ ಯಶಸ್ಸಿನಲ್ಲಿ ತಮಗೂ ಪಾಲು ಬೇಕು ಅಂತ ಲೈರಿ ನಿವಾಸಿಗಳು ಚಿತ್ರತಂಡವನ್ನು ಕೇಳುತ್ತಿದ್ದಾರೆ. ಆ ಹಣವನ್ನು ತಮ್ಮೂರಿನ ಅಭಿವೃದ್ಧಿಗೆ ಬಳಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ. 'ನಮ್ಮಲ್ಲಿ ರಸ್ತೆ ಸೇರಿದಂತೆ ಮೂಲಸೌಕರ್ಯಗಳೇ ಇಲ್ಲ, ದುಡ್ಡು ಸಿಕ್ಕರೆ ಅದನ್ನೆಲ್ಲ ಸರಿಪಡಿಸಬಹುದು' ಎಂಬುದು ಅವರ ವಾದ. 'ಕಂಪ್ಯಾರಿಸನ್ ಟಿವಿ' ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಲೈರಿ ನಿವಾಸಿಗಳು ನೀಡಿರುವ ಈ ಪ್ರತಿಕ್ರಿಯೆಗಳು, ಸೋಷಿಯಲ್ ಮೀಡಿಯಾ ಮೂಲಕ ಭಾರತದಲ್ಲೂ ಸಖತ್ ಟ್ರೆಂಡಿಂಗ್ ಆಗಿವೆ.

 

ಲೈರಿ ಜನರಿಗೆ ₹500 ಕೋಟಿ ಕೊಡಿ

'ಈ ಸಿನಿಮಾ ಲೈರಿ ಬಗ್ಗೆ ಇದೆ. ಇದೊಂದು ವಿಐಪಿ ಸಿನಿಮಾ. ಇದು ತುಂಬಾ ದುಡ್ಡು ಮಾಡಿದೆ. ಈ ರಸ್ತೆಗಳನ್ನು ಸರಿಪಡಿಸಿದರೆ, ನಮ್ಮ ಪ್ರದೇಶಕ್ಕೆ ತುಂಬಾ ಅಭಿವೃದ್ಧಿ ಆಗುತ್ತೆ' ಎಂದು ವಿಡಿಯೋದಲ್ಲಿ ಒಬ್ಬರು ಹೇಳಿದ್ದಾರೆ. 'ನೀವು 1000 ಕೋಟಿ ಗಳಿಸಿದ್ದರೆ, ದಯವಿಟ್ಟು ಅದರಿಂದ 500 ಕೋಟಿಯನ್ನು ಲೈರಿಯ ಜನರಿಗೆ ಕೊಡಿ. ನೀವು ಗಳಿಸಿದ್ದರಲ್ಲಿ ಅರ್ಧ ಕೊಟ್ಟರೆ, ಈ ರಸ್ತೆಗಳನ್ನು ಚೆನ್ನಾಗಿ ನಿರ್ಮಾಣ ಮಾಡಬಹುದು. ಇಲ್ಲಿ ಮಕ್ಕಳು ಅಪಾಯವಿಲ್ಲದೆ ಓಡಾಡಬಹುದು' ಎಂದು ಮತ್ತೊಬ್ಬರು ಮನವಿ ಮಾಡಿದ್ದಾರೆ.

ಲೈರಿ ಅಭಿವೃದ್ಧಿಗೆ ಏನಾದರೂ ಕೊಡಿ:

ಮುಂದುವರೆದು 'ನಮ್ಮ ಪ್ರದೇಶದ ಅಭಿವೃದ್ಧಿ ಬಗ್ಗೆ ನಾವು ಬಹಳ ಕಾಲದಿಂದ ಕೇಳುತ್ತಿದ್ದೇವೆ, ಆದರೆ ಲೈರಿಯ ಜನರಿಗೆ ಏನೂ ಸಿಗುತ್ತಿಲ್ಲ. ದಯವಿಟ್ಟು ಏನಾದರೂ ಕೊಡಿ' ಎಂದು ಮೂರನೇಯವರು ಹೇಳಿದ್ದಾರೆ. 'ಧುರಂಧರ್ 2' ಕಲೆಕ್ಷನ್‌ನಿಂದ ಲೈರಿ ಜನರಿಗೆ ಎಷ್ಟು ಸಿಗಬೇಕು ಎಂಬ ಪ್ರಶ್ನೆಗೆ, ಶೇ.70-80 ಪ್ರತಿಶತ ಬೇಕು' ಎಂದು ಇನ್ನೊಬ್ಬ ಸ್ಥಳೀಯರು ಉತ್ತರಿಸಿದ್ದಾರೆ. ಸದ್ಯ, 1000 ಕೋಟಿ ಕ್ಲಬ್ ಸೇರಿರುವ ಈ ಸಿನಿಮಾ ಇನ್ನೂ ಉತ್ತಮ ಪ್ರದರ್ಶನವನ್ನು ಮುಂದುವರಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೃಷ್ಣ ಮುಸ್ಲಿಮೋ, ಹಿಂದುನೋ ಕೇಳಿ ರಾಧಾ ಲವ್​ ಮಾಡಿದ್ಲಾ? ಮೊನಾಲಿಸಾ ಏನೇನ್​ ಹೇಳಿದ್ಲು ಕೇಳಿ
ಡೇಟಿಂಗ್ ಆ್ಯಪ್‌ನಲ್ಲಿ ಸಿಕ್ಕವಳು ಪಾರ್ಕ್‌ಗೆ ಕರೆದಳು, ಪ್ರೋಮೋ ತೋರಿಸಿಯೇ ಟ್ವಿಸ್ಟ್ ಕೊಟ್ಟಳು