
ಶಿವಪುರಿ (ಮಾ.29) ಇನ್‌ಸ್ಟಾಗ್ರಾಂ ಮೂಲಕ ಲೈವ್ ಆಗಮಿಸಿದ 22 ಹರೆಯದ ಯುವಕ ವಿಶೇಷವಾಗಿ ತನ್ನ ಗೆಳೆಯರಿಗೆ ಹಾಯ್ ಹೇಳಿದ್ದಾನೆ. ಲೈವ್‌ನಲ್ಲಿ ಈತ ಹೆಚ್ಚು ಮಾತನಾಡಿಲ್ಲ. ಆದರೆ ಸುಮಾರು ಅರ್ಧ ಗಂಟೆಗಳ ಲೈವ್ ಅಂತ್ಯಗೊಂಡಿದ್ದು ಮಾತ್ರವಲ್ಲ, ಯುವಕನ ಪ್ರಾಣವೂ ಹೋಗಿದೆ. ಈ ದುರಂತ ಘಟನೆ ನಡೆದಿರುವುದು ಮಧ್ಯಪ್ರದೇಶದ ಶಿವಪುರಿಯಲ್ಲಿ. ಮನೋಜ್ ರಜಕ್ ಅನ್ನೋ ಯುವಕ ಮೃತಪಟ್ಟಿದ್ದಾನೆ. ಈತನ ಲೈವ್ ನೋಡಿದ ಗೆಳೆಯರು ಓಡೋಡಿ ಬಂದರೂ ಮನೋಜ್ ರಜಕ‌್‌ನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಶಿವಪುರಿ ನಿವಾಸಿ ಮನೋಜ್ ರಜಕ್ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದ. ಜೊತೆಗೆ ಕೆಲ ಗಾರ್ಮೆಂಟ್ಸ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ. ಬಾಡಿಗೆ ಮನೆಯಲ್ಲಿದ್ದ ಈತ ಅದೇ ಬಾಡಿಗೆ ಮನೆಯಲ್ಲಿ ದುರಂತ ಅಂತ್ಯಕಂಡಿದ್ದಾನೆ. ಈತ ಇನ್‌ಸ್ಟಾಗ್ರಾಂ ಲೈವ್ ಮೂಲಕ ಆಗಮಿಸಿ ಮೊದಲಿಗೆ ಎಲ್ಲಾ ಗೆಳೆಯರಿಗೆ ಹಾಯ್ ಎಂದಿದ್ದಾನೆ. ಬಳಿಕ ಪ್ರೀತಿಯ ಗೆಳೆಯರು ಫ್ಲೈಯಿಂಗ್ ಕಿಸ್ ನೀಡಿದ್ದಾನೆ. ಇಷ್ಟೇ ನೋಡಿ ಬಳಿಕ ಲೈವ್ ಮೂಲಕ ಬದುಕು ಅಂತ್ಯಗೊಳಿಸಿದ್ದಾನೆ.
ಮನೋಜ್ ರಜಕ್ ಇನ್‌ಸ್ಟಾಗ್ರಾಂ ಲೈವ್‌ಸ್ಟ್ರೀಮ್‌ಗೆ ಬಂದಾಗ ಗೆಳೆಯರು ಲೈವ್ ಗಮನಿಸಲಿಲ್ಲ. ಕೆಲವೇ ನಿಮಿಷಗಳ ಬಳಿಕ ಲೈವ್ ನೋಟಿಫಿಕೇಶನ್ ನೋಡಿ ಗಮನಿಸಿದ್ದಾರೆ. ಈ ವೇಳೆ ಈತನ ನಡೆ ಗೆಳೆಯರಿಗೆ ಅಚ್ಚರಿಯಾಗಿದೆ. ಪರಿಣಾಮ ಗೆಳೆಯರು ಕರೆ ಮಾಡಿದ್ದಾರೆ.ಉತ್ತರವಿಲ್ಲ. ತಕ್ಷಣವೇ ಇಬ್ಬರು ಗೆಳೆಯರು ಮನೋಜ್ ರಜಕ್ ಇದ್ದ ಬಾಡಿಗೆ ಮನೆಯತ್ತ ಧಾವಿಸಿದ್ದಾರೆ. ಅಷ್ಟರಲ್ಲೇ ಮನೋಜ್ ಕೊನೆಯೆಸಿರು ಎಳೆದಿದ್ದಾನೆ.
ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರೆ, ಇತ್ತ ಬಾಡಿಗೆ ಕೋಣೆ ಇಡಿ ತಡಕಾಡಿದ್ದಾರೆ. ಯಾವುದೇ ಡೆತ್ ನೋಟ ಪತ್ತೆಯಾಗಿಲ್ಲ. ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ಇತ್ತ ಮನೋಜ್ ರಜಕ್ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.
ಮನೋಜ್ ರಜಕ್ 22 ವಯಸ್ಸಿನ ಯುವಕ. ತಂದೆ ಹಾಗೂ ತಾಯಿಯನ್ನು ಅತೀಯಾಗಿ ಪ್ರೀತಿಸುತ್ತಿದ್ದ. ಆದರೆ ಕೆಲ ಮನೋಜ್ ರಜಕ್ ತಾಯಿ ವರ್ಷ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ತಾಯಿಯ ಅಗಲಿಕೆ ಮನೋಜ್ ರಜಕ್‌ಗೆ ತೀವ್ರ ಆಘಾತ ತಂದಿತ್ತು. ತಂದೆ ಹಾಗೂ ತಾಯಿ ಜೊತೆ ಸುಂದರ ಜೀವನದ ಕನಸು ಕಂಡಿದ್ದ ಮನೋಜ್‌ಗೆ ತಾಯಿ ಸಾವು ಶಾಕ್ ಆಗಿತ್ತು. ಈ ನೋವಿನಲ್ಲೇ ಮರುಗಿದ ಮನೋಜ್‌ಗೆ ಕೆಲಲ ತಿಂಗಳ ಹಿಂದೆ ತಂದೆ ಶಾಕ್ ನೀಡಿದ್ದರು. ತಾಯಿ ನೋವಿನ ಅಗಲಿಕೆಯಲ್ಲಿರುವಾಗಲೇ ತಂದೆ ಮರು ಮದುವೆಯಾಗಿದ್ದಾರೆ. ತಂದೆ ಮರು ಮದುವೆಯಾಗಿ ಬೇರೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇತ್ತ ಮನೋಜ್ ಅನಿವಾರ್ಯವಾಗಿ ಬಾಡಿಗೆ ಮನೆಯಲ್ಲಿ ಜೀವನ ನಡೆಸುವಂತಾಗಿತ್ತು. ತಾಯಿ ಅತೀಯಾಗಿ ಪ್ರೀತಿಸಿದ ಇಬ್ಬರು ತನ್ನಿಂದ ದೂರವಾಗಿದ್ದರು. ಇದರಿಂದ ಮನೋಜ್ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಎಂಬ ಮಾಹಿತಿಯೂ ಬಹಿರಂಗವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ