ಡೇಟಿಂಗ್ ಆ್ಯಪ್‌ನಲ್ಲಿ ಸಿಕ್ಕವಳು ಪಾರ್ಕ್‌ಗೆ ಕರೆದಳು, ಪ್ರೋಮೋ ತೋರಿಸಿಯೇ ಟ್ವಿಸ್ಟ್ ಕೊಟ್ಟಳು

Published : Mar 29, 2026, 05:50 PM IST
dating app

ಸಾರಾಂಶ

ಡೇಟಿಂಗ್ ಆ್ಯಪ್‌ನಲ್ಲಿ ಸಿಕ್ಕವಳು ಪಾರ್ಕ್‌ಗೆ ಕರೆದಳು, ಪ್ರೋಮೋ ತೋರಿಸಿಯೇ ಟ್ವಿಸ್ಟ್ ಕೊಟ್ಟಳು, ಆತನಿಗೆ 34 ವರ್ಷ, ಪರಿಚಯವಾದ ಯುವತಿಗೆ 20 ವರ್ಷ. ಮೊದಲ ಭೇಟಿ, ಮೊದಲ ಡೇಟ್‌ಗಾಗಿ ಪಾರ್ಕ್‌ಗ ಬಂದಾಗ ಏನಾಯಿತು?

ದೆಹಲಿ (ಮಾ.29) ಯುವ ಸಮೂಹದಲ್ಲಿ ಡೇಟಿಂಗ ಆ್ಯಪ್ ಬಳಕೆ ಸಾಮಾನ್ಯವಾಗಿದೆ. ಹಲವರು ಇದೇ ಆ್ಯಪ್‌ ಮೂಲಕ ರಿಲೇಶನ್‌ಶಿಪ್, ಪಾರ್ಟ್ನರ್‌ಶಿಪ್ ಬೆಳೆಸೆಕೊಂಡಿದ್ದಾರೆ. ಇನ್ನು ಕೆಲವರು ಕೈಸುಟ್ಟುಕೊಂಡಿದ್ದಾರೆ. ಇದೀಗ ದೆಹಲಿಯಲ್ಲಿ 34ರ ಹರೆಯದ ಯುವಕ ಡೇಟಿಂಗ್ ಆ್ಯಪ್‌ನಲ್ಲಿ 20ರ ಹರೆಯದ ಯುವತಿಯೊಬ್ಬಳ ಪರಿಚಯವಾಗಿದೆ. ಈಕೆಯ ಪ್ರೊಫೈಲ್ ಫೋಟೋ, ಗ್ಯಾಲರಿಯಲ್ಲಿನ ಫೋಟೋಗಳನ್ನು ನೋಡಿ ಆಕರ್ಷಿತನಾಗಿದ್ದ. ಹಾಗಂತ ಯಾವುದೇ ಎಐ ಫೋಟೋ ಏನು ಬಳಕೆ ಮಾಡಿರಲಿಲ್ಲ. ಮಾತುಕತೆ ಶುರುವಾಗಿತ್ತು. ಪ್ರೀತಿ ಉಕ್ಕಲು ಆರಂಭಗೊಂಡಿತ್ತು. ಯುವತಿ ನೀಡಿದ ಪಾರ್ಕ್ ಆಹ್ವಾನಕ್ಕೆ ಯೆಸ್ ಹೇಳಿ ತಕ್ಕ ಸಮಯಕ್ಕೆ ಹಾಜರಾಗಿದ್ದ. ಆಕೆಯ ನೋಟ, ಮೈಮಾಟ ನೋಡಿ ಈತ ಮತ್ತಷ್ಟು ಉತ್ಸಾಹಗೊಂಡಿದ್ದ. ಮನಸ್ಸಿನಲ್ಲಿ ಡೇಟಿಂಗ್ ಆ್ಯಪ್‌ಗೆ 10 ಬಾರಿ ಥ್ಯಾಂಕ್ಸ್ ಹೇಳಿದ್ದ. ಆದರೆ 20ರ ಮೈಮಾಟದ ಸುಂದರಿ ಜಸ್ಟ್ ಪ್ರೋಮೋ ತೋರಿಸಿ, ಪಿಕ್ಚರ್ ಶುರುವಾಗೋ ಮುನ್ನವೇ ಟ್ವಿಸ್ಟ್ ಕೊಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ.

ಏನಿದು ಡೇಟಿಂಗ್ ಘಟನೆ?

ಹೇಮಂತ್ ತಿವಾರಿ ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿದ್ದ ಯುವತಿಯ ಜೊತೆ ಚಾಟಿಂಗ್‌ನಲ್ಲಿ ದೆಹಲಿಯ ನೆಹರೂ ಪಾರ್ಕ್‌ಗೆ ಆಹ್ವಾನ ಬಂದಿತ್ತು. ಮೊದಲ ಭೇಟಿ, ಮೊದಲ ಡೇಟ್ ಖುಷಿಯಲ್ಲಿದ್ದ ಹೇಮಂತ್ ತಿವಾರಿ ಹೊಸ ಅಧ್ಯಾಯ ಆರಂಭಿಸಲು ಎಲ್ಲಾ ತಯಾರಿ ಮಾಡಿಕೊಂಡು ತೆರಳಿದ್ದ. ಹೇಗೆ ಮಾತನಾಡಬೇಕು, ಏನು ಮಾಡಬೇಕು ಅನ್ನೋ ತಯಾರಿ ಹೇಮಂತ್ ತಿವಾರಿ ಮಾಡಿಕೊಂಡಿದ್ದ.

ಹೇಮಂತ್ ತಿವಾರಿ ಆಗಮನಕ್ಕೂ ಮೊದಲೇ ಬಂದಿದ್ದ ಸುಂದರಿ

ಚಾಲಾಕಿ ಸುಂದರಿ ಹೇಮಂತ್ ತಿವಾರಿಗೆ ಹೇಳಿದ್ದ ಸಮಯಕ್ಕಿಂತ ಮೊದಲೇ ಬಂದಿದ್ದಳು. ಹೇಮಂತ್ ತಿವಾರಿ ನೆಹರೂ ಪಾರ್ಕ್‌ಗೆ ಕಾಲಿಡುತ್ತಿದ್ದಂತೆ ಫೋನ್ ಮೂಲಕ ಸಂಪರ್ಕದಲ್ಲಿದ್ದ ಡೇಟಿಂಗ್ ಸುಂದರಿ ಎದುರಿಗೆ ಪ್ರತ್ಯಕ್ಷಳಾಗಿದ್ದಳು. ಎದುರಿಗೆ ಬಂದವಳೇ ತಬ್ಬಿಕೊಂಡು ಸ್ವಾಗತಿಸಿದ್ದಾಳೆ. ಆಕೆಯ ಡ್ರೆಸ್ ನೋಡಿದ ಹೇಮಂತ್ ತಿವಾರಿಗೆ ಮನಸ್ಸಿನಲ್ಲಿ ಲಡ್ಡು ಬಂದು ಬಾಯಿಗೆ ಬಿದ್ದಿತ್ತು. ಪಾರ್ಕ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಂತೆ ಹೇಮಂತ್ ತಿವಾರಿ ಖುಷಿಯಿಂದ ಸಂಭ್ರಮಿಸಿದ್ದ. ಆಕೆಯ ಕುಡಿ ನೋಟ, ಮಾತು, ಕಣ್ಣಲ್ಲಿನ ಮೋಹ ನೋಡಿ ಹೇಮಂತ್ ತಿವಾರಿ ಸ್ಟಂಪ್ ಔಟ್ ಆಗಿದ್ದ.

ಪಾರ್ಕ್ ಮೂಲೆಯಲ್ಲಿ ನಡೆದಿದ್ದೇನು?

ನೆಹರೂ ಪಾರ್ಕ್‌ನ ಮೂಲೆಗೆ ತಲುಪುತ್ತಿದ್ದಂತೆ ಹಿಂದಿನಿಂದ ಮೂವರು ಆಗಮಿಸಿದ್ದಾರೆ. ಇಷ್ಟೇ ನೋಡಿ ಹೇಮಂತ್ ತಿವಾರಿ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅರೆ ಪ್ರಜ್ಞಾವಸ್ಥೆಗೆ ತಲುಪಿದ ಹೇಮಂತ್ ತಿವಾರಿಗೆ ನೋವು ಮಾತ್ರ ಗೊತ್ತು ಇನ್ನೇನು ಗೊತ್ತಿಲ್ಲ. ಗೊತ್ತಾಗುವಷ್ಟರಲ್ಲೇ ಕಿಡ್ನಾಪ್ ಆಗಿದ್ದ. ಡೇಟಿಂಗ್ ಸುಂದರಿ ಜೊತೆಗೆ ಮೂವರು ಕಿಡ್ನಾಪ್ ಮಾಡಿದ್ದರು. ಕಣ್ಣು ಬಿಟ್ಟಾಗ ರಾತ್ರಿಯಾಗಿತ್ತು. ನಾಲ್ವರ ಡಿಮ್ಯಾಂಡ್ 7 ಲಕ್ಷ ರೂಪಾಯಿ ಕೊಟ್ಟರ ಬಿಡುತ್ತೇವೆ. ಇಲ್ಲಾ ಇಲ್ಲೇ ಹೂತು ಹಾಕುತ್ತೇವೆ ಎಂದಿದ್ದಾರೆ. ತನ್ನ ಖಾತೆಯಲ್ಲಿದ್ದ ಹಣವನ್ನು ಯುಪಿಐ ಮೂಲಕ ವರ್ಗಾವಣೆ ಮಾಡಿದ್ದ, ಇನ್ನು ಎಟಿಎಂ ಮೂಲಕ ಹಣ ತೆಗೆದಿದ್ದಾನೆ.ಕ್ರೆಡಿಟ್ ಕಾರ್ಡ್ ಬಳಸಿ ಹಣ ನೀಡಿದ್ದಾನೆ. ಎನೆಲ್ಲಾ ಸರ್ಕಸ್ ಮಾಡಿ 7 ಲಕ್ಷ ರೂಪಾಯಿ ನೀಡಿದ್ದಾನೆ.

ರಾತ್ರಿ 9.30ರ ಸುಮಾರಿಗೆ ನೆಹರೂ ಪಾರ್ಕ್ ಬಳಿ ಈತನ ಬಿಟ್ಟು ಕಿಡ್ನಾಪರ್ ತಂಡ ಪರಾರಿಯಾಗಿದೆ. ಕಿಡ್ನಾಪರ್ ಪರಾರಿಯಾದ ಬಳಿಕ ಮನೆಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಪೊಲೀಸರು ಸಿಸಿಟಿವಿ ದೃಶ್ಯಗಳ ಪರಿಶೀಲಿಸಿ ತನಿಖೆ ಆರಂಭಿಸಿದ್ದಾರೆ. ಡೇಟಿಂಗ್ ಆ್ಯಪ್‌ನಲ್ಲಿ ಹೀಗೆ ಹಲವರಿಗೆ ಮೋಸ ಮಾಡಿದ ಹರ್ಲಿನ್ ಕೌರ್ ಅಲಿಯಾಸ್ ಜೆನ್ನಿ, ಆಕೆಯ ಗ್ಯಾಂಗ್ ನಬ್ಜೋತ್, ಸಂಜಯ್ ಅಲಿಯಾಸ್ ಜಾಯ್, ರಿಷಬ್ ಹಾಗೂ ಸಾಹಿಲ್ ಚೌವ್ಹಾಣ್ ಅರೆಸ್ಟ್ ಆಗಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Dhavalalakshmi turtle tracking: 3500 ಕಿ.ಮೀ ಈಜಿ ಓಮನ್‌ಗೆ ಹೋಗಿ ಕರಾವಳಿಗೆ ಬಂದ ಮಹಾರಾಷ್ಟ್ರ ಆಮೆ!
India Latest News Live: 'ಕಾಲು ಸ್ವಲ್ಪ ನೆಲದ ಮೇಲೆ ಇರಲಿ..' - ವೈಭವ್ ಸೂರ್ಯವಂಶಿಗೆ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಖಡಕ್ ವಾರ್ನಿಂಗ್