ಹೊಟ್ಟೆಗೆ ಹಿಟ್ಟಿಲ್ಲ..! ಪರಮಾಣು ಶಕ್ತಿ ದೇಶ ನಮ್ಮದು, ಭಾರತಕ್ಕೆ ಎಚ್ಚರಿಕೆ ಕೊಟ್ಟ ಪಾಕಿಸ್ತಾನ!

Published : Feb 06, 2023, 09:23 PM IST
ಹೊಟ್ಟೆಗೆ ಹಿಟ್ಟಿಲ್ಲ..! ಪರಮಾಣು ಶಕ್ತಿ ದೇಶ ನಮ್ಮದು, ಭಾರತಕ್ಕೆ ಎಚ್ಚರಿಕೆ ಕೊಟ್ಟ ಪಾಕಿಸ್ತಾನ!

ಸಾರಾಂಶ

ಪಾಕಿಸ್ತಾನದ ಸದ್ಯದ ಪರಿಸ್ಥಿತಿಗೆ ಹೇಗಿದೆ ಅನ್ನೋದನ್ನು ಬಿಡಿಸಿ ಹೇಳಬೇಕಾಗಿಲ್ಲ. ತುತ್ತು ಅನ್ನಕ್ಕೂ ಹಾಹಾಕಾರ, ಹಿಟ್ಟಿಗಾಗಿ ನೂಕಾಟ ತಳ್ಳಾಟ, ಪೆಟ್ರೋಲ್, ಹಾಲಿನ ಬೆಲೆ 500 ರೂಪಾಯಿಗೂ ಅಧಿಕ. ಆದರೆ ಪಾಕಿಸ್ತಾನದ ಅಹಂಕಾರ ಮಾತ್ರ ಕಡಿಮೆಯಾಗಿಲ್ಲ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಭಾರತಕ್ಕೆ ಪರಮಾಣು ಎಚ್ಚರಿಕೆ ನೀಡಿದ್ದಾರೆ. ಭಾರತ ವಕ್ರ ದೃಷ್ಟಿ ಬೀರಿದರೆ ಶತ್ರುವಿನ ಕೆಟ್ಟ ಕಣ್ಣು ಕೀಳುತ್ತೇವೆ ಎಂದಿದ್ದಾರೆ.  

ನವದೆಹಲಿ(ಫೆ.06): ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಅನ್ನೋ ಗಾಧೆ ಪಾಕಿಸ್ತಾನಕ್ಕೆ ಸೂಕ್ತವಾಗಿದೆ. ಪಾಕಿಸ್ತಾನದಲ್ಲಿ ಅನ್ನಕ್ಕೆ ಹಾಹಾಕಾರ ಎದ್ದಿದೆ. ಗೋಧಿ ಹಿಟ್ಟು, ಹಾಲು, ತುತ್ತು ಅನ್ನಕ್ಕೆ ಕೊಲೆಗಳಾಗುತ್ತಿದೆ. ನೂಕೂಟ ತಳ್ಳಾಟ ನಡೆಯುತ್ತಿದೆ. ಕಳ್ಳತನ, ಕಳ್ಳಸಾಗಾಣಿಕೆ ಹೆಚ್ಚಾಗಿದೆ. ಗೋಧಿ ಹಿಟ್ಟಿನ ಬೆಲೆ 2000 ರೂಪಾಯಿ ದಾಟಿದೆ. ಹಾಲಿನ ಬೆಲೆ 300 ರೂಪಾಯಿ ದಾಟಿದೆ. ಪಾಕಿಸ್ತಾನದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ತನ್ನ ದೇಶದೊಳಗೆ ಪರಿಸ್ಥಿತಿ ನಿಭಾಯಿಸಲು ಪಾಕಿಸ್ತಾನ ಹೆಣಗಾಡುತ್ತಿದೆ. ಇದರ ನಡುವೆ ಪಾಕಿಸ್ತಾನ ಭಾರತಕ್ಕೆ ಎಚ್ಚರಿಕೆ ನೀಡಿದೆ. ನಮ್ಮದು ಪರಮಾಣು ಶಕ್ತಿ ದೇಶ. ಭಾರತ ನಮ್ಮ ಮೇಲೆ ವಕ್ರ ದೃಷ್ಠೀ ಬಿರಿದರೆ, ಪರಮಾಣು ಶಕ್ತಿ ದೇಶ ಪಾಕಿಸ್ತಾನ ಕಣ್ಣು ಕೀಳುತ್ತೇವೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಎಚ್ಚರಿಕೆ ನೀಡಿದ್ದಾರೆ. 

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಿಂತು ಶಹಬಾಜ್ ಷರೀಪ್ ಭಾರತಕ್ಕೆ ಈ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನ ಪರಮಾಣು ಶಕ್ತಿಯ ದೇಶ. ಭಾರತ ನಮ್ಮ ಮೇಲೆ ಕೆಟ್ಟ ದೃಷ್ಛಿಯಿಂದ ನೋಡಿದರೆ, ಪುಡಿಮಾಡಲಿದ್ದೇವೆ ಎಂದು ಷರೀಫ್ ಹೇಳಿದ್ದಾರೆ. ಇಷ್ಟೇ ಅಲ್ಲ ಕಾಶ್ಮೀರ ವಿಚಾರವನ್ನೂ ಪ್ರಸ್ತಾಪಿಸಿ ಕಾಶ್ಮೀರಿಗರಿಗೆ ಸ್ವತಂತ್ರ ನೀಡುತ್ತೇವೆ ಎಂದಿದ್ದಾರೆ. ಕಾಶ್ಮೀರಕ್ಕೆ ಸ್ವಾತಂತ್ರ್ಯ ಕೊಡಲು ನಾವು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ರಾಜಕೀಯವಾಗಿ, ರಾಜತಾಂತ್ರಿಕವಾಗಿ, ಸೈದ್ಧಾಂತಿಕವಾಗಿ ಸೇರಿದಂತೆ ಎಲ್ಲಾ ವಲಯದಿಂದ ನಾವು ಪ್ರಯತ್ನ ಮಾಡುತ್ತಿದ್ದೇವೆ. ಭಾರತದ ಕಪಿಮುಷ್ಠಿಯಿಂದ ಮುಕ್ತವಾಗುವ ವರೆಗೆ ಹೋರಾಟ ಮುಂದುವರಿಯಲಿದೆ ಎಂದು ಷರಿಫ್ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ತುಘಲಕ್‌ ಕಾನೂನು, ಸೇನೆ-ಕೋರ್ಟ್‌ ಬಗ್ಗೆ ಕೀಳಾಗಿ ಮಾತಾಡಿದ್ರೆ ಉಳಿಗಾಲವಿಲ್ಲ!

ಕಾಶ್ಮೀರವನ್ನು ಭಾರತದಿಂದ ಸ್ವತಂತ್ರಗೊಳಿಸಲು ಪಾಕಿಸ್ತಾನ ಆರ್ಥಿಕ ಹಾಗೂ ರಾಜಕೀಯ ಸ್ಥಿರತೆ ಕಾಪಾಡಿಕೊಳ್ಳಬೇಕಿದೆ. ಪಾಕಿಸ್ತಾನ ಯಾವತ್ತೂ ಕಾಶ್ಮೀರಿಗರ ಜೊತೆಗಿದೆ ಎಂದು ಷರಿಫ್ ಹೇಳಿದ್ದಾರೆ. ಷರೀಫ್ ಪದೇ ಪದೇ ಭಾರತವನ್ನು ಎಚ್ಚರಿಕೆ ಕೆಲಸ ಮಾಡುತ್ತಿದ್ದಾರೆ. ಪಾಕಿಸ್ತಾನಕ್ಕೆ ಸದ್ಯ ಪಾಕ್ ಆಕ್ರಮಿತ ಕಾಶ್ಮೀರ ಕೈತಪ್ಪುವ ಭೀತಿ ಎದುರಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಸಂಪೂರ್ಣ ಹಿಡಿತ ಸಾಧಿಸಿದೆ. ಇದೀಗ ಪಾಕ್ ಆಕ್ರಮಿತ ಕಾಶ್ಮೀರ ಮರಳಿ ಪಡೆಯುವ ಹೇಳಿಕೆಯನ್ನು ನೀಡಿದೆ. ಇದು ಪಾಕಿಸ್ತಾನದ ಆತಂಕಕ್ಕೆ ಕಾರಣವಾಗಿದೆ. ಪಾಕಿಸ್ತಾನದ ಸದ್ಯದ ಪರಿಸ್ಥಿತಿಯಲ್ಲಿ ಯುದ್ಧ ಬಿಡಿ, ನೇರವಾಗಿ ನಿಂತು ಮಾತನಾಡಲು ಶಕ್ತವಾಗಿಲ್ಲ. ಹೀಗಾಗಿ ಪರಮಾಣು ಶಕ್ತಿ ನೆನಪಿಸಿ ಭಾರತವನ್ನು ಹದ್ದುಬಸ್ತಿನಲ್ಲಿಡುವ ಪ್ರಯತ್ನ ಮಾಡುತ್ತಿದೆ. 

ಬಿಪಿನ್‌ ರಾವತ್‌ರನ್ನು 'ರಸ್ತೆ ಬದಿಯ ಗೂಂಡಾ' ಎಂದಿದ್ದ ಕಾಂಗ್ರೆಸ್‌ಗೆ ಮುಷರಫ್‌ ಶಾಂತಿಧೂತ!

ಇತ್ತೀಚೆಗೆ ಪಾಕಿಸ್ತಾನ ಪ್ರಧಾನಿ ಶಹಬಾಜ್‌ ಷರೀಫ್‌ ಕಾಶ್ಮೀರದ ಏಕತೆ ಬಗ್ಗೆ ಟ್ವೀಟ್‌ ಮಾಡಿ ಟ್ರೋಲ್‌ ಆಗಿದ್ದರು. ‘ಭಾರತದ ದಬ್ಬಾಳಿಕೆ ರಾಜಕಾರಣದಡಿ ಸಿಲುಕಿರುವ ಕಾಶ್ಮೀರದ ಸಹೋದರ, ಸಹೋದರಿಯರಿಗೆ ಪಾಕಿಸ್ತಾನದ ಜನರ ಬೆಂಬಲವಿದೆ. ಭಾರತದಿಂದ ಸ್ವಾತಂತ್ರ್ಯ ಪಡೆಯಲು ಕಾಶ್ಮೀರಿ ಜನರು ನಿರಂತರವಾಗಿ ಹೋರಾಟ ನಡೆಸಿದ್ದಾರೆ. ಅವರ ಹೋರಾಟಕ್ಕೆ ಶೀಘ್ರ ಫಲ ದೊರಕಲಿ’ ಎಂದು ಷರೀಫ್‌ ಟ್ವೀಟ್‌ ಮಾಡಿದ್ದಾರೆ. ಟ್ವೀಟ್‌ಗೆ ಭಾರತೀಯರು ಪ್ರತ್ಯುತ್ತರ ನೀಡಿ ಹಿಟ್ಟು ಸಿಕ್ತಾ, ಮೊದಲು ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಕೊಡಿಸಿ ಎಂದು ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟಿನ ಕುರಿತು ವ್ಯಂಗ್ಯ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪಾಕಿಸ್ತಾನಿಗರು ಆರ್ಥಿಕ, ರಾಜಕೀಯ ಬಿಕ್ಕಟ್ಟಿನ ಕುರಿತು ನೆನಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಾಹಿತ್ಯಾಸಕ್ತರ ಸಮ್ಮುಖದಲ್ಲಿ ಜೈಪುರ ಸಾಹಿತ್ಯೋತ್ಸವ ಶುರು
India News Live: ಇಂದು ಮುಂಬೈ ಪಾಲಿಕೆ ಚುನಾವಣೆಯ ಮತ ಎಣಿಕೆ, ಯಾರಿಗೆ ಗೆಲುವು?