ರಾಜ್ಯಕ್ಕೆ ಕಾಡುತ್ತಿದೆ ಓಮಿಕ್ರಾನ್ ಭೂತ, ಮತ್ತೆ 5 ದಿನ ಮಳೆ ಆತಂಕ; ನ.30ರ ಟಾಪ್ 10 ಸುದ್ದಿ!

By Suvarna NewsFirst Published Nov 30, 2021, 4:39 PM IST
Highlights

ಭಾರತದಲ್ಲಿ ಓಮಿಕ್ರಾನ್ ವೈರಸ್ ಪತ್ತೆಯಾಗಿಲ್ಲ, ಆದರೆ ಕರ್ನಾಟಕದಲ್ಲಿ ಆತಂಕ ಹೆಚ್ಚಾಗುತ್ತಿದೆ. ಲಾಕ್‌ಡೌನ್ ಇಲ್ಲ, ಕಠಿಣ ನಿಯಮ ಜಾರಿ ಎಂದ ಸಿಎಂ ಬೊಮ್ಮಾಯಿ. ಇತ್ತ ಮತ್ತೆ 5 ದಿನ ರಾಜ್ಯದಲ್ಲಿ ಮಳೆ ಆರ್ಭಟ ಇರಲಿದೆ ಎನ್ನುತ್ತಿದೆ ವರದಿ. ಪ್ರಧಾನಿ ಮೋದಿ ಹಾಗೂ ದೇವೇಗೌಡ ಭೇಟಿ ಭಾರಿ ಸಂಚಲನ ಮೂಡಿಸಿದೆ. ಪಿಚ್ ಕ್ಯೂರೇಟರ್‌ಗೆ ದ್ರಾವಿಡ್ ಗಿಫ್ಟ್, ರಚಿತಾ ರಾಮ್ ಡ್ಯಾನ್ಸ್ ಸೇರಿದಂತೆ ನವೆಂಬರ್ 30ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Covid Crisis: ಭಾರತದಲ್ಲಿ ಈವರೆಗೆ Omicron ಒಂದೂ ಪ್ರಕರಣವಿಲ್ಲ, ಟೆಸ್ಟಿಂಗ್ ಹೆಚ್ಚಿಸಲು ಸೂಚಿಸಿದ ಕೇಂದ್ರ!

ಭಾರತದಲ್ಲಿ ಕೋವಿಡ್‌ನ ಹೊಸ ರೂಪಾಂತರವಾದ ಒಮಿಕ್ರಾನ್ (Omicron) ಪ್ರಕರಣಗಳು ಈವರೆಗೆ ವರದಿಯಾಗಿಲ್ಲ ಎಂದು ಮಂಗಳವಾರ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. 

Karnataka Rain Alert : ಮತ್ತೆ ರಾಜ್ಯಕ್ಕೆ 5 ದಿನ ಭಾರೀ ಮಳೆ ಎಚ್ಚರಿಕೆ

 ಬಂಗಾಳ ಕೊಲ್ಲಿ  ಮತ್ತು ಅರಬ್ಬಿ ಸಮುದ್ರ ಭಾಗದಲ್ಲಿ  ವಾಯುಭಾರ ಕುಸಿತಗೊಳ್ಳುವ ಸಾಧ್ಯತೆ ಇರುವುದರಿಂದ ರಾಜ್ಯದಲ್ಲಿ  ಡಿ.3ರವರೆಗೆ ಹಿಂಗಾರು ಚುರುಕಾಗಲಿದೆ ಎಂದು ಹವಾಮಾನ ಇಲಾಖೆ (weather Department) ತಿಳಿಸಿದೆ.

Bitcoin: ಬಿಟ್‌ಕಾಯಿನ್‌ಗೆ ಕರೆನ್ಸಿ ಮಾನ್ಯತೆ ನೀಡಲ್ಲ: ಕೇಂದ್ರ

 ದೇಶಾದ್ಯಂತ ಬಿಟ್‌ಕಾಯಿನ್‌ (Bitcoin) ಮುಂತಾದ ಕ್ರಿಪ್ಟೋಕರೆನ್ಸಿಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವಾಗಲೇ, ಈ ಮಾದರಿಯ ವರ್ಚುವಲ್‌ ಹಣಕ್ಕೆ (Virtual Money) ಕರೆನ್ಸಿಯ ಮಾನ್ಯತೆ ನೀಡುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. 

Omicron ಆತಂಕ, ರಾಜ್ಯದಲ್ಲಿ ಲಾಕ್‌ಡೌನ್ ಇರುತ್ತಾ? ಸ್ಪಷ್ಟನೆ ಕೊಟ್ಟ ಸಿಎಂ ಬೊಮ್ಮಾಯಿ!

 ಕೋವಿಡ್‌ ಮೂರನೇ ಅಲೆ (Third Covid Wave) ಮತ್ತು ಒಮಿಕ್ರೋನ್‌ ರೂಪಾಂತರಿ ವೈರಸ್‌ (Omicron Mutant Virus) ಆತಂಕದ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಆದರೆ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ (Lockdown) ಮಾಡುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavarj Bommai) ಸ್ಪಷ್ಟಪಡಿಸಿದ್ದಾರೆ

Rahul Dravid Good Gesture: ಕಾನ್ಪುರ ಪಿಚ್ ಮಾಡಿದ ಸಿಬ್ಬಂದಿಗೆ ದ್ರಾವಿಡ್ 35K ಗಿಫ್ಟ್‌..!

 ಇಲ್ಲಿನ ಗ್ರೀನ್‌ ಪಾರ್ಕ್ ಕ್ರೀಡಾಂಗಣದಲ್ಲಿ (Green Park Stadium) ನಡೆದ ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ಗೆ ಸ್ಪರ್ಧಾತ್ಮಕ ಪಿಚ್‌ ಸಿದ್ಧಪಡಿಸಿದ್ದಕ್ಕಾಗಿ ಟೀಂ ಇಂಡಿಯಾದ (Team India) ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌ (Rahul Dravid), ಮೈದಾನ ಸಿಬ್ಬಂದಿಗೆ ವೈಯಕ್ತಿಕವಾಗಿ 35,000 ರುಪಾಯಿ ಉಡುಗೊರೆ ನೀಡಿದ್ದಾರೆ. ಈ ವಿಷಯವನ್ನು ಉತ್ತರ ಪ್ರದೇಶ ಕ್ರಿಕೆಟ್‌ ಸಂಸ್ಥೆ ಖಚಿತಪಡಿಸಿದೆ.

New Year 2022: ಚಂದನ್ ಶೆಟ್ಟಿ ಪಾರ್ಟಿ ಹಾಡಲ್ಲಿ ನಟಿ ರಚಿತಾ ರಾಮ್ ಡ್ಯಾನ್ಸ್!

ಕನ್ನಡ ಚಿತ್ರರಂಗದ ಬೆಸ್ಟ್‌ Rapper ಚಂದನ್ ಶೆಟ್ಟಿ (Chandan Shetty) ಪ್ರತಿ ವರ್ಷವೂ ಹೊಸ ವರ್ಷಕ್ಕೆಂದು ವಿಭಿನ್ನ ಶೈಲಿಯ ಪಾರ್ಟಿ ಫ್ರೀಕ್ ಹಾಡನ್ನು (Party Song) ರೆಡಿ ಮಾಡುತ್ತಾರೆ. ಕಳೆದ ಬಾರಿ ನಿವೇದಿತಾ ಗೌಡ (Niveditha Gowda) ಜೊತೆ ಪಾರ್ಟಿ ಫ್ರೀಕ್‌ನಲ್ಲಿ ಕಾಣಿಸಿಕೊಂಡ ಚಂದು, ಈಗ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಜೊತೆ ಮಿಂಚಲು ಸಜ್ಜಾಗಿದ್ದಾರೆ. ಅಲೆಲೆಲೇಲೆ ಇವ್ಳು ಚೆಂದಾಗವ್ಳೆ ಆಲ್ಬಂ ಹಾಡಿನ ಸಣ್ಣ ತುಣುಕು ವೈರಲ್ ಆಗುತ್ತಿದೆ

Modi meets HD Devegowda: ಹಾಲಿ ಮತ್ತು ಮಾಜಿ ಪಿಎಂ ಸಮಾಗಮ, ರಾಜಕಾರಣಕ್ಕೆ ಹೊಸ ಗಮ್ಯ

ಇವತ್ತಿನ ಸೋಶಿಯಲ್ ಮೀಡಿಯಾದಲ್ಲಿ (Social Media) ಒಂದು ಪೋಟೋ ವೈರಲ್ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಪರಸ್ಪರ ಭೇಟಿಯಾಗಿದ್ದಾರೆ.  ಒಂದು ಕಡೆ ಸಂಸತ್  ಅಧಿವೇಶನ (Parliament Winter Session 2021) ನಡೆಯುತ್ತಿದ್ದರೆ ಇನ್ನೊಂದು ಕಡೆ ಇಬ್ಬರು ನಾಯಕರು ಭೇಟಿಯಾಗಿರುವುದು ರಾಜಕಾರಣದ (Politics) ಚರ್ಚೆಗೆ ವೇದಿಕೆಯಾಗಿದೆ.

Petrol Rate: ಪೆಟ್ರೋಲ್,ಡೀಸೆಲ್ ಬೆಲೆ ಸ್ಥಿರ, ನಾಳೆಯಿಂದ ಇಳಿಕೆ ನಿರೀಕ್ಷೆ!

ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel) ಬೆಲೆ (Rate) ಯಥಾಸ್ಥಿತಿ ಕಾಯ್ದುಕೊಂಡಿದೆ.ಆದ್ರೆ ತಜ್ಞರ ಪ್ರಕಾರ ಓಮಿಕ್ರಾನ್  (Omicron) ವೈರಸ್ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ನಿರ್ಬಂಧಗಳು ಹೆಚ್ಚುತ್ತಿರೋ ಕಾರಣ ಜಾಗತಿಕ ಮಟ್ಟದಲ್ಲಿ ಇಂಧನ ದರದಲ್ಲಿ ಇಳಿಕೆಯಾಗಿದೆ. ಹೀಗಾಗಿ ನಾಳೆ (ಡಿ.1) ಬಿಡುಗಡೆಯಾಗೋ ಹೊಸ ದರ ಪಟ್ಟಿಯಲ್ಲಿ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಕಡಿತ ಮಾಡೋ ನಿರೀಕ್ಷೆಯಿದೆ.

Royal Enfield bikes 2022:ಮುಂದಿನ ವರ್ಷ ರಾಯಲ್ ಎನ್‌ಫೀಲ್ಡ್ ಹೊಸ ಮಾಡೆಲ್‌ಗಳು ರೆಡಿ, ಯಾವೆಲ್ಲ ಇವೆ ಗೊತ್ತಾ?

ಭಾರತದ ರಸ್ತೆಗಳಲ್ಲಿ ರಾಜನಂತೆ ರಾಯಲ್ ಎನ್‌ಫೀಲ್ಡ್ (Royal Enfield) ಕಂಪನಿಯ ಮಿಂಚುತ್ತಿವೆ. ಕಂಪನಿಯು ಇದೀಗ ಮುಂಬರುವ ವರ್ಷದಲ್ಲಿ ಇನ್ನೂ ಅನೇಕ ಬೈಕ್‌ಗಳ ಲಾಂಚ್‌ಗೆ ಯೋಜನೆ ರೂಪಿಸಿಕೊಂಡಿದೆ. ರಾಯಲ್‌ ಎನ್‌ಫೀಲ್ಡ್ ಹಿಮಾಲಯನ್‌ನ ಅಗ್ಗದ ಆವೃತ್ತಿ ಬಿಡುಗಡೆಯೊಂದಿಗೆ ಕಂಪನಿಯ ಇತರ ಮಾಡೆಲ್‌ಗಳು ರಸ್ತೆಗಿಳಿಯಲಿವೆ ಎನ್ನಲಾಗುತ್ತಿದೆ.

click me!