'ಸ್ಕೂಟಿಯಲ್ಲಿ SEX', ಮಗಳಿಗೆ ಉಡುಗೊರೆ ಕೊಟ್ಟ ಅಪ್ಪ , ನಂಬರ್ ನೋಡಿದ್ರೆ ರಸ್ತೆಗಿಳಿಸೋದೇ ಕಷ್ಟ!

Published : Nov 30, 2021, 04:12 PM ISTUpdated : Dec 01, 2021, 08:24 AM IST
'ಸ್ಕೂಟಿಯಲ್ಲಿ SEX', ಮಗಳಿಗೆ ಉಡುಗೊರೆ ಕೊಟ್ಟ ಅಪ್ಪ , ನಂಬರ್ ನೋಡಿದ್ರೆ ರಸ್ತೆಗಿಳಿಸೋದೇ ಕಷ್ಟ!

ಸಾರಾಂಶ

* ಹುಟ್ಟುಹಬ್ಬದ ಗಿಫ್ಟ್‌ ಕೊಟ್ಟ ಕೆಟ್ಟ ಅನುಭವ * ಅಪ್ಪ ಕೊಡಿಸಿದ ಸ್ಕೂಟಿ ರಸ್ತೆಗಿಳಿಸೋದೇ ಕಷ್ಟ * ಎಲ್ಲಕ್ಕೂ ಕಾರಣ ಆ ಒಂದುನಂಬರ್‌ ಪ್ಲೇಟ್

ನವದೆಹಲಿ(ನ.30): ಅನೇಕ ಮಂದಿಗೆ ವಾಹನ ಸಂಖ್ಯೆಗಳು ಹೆಚ್ಚು ಮುಖ್ಯವಲ್ಲ. ಇನ್ನು ವಾಹನವನ್ನು ಖರೀದಿಸುವಾಗ ಹೋಗುವಾಗ, ಕೆಲವರು ಖಂಡಿತವಾಗಿಯೂ ಹಣ ಪಾವತಿಸಿ ವಿಐಪಿ ಸಂಖ್ಯೆಯನ್ನು (VIP Number) ನಿಗದಿಪಡಿಸುತ್ತಾರೆ, ಇಲ್ಲದಿದ್ದರೆ ಸಾಫ್ಟ್‌ವೇರ್ ಮೂಲಕ ಸ್ವಯಂಚಾಲಿತವಾಗಿ ಸಂಖ್ಯೆ ಹಂಚಿಕೆಯಾಗುತ್ತದೆ. ಆದರೀಗ RTO ನೀಡಿರುವ ನಂಬರ್‌ ಒಂದರಿಂದ ಯುವತಿಯೊಬ್ಬಳಿಗೆ ರಸ್ತೆಗೆ ತನ್ನ ವಾಹನ ಇಳಿಸಲು ಸಾಧ್ಯವಾಗುತ್ತಿಲ್ಲ. ಈಕೆ ಗಾಡಿಯನ್ನು ರಸ್ತೆಗಿಳಿಸಿದರೆ ಸಾಕು ವಾಹನವನ್ನು ನೋಡಿ ನಗುವವರೇ, ಅಪಹಾಸ್ಯ ಮಾಡುವವರೇ ಹೆಚ್ಚು. ಹೀಗಾಗಿ ಯುವತಿ ವಾಹನವಿದ್ದರೂ (Vehicle) ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಹೌದು, ಇಂತಹ ಘಟನೆಯುವುದು ಬಹಳ ಅಪರೂಪ.. ಆದರೀಗ ನಮ್ಮ ದೇಶದ ರಾಜಧಾನಿ ದೆಹಲಿಯಲ್ಲಿ (Delhi) ಇಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಹುಟ್ಟುಹಬ್ಬದ ಉಡುಗೊರೆ ದೊಡ್ಡ ಸಮಸ್ಯೆಯಾಯಿತು

ವಾಸ್ತವವಾಗಿ, ಈ ವಿಚಿತ್ರ ಘಟನೆ ದೆಹಲಿಯ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿ ಅಂಜಲಿ (ಕಾಲ್ಪನಿಕ ಹೆಸರು) ಗೆ ವಾಹನದ ಸಂಖ್ಯೆಗೆ ಸಂಬಂಧಿಸಿದಂತೆ ಸಂಭವಿಸಿದೆ. ಕಳೆದ ತಿಂಗಳಷ್ಟೇ ಅವರ ಹುಟ್ಟುಹಬ್ಬ, ಕಾಲೇಜಿಗೆ (College) ಹೋಗಲು ಹುಟ್ಟುಹಬ್ಬದಂದು ತಂದೆಯಿಂದ ಸ್ಕೂಟಿ ಗಿಫ್ಟ್ ಕೇಳಿದ್ದಳು. ಮಗಳ ಖುಷಿಗಾಗಿ ತಂದೆಯೂ ಸ್ಕೂಟಿ (Scooty) ಬುಕ್ ಮಾಡಿದ್ದರು. ಮನೆಗೆ ಸ್ಕೂಟಿ ಬಂದಾಗ ಅಂಜಲಿಗೆ ತುಂಬಾ ಖುಷಿಯಾಯಿತು. ಆದರೆ ಆರ್‌ಟಿಒ ಕಡೆಯಿಂದ ನಂಬರ್‌ ಸಿಕ್ಕಿದ್ದು ತೊಂದರೆಗೆ ಕಾರಣವಾಗಿದೆ.

ಹುಡುಗರು ಸ್ಕೂಟಿ ನೋಡಿ ಕೆಟ್ಟ ಕಾಮೆಂಟ್‌ಗ ನೀಡುತ್ತಿದ್ದರು

ಅಂಜಲಿಯ ಸ್ಕೂಟಿಯ ಮಧ್ಯದಲ್ಲಿ ಸೆಕ್ಸ್ ಅಕ್ಷರಗಳಿದ್ದವು. ಸ್ಕೂಟಿಯ ನೋಂದಣಿ ಸಂಖ್ಯೆ DL 3 SEX**** ಎಂದಾಗಿದೆ. ಸದ್ಯ ಇದರಿಂದಲೇ ಬಂದು ಹೋಗುವವರು ಕೆಟ್ಟ ಕಾಮೆಂಟ್ ಮಾಡುತ್ತಿದ್ದಾರೆ. ಅಂಜಲಿಗೆ ಈ ನಂಬರ್ ಸಿಕ್ಕಿದ ತಕ್ಷಣ ಅದನ್ನು ನೋಡಿದ ಜನ ಗೇಲಿ ಮಾಡಲಾರಂಭಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ದಾರಿಯಲ್ಲಿ ಹೋಗುತ್ತಿರುವವರು ಅಂಜಲಿ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡಲು ಪ್ರಾರಂಭಿಸಿದ್ದಾರೆ. ಅಂಜಲಿಯ ಸಹೋದರ ಸ್ಕೂಟಿಗೆ ಈ ನಂಬರ್ ಪ್ಲೇಟ್ (Number Plate) ಹಾಕಿದ್ದ. ಆದರೆ ಈ ಮೂರು ಅಕ್ಷರಗಳು S.E.X ಆಗಿರಬಹುದು ಎಂದು ಯಾರೂ ಯೋಚಿಸಿರಲಿಲ್ಲ.

ದೆಹಲಿ ಕಮಿಷನರ್‌ವರೆಗೂ ತಲುಪಿದ ಸ್ಕೂಟಿಯ ನಂಬರ್ 

ಇದೀಗ ಅಂಜಲಿ ತನ್ನ ತಂದೆಗೆ ವಾಹನದ ನಂಬರ್ ಬದಲಾಯಿಸುವಂತೆ ಕೇಳಿದ್ದಾಳೆ. ಈ ಕುರಿತು ದೆಹಲಿಯ ಆರ್‌ಟಿಒ (Delhi RTO) ಅಧಿಕಾರಿಯೊಂದಿಗೆ ಮಾತನಾಡಿದ ಅವರು, ಸುಮಾರು ಹತ್ತು ಸಾವಿರ ವಾಹನಗಳಿಗೆ ಈ ಸರಣಿಯ ಸಂಖ್ಯೆಗಳನ್ನು ನೀಡಲಾಗಿದೆ. ಎಫ್ ಸಂಖ್ಯೆಯು ಈ ರೀತಿ ಬದಲಾಗಲು ಪ್ರಾರಂಭಿಸಿದರೆ, ನಂತರ ಆರ್‌ಟಿಒಗೆ ಸಹ ತೊಂದರೆಯಾಗುತ್ತದೆ. ಮತ್ತೊಂದೆಡೆ, ಬಾಲಕಿಯ ತಂದೆ ದೆಹಲಿ ಸಾರಿಗೆ ಆಯುಕ್ತ ಕೆಕೆ ದಹಿಯಾ ಅವರೊಂದಿಗೆ ಈ ಕುರಿತು ಮಾತನಾಡಿದಾಗ, ಅವರು 'ವಾಹನದ ಸಂಖ್ಯೆಯನ್ನು ನಿಗದಿಪಡಿಸಿದ ನಂತರ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಯಾಕೆಂದರೆ ಈ ಎಲ್ಲಾ ಪ್ರಕ್ರಿಯೆಯು ಸೆಟ್ ಆಗಿರುತ್ತದೆ ಹಾಗೂ ಈ ಮಾದರಿ ಮುಂದುವರೆಯುತ್ತದೆ ಎಂದಿದ್ದಾರೆ.

ಬಾಲಕಿ ಮನೆಯಿಂದ ಹೊರ ಬರೋದೇ ಕಷ್ಟ

ಈಗ ಸ್ಕೂಟಿಯಿಂದಾಗಿ ಅಂಜಲಿಗೆ ಮನೆಯಿಂದ ಹೊರಬರಲು ಕಷ್ಟವಾಗಿದೆ. ಮೆಟ್ರೋದಿಂದಲೇ ತನ್ನ ಕಾಲೇಜಿಗೆ ಹೋಗುತ್ತಿದ್ದಾಳೆ, ಆದರೆ ಸ್ಕೂಟಿಯೊಂದಿಗೆ ಅವಳನ್ನು ನೋಡಿದವರು ಈಗಲೂ ಅವಳನ್ನು ಗೇಲಿ ಮಾಡುತ್ತಾರೆ. ಅಂಜಲಿ ಫ್ಯಾಷನ್ ಡಿಸೈನ್ ವಿದ್ಯಾರ್ಥಿನಿ. ಆಕೆ ಜನಕಪುರಿಯಿಂದ ನೋಯ್ಡಾಗೆ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಳು. ಆದರೆ ದೀರ್ಘ ಪ್ರಯಾಣದ ಸಮಯ ಮತ್ತು ಜನಸಂದಣಿಯನ್ನು ತಪ್ಪಿಸಲು, ತನ್ನ ತಂದೆಗೆ ಸ್ಕೂಟಿ ಖರೀದಿಸಲು ವಿನಂತಿಸಿದ್ದಳು. ಆದರೆ ಈ ಸ್ಕೂಟಿ ತನಗೆ ಇಷ್ಟು ದೊಡ್ಡ ಸಂಕಟ ತರುತ್ತದೆ ಎಂದು ಊಹಿಸಿರಲಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ
ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ