
ನವದೆಹಲಿ: ಓಲಾ ಕಂಪನಿಯು, ತನ್ನ ವಾಹನ ಚಾಲಕರು ಪ್ರತಿ ಪ್ರಯಾಣ ದರದಲ್ಲಿ ಕಂಪನಿಗೆ ಕೊಡಬೇಕಿದ್ದ ನಿರ್ದಿಷ್ಟ ಮೊತ್ತದ ಕಮಿಷನ್ ವ್ಯವಸ್ಥೆಯನ್ನು ಮಂಗಳವಾರದಿಂದ ರದ್ದುಗೊಳಿಸಿದ್ದು, ಶೂನ್ಯ ಕಮಿಷನ್ ಮಾದರಿಯನ್ನು ಜಾರಿಗೆ ತಂದಿದೆ. ಈ ಮೂಲಕ 1 ಲಕ್ಷಕ್ಕೂ ಅಧಿಕ ಚಾಲಕರು ಆದಾಯ ಮಿತಿಗಳಿಲ್ಲದೆ ಗ್ರಾಹಕರಿಂದ ಪಡೆದ ಹಣವನ್ನು ಪೂರ್ಣವಾಗಿ ತಮ್ಮಲ್ಲೇ ಉಳಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ.
‘ಈ ಉಪಕ್ರಮದಿಂದಾಗಿ, ಚಾಲಕರು ಯಾವುದೇ ಕಡಿತ ಅಥವಾ ಆದಾಯ ಮಿತಿಗಳಿಲ್ಲದೆ ಸಂಪೂರ್ಣ ಮೊತ್ತವನ್ನು ತಮ್ಮಲ್ಲೇ ಇಟ್ಟುಕೊಳ್ಳಬಹುದು. ಇದು ಚಾಲಕರ ಗಳಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ಕ್ರಮವು ದೇಶಾದ್ಯಂತ ಜಾರಿಗೆ ಬಂದಿದ್ದು, ಆಟೋರಿಕ್ಷಾ, ಬೈಕ್ ಹಾಗೂ ಕ್ಯಾಬ್‌ಗಳಿಗೆ ಅನ್ವಯವಾಗುತ್ತದೆ’ ಎಂದು ಓಲಾ ಕಂಪನಿ ತಿಳಿಸಿದೆ. ಇದುವರೆಗೆ ಚಾಲಕರು ಗ್ರಾಹಕರಿಂದ ಪಡೆದ ಪ್ರಯಾಣ ಶುಲ್ಕದಲ್ಲಿ ನಿರ್ದಿಷ್ಟ ಮೊತ್ತವನ್ನು ಕಂಪನಿಗೆ ಪಾವತಿಸಬೇಕಿತ್ತು. ಇನ್ನು ಮುಂದೆ ಪೂರ್ತಿ ಮೊತ್ತ ಚಾಲಕರಲ್ಲೇ ಉಳಿಯಲಿದೆ.
OLA ಎಲೆಕ್ಟ್ರಿಕ್ S1 ಸ್ಕೂಟರ್ ಮೇಲೆ 30 ಸಾವಿರ ಡಿಸ್ಕೌಂಟ್ ಜೊತೆಗೆ 25,000 ಹೆಚ್ಚುವರಿ ಆಫರ್!
ಭಾರತದ ಅತೀ ದೊಡ್ಡ ಪ್ಯೂರ್ ಪ್ಲೇ ಎಲೆಕ್ಟ್ರಿಕ್ ವಾಹನ ಕಂಪನಿ ಓಲಾ ಎಲೆಕ್ಟ್ರಿಕ್ ಈ ಹಬ್ಬದ ಆವೃತ್ತಿಯಲ್ಲಿ ಗ್ರಾಹಕರಿಗೆ ಬಂಪರ್ ಆಫರ್ ಘೋಷಿಸಿದೆ. ಬಾಸ್ 72 ಗಂಟೆಗಳ ರಶ್(BOSS 72-hour Rush) ವಿಶೇಷ ಆಫರ್ ಘೋಷಿಸಿರುವ ಓಲಾ ಎಲೆಕ್ಟ್ರಿಕ್ ಅತೀ ಕಡಿಮೆ ಬೆಲೆಗೆ ಸ್ಕೂಟರ್ ನೀಡುತ್ತಿದೆ. ಅಕ್ಟೋಬರ್ 10 ರಿಂದ 12ರ ವರೆಗೆ ಗ್ರಾಹಕರು ಕೇವಲ 49,999 ರೂಪಾಯಿ ಬೆಲೆಯಲ್ಲಿ Ola S1 ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಸಾಧ್ಯವಿದೆ. ವಿಶೇಷ ಅಂದರೆ ಎಸ್1 ಸ್ಕೂಟರ್‌ಗೆ 25,000 ರೂಪಾಯಿ ವರೆಗೆ ಹೆಚ್ಚುವರಿ ಪ್ರಯೋಜನ ಪಡೆಯಲು ಸಾಧ್ಯವಿದೆ.
S1 X 2kWh ಎಲೆಕ್ಟ್ರಿಕ್ ಸ್ಕೂಟರ್ ಕೇವಲ 49,999 ರೂಪಾಯಿಗೆ(ಪ್ರತಿದಿನ ಸೀಮಿತ ಸ್ಟಾಕ್) ಲಭ್ಯವಿದೆ. ಪ್ರಖ್ಯಾತ S1 Proಗೆ 25,000 ರೂಪಾಯಿ ವರೆಗೆ ರಿಯಾಯಿತಿ ಮತ್ತು ಫ್ಲಾಟ್ 5,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಲಭ್ಯವಿದೆ.
BOSS 72-ಗಂಟೆಗಳ ರಶ್'ಆಫರ್ ಆಡಿಯಲ್ಲಿ ಓಲಾ ಕಂಪನಿಯು ಈ ಪ್ರಯೋಜನಗಳನ್ನು ನೀಡುತ್ತಿದೆ:
BOSS ಬೆಲೆಗಳು: Ola S1 X 2kWh ಕೇವಲ ₹49,999 ರ ಆರಂಭಿಕ ಬೆಲೆಯಲ್ಲಿ (ಪ್ರತಿದಿನ ಸೀಮಿತ ಸ್ಟಾಕ್)
BOSS ರಿಯಾಯಿತಿಗಳು: S1 ಪೋರ್ಟ್‌ಫೋಲಿಯೊದಲ್ಲಿ ₹25,000 ವರೆಗೆ; ಮತ್ತು S1 Pro ನ ಮೇಲೆ ಹೆಚ್ಚುವರಿ ಫ್ಲಾಟ್ ₹5,000 ವಿನಿಮಯ ಬೋನಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ