ಡ್ರೀಮ್‌ ಲೈನರ್‌ಗೆ ಕ್ಲೀನ್‌ಚಿಟ್‌ - ತಪಾಸಣೆ ವೇಳೆ ಸಮಸ್ಯೆ ಕಂಡುಬಂದಿಲ್ಲ

Published : Jun 18, 2025, 04:19 AM IST
Air India (File Photo)

ಸಾರಾಂಶ

ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್‌ಲೈನರ್ ಫ್ಲೀಟ್‌ನ ಇತ್ತೀಚಿನ ತಪಾಸಣೆಯಲ್ಲಿ ಯಾವುದೇ ಗಮನಾರ್ಹ ಸುರಕ್ಷತಾ ಸಮಸ್ಯೆಗಳು ಕಂಡುಬಂದಿಲ್ಲ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮಂಗಳವಾರ ತಿಳಿಸಿದೆ.

ನವದೆಹಲಿ : ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್‌ಲೈನರ್ ಫ್ಲೀಟ್‌ನ ಇತ್ತೀಚಿನ ತಪಾಸಣೆಯಲ್ಲಿ ಯಾವುದೇ ಗಮನಾರ್ಹ ಸುರಕ್ಷತಾ ಸಮಸ್ಯೆಗಳು ಕಂಡುಬಂದಿಲ್ಲ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮಂಗಳವಾರ ತಿಳಿಸಿದೆ.

ಜೂನ್ 12ರಂದು ಮಧ್ಯಾಹ್ನ 1:38 ಕ್ಕೆ ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾದ ಡ್ರೀಮ್‌ಲೈನರ್‌ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿ ಅದರಲ್ಲಿದ್ದ 242 ಜನರಲ್ಲಿ 241 ಜನರು ಸಾವನ್ನಪ್ಪಿದ್ದರು. ಇದಾದ ನಂತರ ಮಂಗಳವಾರ ಡ್ರೀಮ್‌ಲೈನರ್‌ನ 7 ಏರ್‌ ಇಂಡಿಯಾ ವಿಮಾನಗಳು ಹಲವು ಕಾರಣಗಳನ್ನು ನೀಡಿ ಹಾರಾಟ ಸ್ಥಗಿತಗೊಳಿಸಿದವು. ಈ ಹಿನ್ನೆಲೆಯಲ್ಲಿ ಡ್ರೀಮ್‌ಲೈನರ್‌ ವಿಮಾನಗಳು ವಿಮಾನಯಾನ ಅಧಿಕಾರಿಗಳ ತೀವ್ರ ಪರಿಶೀಲನೆಗೆ ಒಳಗಾಗಿವೆ.

ಈ ವೇಳೆ ವಿಮಾನ ಮತ್ತು ಅವುಗಳ ನಿರ್ವಹಣಾ ವ್ಯವಸ್ಥೆಗಳು ಪ್ರಸ್ತುತ ವಾಯುಯಾನ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿರುವುದು ತಪಾಸಣೆಗಳಲ್ಲಿ ಕಂಡುಬಂದಿದೆ ಎಂದು ವಾಯುಯಾನ ಕಾವಲು ಸಂಸ್ಥೆಯಾದ ‘ಡಿಜಸಿಎ’ ತಿಳಿಸಿದೆ.

33 ವಿಮಾನಗಳನ್ನು ಒಳಗೊಂಡಿರುವ ಏರ್ ಇಂಡಿಯಾದ ಸಂಪೂರ್ಣ ಬೋಯಿಂಗ್ 787-8/9 ಫ್ಲೀಟ್‌ಗಳನ್ನು ತಪಾಸಣೆ ಮಾಡಲಾಗಿದೆ. ಇವುಗಳಲ್ಲಿ 24 ವಿಮಾನಗಳು ಸುರಕ್ಷತಾ ತಪಾಸಣೆಯಲ್ಲಿ ಉತ್ತೀರ್ಣವಾಗಿವೆ ಎಂದು ಡಿಜಿಸಿಎ ತಿಳಿಸಿದೆ. ಇನ್ನುಳಿದ ವಿಮಾನಗಳ ತಪಾಸಣೆ ನಡೆದಿದ್ದು, ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ.

ಇದೇ ವೇಳೆ, ‘ಉತ್ತಮ ಸುರಕ್ಷತೆ ಮತ್ತು ಸಮನ್ವಯಕ್ಕಾಗಿ ತಾಂತ್ರಿಕ ಸಮಸ್ಯೆಗಳನ್ನು ನೈಜ ಸಮಯದಲ್ಲಿ ವರದಿ ಮಾಡುವ ವಿಧಾನ ಅಳವಡಿಸಿಕೊಳ್ಳಿ. ಇದರಿಂದ ಅನಾಹುತ ತಡೆ ಸಾಧ್ಯವಾಗುತ್ತದೆ’ ಎಂದು ವಿಮಾನಯಾನ ಅಧಿಕಾರಿಗಳು ಏರ್ ಇಂಡಿಯಾಗೆ ಸಲಹೆ ನೀಡಿದ್ದಾರೆ ಎಂದು ಡಿಜಿಸಿಎ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಪರ್ಯಾಯ ಮಾರ್ಗ ಶೋಧಿಸಿ: ವಿಮಾನ ಸಂಸ್ಥೆಗಳಿಗೆ ಸೂಚನೆ

ನವದೆಹಲಿ: ಇರಾನ್‌-ಇಸ್ರೇಲ್‌ ಸಂಘರ್ಷದ ಕಾರಣ ಎರಡೂ ದೇಶಗಳ ವಾಯುವಲಯ ಬಂದ್‌ ಆಗಿದೆ. ಪಾಕ್‌ ಕೂಡ ಇತ್ತೀಚಿನ ಭಾರತದ ಜತೆಗಿನ ಯುದ್ಧದ ಕಾರಣ ತನ್ನ ವಾಯುವಲಯ ಬಂದ್ ಮಾಡಿದೆ. ಹೀಗಾಗಿ ಪಾಶ್ಚಾತ್ಯ ದೇಶಗಳಿಗೆ ಭಾರತದ ವಿಮಾನ ಸುತ್ತಿ ಬಳಸಿ ಸಾಗಬೇಕಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಪರ್ಯಾಯ ವಾಯುಯಾನ ಮಾರ್ಗ ಶೋಧಿಸಿ ಎಂದು ವಿಮಾನಯಾನ ಕಂಪನಿಗಳಿಗೆ ಕೇಂದ್ರ ವಿಮಾನಯಾನ ನಿರ್ದೇಶನಾಲಯ ಮಂಗಳವಾರ ಸೂಚಿಸಿದೆ.

ವಿಮಾನ ದುರಂತ: ಮೃತ ಪ್ರಯಾಣಿಕರ 163 ಡಿಎನ್‌ಎ ಮಾದರಿ ಹೊಂದಾಣಿಕೆ

ಅಹಮದಾಬಾದ್: ಅಹಮದಾಬಾದ್‌ನಲ್ಲಿ ನಡೆದ ಏರ್‌ ಇಂಡಿಯಾ ಭೀಕರ ವಿಮಾಣ ಅಪಘಾತದಲ್ಲಿ ಮೃತಪಟ್ಟ 242 ಜನರಲ್ಲಿ ಪೈಕಿ ಈವರೆಗೆ 163 ಡಿಎನ್‌ಎ ಮಾದರಿಗಳನ್ನು ಹೊಂದಾಣಿಕೆ ಮಾಡಲಾಗಿದೆ.

124 ಕಳೇಬರಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಉಳಿದ ಎಲ್ಲ ಶವಗಳೂ ಸುಟ್ಟು ಕರಕಲಾಗಿರುವುದರಿಂದ, ಮೃತರನ್ನು ಗುರುತಿಸಲು ವಿಧಿವಿಜ್ಞಾನ ತಂಡಗಳು ಡಿಎನ್‌ಎ ಪರೀಕ್ಷೆಗಳನ್ನು ಮುಂದುವರಿಸಿವೆ.

ವಿಮಾನ ದುರಂತ ಬಳಿ ಬಾಲ್ಕನಿಯಿಂದ ವಿದ್ಯಾರ್ಥಿ ಜಿಗಿಯುವ ವಿಡಿಯೋ ವೈರಲ್‌

ಅಹ್ಮದಾಬಾದ್‌: ಇತ್ತೀಚೆಗೆ ಇಲ್ಲಿಯ ಬಿಜೆ ವೈದ್ಯಕೀಯ ಕಾಲೇಜು ಹಾಸ್ಟೆಲ್‌ಗೆ 242 ಮಂದಿ ಹೊತ್ತ ಏರ್ ಇಂಡಿಯಾ ವಿಮಾನ ಅಪ್ಪಳಿಸಿದ ದುರುಂತದ ಕರಾಳತೆಯ ಮತ್ತೊಂದು ವಿಡಿಯೋ ಬಿಡುಗಡೆಯಾಗಿದೆ.

ವಿಮಾನ ಹಾಸ್ಟೆಲ್‌ ಕಟ್ಟಡಕ್ಕೆ ಅಪ್ಪಳಿಸಿದ ರಭಸಕ್ಕೆ ಅಲ್ಲಿ ಉಂಟಾದ ದಟ್ಟ ಕಪ್ಪು ಹೊಗೆ, ಅಲ್ಲಿದ್ದವರ ಚೀರಾಟ ಒಂದೆಡೆಯಾದರೆ ಹಾಸ್ಟೆಲ್‌ ವಿದ್ಯಾರ್ಥಿಗಳು ತಮ್ಮ ಜೀವ ಉಳಿಸಿಕೊಳ್ಳಲು ಕಟ್ಟಡದ ಬಾಲ್ಕನಿಯಿಂದ ಜಿಗಿಯುತ್ತಿರುವುದು ವಿಡಿಯೋದಲ್ಲಿ ಕಂಡುಬರುತ್ತಿದೆ.

ಈ ವಿಡಿಯೋ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ. ದುರಂತ ವೇಳೆ ತರಬೇತಿ ವೈದ್ಯರು ಹೊದಿಕೆಗಳನ್ನು ಹಗ್ಗವಾಗಿ ಬಳಸಿ ಕಟ್ಟಡದಿಂದ ಇಳಿಯುವುದು ವಿಡಿಯೋದಲ್ಲಿ ಕಾಣಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..