ಒಡಿಶಾದಲ್ಲಿ ಇದೇ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರಕ್ಕೆ ಹೊಸ ತಲೆನೋವೊಂದು ಶುರುವಾಗಿದೆ. ಅದೇ ಸಿಎಂ ಆಡಳಿತ ನಡೆಸಲು ಬೇಕಾದ ಅಧಿಕೃತ ಸರ್ಕಾರಿ ಕಟ್ಟಡದ ಕೊರತೆ
ಭುವನೇಶ್ವರ: ಒಡಿಶಾದಲ್ಲಿ ಇದೇ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರಕ್ಕೆ ಹೊಸ ತಲೆನೋವೊಂದು ಶುರುವಾಗಿದೆ. ಅದೇ ಅಧಿಕೃತ ಹೊಸ ಸರ್ಕಾರಿ ಕಟ್ಟಡ. ಹಾಗಾದ್ರೆ ಈ ಹಿಂದಿನ ಸರ್ಕಾರ ಆಡಳಿತ ನಡೆಸಿದ್ದು ಎಲ್ಲಿ ಎಂಬ ಸಹಜ ಪ್ರಶ್ನೆ ಎಲ್ಲರಲ್ಲೂ ಮೂಡಬಹುದು. ಆದರೆ ಒಡಿಶಾದ ನಿರ್ಗಮಿತ ಸಿಎಂ ಬಿಜೆಡಿಯ ನವೀನ್ ಪಟ್ನಾಯಕ್ ಅವರು ತಮ್ಮ ನಿರಂತರ 24 ವರ್ಷದ ಅವಧಿಯಲ್ಲಿ ಸರ್ಕಾರವನ್ನು ತಮ್ಮ ಸ್ವಂತ ಮನೆಯಿಂದಲೇ ಹ್ಯಾಂಡಲ್ ಮಾಡುತ್ತಿದ್ದರು. ನವೀನ್ ಅವರ ಸ್ವಂತ ನಿವಾಸವೇ ಮುಖ್ಯಮಂತ್ರಿಗಳ ಸರ್ಕಾರಿ ನಿವಾಸದಂತೆಯೇ ಕೆಲಸ ಮಾಡುತ್ತಿತ್ತು.
ನವೀನ್ ಪಟ್ನಾಯಕ್ ಅವರು 2000 ಇಸವಿಯಲ್ಲಿ ಒಡಿಶಾ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದವರು 2024ರವರೆಗೂ ಸಿಎಂ ಆಗಿಯೇ ಮುಂದುವರೆದರು. 24 ವರ್ಷಗಳವರೆಗೆ ಸೋಲೇ ಕಾಣದ ನವೀನ್ ಪಟ್ನಾಯಕ್ ಅವರು ಸರ್ಕಾರ ಮುಖ್ಯಮಂತ್ರಿಗಳಿಗೆ ನೀಡುವ ಸರ್ಕಾರಿ ಮನೆಯ ಬದಲು ತಮ್ಮ ಸ್ವಂತ ಮನೆಯಲ್ಲೇ ಇರಲು ಬಯಸಿದ್ದರು. ಅವರ ಈ ನಿರ್ಧಾರವು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಒಂದು ವಿಶಿಷ್ಟ ನಿದರ್ಶನವನ್ನು ಸ್ಥಾಪಿಸಿತು.
ಸುಮಾರು ಕಾಲು ಶತಮಾನದಷ್ಟು ಕಾಲ ಎಲ್ಲಾ ಅಧಿಕಾ ಹಾಗೂ ಆಡಳಿತ ವ್ಯವಹಾರಗಳು ಸಿಎಂ ನವೀನ್ ನಿವಾಸದಿಂದಲೇ ನಡೆಯುತ್ತಿತ್ತು. ನವೀನ್ ಪಟ್ನಾಯಕ್ ಅವರ ತಂದೆ ಒಡಿಶಾದ ಮಾಜಿ ಸಿಎಂ ಬಿಜು ಪಟ್ನಾಯಕ್ ಅವರು ಕಟ್ಟಿದ ಪಲಟಿಯಲ್ ಮೆನ್ಸನ್‌ನಲ್ಲೇ ಸರ್ಕಾರದ ಎಲ್ಲಾ ಕೆಲಸ ಕಾರ್ಯಗಳು ನಡೆಯುತ್ತಿತ್ತು. ಆದರೆ ಸುಧೀರ್ಘ ಕಾಲ ಸಿಎಂ ಆಗಿ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಗಳಿಸಿ ತಿಂಗಳು ಕಳೆಯುವಷ್ಟರಲ್ಲಿ ಅವರ ಪಕ್ಷ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿದ್ದು, ಈಗ ಒಡಿಶಾದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ.
ಆಂಧ್ರ, ಒಡಿಸಾಗೆ ಇಂದು ನೂತನ ಸರ್ಕಾರ: ನಾಯ್ಡು, ಮಾಝಿಗೆ ಸಿಎಂ ಪಟ್ಟ
ನವೀನ್ ಅವರ ಈ ವರ್ಕ್ ಫ್ರಮ್ ಹೋಮ್‌ನಿಂದಾಗಿ ಈಗ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ ಸಿಎಂ ಆಯ್ಕೆ ಮಾಡುವುದಕ್ಕಿಂತಲೂ ದೊಡ್ಡ ತಲೆನೋವಾಗಿದ್ದು, ಸಿಎಂಗೆ ಮನೆ ಸರ್ಕಾರಿ ಮನೆ ಹುಡುಕುವ ಕೆಲಸ. ರಾಜ್ಯಾಡಳಿತವೂ ಸಿಎಂಗಾಗಿ ಸರಿಯಾದ ಮನೆ ಹುಡುಕುವ ಕೆಲಸವನ್ನು ತೀವ್ರಗೊಳಿಸಿದೆ. ಒಡಿಶಾದ ನೂತನ ಸಿಎಂಗಾಗಿ ಹಲವು ಖಾಲಿ ಇರುವ ಕ್ವಾರ್ಟ್ರಸ್‌ಗಳು ಹಾಗೂ ಹಾಲಿ ಸಿಎಂ ಕುಂದು ಕೊರತೆ ಆಲಿಸಲು ಬಳಸುತ್ತಿದ್ದ ಕುಂದು ಕೊರತೆ ಕೇಂದ್ರವನ್ನು ಕೂಡ ಸಿಎಂಗಾಗಿ ಪಟ್ಟಿ ಮಾಡಲಾಗಿದೆ. ಒಮ್ಮೆ ಇದರಲ್ಲಿ ಒಂದು ಆಯ್ಕೆಯಾದ ಕೂಡಲೇ ಅವುಗಳ ಅಗತ್ಯ ನವೀಕರಣ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಸ್ತುತ ಸ್ವಲ್ಪ ಕಾಲದ ಮಟ್ಟಿಗಾಗಿ ರಾಜ್ಯಾಡಳಿತವೂ ರಾಜ್ಯದ ಅತಿಥಿಗೃಹವನ್ನು ತಾತ್ಕಾಲಿಕವಾಗಿ ಸಿಎಂ ಮುಖ್ಯಮಂತ್ರಿ ಅಧಿಕೃತ ಸರ್ಕಾರಿ ನಿವಾಸ ಮಾಡಲು ಮುಂದಾಗಿದೆ. ಇದಕ್ಕೂ ಮೊದಲು ಸಿಎಂಗಳಾಗಿದ್ದ ಹೇಮನಂದ ಬಿಸ್ವಾಲ್ ಹಾಗೂ ಜಾನಕಿ ವಲ್ಲಬ್ ಪಟ್ನಾಯಕ್ ಅವರು ಭುವನೇಶ್ವರದ ಕ್ಲಬ್ ಬಳಿ ಇರುವ ಒಂದು ಮಹಡಿಯ ಕಟ್ಟಡದಿಂದ ಕಾರ್ಯನಿರ್ವಹಿಸುತ್ತಿದ್ದರು. ಆದರೆ 1995ರಲ್ಲಿ ಬಿಜು ಪಟ್ನಾಯಕ್ ಅವರು ಗೆದ್ದ ನಂತರ ಸಿಎಂ ಕಚೇರಿಯನ್ನು ಎರಡು ಮಹಡಿಯ ಕಟ್ಟಡಕ್ಕೆ ಶಿಫ್ಟ್ ಮಾಡಲಾಗಿತ್ತು.
ಒಡಿಶಾದಲ್ಲಿ ಚೊಚ್ಚಲ ಬಾರಿ ಬಿಜೆಪಿ ಅಧಿಕಾರಕ್ಕೆ: ಸಿಎಂ ರೇಸಲ್ಲಿ ಪ್ರಧಾನ್, ಓರಂ, ಸಂಬಿತ್, ಪಾಂಡಾ
ಇತ್ತ ಪಟ್ನಾಯಕ್ ಕುಟುಂಬದ ಮೂಲ ಬಂಗಲೆಯೂ ಕಥಕ್‌ನಲ್ಲಿ ಇದ್ದು, ಇಲ್ಲೇ ನಿರ್ಗಮಿತ ಸಿಎಂ ನವೀನ್ ಪಟ್ನಾಯಕ್ ಹಾಗೂ ಬಿಜು ಅವರ ಇನ್ನಿಬ್ಬರು ಮಕ್ಕಳಾದ ಪ್ರೇಂ ಹಾಗೂ ಗೀತಾ ಜನಿಸಿದ್ದರು. ಆದರೆ ಕಳೆದೈದು ದಶಕಗಳಿಂದ ಈ ಬಂಗ್ಲೆಯನ್ನು ಬೇರೆಯವರು ನೋಡಿಕೊಳ್ಳುತ್ತಿದ್ದು, ಇದಕ್ಕೆ ಆನಂದ್ ಭವನ್ ಎಂದು ಹೆಸರಿಡಲಾಗಿದೆ.
ಒಡಿಶಾ ಚುನಾವಣೆಯಲ್ಲಿ ಬಿಜೆಪಿಯೂ ನವೀನ್ ಪಟ್ನಾಯಕ್ ಅವರ 24 ವರ್ಷದ ಆಡಳಿತವನ್ನು ಕೊನೆಗೊಳಿಸಿದ್ದು, 147 ಸದಸ್ಯ ಬಲದ ಒಡಿಶಾ ವಿಧಾನಸಭೆಯಲ್ಲಿ ಬಿಜೆಪಿ 78 ಸೀಟುಗಳನ್ನು ಗೆಲ್ಲುವ ಮೂಕ ಬಿಜೆಡಿಯನ್ನು ಧೂಳಿಪಟ ಮಾಡಿತ್ತು. ಬಿಜೆಡಿ ಇಲ್ಲಿ 51 ಸೀಟು ಗೆದ್ದಿದ್ದು, ಕಾಂಗ್ರೆಸ್ 14 ಸ್ಥಾನಗಳಿಗೆ ತೃಪ್ತಿ ಪಟ್ಟಿದೆ. ಹಾಗೆಯೇ ಮೂವರು ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದಾರೆ.
First Woman Muslim MLA of Odisha: ಒಡಿಶಾದ ಮೊದಲ ಮುಸ್ಲಿಂ ಶಾಸಕಿ ಓದಿದ್ದು ಎಂಜಿನೀಯರಿಂಗ್!
ಅಂದಹಾಗೆ ಒಡಿಶಾದ ನೂತನ ಸಿಎಂ ಆಗಿ ಬುಡಕಟ್ಟು ಸಮುದಾಯದ ನಾಯಕ ಮೋಹನ್ ಚರಣ್ ಸಿಂಗ್ ಮಾಂಝಿ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ. ಹಾಗೆಯೇ ಇಬ್ಬರು ಡಿಸಿಎಂಗಳನ್ನು ಕೂಡ ಬಿಜೆಪಿ ಆಯ್ಕೆ ಮಾಡಿದ್ದು, ಕೆವಿ ಸಿಂಗ್ ದಿಯೋ, ಪಾರ್ವತಿ ಪರೀದಾ ಅವರನ್ನು ಉಪಮುಖ್ಯಮಂತ್ರಿಗಳಾಗಿ ಆಯ್ಕೆ ಮಾಡಲಾಗಿದೆ.