ತುಂಡುಡುಗೆ ತೊಟ್ಟು ದೇವರ ಆರತಿ ದೀಪದಲ್ಲಿ ಸಿಗರೇಟ್ ಹಚ್ಕೊಂಡ ಯುವತಿ, ಕರ್ಮ ಬಿಡುತ್ತಾ?

Published : Jun 12, 2024, 04:32 PM ISTUpdated : Jun 13, 2024, 03:47 PM IST
ತುಂಡುಡುಗೆ ತೊಟ್ಟು ದೇವರ ಆರತಿ ದೀಪದಲ್ಲಿ ಸಿಗರೇಟ್ ಹಚ್ಕೊಂಡ ಯುವತಿ, ಕರ್ಮ ಬಿಡುತ್ತಾ?

ಸಾರಾಂಶ

ಅಮ್ಮನೊಂದಿಗೆ ದೇವಾಲಯಕ್ಕೆ ಹೋದ ಮಾಡ್ರನ್ ಯುವತಿ ಮಂಗಳಾರತಿ ತಟ್ಟೆಯಲ್ಲಿದ್ದ ದೀಪದಿಂದ ಸಿಗರೇಟ್ ಹಚ್ಚಿಕೊಂಡು ಸೇದಿದ್ದಾಳೆ. ಆದರೆ, ಆಕೆ ದೇವಾಲಯ ಆವರಣ ದಾಟುವುದರೊಳಗೆ ಕರ್ಮ ಅನುಭವಿಸಿದ್ದಾಳೆ..

ನವದೆಹಲಿ (ಜೂ.12): ದೇವಸ್ಥಾನಕ್ಕೆ ಮಡಿಯಿಂದ ಹೋಗಿ ದೇವರಿಗೆ ಕೈಮುಗಿದು ಬರುವುದು ನಮ್ಮ ಹಿಂದೂ ಸಂಪ್ರದಾಯವಾಗಿದೆ. ಆದರೆ, ಇಲ್ಲೊಬ್ಬ ಮಾರ್ಡನ್ ಯುವತಿ ತುಂಡುಡುಗೆ ತೊಟ್ಟು ದೇವಸ್ಥಾನಕ್ಕೆ ಹೋಗಿದ್ದೂ ಅಲ್ಲದೇ ದೇವರ ಮಂಗಳಾರತಿ ತಟ್ಟೆಯಲ್ಲಿದ್ದ ದೀಪದಿಂದ ಸಿಗರೇಟ್ ಹಚ್ಚಿಕೊಂಡು ಅಲ್ಲಿಯೇ ಸೇದುತ್ತಾ ನಿಂತಿದ್ದಳು. ಇದನ್ನು ನೋಡಿದ ಆಕೆಯ ತಾಯಿ ತನ್ನ ಮಗಳಿಗೆ ಬೈದು, ಕೈಯಿಂದ ಸಿಗರೇಟ್ ಕಿತ್ತೆಸೆದಿದ್ದಾರೆ. ಅಮ್ಮನಿಂದ ಕೈ ಕೊಸರಿಕೊಂಡು ಓಡುತ್ತಿದ್ದ ಯುವತಿ ದೇವಾಲಯ ಆವರಣದಲ್ಲಿಯೇ ದಿಢೀರನೆ ಕುಸಿದು ಬಿದ್ದಿದ್ದಾಳೆ.

ಹೌದು, ದೇವರು ಎಂದರೆ ಅದೊಂದು ನಂಬಿಕೆಯಾಗಿದೆ. ಕೆಲವರು ದೇವರನ್ನು ನಂಬದರೆ, ಇನ್ನು ಕೆಲವರು ದೇವರು ಹಾಗೂ ದೆವ್ವಗಳನ್ನು ಕೂಡ ನಂಬದ ನಾಸ್ತಿಕರು ನಮ್ಮೊಂದಿಗಿದ್ದಾರೆ. ಆದರೆ, ಅವರವರ ನಂಬಿಕೆಗಳನ್ನು ಆಚರಣೆಗೆ ಬಿಡಬೇಕು, ಇಲ್ಲವಾದರೆ ಅಲ್ಲಿ ಅನರ್ಥಗಳು ನಡೆದು ಹೋಗುತ್ತವೆ. ಇನ್ನು ನಾಸ್ತಿಕರು ತಮ್ಮ ಅಭಿಪ್ರಾಯಗಳನ್ನು ಬೇರೆಯವರ ಮೇಲೆ ಬಿತ್ತಲು ಮುಂದಾದರೂ ದೊಡ್ಡ ಕಾಂಟ್ರವರ್ಸಿಗಳೇ ಆರಂಭವಾಗಿತ್ತವೆ. ಅದಕ್ಕೆ ನಮ್ಮ ರಾಜ್ಯದಲ್ಲಿಯೇ ಅನೇಕರು ಉದಾಹರಣೆಯಾಗಿದ್ದಾರೆ. ಆದರೆ, ಇಲ್ಲೊಬ್ಬ ಮಾರ್ಡನ್ ಯುವತಿ ದೇವಾಲಯದ ಮಂಗಳಾರತಿ ತಟ್ಟೆಯಲ್ಲಿದ್ದ ಮಂಗಳಾರತಿ ದೀಪದಿಂದ ಸಿಗರೇಟ್ ಹಚ್ಚಿಕೊಂಡು ಸೇದಿ ವಿಕೃತಿ ಮೆರೆದಿದ್ದಾಳೆ.

ಹೆಣ್ಣು ಸಿಗದ ಗಂಡು ಮಕ್ಕಳಿಗೆ ಭರ್ಜರಿ ಆಫರ್; ಚಂದುಳ್ಳಿ ಚಲುವೆ ಜೊತೆಗೆ 2 ಕೋಟಿ ರೂ. ಬಂಗಲೆ, 50 ಲಕ್ಷ ಎಫ್‌ಡಿ ಉಚಿತ

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಎಕ್ಸ್ (ಹಳೆಯ ಟ್ವಿಟರ್) ಖಾತೆಯಲ್ಲಿ ಶುಭಾಂಗಿ ಪಂಡಿತ್‌ (Babymishra_) ಎನ್ನುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ತುಂಡುಡುಗೆ ತೊಟ್ಟ ಯುವತಿಯೊಬ್ಬಳು ದೇವಾಲಯದ ಆವರಣದೊಳಗೆ ಭಕ್ತರಂತೆ ಪ್ರವೇಶ ಮಾಡಿದ್ದಾಳೆ. ನಂತರ, ದೇವರ ಪೂಜಾರಿ ಮಂಗಳಾರತಿ ಕೊಟ್ಟು ಅಲ್ಲಿಂದ ಒಳಗೆ ಗರ್ಭಗುಡಿಗೆ ಹೋಗುತ್ತಾರೆ. ಇತರೆ ಭಕ್ತರು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಲು ಮುಂದಾಗಿದ್ದಾರೆ.

ತಟ್ಟೆಯಲ್ಲಿದ್ದ ಮಂಗಳಾರತಿ ದೀಪದಿಂದ ಸಿಗರೇಟ್ ಹಚ್ಚಿದ ಯುವತಿ: ಎಲ್ಲರೂ ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದರೆ, ಇತ್ತ ಮಂಗಳಾರತಿ ತಟ್ಟೆಯ ಪಕ್ಕದಲ್ಲಿದ್ದ ಸ್ಥಳಕ್ಕೆ ತೆರಳಿ ಮಿನಿ ಸ್ಕರ್ಟ್‌ನಲ್ಲಿ ಇಟ್ಟುಕೊಂಡಿದ್ದ ಸಿಗರೇಟ್ ಪ್ಯಾಕ್ ತೆಗೆದು ಕೈಯಲ್ಲಿ ಹಿಡಿದುಕೊಂಡಿದ್ದಾಳೆ. ನಂತರ, ತಟ್ಟೆಯಲ್ಲಿದ್ದ ಮಂಗಳಾರತಿಯ ದೀಪವನ್ನು ಪಕ್ಕಕ್ಕೆ ಕೊಂಡೊಯ್ದು ಅದರಿಂದ ಕೈಯಲ್ಲಿದ್ದ ಸಿಗರೇಟ್ ಬಾಯಲ್ಲಿ ಇಟ್ಟುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಪುನಃ ಮಂಗಳಾರತಿಯ ದೀಪವನ್ನು ದೇವರ ಮುಂದಿರುವ ತಟ್ಟೆಯಲ್ಲಿ ತಂದಿಡುತ್ತಾಳೆ. ನಂತರ, ದೇವರ ಮುಂಭಾಗವೇ ಸ್ವಲ್ಪ ಪಕ್ಕದಲ್ಲಿ ಸಿಗರೇಟ್ ಸೇದುತ್ತಾ ನಿಲ್ಲುತ್ತಾಳೆ. ಇದನ್ನು ನೋಡಿದ ಆಕೆಯ ತಾಯಿ ಓಡಿ ಹೋಗಿ ಮಗಳಿಗೆ ಬೈದು ಕೈಯಲ್ಲಿದ್ದ ಸಿಗರೇಟ್ ಕಿತ್ತುಕೊಂಡು ಎಸೆದಿದ್ದಾರೆ.

ಕಾಂಟ್ರವರ್ಸಿಗಳ ಕಿಂಗ್ ದರ್ಶನ್ ಅಂಡ್ ಗ್ಯಾಂಗ್; ರೇಣುಕಾಸ್ವಾಮಿ ಕೊಲೆ ಮಾಡಿ ಖಾಕಿ ಪಡೆಗೆ ಸರೆಂಡರ್!

ಅಮ್ಮ ಸಿಗರೇಟ್ ಸೇದಲು ಬಿಡುತ್ತಿಲ್ಲವೆಂದು ಕೋಪಗೊಂಡ ಯುವತಿ, ಅಮ್ಮನಿಂದ ಕೈ ಕೊಸರಿಕೊಂಡು ಕೋಪದಲ್ಲಿಯೇ ಹೊರಗೆ ಹೋಗಲು ಮುಂದಾಗಿದ್ದಾಳೆ. ದೇವಾಲಯದ ಆವರಣವನ್ನು ದಾಟುವ ಮೊದಲೇ ಯುವತಿ ಜಾರಿ ಬಿದ್ದು, ಸೊಂಟವನ್ನೇ ಮುರಿದುಕೊಳ್ಳುತ್ತಾಳೆ. ಇದರಿಂದ ಗಾಬರಗೊಂಡ ಆಕೆಯ ತಾಯಿ ಸಹಾಯಕ್ಕಾಗಿ ಕೂಗಿದ್ದಾರೆ. ಆಗ ದೇವಾಲಯದ ಇತರೆ ಭಾಗದಲ್ಲಿದ್ದ ಜನರು ಬಂದು ಯುವತಿಯ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ, ಯುವತಿಗೆ ಮೇಲೇಳಲೂ ಸಾಧ್ಯವಾಗದೇ ಸೊಂಟ ಮುರಿದ ಸ್ಥಿತಿಯಲ್ಲಿಯೇ ಆಕೆಯನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ
ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌