ನವದೆಹಲಿ (ಏ.3): ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದ ಒಂದು ತಿಂಗಳ ಬಳಿಕ ಮೊದಲ ಬಾರಿಗೆ ಅಮೆರಿಕ ಉದ್ದೇಶಿಸಿ ಭಾಷಣ ಮಾಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
11:59 PM (IST) Apr 03
ಏಷ್ಯಾ ಸೀರೀಸ್ ರೇಸಿಂಗ್‌ನಲ್ಲಿ ಭಾರತದ ಉದಯೋನ್ಮುಖ ರೇಸರ್ ಕಿಯಾನ್ ಶಾ ಪೋಡಿಯಂ ಫಿನಿಶ್, ಅಂ.ರಾ.ರೇಸಿಂಗ್‌ನ ಹಿರಿಯರ ವಿಭಾಗದಲ್ಲಿ ಚೊಚ್ಚಲ ರೇಸ್‌ನಲ್ಲೇ ಮಿಂಚಿದ ರಾಯೊ ರೇಸಿಂಗ್ ತಂಡದ ಚಾಲಕನ ಸಾಧನೆ.
11:44 PM (IST) Apr 03
ಭಾರತೀಯರ ಬೆಡ್ ರೂಂಗೆ ತಟ್ಟಿದ ಇರಾನ್ ಯುದ್ಧ ಬಿಸಿ, ಕಾಂಡೋಮ್ ಕೊರತೆಗೆ ಕಂಗಾಲು, ಕಾಂಡೋಮ್ ಕಚ್ಚಾವಸ್ತುಗಳ ಪೂರೈಕೆ ಕೊರತೆ ಭಾರತದ ಉತ್ಪಾದಕ ಕಂಪನಿಗಳಿಗೆ ತಟ್ಟಿದೆ. ಇದೀಗ ಬೆಲೆ ಏರಿಕೆ ಬಿಸಿ ಶುರುವಾಗಿದೆ.
10:59 PM (IST) Apr 03
ಬಿಸಿಲ ಬೇಗೆಯಲ್ಲಿ ಕುಸಿದು ಬಿದ್ದ ತಾಯಿ ರಕ್ಷಿಸಲು ಬಾಲಕನ ಪ್ರಯತ್ನ, ರೀಲ್ಸ್ ಮಾಡುತ್ತಾ ನಿಂತ ಜನ, ಕರುಳು ಹಿಂಡುವ ಈ ವಿಡಿಯೋ ದೇಶದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಪುಟ್ಟ ಬಾಲಕನ ಪರಿಸ್ಥಿತಿ ಯಾರಿಗೂ ಅರ್ಥವಾಗಲಿಲ್ಲವೇ ಎಂದು ಹಲವರು ಪ್ರಶ್ನಿಸಿದ್ದಾರೆ.
10:48 PM (IST) Apr 03
Breaking ದೆಹಲಿಯಲ್ಲಿ ಕಂಪಿಸಿದ ಭೂಮಿ, ರಿಕ್ಟರ್ ಮಾಪಕದಲ್ಲಿ 5.9 ತೀವ್ರತೆ ದಾಖಲು, ಆಫ್ಘಾನಿಸ್ತಾನ ಕೇಂದ್ರ ಬಿಂದುವಾಗಿದ್ದು, ದೆಹಲಿ ಹಾಗೂ ಜಮ್ಮು ಮತ್ತು ಕಾಶ್ಮೀರ ಭಾಗದಲ್ಲಿ ಭೂಕಂಪನವಾಗಿದೆ.
10:32 PM (IST) Apr 03
ತೆಲಂಗಾಣದ ವಾರಂಗಲ್‌ನಲ್ಲಿ ಗರ್ಭಿಣಿ ತಾಯಿ ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳು ಈಜುಕೊಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದು ಅಪಘಾತ ಎಂದು ಪತಿ ಹೇಳುತ್ತಿದ್ದರೆ, ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದು, ಇಡೀ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ.
09:56 PM (IST) Apr 03
ಚುನಾವಣಾ ಆಯೋಗದ ಮಹತ್ವದ ಘೋಷಣೆ, ಮತದಾನ ದಿನ ಎಲ್ಲರಿಗೂ ವೇತನ ಸಹಿತ ರಜೆ , ಭಾರತದ ಚುನಾವಣಾ ಇತಿಹಾಸದಲ್ಲಿ ಆಯೋಗ ಮಹತ್ವದ ನಿರ್ಧಾರ ಘೋಷಿಸಿದೆ. ದಿನಗೂಲಿ ನೌಕರರು ಸೇರಿದಂತೆ ಎಲ್ಲರಿಗೂ ವೇತನ ಸಹಿತ ರಜೆ ಘೋಷಿಸಿದೆ.
09:23 PM (IST) Apr 03
'ತೇರೆ ನಾಮ್' ಸಿನಿಮಾ ಬಂದು ಎರಡು ದಶಕಗಳೇ ಕಳೆದಿವೆ. ಆದರೂ ಹೆಬ್ಬುಲಿ ನಟ-ರಾಜಕಾರಣಿ ರವಿ ಕಿಶನ್, ಸಲ್ಮಾನ್ ಖಾನ್ ಮೇಲಿನ ತಮ್ಮ ಅಭಿಮಾನವನ್ನು ಮರೆತಿಲ್ಲ. ಸಲ್ಮಾನ್ 'ಅದ್ಭುತ' ಮತ್ತು 'ಸಹಾಯ ಮಾಡುವ ವ್ಯಕ್ತಿ' ಎಂದು ಹೊಗಳಿದ್ದಾರೆ. ತಮ್ಮಿಬ್ಬರ ಸ್ನೇಹ, ಜಿಮ್ ನೆನಪುಗಳನ್ನು ಹಂಚಿಕೊಂಡಿದ್ದಾರೆ.
08:36 PM (IST) Apr 03
ನಿಮ್ ಅಣ್ಣಾ ಜೈಲಿಗೆ ಹೋಗ್ತಾ ಇದ್ದಾನೆ, ಲೈಕ್ಸ್ ಇರಲಿ, ಲೈವ್‌ನಲ್ಲಿ ಹತ್ಯೆ ಸಂಭ್ರಮಿಸಿದ ಅಪ್ರಾಪ್ತ, ಒಬ್ಬನನ್ನು ಕೊಂದಿದ್ದೇನೆ. ಸ್ವಲ್ಪ ದಿನ ಪೋಸ್ಟ್ ಇರಲ್ಲ, ಆದರೆ ನಿಮ್ ಪ್ರೀತಿ, ಸಪೋರ್ಟ್,ಲೈಕ್ಸ್ ಹೀಗೆ ಇರಲಿ ಎಂದಿದ್ದಾನೆ
08:05 PM (IST) Apr 03
07:40 PM (IST) Apr 03
ಮೋದಿ ಮೋಡಿಗೆ ವಿದೇಶಿಗರು ಫಿದಾ, ಚಿತ್ರಗಳಲ್ಲಿ ಪುದುಚೇರಿ ರೋಡ್‌ಶೋದ ವಿಶೇಷ ಕ್ಷಣಗಳು, ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಪ್ರಧಾನಿ ಮೋದಿಗೆ ವಿದೇಶಿಗರು ಭರ್ಜರಿ ಸ್ವಾಗತ ನೀಡಿದ್ದಾರೆ.
07:07 PM (IST) Apr 03
ಮಲಯಾಳಂ ನಟ ಟೊವಿನೋ ಥಾಮಸ್ ಅವರು ತೆಲುಗಿನಲ್ಲಿ ಯಾಕೆ ಸಿನಿಮಾ ಮಾಡುತ್ತಿಲ್ಲ ಎನ್ನುವ ಬಗ್ಗೆ ಮಾತನಾಡಿದ್ದಾರೆ. ತಮಗೆ ಒತ್ತಡ ತೆಗೆದುಕೊಳ್ಳಲು ಸಾಧ್ಯವಿಲ್ಲ, ಹಾಗಾಗಿ ಒಂದೇ ಬಾರಿಗೆ ಎರಡು ಸಿನಿಮಾ ಮಾಡಲು ಆಗಲ್ಲ ಎಂದು ಹೇಳಿದ್ದಾರೆ.
07:03 PM (IST) Apr 03
100 ಮಹಿಳೆಯರ ಜೊತೆ ಗುರೂಜಿ ಕಾಮಪುರಾಣ ಕೇಸ್‌ನಲ್ಲಿ ಟ್ವಿಸ್ಟ್; ಸಚಿವರತ್ತ ತಿರುಗಿದ ತನಿಖೆ, ಸ್ವಯಂಘೋಷಿತ ದೇವಮಾನವನ ಫೋನ್ ಸಿಡಿಆರ್ ರಿಟ್ರೀವ್ ಮಾಡಲಾಗಿದ್ದು, ಸ್ಫೋಟಕ ಮಾಹಿತಿ ಬಯಲಾಗಿದೆ.
06:56 PM (IST) Apr 03
ಬಾಲಿವುಡ್ ನಟ ಆಮೀರ್ ಖಾನ್‌ಗೆ ನಟಿಯರ ಕೈಗೆ ಉಗುಳುವ ವಿಚಿತ್ರ ಚಟವಿದೆ. ತಾವು ಯಾರ ಕೈ ಮೇಲೆ ಉಗುಳುತ್ತಾರೋ ಅವರು ನಂಬರ್ 1 ನಟಿಯಾಗುತ್ತಾರೆ ಎಂಬುದು ಅವರ ನಂಬಿಕೆಯಾಗಿದೆ. ಈ ಹಿಂದೆ ಮಾಧುರಿ ದೀಕ್ಷಿತ್ ಮತ್ತು ಜೂಹಿ ಚಾವ್ಲಾ ಅವರ ಕೈ ಮೇಲೂ ಉಗುಳಿದ್ದರಿಂದ ಅವರು ಕೋಪಗೊಂಡ ಘಟನೆಗಳಿವೆ.
06:43 PM (IST) Apr 03
ನಟಿ ಸೋನಂ ಕಪೂರ್ ಮತ್ತು ಪತಿ ಆನಂದ್ ಅಹುಜಾ ತಮ್ಮ ಎರಡನೇ ಮಗುವಿನ ಆಗಮನದ ಸಂಭ್ರಮದಲ್ಲಿದ್ದಾರೆ. ನಟಿ ಈಗ ತಮ್ಮ ನವಜಾತ ಗಂಡು ಮಗುವಿನ ಮೊದಲ ನೋಟವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
06:12 PM (IST) Apr 03
ಅಲ್ಲು ಅರ್ಜುನ್ ತಮ್ಮ ವೈಯಕ್ತಿಕ ಬದುಕಿನ ಖುಷಿಯ ಕ್ಷಣವೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ಮಗ ಅಲ್ಲು ಅಯಾನ್ ಹುಟ್ಟುಹಬ್ಬಕ್ಕೆ ಅವರು ಹೃದಯಸ್ಪರ್ಶಿ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.
05:52 PM (IST) Apr 03
ದಕ್ಷಿಣ ಭಾರತದ ಬಿಜೆಪಿ ಫೈರ್ ಭ್ರ್ಯಾಂಡ್ ಅಣ್ಣಾಮಲೈಗೆ ಟಿಕೆಟ್ ಇಲ್ಲ, ಸೈಡ್‌ಲೈನ್ ಆದ್ರಾ ಸಿಂಘಮ್? ತಮಿಳುನಾಡಿನಲ್ಲಿ ನೆಲಕಚ್ಚಿದ್ದ ಬಿಜೆಪಿಗೆ ಮರುಜೀವ ನೀಡಿ ಹೊಸ ಅಲೆ ಸೃಷ್ಟಿಸಿದ ಅಣ್ಣಾಮಲೈಗೆ ಕಡೆಗಣಿಸಿದ್ದೇಕೆ?
05:47 PM (IST) Apr 03
ಅನಿಲ್ ಕಪೂರ್ 'ಬೇಟಾ' ಚಿತ್ರದಲ್ಲಿ ಶ್ರೀದೇವಿ ಜೊತೆ ನಟಿಸಲು ಬಯಸಿದ್ದರು. ಆದರೆ, ಶ್ರೀದೇವಿ ಈ ಆಫರ್ ಅನ್ನು ಸ್ಪಷ್ಟವಾಗಿ ನಿರಾಕರಿಸಿದರು. ನಂತರ, ನಿರ್ಮಾಪಕರು ಮಾಧುರಿ ದೀಕ್ಷಿತ್ ಅವರನ್ನು ಆಯ್ಕೆ ಮಾಡಿದರು.
04:56 PM (IST) Apr 03
ಯಶ್ ರಾಮಾಯಣ ಪಾತ್ರವನ್ನು ಅನಾವರಣ ಮಾಡಲಾಗಿಲ್ಲ. ನಾಯಕ ನಟ ರಣಬೀರ್ ಕಪೂರ್, ‘ನಾನು ಇಲ್ಲಿ ರಾಮನನ್ನು ಪ್ರತಿನಿಧಿಸಲು ಬಂದಿಲ್ಲ. ಬದಲಾಗಿ ರಾಮನ ಪಾತ್ರದಿಂದ ಕಲಿಯಲು ಬಂದಿದ್ದೇನೆ’ ಎಂದು ಹೇಳಿದ್ದಾರೆ.
03:37 PM (IST) Apr 03
ರಾಮಾಯಾಣ ಟೀಸರ್ ಬೆನ್ನಲ್ಲೇ ಸಂಭಾವನೆ ಬಹಿರಂಗ, ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?, ಪ್ರಮುಖ ಪಾತ್ರ ನಿಭಾಯಿಸುತ್ತಿರುವ ನಟ ನಟಿಯರ ಸಂಭಾವನೆ ಪಟ್ಟಿ ಬಹಿರಂಗವಾಗಿದೆ. ಸಿನಿಮಾದ ಒಟ್ಟು ಬಜೆಟ್ ಎಷ್ಟು?
02:54 PM (IST) Apr 03
ಕಾಮಕಾಂಡ ಗುರೂಜಿಗೆ ಹೊಸ ತಲೆನೋವು, 2022ರಲ್ಲಿ ನಡೆದ ಆ ಘಟನೆ ಮರುತನಿಖೆ, ಜೈಲು ಸೇರಿರುವ ನಕಲಿ ಗುರೂಜಿ ಅಶೋಕ್ ಖಾರತ್‌ಗೆ ಹಳೇ ಪ್ರಕರಣಗಳು ಆತಂಕ ಹೆಚ್ಚಿಸಿದೆ. ಇದೀಗ 2022ರ ಘಟನೆ ಶಿಕ್ಷೆ ಪ್ರಮಾಣ ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.
01:13 PM (IST) Apr 03
ಇರಾನ್ ಮೇಲಿನ ಯುದ್ಧದಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಉಂಟಾದ ಏರಿಳಿತದಿಂದ ಪಾಕಿಸ್ತಾನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕ್ರಮವಾಗಿ ಶೇ. 42.7 ಮತ್ತು ಶೇ. 54.9 ರಷ್ಟು ದಾಖಲೆ ಮಟ್ಟದಲ್ಲಿ ಏರಿಕೆಯಾಗಿವೆ.
12:37 PM (IST) Apr 03
12:17 PM (IST) Apr 03
ರಾಜ್ಯಸಭೆಯ ಎಎಪಿ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾ ಅವರನ್ನು ಕೈಬಿಟ್ಟ ನಂತರ, ಅವರು ಪ್ರಧಾನಿ ಮೋದಿ ವಿರುದ್ಧ ಮಾತನಾಡಲು ಹೆದರುತ್ತಿದ್ದಾರೆ ಎಂದು ಪಕ್ಷ ಆರೋಪಿಸಿದೆ. ಪಕ್ಷದ ಹಲವು ನಿರ್ಧಾರಗಳಿಗೆ ಚಡ್ಡಾ ಬೆಂಬಲ ನೀಡಿಲ್ಲ ಎಂದು ಎಎಪಿ ದೂರಿದೆ.
11:13 AM (IST) Apr 03
ಆರ್‌ಸಿಬಿ ತಂಡದ ಹೊಸ ಒಡತಿ ಅನನ್ಯಾ ಬಿರ್ಲಾ ತಮ್ಮ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಆರ್‌ಸಿಬಿ ಮಾಲೀಕತ್ವ ಬದಲಾದ ನಂತರ ಅವರ ಇನ್ಸ್‌ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.
10:15 AM (IST) Apr 03
ಇರಾನ್ ಯುದ್ಧದಿಂದಾಗಿ ಹೆಚ್ಚಿದ ಇಂಧನ ಬೆಲೆಗಳ ಕಾರಣ, ಅಮೆಜಾನ್ ತನ್ನ ಮೂರನೇ ವ್ಯಕ್ತಿಯ ಮಾರಾಟಗಾರರ ಮೇಲೆ ಶೇ. 3.5ರಷ್ಟು 'ಇಂಧನ ಮತ್ತು ಲಾಜಿಸ್ಟಿಕ್ಸ್ ಸರ್‌ಚಾರ್ಜ್' ವಿಧಿಸುತ್ತಿದೆ. ಈ ತಾತ್ಕಾಲಿಕ ಶುಲ್ಕವು ಅಮೆರಿಕ ಮತ್ತು ಕೆನಡಾದ ಮಾರಾಟಗಾರರಿಗೆ ಅನ್ವಯವಾಗಲಿದೆ.
08:42 AM (IST) Apr 03
ಇರಾನ್ ಜೊತೆಗಿನ ಯುದ್ಧದ ನಿರ್ಣಾಯಕ ಸಮಯದಲ್ಲಿ, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, ಸೇನಾ ಮುಖ್ಯಸ್ಥ ಜನರಲ್ ರಾಂಡಿ ಜಾರ್ಜ್ ಅವರನ್ನು ವಜಾಗೊಳಿಸಿದ್ದಾರೆ. ಈ ಕ್ರಮವು ಟ್ರಂಪ್ ಆಡಳಿತದಲ್ಲಿ ನಡೆಯುತ್ತಿರುವ ಉನ್ನತ ಮಿಲಿಟರಿ ನಾಯಕತ್ವದ ದೊಡ್ಡಮಟ್ಟದ ಬದಲಾವಣೆಯ ಭಾಗವಾಗಿದೆ.
08:29 AM (IST) Apr 03
ಇರಾನ್ ಮೇಲೆ ದಾಳಿ ನಡೆಸಿ, ಅಲ್ಲಿರುವ ಸುಮಾರು 400 ಕೆ.ಜಿ. ಯುರೇನಿಯಂ ವಶಪಡಿಸಿಕೊಳ್ಳಲು ಅಮೆರಿಕ ಅಧ್ಯಕ್ಷ ಟ್ರಂಪ್ ರಹಸ್ಯ ಯೋಜನೆ ರೂಪಿಸಿದ್ದಾರೆ ಎಂದು ವರದಿಯಾಗಿದೆ. ಈ ಅಪಾಯಕಾರಿ ಕಾರ್ಯಾಚರಣೆಯು ವಿಕಿರಣ ಸೋರಿಕೆಯಂತಹ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದಾಗಿದೆ.
07:21 AM (IST) Apr 03
ಊಟಕ್ಕೆ ಸೋಡಾ ಬೆರೆಸಿ ಉದ್ದೇಶಪೂರ್ವಕ ಅನಾರೋಗ್ಯಕ್ಕೆ ಈಡಾಗುವಂತೆ ಮಾಡಲಾಗುತ್ತಿತ್ತು. ಬಳಿಕ ಅಸ್ವಸ್ಥರಾದವರನ್ನು ಹೆಲಿಕಾಪ್ಟರ್ ಮೂಲಕ ಲಿಫ್ಟ್ ಮಾಡಿ, ವಿಮಾ ಕಂಪನಿಗಳಿಂದ ಕೋಟಿ ಕೋಟಿ ಸುಲಿಗೆ ಮಾಡುತ್ತಿದ್ದರು. ಟ್ರೆಕ್ಕಿಂಗ್ ಏಜೆನ್ಸಿ, ಕಾಪ್ಟರ್, ಆಸ್ಪತ್ರೆ, ಶೆರ್ಪಾಗಳ ನಡುವೆ ಈ ಡೀಲ್ ಇತ್ತು.
05:48 AM (IST) Apr 03
ತಿಂಗಳು ದಾಟಿರುವ ಮಧ್ಯಪ್ರಾಚ್ಯ ಯುದ್ಧದಲ್ಲಿ ಇರಾನ್ ಮಣಿಸಲು ತಮ್ಮೆಲ್ಲಾ ಶಕ್ತಿ ಬಳಸುವ ಕುರಿತು ಸುಳಿವು ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಅನ್ನು ಮರಳಿ ಶಿಲಾಯುಗಕ್ಕೆ ಕಳುಹಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
05:47 AM (IST) Apr 03
ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದ ಒಂದು ತಿಂಗಳ ಬಳಿಕ ಮೊದಲ ಬಾರಿಗೆ ಅಮೆರಿಕ ಉದ್ದೇಶಿಸಿ ಭಾಷಣ ಮಾಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ್ದಾರೆ.