ಜಿಡಿಪಿ ದಾಖಲೆಯ ಏರಿಕೆ ಹಿಂದೆ ಮೋದಿ ಸರ್ಕಾರದ ನೀತಿ, ರೈತರ ದುಡಿಮೆ: ಸಚಿವ ರಾಜೀವ್ ಚಂದ್ರಶೇಖರ್

By Suvarna News  |  First Published Sep 2, 2021, 10:42 AM IST

* ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದರ ದಾಖಲೆಯ ಶೇ.20.1ರಷ್ಟುಏರಿಕೆ

* ಕೊರೋನಾ ಸವಾಲಿನ ನಡುವೆಯೂ ದಾಖಲೆಯ ಏರಿಕೆ

* ಸರ್ಕಾರದ ನೀತಿ, ರೈತರ, ಉದ್ಯಮಿಗಳ ಕೊಡುಗೆಯೇ ಈ ಯಶಸ್ಸಿಗೆ ಕಾರಣ

* ಅಂಕಿ ಅಂಶದೊಂದಿಗೆ ಸಂತಸ ವ್ಯಕ್ತಪಡಿಸಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್


ನವದೆಹಲಿ(ಸೆ.02): ಕೊರೋನಾ ಹಾವಳಿ ಮಧ್ಯೆ 2021-22ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಏರಿಕೆ ಕಂಡಿರುವುದು ದೇಶದ ಸುವರ್ಣ ಭವಿಷ್ಯದ ಆರಂಭ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಬಣ್ಣಿಸಿದ್ದಾರೆ. ಕೌಶಲಾಭಿವೃದ್ಧಿ &ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ & ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಈ ಆರ್ಥಿಕ ಅಭಿವೃದ್ಧಿಗೆ ರೈತರ, ವ್ಯಾಪಾರಿ ವರ್ಗದ ಪರಿಶ್ರಮವೇ ಕಾರಣ ಎಂದಿದ್ದಾರೆ. ಅಲ್ಲದೇ ಸರ್ಕಾರ ಜಾರಿಗೊಳಿಸಿದ ನೀತಿ ಭಾರತದ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಮಹತ್ವಪೂರ್ಣ ಪಾತ್ರ ವಹಿಸಿದೆ ಎಂದಿದ್ದಾರೆ. ಇದೇ ವೇಳೆ ಜಿಡಿಪಿ ಏರಿಕೆಗೆ ಸಂತಸ ವ್ಯಕ್ತಪಡಿಸಿ ಸರಣಿ ಟ್ವೀಟ್ ಮಾಡಿರುವ ಸಚಿವರು ಇದನ್ನು ಭಾರತ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವುದಕ್ಕೆ ಉದಾಹರಣೆ ಎಂದಿದ್ದಾರೆ.

"

Tap to resize

Latest Videos

undefined

Q1FY22 GDP: ಏಪ್ರಿಲ್ ಜೂನ್ ತ್ರೈಮಾಸಿಕದಲ್ಲಿ ಶೇ.20.1 ರಷ್ಟು ಪ್ರಗತಿ ಕಂಡ ಭಾರತದ ಎಕಾನಮಿ!

July strongest Tax collections in 18years.

Reinforcing what everyone knows n acknowldges - last 7 yrs of govt has made our economy stronger, more diversfied & resilient

India now poised to grow faster with . 🇮🇳 pic.twitter.com/6sDBB9KgHv

— Rajeev Chandrasekhar 🇮🇳 (@Rajeev_GoI)

ಸರ್ಕಾರದ ಯಶಸ್ವಿ ನೀತಿಯ ಫಲಿತಾಂಶ

ಏಪ್ರಿಲ್-ಜೂನ್ ನಲ್ಲಿ ಭಾರತದ ಜಿಡಿಪಿ ದಾಖಲೆ ಸೃಷ್ಟಿಸಿದೆ. ಇದು ಭಾರತದ ಆರ್ಥಿಕವಾಗಿ ಪ್ರಬಲಗೊಳ್ಳುತ್ತಿದೆ ಎಂದು ತೋರಿಸುತ್ತದೆ. ಇದು ಕೊರೋನಾ ಸೋಂಕಿನ ಮಧ್ಯೆ ಸರ್ಕಾರದ ಕೈಗೊಂಡ ಯಶಸ್ವಿ ನೀತಿಯ ಫಲಿತಾಂಶ ಎಂದು ಸಾರುತ್ತದೆ ಎಂದಿದ್ದಾರೆ.

ನಿರೀಕ್ಷೆಯಂತೆ ಚೇತರಿಕೆ

ಆರ್ಥಿಕತೆ ಚೇತರಿಕೆಯಾಗುತ್ತಿರುವ ಬಗ್ಗೆ ಟ್ವೀಟ್ ಮಾಡಿರುವ ಸಚಿವ ರಾಜೀವ್ ಚಂದ್ರಶೇಖರ್ ಕೊರೋನಾ ಸೋಂಕಿನ ಮೊದಲ ಹಾಗೂ ಎರಡನೇ ಅಲೆಯ ಸವಾಲಿನ ನಡುವೆಯೂ, ಭಾರತದ ಆರ್ಥಿಕತೆ ಶೇ 20% ರಷ್ಟು ಚೇತರಿಕೆಯೊಂದಿಗೆ ಮತ್ತೆ ಹಳಿಗೆ ಮರಳುತ್ತಿದೆ. ಉದ್ಯಮ ಸೇವೆಗಳು ಮತ್ತೆ ಬಲ ಪಡೆಯುತ್ತಿವೆ. ಆದರೂ ಅವುಗಳು ಕೊರೋನಾ ಅವಧಿಯ ಮೊದಲಿನಂತೆ ಇನ್ನೂ ಕೆಳಗಿವೆ. ಇನ್ನು ಎರಡನೇ ಅಲೆ ಇನ್ನೂ ಮುಗಿದಿಲ್ಲ, ಹೀಗಿದ್ದರೂ ಹೊಸ ಕಂಪನಿಗಳ ಆಗಮನ ನಾವು ನಿರೀಕ್ಷಿಸಿದಂತೆ ಚೇತರಿಸಿಕೊಳ್ಳುತ್ತಿರುವುದನ್ನು ತೋರಿಸುತ್ತದೆ ಎಂದಿದ್ದಾರೆ.

ಕೊರೋನಾ ಮೂರನೇ ಅಲೆ ತಪ್ಪಿಸಲು ಸಲಹೆ

ಕೊರೋನಾದ ಮೂರನೇ ಅಲೆ ತಪ್ಪಿಸಲು ಕೇಂದ್ರ ಸಚಿವ ಸಲಹೆ ನೀಡಿದ್ದು," ಈ ಆರ್ಥಿಕ ವೇಗ ಕಾಪಾಡಿಕೊಳ್ಳಲು, ನಾವು ಮೂರನೇ ಅಲೆ ಬರುವುದನ್ನು ತಪ್ಪಿಸಬೇಕು" ಎಂದಿದ್ದಾರೆ. ಕೊರೋನಾದ ಮೊದಲ ಎರಡು ಅಲೆಗಳು ನಮ್ಮ Gross Value Added ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದಿದ್ದಾರೆ.

ಇತರೆ ದೇಶಗಳಿಗಿಂತ ಭಾರ​ತದ ಆರ್ಥಿ​ಕ​ತೆ ಹೆಚ್ಚು ಪ್ರಗತಿ: ಬ್ಲೂಮ್‌ಬರ್ಗ್‌!

Gross Value Added ಅಂದರೆ GVA ಆರ್ಥಿಕತೆಯ ಒಟ್ಟು ಉತ್ಪಾದನೆ ಮತ್ತು ಆದಾಯವನ್ನು ತೋರಿಸುತ್ತದೆ. ನಿರ್ದಿಷ್ಟ ಸಮಯದ ಚೌಕಟ್ಟಿನಲ್ಲಿ ಇನ್‌ಪುಟ್‌ ವೆಚ್ಚ ಮತ್ತು ಕಚ್ಚಾ ವಸ್ತುಗಳ ಬೆಲೆಯನ್ನು ಲೆಕ್ಕ ಹಾಕಿದ ನಂತರ ಎಷ್ಟು ರೂಪಾಯಿ ಸರಕು ಮತ್ತು ಸೇವೆಗಳನ್ನು ಉತ್ಪಾದಿಸಲಾಗಿದೆ ಎಂದು ತೋರಿಸುತ್ತದೆ.

ರೈತರ ಕೊಡುಗೆಗೆ ಶ್ಲಾಘನೆ

ಕೇಂದ್ರ ಸಚಿವರು ಜಿಡಿಪಿ ಬೆಳವಣಿಗೆಗೆ ಉತ್ತೇಜನ ನೀಡಿದ ರೈತರ ಕೊಡುಗೆಯನ್ನು ಶ್ಲಾಘಿಸಿದ್ದಾರೆ. ಕೊರೋನಾಗೂ ಮೊದಲಿನ ಹಾಗೂ ಪ್ರಸ್ತುತ ನೀತಿಗಳು, ರೈತರಿಗೆ ಸಂಪೂರ್ಣ ಬೆಂಬಲ ನೀಡಿವೆ. ಕೋರೋನಾ ಅವಧಿಗೆ ಹೋಲಿಸಿದರೆ ಈ ಬಾರಿ ಕೃಷಿ ಉತ್ಪಾದನೆಯು ಅದ್ಭುತವಾಗಿದೆ ಎಂದೂ ಸಚಿವ ಆರ್‌ಸಿ ಹೇಳಿದ್ದಾರೆ. 

ಲಾಕ್‌ಡೌನ್‌ನಿಂದ ಈ ಬಾರಿ ಆರ್ಥಿಕತೆಗೆ ಹೆಚ್ಚು ಪೆಟ್ಟಿಲ್ಲ!

Agriculture has grown strongly even compared to preCovid levels thanks to many preCovid n present policies of n support to farmers by govt pic.twitter.com/5vc5TqsZQg

— Rajeev Chandrasekhar 🇮🇳 (@Rajeev_GoI)

ಸಬ್‌ ಕಾ ಸಾಥ್, ಸಬ್‌ಕಾ ವಿಕಾಸ್

ಕಳೆದ 7 ವರ್ಷಗಳಲ್ಲಿ ನರೇಂದ್ರ ಮೋದಿಯವರ ಸರ್ಕಾರವು ಆರ್ಥಿಕತೆಯನ್ನು ಬಲಿಷ್ಠ, ಸ್ಥಿತಿಸ್ಥಾಪಕ ಮತ್ತು ವೈವಿಧ್ಯಮಯವಾಗಿಸಿದೆ ಎಂದು ಎಲ್ಲರಿಗೂ ತಿಳಿದಿದೆ. ಭಾರತ ಈಗ 'ಸಬ್ಕಾ ಸಾಥ್ ಸಬ್ಕಾ ವಿಕಾಸ್' ನೊಂದಿಗೆ ಮುಂದುವರಿಯುತ್ತಿದೆ ಎಂದು ಸಚಿವರು ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ದರ ದಾಖಲೆಯ ಶೇ. 20.1ರಷ್ಟು ಏರಿಕೆ

ಕೊರೋನಾ ವೈರಸ್‌ ಕಾರಣದಿಂದಾಗಿ ಕಳೆದ ವರ್ಷ ಮಹಾಪತನ ಕಂಡಿದ್ದ ದೇಶದ ಜಿಡಿಪಿ, ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ನಿಂದ ಜೂನ್‌ವರೆಗಿನ ಮೊದಲ ತ್ರೈಮಾಸಿಕದ ಅವಧಿಯಲ್ಲಿ ದಾಖಲೆಯ ಶೇ.20.1ರ ದರದಲ್ಲಿ ವೃದ್ಧಿಯಾಗಿದೆ. ಈ ಮೂಲಕ ದೇಶದ ಆರ್ಥಿಕತೆ ತ್ವರಿತವಾಗಿ ಚೇತರಿಸಿಕೊಳ್ಳುವ ಸುಳಿವು ದೊರೆತಿದೆ.

ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ದೇಶವ್ಯಾಪಿ ಲಾಕ್‌ಡೌನ್‌ ಹೇರಿದ್ದರಿಂದ ಜಿಡಿಪಿ 2020ರ ಏಪ್ರಿಲ್‌- ಜೂನ್‌ ಅವಧಿಯಲ್ಲಿ ಋುಣಾತ್ಮಕ ಶೇ.24.4ರಷ್ಟುಕುಸಿತ ಕಂಡಿತ್ತು. ಬಳಿಕ ಹಂತ ಹಂತವಾಗಿ ಲಾಕ್‌ಡೌನ್‌ ತೆರವಾಗಿದ್ದರಿಂದ ಧನಾತ್ಮಕ ಪ್ರಗತಿ ದಾಖಲಿಸಿತ್ತು. ದೇಶದ ಆರ್ಥಿಕತೆಯ ಗಾತ್ರ 2019ರ ಏಪ್ರಿಲ್‌- ಜೂನ್‌ ಅವಧಿಯಲ್ಲಿ 35.66 ಲಕ್ಷ ಕೋಟಿ ರು. ಆಗಿತ್ತು. ಕೊರೋನಾ ಕಾರಣದಿಂದಾಗಿ ಒಂದು ವರ್ಷದ ಬಳಿಕ ಅದೇ ಅವಧಿಯಲ್ಲಿ 26.95 ಲಕ್ಷ ಕೋಟಿಗೆ ಕುಸಿದಿತ್ತು. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಅವಧಿಯಲ್ಲಿ 32.38 ಲಕ್ಷ ಕೋಟಿಗೆ ಏರಿಕೆ ಕಂಡಿದೆ.

Our Economy is recovering back, faster than expected 20% YoY growth - to Pre-Covid levels - despite the severe hit of Covid first wave n second wave.

Thread 👇🏻 pic.twitter.com/vvLZYoy18N

— Rajeev Chandrasekhar 🇮🇳 (@Rajeev_GoI)

ಮೊದಲ ತ್ರೈಮಾಸಿಕದಲ್ಲಿ ಒಟ್ಟು ಜಿವಿಎ 30.1 ಲಕ್ಷ ಕೋಟಿ ರೂ

ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಒಟ್ಟು GVA 30.1 ಲಕ್ಷ ಕೋಟಿ ರೂ. ಇದು ಕಳೆದ ವರ್ಷಕ್ಕಿಂತ 18.8% ಹೆಚ್ಚು. GVA ಆರ್ಥಿಕತೆಯ ಒಟ್ಟು ಉತ್ಪಾದನೆ ಮತ್ತು ಆದಾಯವನ್ನು ತೋರಿಸುತ್ತದೆ.

1990 ರ ನಂತರ ಅತಿದೊಡ್ಡ ಬೆಳವಣಿಗೆ

ಮಾರ್ಚ್ 2021 ರಲ್ಲಿ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ 1.6 ಶೇಕಡಾ. 1990 ರ ನಂತರ ತ್ರೈಮಾಸಿಕದಲ್ಲಿ ಕಂಡು ಬಂದ ಅತಿದೊಡ್ಡ ಬೆಳವಣಿಗೆಯಾಗಿದೆ. 1990 ರ ಮೊದಲಿನ ಅಂಕಿ ಅಂಶಗಳು ಲಭ್ಯವಿಲ್ಲ. 

click me!