
ದೆಹಲಿ(ನ.29): ನಿರಾಂಕರಿ ಮೈದಾನದಲ್ಲಿ ಬಹಳಷ್ಟು ಜನ ರೈತರು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಇವರಲ್ಲೊಬ್ಬರು ಈಲಿ ವಯಸ್ಸಿನ ವೃದ್ಧ, ನನ್ನ ಮಗ ಸೇನೆಯಲ್ಲಿದ್ದಾನೆ, ನಮ್ಮನ್ನು ಉಗ್ರರು ಎಂದು ಕರೆಯುತ್ತಿದ್ದಾರೆ ಎಂದು ಭಾವುಕರಾಗಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಚಲೋ ರಾರಯಲಿ ಕೈಗೊಂಡಿರುವ ಪಂಜಾಬ್ ಹಾಗೂ ಹರ್ಯಾಣ ರೈತರು ಹೆಚ್ಚಿನ ಸಂಖ್ಯೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಸೇರಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಬ್ಯಾರಿಕೇಡ್ ಕಿತ್ತೆಸೆದು ಕಡೆಗೂ ದೆಹಲಿ ಪ್ರವೇಶಿಸಿದ ರೈತರು!
ಪ್ರತಿಭಟನೆಯಲ್ಲಿ 72 ವರ್ಷದ ಭೀಮ್ ಸಿಂಗ್ ಎಂಬ ರೈತರೊಬ್ಬರು ಭಾಗಿಯಾಗಿದ್ದಾರೆ. ಹೊಸ ಕೃಷಿ ಕಾನೂನುಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಈ ರೈತ. ನನ್ನ ಮಗ ಗಡಿಯಲ್ಲಿ ನಿಂತು ದೇಶ ಕಾಯುತ್ತಿದ್ದಾನೆ. ಆದರೆ ಅದೇ ಯೋಧನ ತಂದೆಯನ್ನು ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಉಗ್ರರಂತೆ ನೋಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಬ್ಯಾರಿಕೇಡ್ ದಾಟಿ ಒಳಗೆ ಬಂದ 72ರ ವೃದ್ಧ ಟಿಯರ್ ಗ್ಯಾಸ್, ಶೆಲ್, ವಾಟರ್ ಕೆನೊನ್‌ಗಳನ್ನು ಎದುರಿಸಿದ್ದಾರೆ. ನನ್ನ ಮಗ ಮಾತ್ರವಲ್ಲ. ನನ್ನ ಸಂಬಂಧಿಯೂ ದೇಶ ಸೇವೆಯಲ್ಲಿದ್ದಾನೆ. ಆದರೆ ಕೇಂದ್ರ ಸರ್ಕಾರದ ಕೃಷಿ ವಿರೋಧಿ ಕಾನೂನುಗಳಿಂದ ಅವರ ಕುಟುಂಬ ಹಸಿವಿನಲ್ಲಿ ಬಡತನ, ಸಾಲದಲ್ಲಿ ಕಷ್ಟಪಡುತ್ತಿದೆ ಎಂದು ಉತ್ತರ ಪ್ರದೇಶದ ಬಿನೂರ್‌ನ ಇವರು ಹೇಳಿದ್ದಾರೆ.
'ಕೊರೋನಾ ಲಸಿಕೆ ಬಗ್ಗೆ ಮೋದಿಗಿರುವ ಜ್ಞಾನಕ್ಕೆ ತಲೆದೂಗಲೇಬೇಕು'
ಕಬ್ಬು, ಬಾರ್ಲಿ, ಗೋಧಿ ಬೆಳೆಯುವ ಭೀಮ್ ಸಿಂಗ್ ಕುಟುಂಬ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಿದೆ. ಕಳೆದ 14 ತಿಂಗಳಿಂದ ಕಾರ್ಪೊರೇಟ್ ಫಾರ್ಮ್ ಬಿಲ್‌ನಿಂದಾಗಿ ಯಾವುದೇ ಉತ್ಪನ್ನ ಮಾರಲಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ ಭೀಮ್ ಸಿಂಗ್.
ನಾವು ಒಡಹುಟ್ಟಿದವರು ನಾಲ್ವರಿದ್ದೇವೆ. ಎಲ್ಲರೂ ರಾಷ್ಟ್ರಕ್ಕಾಗಿ ಸೈನ್ಯದಲ್ಲಿ ಸೇವೆ ಸಲ್ಲಿಸಲು ಒಬ್ಬ ಮಗನನ್ನು ಕಳುಹಿಸಿದ್ದೇವೆ. ನಾವು ದೇಶಕ್ಕಾಗಿ ಆಹಾರ, ಸಿರಿಧಾನ್ಯಗಳು, ಗೋಧಿ, ಸಕ್ಕರೆ, ದ್ವಿದಳ ಧಾನ್ಯಗಳನ್ನು ಬೆಳೆಸುವಾಗ, ಇಂದು ನಮ್ಮನ್ನು ಅಪರಾಧಿಗಳಂತೆ ಈ ತೆರೆದ ಮೈದಾನದಲ್ಲಿ ಬಂಧಿಸಲಾಗಿದೆ ಸರ್ಕಾರ ನಮ್ಮನ್ನು ಭಯೋತ್ಪಾದಕರು ಎಂದು ಕರೆಯುತ್ತಿದೆ ಎಂದಿದ್ದಾರೆ.
ಮಾವೋಯಿಸ್ಟ್ ದಾಳಿ: ಕೋಬ್ರಾ ಅಧಿಕಾರಿ ಹುತಾತ್ಮ, 7 ಜನ ಕಮಾಂಡೋಗಳಿಗೆ ಗಾಯ
ಸರ್ಕಾರವು ಕಾನೂನನ್ನು ರದ್ದುಗೊಳಿಸದಿದ್ದರೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ನಮ್ಮ ಹೆಂಡತಿಯರು, ಮಕ್ಕಳು ಮತ್ತು ನನ್ನ ಮೊಮ್ಮಕ್ಕಳು ಸಹ ನಮ್ಮನ್ನು ಬೆಂಬಲಿಸಲು ರಸ್ತೆಗಳಲ್ಲಿ ಬರುತ್ತಾರೆ ಎಂದು ಸಿಂಗ್ ಹೇಳಿದ್ದಾರೆ.
ಯುಪಿ ಯಲ್ಲಿ ಸರ್ಕಾರವು ರಸ್ತೆ ತಡೆಗಳನ್ನು ಮತ್ತೆ ನೋಡುತ್ತದೆ. ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ಆದರೆ ಬದುಕುಳಿಯಲು ನಿಮಗೆ ಆಹಾರವನ್ನು ನೀಡುವ ರೈತರಿಗೆ ಸರ್ಕಾರ ಏನು ಮಾಡುತ್ತಿದೆ ಎಂದು ದೇಶ ಜನ ತಿಳಿಯುವ ಸಮಯ ಬಂದಿದೆ ಎಂದಿದ್ದಾರೆ.
ಚಂಡಮಾರುತ ಬಳಿಕ ಕಡಲ ತೀರದಲ್ಲಿ ಚಿನ್ನ ಹೆಕ್ಕಲು ಜನರ ದೌಡು!
ನಮ್ಮ ಖಾತೆಯಲ್ಲಿ 15 ಲಕ್ಷ ರೂಪಾಯಿ ಹಾಕುವ ನಿಮ್ಮ ನಕಲಿ ಭರವಸೆಗಳು ನಮಗೆ ಬೇಡ. ರೈತರು ಯಾವಾಗಲೂ ತಮ್ಮ ಕುಟುಂಬ ಮತ್ತು ಈ ದೇಶಕ್ಕಾಗಿ ಶ್ರಮಿಸಿದ್ದಾರೆ. ಎಂಎಸ್ಪಿ ಮುಂದುವರಿಯುತ್ತದೆ ಎಂದು ಹೊಸದಾಗಿ ಪರಿಚಯಿಸಲಾದ ಕೃಷಿ ಕಾನೂನುಗಳಲ್ಲಿ ತಿದ್ದುಪಡಿ ಮಾಡಿ ಎಂದು ಕೇಳುತ್ತಿದ್ದೇವೆ ಎಂದು ಸಿಂಗ್ ಹೇಳಿದ್ದಾರೆ. ಈಗಾಗಲೇ ನಾವು ಸಾಲದಲ್ಲಿದ್ದು ನಮ್ಮ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
‘ನಾವು ಖಲಿಸ್ತಾನ್ ಭಯೋತ್ಪಾದಕರಲ್ಲ’
ಖಲಿಸ್ತಾನಿಗಳು ತಮ್ಮನ್ನು ಬೆಂಬಲಿಸುತ್ತಾರೆ ಎಂಬ ಆರೋಪವನ್ನು ರೈತರು ತಳ್ಳಿಹಾಕಿದ್ದಾರೆ. ಪ್ರತಿ ಕುಟುಂಬವು ಒಂದು ಮಗುವನ್ನು ಸೈನ್ಯದಲ್ಲಿ ಸೇವೆ ಸಲ್ಲಿಸಲು ಕಳುಹಿಸಿದೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ