ಮಾವೋಯಿಸ್ಟ್ ದಾಳಿ: ಕೋಬ್ರಾ ಅಧಿಕಾರಿ ಹುತಾತ್ಮ, 7 ಜನ ಕಮಾಂಡೋಗಳಿಗೆ ಗಾಯ

By Suvarna News  |  First Published Nov 29, 2020, 1:33 PM IST

CRPFನ ಅರಣ್ಯ ಸೇನೆ ವಿಭಾಗದ ಅಧಿಕಾರಿ ಮಾವೋಯಿಸ್ಟ್‌ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ


ದೆಹಲಿ(ನ.29): ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯಲ್ಲಿ ಮಾವೋಯಿಸ್ಟ್ ದಾಳಿ ನಡೆದಿದೆ. ಘಟನೆಯಲ್ಲಿ ಒಬ್ಬ ಕೋಬ್ರಾ ಅಧಿಕಾರಿ ಹುತಾತ್ಮರಾಗಿದ್ದು, 7 ಜನ ಕಮಾಂಡೋಗಳು ಗಾಯಗೊಂಡಿದ್ದಾರೆ.

CRPF ಜಂಗಲ್ ವಾರ್‌ಫೇರ್ ಯುನಿಟ್‌ CoBRA ಅಧಿಕಾರಿ ಮಾವೋಯಿಸ್ಟ್‌ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ತಂಡದ 7 ಜನ ಕಮಾಂಡೋಗಳು ತೀವ್ರವಾಗಿ ಗಾಯಗೊಂಡಿದ್ದಾರೆ.

Tap to resize

Latest Videos

ಚಂಡಮಾರುತ ಬಳಿಕ ಕಡಲ ತೀರದಲ್ಲಿ ಚಿನ್ನ ಹೆಕ್ಕಲು ಜನರ ದೌಡು!

ಮಾವೋಯಿಸ್ಟ್ ಐಇಡಿ ಸ್ಫೋಟ ನಡೆಸಿದ್ದಾರೆ. ಜಿಲ್ಲೆಯ ಚಿಂತಲ್ನಾರ್ ಅರಣ್ಯ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಶನಿವಾರ ರಾತ್ರಿ 9 ಗಂಟೆಯ ಸುಮಾರಿ ಘಟನೆ ನಡೆದಿದೆ. ಅಸಿಸ್ಟೆಂಟ್ ಕಮಾಂಡೆಂಟ್ ನಿತಿನ್ ಭಲೇರಾವ್ ತೀವ್ರವಾಗಿ ಗಾಯಗೊಂಡ ಕಾರಣ ಮೃತಪಟ್ಟಿದ್ದಾರೆ.

ಅಸಿಸ್ಟೆಂಟ್ ಕಮಾಂಡೆಂಟ್ ನಿತಿನ್ ಭಲೆರಾವ್ ರಾಯ್‌ಪುರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರು ಮಹಾರಾಷ್ಟ್ರದ ನಾಸಿಕ್‌ನವರು ಎಂದು ಪೊಲೀಸ್ ಅಧಿಕಾರಿ ಪಿ ಸುಂದರ್ ರಾಜ್ ಹೇಳಿದ್ದಾರೆ.

click me!