ಚಿನ್ನದ ಸಾಲ ಪಡೆದುಕೊಂಡ ಗ್ರಾಹಕರಿಗೆ ಉಚಿತ ಕೋವಿಡ್ ವಿಮೆ ಆಫರ್ ನೀಡಲಾಗಿದೆ. ಮುತ್ತೂಟ್ ಫೈನಾನ್ಸ್‌ನಿಂದ ಒಂದು ಲಕ್ಷದವರೆಗೆ ವಿಮೆ ಆಫರ್ ನೀಡಲಾಗಿದೆ.
ಕೊಚ್ಚಿ (ಆ.20): ಚಿನ್ನದ ಮೇಲೆ ಸಾಲ ಪಡೆದುಕೊಂಡ ಗ್ರಾಹಕರಿಗೆ ಒಂದು ಲಕ್ಷ ಮೌಲ್ಯದ ಉಚಿತ ಕೋವಿಡ್-19 ವಿಮೆ ನೀಡುವುದಾಗಿ ದೇಶದ ಅತೀ ದೊಡ್ಡ ಬ್ಯಾಂಕೇತರ ಹಣಕಾಸು ಸಂಸ್ಥೆ ಮುತ್ತೂಟ್ ಫೈನಾನ್ಸ್ ಘೋಷಿಸಿದೆ. ಇದಕ್ಕಾಗಿ ಕೋಟಕ್ ಮಹೀಂದ್ರಾ ಜನರಲ್ ಇನ್ಶೂರೆನ್ಸ್ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದೆ. ಕೋವಿಡ್ ಸಮಯದಲ್ಲಿ ಅನಿಶ್ಚಿತತೆ ಎದುರಿಸುತ್ತಿರುವ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಈ ಯೋಜನೆಯನ್ನು ಪ್ರಕಟಿಸಲಾಗಿದೆ ಎಂದು ಮುತ್ತೂಟ್ ಹೇಳಿದೆ.
ತೆರಿಗೆ ರಿಟರ್ನ್ಸ್‌ನಲ್ಲಿ ದೊಡ್ಡ ವ್ಯವಹಾರ ತಿಳಿಸಬೇಕಾಗಿಲ್ಲ!...
ಮುತ್ತೂಟ್ ಸೂಪರ್ ಲೋನ್ (ಎಂಎಸ್‌ಎಲ್) ಯೋಜನೆಯಡಿ ಬಂಗಾರ ಅಡವಿಟ್ಟು ಸಾಲ ಪಡೆದುಕೊಳ್ಳುವ ಗ್ರಾಹಕರಿಗೆ ಈ ಯೋಜನೆ ಲಭ್ಯವಿದೆ. ಒಂದು ಗ್ರಾಂ ಚಿನ್ನಕ್ಕೆ ಅತೀ ಹೆಚ್ಚಿನ ಸಾಲ ಸೌಲಭ್ಯದ ಜತೆಗೆ ಒಂದು ಲಕ್ಷ ಮೌಲ್ಯದ ಕೋವಿಡ್-19 ವಿಮೆ ಉಚಿತವಾಗಿ ಸಿಗಲಿದೆ ಎಂದು ಮುತ್ತೂಟ್ ಘೋಷಿಸಿದೆ.
ಆತ್ಮ ನಿರ್ಭರ ಭಾರತಕ್ಕೆ ಮುನ್ನುಡಿ ಬರೆದ ಮಲೆನಾಡ ಯುವಕ ಭಾರದ್ವಾಜ್ ಕಾರಂತ್
ಈ ಬಗ್ಗೆ ಮಾತನಾಡಿದ ಮುತ್ತೂಟ್ ಫೈನಾನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಜಾಜ್‌ರ್ ಅಲೆಂಗ್ಸಾಡರ್ ಮುತ್ತೂಟ್, ‘ಜನರಿಗೆ ನೆರವಾಗುವ ಮತ್ತು ಸಮಾಜಕ್ಕೆ ಪ್ರತಿಯಾಗಿ ನೀಡುವ ಸಿದ್ಧಾಂತದಲ್ಲಿ ನಮ್ಮ ಕಂಪನಿ ಸದಾ ನಂಬಿಕೆ ಇಟ್ಟುಕೊಂಡಿದೆ. ನಮ್ಮ ಗ್ರಾಹಕ ನಿಷ್ಠೆ ಹಾಗೂ ಸಾಮಾಜಿಕ ಬದ್ಧತೆಯ ಮುಂದುವರಿದ ಭಾಗವಾಗಿ, ಜನರು ನಿರ್ಭೀತಿಯಿಂದ ಜೀವನ ಸಾಗಿಸಲು ವಿಮೆಯನ್ನು ಗ್ರಾಹಕರಿಗೆ ಕೊಡಿಗೆಯಾಗಿ ನೀಡುತ್ತಿದ್ದೇವೆ ಎಂದು ಹೇಳಿದರು. ಇದೇ ವೇಳೆ ಮಾತನಾಡಿದ ಕೋಟಕ್ ಮಹೀಂದ್ರಾ ಜನರಲ್ ಇನ್ಶೂರೆನ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಹಾಗೂ ಬಹುವಾಹಿನಿ ವಿತರಣಾ ವಿಭಾಗದ ಮುಖ್ಯಸ್ಥ ಜಗಜೀತ್ ಸಿಂಗ್ ಸಿಧು, ಮುತ್ತೂಟ್‌ನಂಥ ವಿಶ್ವಾಸಾರ್ಹ ಬ್ರಾಂಡ್ ಜತೆ ಪಾಲುದಾರಿಕೆ ಮಾಡಿಕೊಳ್ಳಲು ಸಂತೋಷವಾಗುತ್ತಿದೆ ಎಂದರು.