
ನವದೆಹಲಿ(ಆ. 19) ಬಾಲಿವುಡ್ ಸ್ಟಾರ್ ಅಮೀರ್ ಖಾನ್ ತಮ್ಮ ಮುಂದಿನ ಸಿನಿಮಾ ಲಾಲ್ ಸಿಂಗ್ ಚಡ್ಡಾ ಶೂಟಿಂಗ್ ಗಾಗಿ ಟರ್ಕಿಯಲ್ಲಿ ಇದ್ದಾರೆ. ಟರ್ಕಿ ಫಸ್ಟ್ ಲೇಡಿ ಎಮಿನ್ ಎರ್ಡೋಗನ್ ಅವರನ್ನು ಭೇಟಿ ಮಾಡಿದ್ದಾರೆ.
ಇದಕ್ಕೆ ವ್ಯಂಗ್ಯಭರಿತವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಸಭಾ ಎಂಪಿ ಸುಬ್ರಮಣಿಯನ್ ಸ್ವಾಮಿ, ಮೂವರು ಖಾನ್ ಗಳ ಬಗ್ಗೆ ಸದಾ ಮಾತನಾಡುತ್ತೇವೆ, ಅದರಲ್ಲಿಒ ಒಬ್ಬರು ಅಮೀರ್ ಎಂದು ಸಾಬೀತಾಗಿದೆ ಎಂದು ಹೇಳಿದ್ದಾರೆ.
ಟರ್ಕಿ ಫಸ್ಟ್ ಲೇಡಿಯನ್ನು ಭೇಟಿಯಾದ ಲಗಾನ್ ನಟ ಅಮೀರ್ ಖಾನ್..!
ಕೊರೋನಾ ಇರುವ ಕಾರಣಕ್ಕೆ ದೇಶಕ್ಕೆ ಹಿಂದಿರುಗಿದ ನಂತರ ಅಮೀರ್ ಖಾನ್ 14 ದಿನ ಕ್ವಾರಂಟೈನ್ ಆಗಬೇಕು ಎಂದು ಹೇಳಿದ್ದಾರೆ.
ಟರ್ಕಿ ಮೊದಲಿನಿಂದಲೂ ಭಾರತವನ್ನು ವಿರೋಧಿಸಿಕೊಂಡು ಬಂದಿದೆ. ಲೇಡಿ ಭೇಟಿಗೆ ಹೋಗುಗಾವ ಅಮೀರ್ ಭಾರತ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಕರೆದುಕೊಂಡು ಹೋಗಬೇಕಿತ್ತು ಎಂದಿದ್ದಾರೆ.
ಪಾಕಿಸ್ತಾನದೊಂದಿಗೆ ಸ್ನೇಹದಿಂದಿರುವ ದೇಶಕ್ಕೆ ಅಮೀರ್ ತೆರಳಿದ್ದನ್ನು ಸೋಶಿಯಲ್ ಮೀಡಿಯಾದಲ್ಲಿ ಕಟುವಾಗಿ ಟೀಕೆ ಮಾಡಲಾಗಿತ್ತು. ಅಮೀರ್ ಖಾನ್ ಭೇಟಿ ನೀಡಿದ್ದ ಸಂದರ್ಭದ ಪೋಟೋಗಳನ್ನು ಎಮಿನ್ ಎರ್ಡೋಗನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಂತರ ವೈರಲ್ ಆಗಿತ್ತು.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ