
ನವದೆಹಲಿ: ಟೆಸ್ಲಾ, ಟ್ವಿಟರ್ ಕಂಪನಿಯ ಮಾಲೀಕ, ವಿಶ್ವದ ನಂ.2 ಶ್ರೀಮಂತ ಎಲಾನ್ ಮಸ್ಕ್ ಹೆಸರಲ್ಲಿ ಇದೀಗ ಹೊಸದೊಂದು ದಾಖಲೆ ಸೃಷ್ಟಿಯಾಗಿದೆ. 200 ಶತಕೋಟಿ ಡಾಲರ್ (ಅಂದಾಜು 1.6 ಲಕ್ಷ ಕೋಟಿ) ಸಂಪತ್ತು ಕಳೆದುಕೊಂಡ ವಿಶ್ವದ ಮೊದಲ ವ್ಯಕ್ತಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಮಸ್ಕ್ ಒಡೆತನದ ಟೆಸ್ಲಾ ಕಂಪನಿಯ ಷೇರು ಮೌಲ್ಯ ಈ ವರ್ಷ ಶೇ.11ರಷ್ಟು ಭಾರೀ ಕುಸಿತ ಕಂಡಿದ್ದು, ಮಸ್ಕ್ ಒಟ್ಟಾರೆ ಸಂಪತ್ತು ಭಾರೀ ಪ್ರಮಾಣದಲ್ಲಿ ಕರಗಿ ಹೋಗಲು ಕಾರಣವಾಗಿದೆ. ವರ್ಷಾರಂಭದಲ್ಲಿ ಮಸ್ಕ್ 15.5 ಲಕ್ಷ ಕೋಟಿ ರು. ಆಸ್ತಿ ಹೊಂದಿದ್ದರೆ, ಪ್ರಸಕ್ತ 12.9 ಲಕ್ಷ ಕೋಟಿ ರು.ಗೆ ಇಳಿದಿದೆ.
ಟ್ವಿಟ್ಟರ್ ಕಚೇರಿಗೆ ಸ್ವಂತ ಟಾಯ್ಲೆಟ್ ಪೇಪರ್ ತರುತ್ತಿರುವ ಉದ್ಯೋಗಿಗಳು: ಕಾರಣ ಹೀಗಿದೆ..
ಸಾವಿರಾರು ಬಳಕೆದಾರರಿಗೆ ಟ್ವಿಟ್ಟರ್ ಡೌನ್: ನೆಟ್ಟಿಗರ ಆಕ್ರೋಶ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ