ಅಯ್ಯಪ್ಪ ಹಾಗೂ ಇತರೆ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ನಾಸ್ತಿಕ ಬೈರಿ ನರೇಶ್‌ನನ್ನು ಶನಿವಾರ ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ‘
ಹೈದರಾಬಾದ್: ಅಯ್ಯಪ್ಪ ಹಾಗೂ ಇತರೆ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ನಾಸ್ತಿಕ ಬೈರಿ ನರೇಶ್‌ನನ್ನು ಶನಿವಾರ ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ‘ಭಾರತ್ ನಾಸ್ತಿಕ ಸಮಾಜ’ದ ಅಧ್ಯಕ್ಷನಾಗಿದ್ದ ನರೇಶ್ ಕೊಡಂಗಲ್‌ನಲ್ಲಿ ಮೂರು ದಿನಗಳ ಹಿಂದೆ ನಡೆದ ದಲಿತ ಸಂಘಟನೆಗಳ ಸಭೆಯಲ್ಲಿ ಅಯ್ಯಪ್ಪ ದೇವರ ಜನನ, ವಿಷ್ಣು ಹಾಗೂ ಶಿವನ ಬಗ್ಗೆ ಅವಹೇಳನವಾಗಿ ಮಾತನಾಡಿದ್ದ ವೀಡಿಯೋ ವೈರಲ್ ಆದ ಬಳಿಕ ರಾಜ್ಯಾದಂತ ಹಿಂದೂಗಳು ಹಾಗೂ ಅಯ್ಯಪ್ಪನ ಭಕ್ತರು ತೀವ್ರ ಆಕ್ರೋಶ ಹೊರಹಾಕಿ ನರೇಶ್‌ನನ್ನು ಬಂಧಿಸುವಂತೆ ಆಗ್ರಹಿಸಿದ್ದರು. ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಪ್ರಕರಣದಡಿ ನರೇಶ್ ವಿರುದ್ಧ ಹಲವಾರು ದೂರು ದಾಖಲಾಗಿದ್ದವು.
ಗುಣಪಡಿಸಲಾಗದ ಕಾಯಿಲೆಗಳನ್ನೂ ಹೇಳಹೆಸರಿಲ್ಲದಂತೆ ಮಾಡುವ ಅಶ್ವಿನಿ ಕುಮಾರರು!
ಕಿಡಿಗೇಡಿಗಳಿಂದ ದೇವರ ಮೂರ್ತಿ ಧ್ವಂಸ: ಭಜರಂಗದಳ, ಹಿಂದೂ ಕಾರ್ಯಕರ್ತರ ಆಕ್ರೋಶ