ಮೋದಿ ಕ್ಯಾಬಿನೆಟ್‌ಗೆ ಹೊಸ ಮುಖ: ಇಲ್ಲಿದೆ ಸಂಭಾವ್ಯರ ಲೇಟೆಸ್ಟ್ ಪಟ್ಟಿ!

By Suvarna NewsFirst Published Jul 7, 2021, 3:05 PM IST
Highlights

* ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಿದೆ ಮೋದಿ ಸಚಿವ ಸಂಪುಟ ಪುನಾರಚನೆ

* ಮೋದಿ ತಂಡದಲ್ಲಿ ಯಾರಿಗೆಲ್ಲಾ ಅವಕಾಶ?

* ಇಲ್ಲಿದೆ ನೋಡಿ ಸಂಭಾವ್ಯರ ಲೇಟೆಸ್ಟ್ ಪಟ್ಟಿ

* ಇದು ಏಷ್ಯಾನೆಟ್‌ ನ್ಯೂಸ್‌ Exclusive ನ್ಯೂಸ್

ನವದೆಹಲಿ(ಜು.07): ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟದ ವಿಸ್ತರಣೆ/ ಪುನಾರಚನೆ ಕಾರ್ಯಕ್ರಮ ಬುಧವಾರ ಸಂಜೆ 6 ಗಂಟೆಗೆ ನಿಗದಿಯಾಗಿದೆ. ಇದಕ್ಕೆ ಪೂರಕವೆಂಬಂತೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಬಿಜೆಪಿ ಮತ್ತು ಎನ್‌ಡಿಎ ಮಿತ್ರಪಕ್ಷಗಳ ಸಂಸದರಿಗೆ ಕೇಂದ್ರದ ಬಿಜೆಪಿ ನಾಯಕರಿಂದ ಕರೆ ಬಂದಿದ್ದು, ಅವರೆಲ್ಲಾ ಮಂಗಳವಾರವೇ ದೆಹಲಿಗೆ ದೌಡಾಯಿಸಿದ್ದಾರೆ. ನೂತನ ಸಚಿವರ ಪಟ್ಟಿಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ, ಸರ್ವಾನಂದ ಸೋನೋವಾಲ್, ಅಜಯ್ ಭಟ್ಟ್, ಕಪಿಲ್ ಪಾಟೀಲ್, ಶಾಂತನೂ ಠಾಕೂರ್, ಪಶುಪತಿ ಪಾರಸ್, ನಾರಾಯಣ್ ರಾಣೆ, ಮೀನಾಕ್ಷಿ ಲೇಖಿ, ಶೋಭಾ ಕರಂದ್ಲಾಜೆ, ಅನುಪ್ರಿಯಾ ಪಟೇಲ್, ಹಿನಾ ಗಾವಿತ್, ಅಜಯ್ ಮಿಶ್ರಾ ಸೇರಿದಂತೆ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಹೆಸರು ಇದೆ. 

ಮೋದಿ ಕ್ಯಾಬಿನೆಟ್‌ಗೆ ಅಚ್ಚರಿಯ ಹೆಸರು: ಶೋಭಾ ಕರಂದ್ಲಾಜೆಗೆ ಸಚಿವ ಸ್ಥಾನ?

ಈ ಸಚಿವರಿಗೆ ಕೊಕ್? 

ಹೊಸ ಮುಖಗಳು ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳುತ್ತಿರುವ ಸಂದರ್ಭದಲ್ಲಿ, ರಮೇಶ್ ಪೋಖ್ರಿಯಾಲ್ ನಿಶಾಂಕ್ ಮತ್ತು ಸಂತೋಷ್ ಗಂಗ್ವಾರ್, ಸದಾನಂದ ಗೌಡ, ಸಂಜಯ್ ಧೋತ್ರೆ ಮತ್ತು ದೇಬೋಶ್ರೀ ಚೌಧರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಇತ್ತ ತಾವರ್‌ಚಂದ್ ಗೆಹ್ಲೋಟ್‌ ಈಗಾಗಲೇ ಕರ್ನಾಟಕ ರಾಜ್ಯಪಾಲರಾಗಿ ನೇಮಕಗೊಂಡಿರುವ ಹಿನ್ನೆಲೆ ರಾಜೀನಾಮೆ ನೀಡಿದ್ದಾರೆ. ಪೋಖ್ರಿಯಾಲ್ ಆರೋಗ್ಯ ಸಂಬಂಧಿತ ಕಾರಣಗಳಿಂದಾಗಿ ಸಚಿವ ಸ್ಥಾನ ಬಿಟ್ಟಿದ್ದಾರೆ.

ಏಷ್ಯಾನೆಟ್‌ ನ್ಯೂಸ್‌ಗೆ ಲಭ್ಯವಾದ ಮಾಹಿತಿ ಅನ್ವಯ ಮೋದಿ ಸಚಿವ ಸಂಪುಟದಲ್ಲಿ ಈಗಿರುವ 7 ರಾಜ್ಯ ಸಚಿವರು ಕ್ಯಾಬಿನೆಟ್ ಸಚಿವರಾಗಿ ಬಡ್ತಿ ಪಡೆಯಲಿದ್ದು, 25 ಹೊಸ ಸದಸ್ಯರು ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. 

ಮೋದಿ ಸಂಪುಟಕ್ಕೆ ಕರ್ನಾಟಕದ ಸಂಸದರು?: ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ!

ಅತ್ಯಂತ ಯುವ ಸಚಿವ ಸಂಪುಟ

ಸಂಭಾವ್ಯರ ಪಟ್ಟಿ ಹಾಗೂ ಉನ್ನತ ಮೂಲಗಳಿಂದ ಲಭಿಸಿದ ಮಾಹಿತಿ ಅನ್ವಯ ಪಿಎಂ ಮೋದಿ ನೇತೃತ್ವದ ಈ ಕೇಂದ್ರ ಸಚಿವ ಸಂಪುಟ ಅತ್ಯಂತ ಯುವ ಕ್ಯಾಬಿನೆಟ್‌ ಆಗಲಿದೆ. 14 ಸಚಿವರು 50 ವರ್ಷಕ್ಕಿಂತ ಕಿರಿಯರಾಗಿದ್ದಾರೆ. ನೂತನ ಸಚಿವರು ಹೆಚ್ಚು ವಿದ್ಯಾವಂತರಾಗಿದ್ದಾರೆ. ಕೆಲವರು ಡಾಕ್ಟರೇಟ್ ಪದವಿ ಗಳಿಸಿದ್ದರೆ, ಇನ್ನು ಕೆಲವರು ಎಂಬಿಎ, ಸ್ನಾತಕೋತ್ತರ ಹಾಗೂ ವೃತ್ತಿಪರರಾಗಿದ್ದಾರೆ. ಸಂಪುಟದಲ್ಲಿ 11 ಮಹಿಳೆಯರಿಗೂ ಸ್ಥಾನ ನೀಡಲಾಗುತ್ತಿದೆ. ಒಟ್ಟಾರೆಯಾಗಿ ಕ್ಯಾಬಿನೆಟ್‌ನಲ್ಲಿ ಆಡಳಿತಾತ್ಮಕ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತಿದೆ.

ಸಂಭಾವ್ಯ ಸಚಿವರು

* ಜ್ಯೋತಿರಾದಿತ್ಯ ಸಿಂಧಿಯಾ
* ಅನುಪ್ರಿಯಾ ಪಟೇಲ್ 
* ರಾಜೀವ್ ಚಂದ್ರಶೇಖರ್
* ಸರ್ಬಾನಂದ ಸೋನೊವಾಲ್
* ಪಶುಪತಿ ನಾಥ್ ಪರಾಸ್
* ಆರ್ಸಿಪಿ ಸಿಂಗ್
* ಲಲನ್ ಸಿಂಗ್
* ನಾರಾಯಣ ರಾಣೆ
* ತೀರಥ್ ಸಿಂಗ್ ರಾವತ್
* ಸುಶೀಲ್ ಮೋದಿ
* ಜಮಿಯಾಂಗ್ ತ್ಸೆರಿಂಗ್ ನಮಗ್ಯಾಲ್
* ಜಾಫರ್ ಇಸ್ಲಾಂ
* ಹೀನಾ ಗವಿತ್
* ಲಾಕೆಟ್ ಚಟರ್ಜಿ
* ದಿಲೀಪ್ ಘೋಷ್
* ಮೀನಾಕ್ಷಿ ಲೇಖಿ
* ಮನೋಜ್ ತಿವಾರಿ

ಸಂಪುಟ ವಿಸ್ತರಣೆಗೆ ಶುಭ ಮುಹೂರ್ತ ಫಿಕ್ಸ್; ಸಂಜೆ 6 ಗಂಟೆಗೆ ಅತ್ಯಂತ ಕಿರಿಯರ ಕ್ಯಾಬಿನೆಟ್ ಪ್ರಕಟ!

ಕರ್ನಾಟಕದಿಂದ ಯಾರಿಗೆ ಸ್ಥಾನ?

- ದಲಿತ ಸಂಸದರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ನಿಚ್ಚಳ
- ನಾರಾಯಣಸ್ವಾಮಿಗೆ ಅವಕಾಶ ಸಾಧ್ಯತೆ
- ಉಮೇಶ್‌ ಜಾಧವ್‌, ಜಿಗಜಿಣಗಿ ಹೆಸರೂ ಪ್ರಸ್ತಾಪ
- ಅಂಗಡಿಯಿಂದ ತೆರವಾದ ಲಿಂಗಾಯತ ಸ್ಥಾನ ಯಾರಿಗೆ ಎಂಬ ಕುತೂಹಲ
- ಗದ್ದಿಗೌಡರ್‌, ಉದಾಸಿ, ಖೂಬಾ ಹೆಸರು ಚರ್ಚೆಯಲ್ಲಿ
- ಶೋಭಾ ಕರಂದ್ಲಾಜೆಗೂ ಅವಕಾಶ ಸಿಗುವ ಸಾಧ್ಯತೆ
- ಬಿಎಸ್‌ವೈ ಪುತ್ರ ಬಿ.ವೈ.ರಾಘವೇಂದ್ರಗೆ ಸಚಿವ ಸ್ಥಾನ ಬಗ್ಗೆಯೂ ಚರ್ಚೆ

ಇದೇ ಮೊದಲ ಬಾರಿ ರಾಜ್ಯಪಾಲರ ನೇಮಕದಲ್ಲಿ ಮಹಿಳೆಯರು, ಮುಸಲ್ಮಾನರಿಗೆ ಅವಕಾಶ!

ಹೀಗಿರಬಹುದು ಮೋದಿ ಹೊಸ ತಂಡ

* ಒಬಿಸಿ ಸಮುದಾಯದ 27 ಮಂತ್ರಿಗಳು, ಅದರಲ್ಲೂ ಐವರಿಗೆ ಕ್ಯಾಬಿನೆಟ್‌ ಸ್ಥಾನಮಾನ
* ಅಲ್ಪಸಂಖ್ಯಾತ ಸಮುದಾಯದ 5 ಮಂತ್ರಿಗಳು
* ಮೋದಿಯ ತಂಡದಲ್ಲಿ 11 ಮಹಿಳೆಯರು
* ಎಸ್‌ಸಿ ಸಮುದಾಯದ 23 ಮಂತ್ರಿಗಳು
* ಎಸ್ಟಿ ಸಮುದಾಯದ 8 ಮಂತ್ರಿಗಳು
* ಇತರ ಸಮುದಾಯಗಳ 29 ಮಂತ್ರಿಗಳು
* 50 ವರ್ಷಕ್ಕಿಂತ ಕಡಿಮೆ ವಯಸ್ಸಿನ 14 ಮಂತ್ರಿಗಳು
* ಸಂಪುಟದಲ್ಲಿ 5 ಮಾಜಿ ಸಿಎಂಗಳು

click me!