ಕೇಂದ್ರ ಸರ್ಕಾರದಿಂದ ಹೊಸ ಸಹಕಾರ ಸಚಿವಾಲಯ ರಚನೆ!

By Suvarna NewsFirst Published Jul 7, 2021, 12:12 PM IST
Highlights

* ಸಹಕಾರ ಆಂದೋಲನಕ್ಕೆ ಬಲ ತುಂಬುವ ಪ್ರಯತ್ನ

* ಬಜೆಟ್‌ನಲ್ಲಿ ಘೋಷಿಸಿದ್ದ ಪ್ರಸ್ತಾಪಕ್ಕೆ ಅನುಮತಿ

* ಕೇಂದ್ರ ಸರ್ಕಾರದಿಂದ ಹೊಸ ಸಹಕಾರ ಸಚಿವಾಲಯ ರಚನೆ

ನವದೆಹಲಿ(ಜು.07): ಕೇಂದ್ರ ಸರ್ಕಾರವು, ‘ಸಹಕಾರ ಸಚಿವಾಲಯ’ ಎಂಬ ನೂತನ ಸಚಿವಾಲಯವೊಂದನ್ನು ರಚನೆ ಮಾಡಿದೆ. ದೇಶದಲ್ಲಿ ಸಹಕಾರಿ ಆಂಧೋಲನಕ್ಕೆ ಹೆಚ್ಚಿನ ಬಲ ತುಂಬುವ ನಿಟ್ಟಿನಿಂದ ಹೊಸ ಸಚಿವಾಲಯವನ್ನು ರಚನೆ ಮಾಡಲಾಗಿದೆ. ಕೇಂದ್ರ ಸಚಿವ ವಿಸ್ತರಣೆಯ ಮುನ್ನಾದಿನವೇ ಈ ಕುರಿತು ಮಾಹಿತಿ ಹೊರಬಿದ್ದಿರುವುದು ಕುತೂಹಲ ಮೂಡಿಸಿದೆ.

ಮೋದಿ ಸಂಪುಟದಲ್ಲಿ ರಾಜ್ಯದ ಯಾರಿಗೆ ಚಾನ್ಸ್‌?

‘ಸಹಕಾರದಿಂದ ಸಮೃದ್ಧಿ’ ಎಂಬ ಧ್ಯೇಯವನ್ನು ಸಾಕಾರಗೊಳಿಸುವ ನಿಟ್ಟಿನಿಂದ ನೂತನ ಸಚಿವಾಲಯವನ್ನು ರಚನೆ ಮಾಡುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ. ನೂತನ ಸಚಿವಾಲಯ ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿ ಚೌಕಟ್ಟನ್ನು ಒದಗಿಸಲಿದೆ ಎಂದು ಮೂಲಗಳು ತಿಳಿಸಿವೆ.

ಸಂಪುಟ ವಿಸ್ತರಣೆಗೆ ಶುಭ ಮುಹೂರ್ತ ಫಿಕ್ಸ್; ನಾಳೆ ಸಂಜೆ 6 ಗಂಟೆಗೆ ಅತ್ಯಂತ ಕಿರಿಯರ ಕ್ಯಾಬಿನೆಟ್ ಪ್ರಕಟ!

ದೇಶದಲ್ಲಿ ಸಹಕಾರ ಚಟುವಟಿಕೆ ಸ್ನೇಹಿ ವಾತಾವರಣ ನಿರ್ಮಿಸುವುದು, ಬಹುರಾಜ್ಯ ಸಹಕಾರ ಚಟುವಟಿಕೆ ಆಧಾರಿತ ಅಭಿವೃದ್ಧಿ ಕಾರ್ಯಗಳನ್ನು ಉತ್ತೇಜಿಸಲು ಸಚಿವಾಲಯ ನರೆವಾಗಲಿದೆ. ಬುಧವಾರದ ಸಚಿವ ಸಂಪುಟ ಪುನಾರಚನೆಯ ವೇಳೆ ನೂತನ ಸಹಕಾರ ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಪ್ರಸಕ್ತ ಸಾಲಿನ ಕಂದ್ರ ಹಣಕಾಸು ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪ್ರತ್ಯೇಕ ಸಹಕಾರ ಸಚಿವಾಲಯ ರಚನೆಯ ಘೋಷಣೆಯನ್ನು ಮಾಡಿದ್ದರು.

click me!