ಮಣಿಪುರ: ತಿಂಗಳ ಹಿಂದೆ ಮಣಿಪುರದ ಬಾಲಕಿಯೊಬ್ಬಳು ತನ್ನ ಪುಟ್ಟ ತಮ್ಮನನ್ನು ಮಡಿಲಲ್ಲಿ ಕುಳ್ಳಿರಿಸಿಕೊಂಡು ಶಾಲೆಯಲ್ಲಿ ಪಾಠ ಕೇಳುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಗ ಈ ಫೋಟೋ ನೋಡಿದ ಮಣಿಪುರದ ಸಚಿವರು ಬಾಲಕಿಯನ್ನು ಉತ್ತಮ ವಸತಿ ಶಾಲೆಗೆ ಸೇರಿಸುವ ಹಾಗೂ ಆಕೆಗೆ ಪದವಿ ಹಂತದವರೆಗೆ ಉಚಿತ ಶಿಕ್ಷಣ ನೀಡುವ ನಿರ್ಧಾರ ಕೈಗೊಂಡಿದ್ದರು. ಈಗ ಅದರಂತೆ ಸಚಿವರು ನಡೆದುಕೊಂಡಿದ್ದಾರೆ. ಆಕೆಯನ್ನು ಬೋರ್ಡಿಂಗ್ ಶಾಲೆಗೆ ಸೇರಿಸಿದ್ದಾರೆ.
ಮೈನಿಂಗ್‌ಸಿನ್ಲಿಯು ಪಮೇಯ್ ಎಂಬ 10 ವರ್ಷದ ಮಣಿಪುರದ ಬಾಲಕಿ ಶಾಲೆಯಲ್ಲಿ ತನ್ನ ಪುಟ್ಟ ತಮ್ಮನನ್ನು ಮಡಿಲಲ್ಲಿ ಕೂರಿಸಿಕೊಂಡು ಪಾಠ ಕೇಳುತ್ತಿದ್ದಳು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಇದನ್ನು ಗಮನಿಸಿದ ಮಣಿಪುರದ ಸಚಿವ ಥೋಂಗಮ್ ಬಿಶ್ವಜಿತ್ ಸಿಂಗ್ ಆಕೆಯ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿದ್ದರು. ಆಕೆಯನ್ನು ಹಾಗೂ ಆಕೆಯ ಕುಟುಂಬವನ್ನು ಮಣಿಪುರಕ್ಕೆ ಕರೆಸಿ ಕುಟುಂಬದೊಂದಿಗೆ ಮಾತುಕತೆ ನಡೆಸಿ ಆಕೆಗೆ ಉತ್ತಮ ಶಿಕ್ಷಣದ ಭರವಸೆ ನೀಡಿದ್ದರು.
ತಮ್ಮನನ್ನು ಮಡಿಲಲ್ಲಿಟ್ಟುಕೊಂಡು ಪಾಠ ಕೇಳುತ್ತಿದ್ದ ಮಣಿಪುರ ಬಾಲೆಗೆ ನೆರವಾದ ಸಚಿವ
ಸದ್ಯ ಬಾಲಕಿ ಮೈನಿಂಗ್‌ಸಿನ್ಲಿಯು ಪಮೇಯ್‌ಗೆ ಇಂಪಾಲ್‌ನ ಸ್ಲೋಪ್‌ಲ್ಯಾಂಡ್ ಪಬ್ಲಿಕ್ ಸ್ಕೂಲ್‌ನಲ್ಲಿ ದಾಖಲಾತಿ ನೀಡಲಾಗಿದೆ. ಇದೊಂದು ವಸತಿ ಶಾಲೆಯಾಗಿದೆ. ಸಚಿವರು ಈ ಬಗ್ಗೆ ಫೋಟೋ ಶೇರ್ ಮಾಡಿಕೊಂಡು ಬಾಲಕಿಗೆ ಶುಭ ಹಾರೈಸಿದ್ದಾರೆ. ಟ್ವಿಟ್ಟರ್‌ನಲ್ಲಿ ಈ ಬಾಲಕಿಯ ಜೊತೆ ಸಚಿವರು ಇರುವ ಫೋಟೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಸಚಿವ ಥೋಂಗಮ್ ಬಿಶ್ವಜಿತ್ ಸಿಂಗ್ ಪೋಸ್ಟ್ ಮಾಡಿದ್ದಾರೆ.
10 ವರ್ಷದ ಪುಟ್ಟ ಹುಡುಗಿ ಪಮೇಯ್ ತನ್ನ ಪುಟ್ಟ ಸಹೋದರನನ್ನು ಮಡಿಲಲ್ಲಿ ಕೂರಿಸಿಕೊಂಡು ತರಗತಿಯಲ್ಲಿ ಪಾಠ ಕೇಳುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಫೋಟೋ ವೈರಲ್ ಆಗುತ್ತಿದ್ದಂತೆ ಮಣಿಪುರದ ಸಚಿವ ಥೋಂಗಮ್ ಬಿಶ್ವಜಿತ್ ಸಿಂಗ್ (Thongam Biswajit Singh) ಶಿಕ್ಷಣದ ಬಗ್ಗೆಗಿನ ಈ ಪುಟ್ಟ ಬಾಲೆಯ ಸಮರ್ಪಣಾ ಮನೋಭಾವವನ್ನು ಶ್ಲಾಘಿಸಿದ್ದರು. ಅಲ್ಲದೇ ಆಕೆಯನ್ನು ರಾಜಧಾನಿ ಇಂಪಾಲ್‌ಗೆ ಕರೆಸಿದ್ದರು ಜೊತೆಗೆ ಆಕೆಯ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಬರಿಸುವ ಭರವಸೆ ನೀಡಿದ್ದು ಅದರಂತೆ ನಡೆದುಕೊಂಡಿದ್ದಾರೆ.
ಪುಟ್ಟ ತಂಗಿಯನ್ನು ಮಡಿಲಲ್ಲಿ ಕೂರಿಸಿಕೊಂಡು ಪಾಠ ಕೇಳುವ 10 ವರ್ಷದ ಬಾಲಕಿ
ಅಂದಹಾಗೆ ಮೈನಿಂಗ್ಸಿನ್ಲಿಯು ಕುಟುಂಬವು ಉತ್ತರ ಮಣಿಪುರದ ತಮೆಂಗ್ಲಾಂಗ್ (Tamenglong) ಜಿಲ್ಲೆಯಲ್ಲಿ ನೆಲೆಸಿದೆ. ಮೈನಿಂಗ್ಸಿನಿಯು ಡೈಲಾಂಗ್ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾರೆ. ತಮೆಂಗ್ಲಾಂಗ್ ಜಿಲ್ಲೆಯ ಅಧಿಕಾರಿಗಳ ಪ್ರಕಾರ, ಹುಡುಗಿಯ ಪೋಷಕರು ಹಗಲಿನಲ್ಲಿ ತಮ್ಮ ಮನೆಯಿಂದ ಬೇಸಾಯಕ್ಕಾಗಿ ಹೊರಗಿದ್ದ ಕಾರಣ, ಸುಮಾರು 2 ವರ್ಷ ವಯಸ್ಸಿನ ತನ್ನ ಸಹೋದರನನ್ನು ತನ್ನ ಮಡಿಲಲ್ಲಿ ಕೂರಿಸಿಕೊಂಡು ತನ್ನ ತರಗತಿಗಳಿಗೆ ಹಾಜರಾಗುತ್ತಿದ್ದಳು. ಈ ಬಾಲಕಿಯ ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿತ್ತು. ನಂತರ ಆಕೆಯ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.
ಒಟ್ಟಾರೆಯಾಗಿ ಪುಟ್ಟ ಪೋರಿಯ ತಂಗಿ ಮೇಲಿನ ಮಮತೆ, ಇದೀಗ ಅವಳ ಬದುಕಿನ ಗತಿಯನ್ನೇ ಬದಲಿಸಿಬಿಟ್ಟಿದೆ. ಇದೇ ರೀತಿ ಭವಿಷ್ಯದಲ್ಲಿ ದಿಟ್ಟೆಯಾಗಿ ಎತ್ತರಕ್ಕೆ ಬೆಳೆಯಲಿ ಅನ್ನೋದೇ ಎಲ್ಲರ ಆಶಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ