ಗೋರಖ್‌ಪುರ ದೇಗುಲದಲ್ಲಿ ಪೊಲೀಸರ ಮೇಲೆ ದಾಳಿ ಮಾಡಿದ ವ್ಯಕ್ತಿ ಬಾಂಬೆ ಐಐಟಿ ಗ್ರಾಜ್ಯುಯೇಟ್

By Anusha KbFirst Published Apr 4, 2022, 3:48 PM IST
Highlights
  • ಹರಿತವಾದ ಆಯುಧದೊಂದಿಗೆ ದೇಗುಲ ಪ್ರವೇಶಿಸಿದ ವ್ಯಕ್ತಿ
  • ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆಗೈದು ಬಲವಂತವಗಿ ಒಳ ಪ್ರವೇಶ
  • ಬಂಧಿತ ಆರೋಪಿ ಐಐಟಿ ಬಾಂಬೆಯ ಪದವೀಧರ 
  • ಯೋಗಿ ಆದಿತ್ಯನಾಥ್‌ ಪ್ರಮುಖ ಅರ್ಚಕರಾಗಿರುವ ದೇಗುಲ

ಲಖ್ನೋ(ಏ.4): ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಖ್ಯ ಅರ್ಚಕರಾಗಿರುವ ಗೋರಖ್‌ಪುರದ ದೇಗುಲಕ್ಕೆ (Gorakhnath temple) ಹರಿತವಾದ ಆಯುಧದೊಂದಿಗೆ ಒಳನುಗ್ಗಿ ಭದ್ರತಾ ಸಿಬ್ಬಂದಿಗಳನ್ನು ಗಾಯಗೊಳಿಸಿದ ಘಟನೆ ಭಾನುವಾರ ರಾತ್ರಿ ನಡೆದಿತ್ತು. ಅಹ್ಮದ್‌ ಮುರ್ತಾಜಾ (Ahmed Murtaza)ಎಂಬಾತನೇ ಹೀಗೆ ಆಯುಧದೊಂದಿಗೆ ದೇಗುಲಕ್ಕೆ ನುಗ್ಗಿದ ವ್ಯಕ್ತಿ. ಈತ ಐಐಟಿ ಬಾಂಬೆಯ ಪದವೀಧರ ಎಂದು ತಿಳಿದು ಬಂದಿದೆ. ಇಬ್ಬರು ಪ್ರಾಂತೀಯ ಸಶಸ್ತ್ರ ಪಡೆ ಯೋಧರನ್ನು ಹರಿತವಾದ ಆಯುಧದಿಂದ ಗಾಯಗೊಳಿಸಿದ ಈತ, ಭಾನುವಾರ ರಾತ್ರಿ ಗೋರಖನಾಥ ದೇಗುಲಕ್ಕೆ ಬಲವಂತವಾಗಿ ಪ್ರವೇಶಿಸಲು ಯತ್ನಿಸಿದ್ದ. 29 ವರ್ಷದ ಅಹ್ಮದ್ ಮುರ್ತಾಜಾ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) (Indian Institute of Technology (IIT) Bombay) ಬಾಂಬೆಯಿಂದ ಕೆಮಿಕಲ್ ಎಂಜಿನಿಯರಿಂಗ್ ವಿಷಯದಲ್ಲಿ ಪದವಿ ಪಡೆದಿದ್ದಾನೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. 


ಘಟನೆಯ ಬಳಿಕ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ದೇವಸ್ಥಾನದ ಗೇಟ್‌ ಬಳಿ ಮುರ್ತಾಜಾಗೆ ಸೇರಿದ ಚೀಲವನ್ನು ವಶಪಡಿಸಿಕೊಳ್ಳಲಾಗಿದೆ. ಬ್ಯಾಗ್‌ನಲ್ಲಿ ಪೆನ್ ಡ್ರೈವ್, ಲ್ಯಾಪ್‌ಟಾಪ್ ಮತ್ತು ಹರಿತವಾದ ಆಯುಧ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಹೆಚ್ಚುವರಿ ಮಹಾನಿರ್ದೇಶಕ (ಗೋರಖ್‌ಪುರ ವಲಯ) ಅಖಿಲ್ ಕುಮಾರ್ (Akhil Kumar) ಮಾತನಾಡಿ, ಪೊಲೀಸರು ಮುರ್ತಾಜಾ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ ಮತ್ತು ತನಿಖೆಯಲ್ಲಿ ಮುಂಬೈ ಪೊಲೀಸರ ಸಹಾಯವನ್ನು ಪಡೆಯಲಿದ್ದಾರೆ ಎಂದರು.

ಈ ಪೊಲೀಸ್ ಬಿದ್ದಿದ್ದು ಯೋಗಿ ಕಾಲಿಗಾ? ಸಿಎಂ ಕಾಲಿಗಾ?

'ಮುರ್ತಾಜಾ ಮದುವೆಯಾಗಿದ್ದು, ಕೆಲವು ತಿಂಗಳ ಹಿಂದೆ ಅವರ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಅವರ ಪತ್ನಿ ಅವರನ್ನು ತೊರೆದಿದ್ದಾರೆ ಎಂದು ನಮಗೆ ತಿಳಿದು ಬಂದಿದೆ. ನಾವು ಅವರ ವೈವಾಹಿಕ ಸ್ಥಿತಿಯನ್ನು ಇನ್ನೂ ಪರಿಶೀಲಿಸಬೇಕಾಗಿದೆ. ಅವರು ಮುಂಬೈನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ವರ್ಷ ಕೆಲಸ ಕಳೆದುಕೊಂಡ ನಂತರ ಅವರು ಗೋರಖ್‌ಪುರಕ್ಕೆ ಮರಳಿದರು ಮತ್ತು ಅಂದಿನಿಂದ ಅವರು ಇಲ್ಲಿಯೇ ಇದ್ದಾರೆ ಎಂದು ಗೋರಖ್‌ಪುರದಲ್ಲಿ ನಿಯೋಜಿಸಲಾದ ಪೊಲೀಸ್ ಅಧಿಕಾರಿಯೊಬ್ಬರು ಪ್ರಾಥಮಿಕ ವಿಚಾರಣೆಯ ಆಧಾರದ ಮೇಲೆ  ತಿಳಿಸಿದ್ದಾರೆ.

ಆರೋಪಿಯೂ ತನ್ನ ಪೋಷಕರ ಒಬ್ಬನೇ ಪುತ್ರ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ತಂದೆ ಮುನೀರ್ ಅಹ್ಮದ್ (Muneer Ahmed) ಅವರು ಮುಂಬೈನಲ್ಲಿ (Mumbai) ಕಾನೂನು ಸಲಹಾ ಸಂಸ್ಥೆಯಲ್ಲಿ ಕೆಲಸ ಮಾಡಿದ ನಂತರ ಕಳೆದ ವರ್ಷ ಗೋರಖ್‌ಪುರಕ್ಕೆ ಮರಳಿದರು. ಮುರ್ತಾಜಾ ಶನಿವಾರ ಯಾವುದೋ ಕೆಲಸದ ನಿಮಿತ್ತ ಮನೆಯಿಂದ ಹೊರಟು ಹೋಗಿದ್ದು, ಅಂದಿನಿಂದ ಮನೆಗೆ ಬಂದಿಲ್ಲ ಎಂದು ಆರೋಪಿಯ ಕುಟುಂಬಸ್ಥರು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Fertilizer plant: 3 ದಶಕಗಳ ಬಳಿಕ ಗೋರಖ್‌ಪುರ ರಸಗೊಬ್ಬರ ಸ್ಥಾವರ ರೀ ಓಪನ್, ಯೋಗಿ ತಾಯ್ನಾಡಿಗೆ ಉಡುಗೊರೆ

ಏತನ್ಮಧ್ಯೆ, ದೇವಸ್ಥಾನದ ಗೇಟ್‌ನಿಂದ ಮುರ್ತಾಜಾಗೆ ಸೇರಿದ ಚೀಲವನ್ನು ವಶಪಡಿಸಿಕೊಂಡಿದ್ದು, ಬ್ಯಾಗ್‌ನಲ್ಲಿ ಪೆನ್ ಡ್ರೈವ್, ಲ್ಯಾಪ್‌ಟಾಪ್ ಮತ್ತು ಹರಿತವಾದ ಆಯುಧ ಪತ್ತೆಯಾಗಿದೆ. ಮುರ್ತಾಜಾ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಪೆನ್ ಡ್ರೈವ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಪರಿಶೀಲಿಸಲಾಗುತ್ತಿದೆ. ಆತನ ಬಳಿಯಿದ್ದ ಮೊಬೈಲ್ ಫೋನ್, ಪ್ಯಾನ್ ಕಾರ್ಡ್ (pan card) ಮತ್ತು ಆಧಾರ್ ಕಾರ್ಡ್ (Aadhaar card) ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ರಾತ್ರಿ ಮುರ್ತಾಜಾ ಅವರು ದೇಗುಲದ ಭದ್ರತಾ ಸಿಬ್ಬಂದಿ ಮೇಲೆ ದಾಳಿ ಮಾಡಿ ಬಲವಂತವಾಗಿ ದೇವಾಲಯಕ್ಕೆ ಪ್ರವೇಶಿಸಲು ಪ್ರಯತ್ನಿಸಿದರು. ಅಲ್ಲದೇ ಈ ವೇಳೆ ಮುರ್ತಾಜಾ ಧಾರ್ಮಿಕ ಘೋಷಣೆಯನ್ನೂ ಎತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ದೇಗುಲದ ಪ್ರಮುಖ ಆರ್ಚಕರಾಗಿದ್ದಾರೆ. 

click me!