ಗಜಪಡೆ ನೋಡಿ ಬೆಕ್ಕಿನಂತೆ ಓಟಕಿತ್ತ ಸಿಂಹಗಳು.. ಇದೆಂಥಾ ವಿಚಿತ್ರ

By Anusha Kb  |  First Published Apr 4, 2022, 2:50 PM IST
  • ಆನೆಗಳನ್ನು ನೋಡಿ ಓಡಿದ ಸಿಂಹಗಳು
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಕಾಡಿನ ಪ್ರಾಣಿಗಳಾದ ಹುಲಿ(Tiger), ಸಿಂಹಗಳು(Lion) ಧೈರ್ಯಕ್ಕೆ ಹೆಸರುವಾಸಿ. ಆದರೆ ಇಲ್ಲೊಂದು ಕಡೆ ಸಿಂಹಗಳು ತಮ್ಮತ್ತ ಬರುತ್ತಿರುವ ಆನೆಗಳ ಹಿಂಡು ನೋಡಿ ಬೆಕ್ಕಿನಂತೆ ಓಡಲು ಶುರು ಮಾಡಿವೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಆನೆಗಳ ಹಿಂಡು ಬರುತ್ತಿರುವುದನ್ನು ಕಂಡ ಸಿಂಹಗಳು ಮೇಲೆರಗುವುದನ್ನು ಬಿಟ್ಟು ಅವುಗಳನ್ನು ನೋಡಿ ಒಂದೊಂದೆ ಸ್ಥಳದಿಂದ ಕಾಲ್ಕಿಳಲು ಶುರು ಮಾಡುತ್ತವೆ. ಹೆದರಿದ ಬೆಕ್ಕುಗಳಂತೆ ಸಿಂಹಗಳು ಹೋಗುತ್ತಿರುವ ದೃಶ್ಯ ಕಾಡಿನ ರಾಜ ಹಾಗಾದರೆ ಯಾರು ಎಂದು ಪ್ರಶ್ನೆ ಮಾಡುವಂತಿದೆ. ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ 'ಅನಿಮಲ್‌ಕೋಟರಿ' ಎಂಬ ಹೆಸರಿನ ಪೇಜ್‌ನಿಂದ ಪೋಸ್ಟ್ ಮಾಡಲಾಗಿದೆ.  35,000 ಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ಈಗಾಗಲೇ ವೀಕ್ಷಿಸಿದ್ದಾರೆ.

ಸಿಂಹಗಳು ಆನೆಗಳ ಮೊದಲ ನೈಸರ್ಗಿಕ ಶತ್ರು. ಅವುಗಳು ಗುಂಪಾಗಿ ಬಂದು ಆನೆಗಳ ಮೇಲೆ ದಾಳಿ ಮಾಡುತ್ತವೆ. ಅದರಲ್ಲೂ ಸಿಂಹಿಣಿಗಳು ತಮ್ಮ ಕುಟುಂಬದ ಸದಸ್ಯರೆಲ್ಲರಿಗಾಗಿ ಬೇಟೆಯಾಡುತ್ತದೆ. ಮನುಷ್ಯನನ್ನು ಹೊರತುಪಡಿಸಿರೆ ಸಿಂಹಗಳು ಮಾತ್ರ ಆನೆಯನ್ನು ಕೊಲ್ಲುವಷ್ಟು ಶಕ್ತಿಯುತವಾದ ಪರಭಕ್ಷಕಗಳಾಗಿವೆ. ಅದರಲ್ಲೂ ಗಂಡು ಸಿಂಹ ಹೆಣ್ಣು ಸಿಂಹಕ್ಕಿಂತ ಶೇಕಡಾ 50 ರಷ್ಟು ಹೆಚ್ಚು ತೂಕವಿರುತ್ತದೆ. ಆನೆಯನ್ನು ಕೊಲ್ಲಲು ಸಾಮಾನ್ಯವಾಗಿ ಏಳು ಸಿಂಹಿಣಿಗಳು ಬೇಕಾಗುತ್ತವೆ, ಆದರೆ ಕೇವಲ ಎರಡು ಗಂಡುಗಳು ಜೊತೆ ಸೇರಿಯೂ ಆನೆಯನ್ನು ಕೊಲ್ಲಬಹುದು. ಒಂದು ಗಂಡು ಸಿಂಹ ಕೂಡ ಎಳೆಯ ಆನೆಯನ್ನು ಸೋಲಿಸಬಲ್ಲದು. ಆದಾಗ್ಯೂ, ತನ್ನ ಹಿಂಡಿನೊಂದಿಗೆ ಪ್ರಯಾಣಿಸುವ ಎಳೆಯ ಮತ್ತು ದುರ್ಬಲ ಆನೆಯನ್ನು ಬೇಟೆಯಾಡಲು ಪ್ರಯತ್ನಿಸುವುದು ಮಾತ್ರ ಸಿಂಹಗಳ ಸಂಪೂರ್ಣ ಗುಂಪಿಗೆ ತುಂಬಾ ಕಷ್ಟಕರವಾದ ಕೆಲಸ ಆಗಿರುತ್ತದೆ. 

 
 
 
 
 
 
 
 
 
 
 
 
 
 
 

Tap to resize

Latest Videos

A post shared by Animal Coterie (@animalcoterie)

 

ಕೆಲ ದಿನಗಳ ಹಿಂದೆ ಎಮ್ಮೆಗಳ ಹಿಂಡು ನೋಡಿ ಸಿಂಹವೊಂದು ಮರವೇರಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಎಮ್ಮೆಗಳ ಹಿಂಡಿನಿಂದ ತಪ್ಪಿಸಿಕೊಳ್ಳಲು ಸಿಂಹವೊಂದು ಮರವನ್ನು ಹತ್ತಲು ಪ್ರಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಜನ ಅಚ್ಚರಿಗೊಳಗಾಗಿದ್ದಾರೆ. ದಣಿದಿದ್ದ ಸಿಂಹ ಮರದಲ್ಲಿ ಕ್ರಮೇಣ ತನ್ನ ಹಿಡಿತವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ ಮತ್ತು ವೀಡಿಯೊ ಥಟ್ಟನೆ ಕೊನೆಗೊಂಡಾಗ ತೊಗಟೆಯ ಕೆಳಗೆ ಜಾರಲು ಪ್ರಾರಂಭಿಸುತ್ತದೆ.

ಮದಗಜಗಳ ಭಯಂಕರ ಕಾಳಗ, ನೋಡಿದವರಿಗೆ ಢವಢವ.. ವಿಡಿಯೋ ವೈರಲ್!

ಎಮ್ಮೆಗಳು ಸಿಂಹವನ್ನು ನೋಡಿ ಓಡಿಹೋಗುವ ಬದಲು ಮರದ ಕೆಳಗೆ ಜಮಾಯಿಸಿ ಸಿಂಹ ಬೀಳುವುದನ್ನು ಕಾಯುತ್ತಿದ್ದವು ಎಂದು ಡೈಲಿ ಮೇಲ್ ವರದಿ ಮಾಡಿದೆ. ಕೀನ್ಯಾದ (Kenya) ಮಸಾಯಿ ಮಾರಾ ಮೀಸಲು ಅರಣ್ಯ (Maasai Mara reserve) ಪ್ರದೇಶದಲ್ಲಿ ತನ್ನ ಹೆಂಡತಿಯೊಂದಿಗೆ ಹೋಗುತ್ತಿದ್ದಾಗ ಮಾಜಿ ಸೇನಾ ಅಧಿಕಾರಿಯೊಬ್ಬರು ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಕಳೆದ ವರ್ಷ, ತಾಂಜಾನಿಯಾದಲ್ಲಿ ವೈಲ್ಡ್ ಸಫಾರಿ ವೇಳೆ ಸಿಂಹಗಳ ಗುಂಪು ರಸ್ತೆಯಲ್ಲೇ ಮಲಗಿ ಟ್ರಾಫಿಕ್ ಜಾಮ್‌ಗೆ ಕಾರಣವಾಗಿದ್ದವು. ಈ ಘಟನೆ ಪ್ರವಾಸಿಗರಿಗೆ ಮುದ ನೀಡಿತ್ತು.

ಇದೆಂಥಾ ಸಿಂಹ : ಎಮ್ಮೆಗಳ ಹಿಂಡು ನೋಡಿ ಮರ ಏರಿದ ಕಾಡಿನ ರಾಜ!

ಈ ವೀಡಿಯೊವನ್ನು 22,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಎಮ್ಮೆಗಳಿಗೆ ಹೆದರಿದ ಸಿಂಹ ಮರವೇರಿ ಅದರ ಜೀವ ಉಳಿಸಿಕೊಳ್ಳಲು ನೋಡುತ್ತಿರುವ ದೃಶ್ಯವನ್ನು ನೋಡಿದ ಜನ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯ ಮಾಡುತ್ತಿದ್ದಾರೆ. ಮರವನ್ನು ಗಟ್ಟಿಯಾಗಿ ಹಿಡಿದುಕೋ ನಿನ್ನ ಅಪ್ಪ ಬರುತ್ತಿದ್ದಾರೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಕೆಲವೊಮ್ಮೆ ಬೇಟೆಗಾರನು ಬೇಟೆಯಾಗುತ್ತಾನೆ ಎಂದು ಮತ್ತೊರ್ವ ಕಾಮೆಂಟ್ ಮಾಡಿದ್ದಾರೆ. ಸಿಂಹ ಬೇರೆಡೆ ಓಡುವ ಬದಲು ಮರವೇಕೆ ಏರುತ್ತಿದೆ ಎಂದು ಇನ್ನೂ ಅನೇಕರು ಕಾಮೆಂಟ್‌ ಮಾಡಿದ್ದಾರೆ. 2015 ರಲ್ಲಿ ಕೀನ್ಯಾದಿಂದ (Kenya) ಇದೇ ರೀತಿಯ ಘಟನೆ ವರದಿಯಾಗಿತ್ತು, ಕೋಪಗೊಂಡ ಎಮ್ಮೆಗಳ ಹಿಂಡಿನಿಂದ ಪಾರಾಗಲೂ ಸಿಂಹವು ಮರವನ್ನು ಏರಿತ್ತು. 

click me!