ಮನೆ ಕೆಲಸದಾಕೆಗೆ ಕ್ವೀನ್‌ ತರ ಟ್ರೀಟ್‌ : ವಿಡಿಯೋ ವೈರಲ್

Published : May 05, 2022, 04:21 PM ISTUpdated : May 06, 2022, 11:43 AM IST
ಮನೆ ಕೆಲಸದಾಕೆಗೆ ಕ್ವೀನ್‌ ತರ ಟ್ರೀಟ್‌ : ವಿಡಿಯೋ ವೈರಲ್

ಸಾರಾಂಶ

ಮನೆ ಕೆಲಸದಾಕೆಯನ್ನು ವಿಶೇಷವಾಗಿ ಗೌರವಿಸಿದ ಯುವಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಯುವಕನ ಕಾರ್ಯಕ್ಕೆ ಶ್ಲಾಘನೆ

ಮನೆ ಕೆಲಸದವರೆಂದರೆ ಬಹುತೇಕ ಜನ ಕೇವಲವಾಗಿ ಕಾಣುವುದೇ ಹೆಚ್ಚು ಒಂದು ದಿನ ಅವರು ಕೆಲಸಕ್ಕೆ ಬರದೇ ಹೋದಲ್ಲಿ ಪರದಾಡುವ ಜನ ಅವರ ಮಹತ್ವವನ್ನು ಮಾತ್ರ ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅವರನ್ನು ಸಂಶಯ ಹೀಯಾಳಿಕೆಯ ದೃಷ್ಟಿಯಿಂದ ನೋಡುವ ಅನೇಕರಿದ್ದಾರೆ. ಇದೆಲ್ಲವನ್ನೂ ಸಾಮಾನ್ಯ ಎಂಬಂತೆ ಯಾವುದಕ್ಕೂ ಕೇರ್ ಮಾಡದೇ ತಮ್ಮ ಕೆಲಸ ಮಾಡಿಕೊಂಡು ಹೋಗುವ ಅನೇಕ ಮನೆ ಕೆಲಸದವು ನಮ್ಮ ಮಧ್ಯೆ ಇದ್ದಾರೆ. ಹೀಗೆ ಸದಾ ಮನೆಯನ್ನು ನೀಟಾಗಿಡುವ ಸುಚಿರುಚಿ ಭೋಜನ ತಯಾರಿಸುವ ಮನೆ ಕೆಲಸದಾಕೆಗೆ ಯುವಕನೋರ್ವ ವಿಶೇಷವಾದ ಟ್ರಿಟ್ ನೀಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಅನಿಶ್ ಭಗತ್‌ (Anish Bhagat) ಎಂಬವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ತಮ್ಮ ಮನೆ ಕೆಲಸದಾಕೆಯನ್ನು ಶಾಪಿಂಗ್‌ ಮಾಲ್‌ವೊಂದಕ್ಕೆ ಕರೆದೊಯ್ಯುತ್ತಾರೆ. ಆಕೆ ನಮಗಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾಳೆ. ಆದರೆ ಆಕೆ ತನಗಾಗಿ ಸಮಯ ಮಾಡಿಕೊಂಡು ಹೊರಗೆ ಹೋಗಿದ್ದನ್ನು ನಾನು ನೋಡಿಯೇ ಇಲ್ಲ. ಹೀಗಾಗಿ ನಾನು ಆಕೆಗೆ ವಿಶೇಷವಾಗಿ ಏನನ್ನಾದರು ಮಾಡಬೇಕೆಂದು ಬಯಸಿದೆ. ಸೋ ನಾ ಆಕೆಗೆ ಏನು ಮಾಡಿದೆ ಎಂಬುದು ಈ ವಿಡಿಯೋದಲ್ಲಿದೆ ಎಂದು ಅನಿಶ್ ಭಗತ್ ಬರೆದುಕೊಂಡಿದ್ದಾರೆ. 

 

ಆಕೆಯನ್ನು ಮಾಲ್‌ಗೆ ಕರೆದುಕೊಂಡು ಬಂದ ಅನಿಶ್ ಆಕೆಗೆ ಮಾಲ್‌ನಲ್ಲಿರುವ ಎಸ್ಕಲೇಟರ್‌ ನಲ್ಲಿ ಹೇಗೆ ಸಾಗಬೇಕೆಂದು ಹೇಳಿ ಕೊಟ್ಟು ಕರೆದೊಯ್ಯುತ್ತಾನೆ. ಅಲ್ಲದೇ ಅಲ್ಲಿ ಆಕೆಗೆ ಪಿಜ್ಜಾ ತೆಗೆಸಿ ಕೊಡುತ್ತಾನೆ. ಅಲ್ಲದೇ ನಂತರ ಆಕೆಯನ್ನು ಸಲೂನ್‌ಗೆ ಕರೆದೊಯ್ದು ಆಕೆಗೆ ಹೇರ್ ಗ್ರೂಮಿಂಗ್ ಮಾಡಿಸುತ್ತಾನೆ. ಏನೂ ಅಲ್ಲದ ತನಗೆ ಆತ ತೋರಿಸಿದ ಪ್ರೀತಿಯನ್ನು ನೋಡಿ ಆಕೆ ಭಾವುಕಳಾಗುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. 

Suicide Cases: ಕಳ್ಳತನ ಆರೋಪ: ಮನನೊಂದು ಮನೆ ಕೆಲಸದಾಕೆ ಆತ್ಮಹತ್ಯೆ

ತುಂಬಾ ಜನ ಮನೆ ಕೆಲಸದವರನ್ನು ತುಂಬಾ ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ನಾನು ನೋಡಿದ್ದೇನೆ. ಅದು ಬಹುಶಃ ಅವರ ಯೋಗ್ಯತೆ ಎಂಬಂತೆ ಜನ ಭಾವಿಸುತ್ತಾರೆ. ಯಾರಾದರೂ ಆರ್ಥಿಕವಾಗಿ ನಿಮ್ಮ ಮೇಲೆ ಅವಲಂಬಿತರಾಗಿದ್ದಾರೆ ಎಂದ ಮಾತ್ರಕ್ಕೆ, ನೀವು ಅವರನ್ನು ಬಳಸಿಕೊಳ್ಳಬಹುದು ಅಥವಾ ಅವರನ್ನು ಅಗೌರವಗೊಳಿಸಬಹುದು ಎಂದು ಅರ್ಥವಲ್ಲ. ಕೊನೆಯಲ್ಲಿ, ನಾವು ಎಲ್ಲಾ ಮಾನವರು, ನಾವೆಲ್ಲರೂ ಹೋರಾಡುತ್ತಿದ್ದೇವೆ ಮತ್ತು ನಾವು ನೀಡುವ ಸ್ವಲ್ಪ ದಯೆಯಿಂದಯಾರಿಗೂ ನೋವಾಗದು. ನಾವು ಆಟವನ್ನು ಬದಲಾಯಿಸೋಣ ಮತ್ತು ದಯೆ ಹಾಗೂಪ್ರೀತಿಯನ್ನು ಎಲ್ಲೆಡೆ  ಹರಡೋಣ. ಎಂದು ಭಗತ್ ಬರೆದಿದ್ದಾರೆ. 

ವಿಸಿಟಿಂಗ್ ಕಾರ್ಡ್ ಹೊಂದಿದ ಮನೆ ಕೆಲಸದಾಕೆ ಈಗ ಸ್ಟಾರ್!

ಅನಿಶ್‌ ಭಗತ್ ಅವರ ಈ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವು ನಿಜವಾಗಿಯೂ ಅದ್ಭುತ ವ್ಯಕ್ತಿ, ಇದು ತುಂಬಾ ಅಮೂಲ್ಯವಾದ ಕೆಲಸವಾಗಿದೆ. ನೀವು ತುಂಬಾ ಸ್ವೀಟ್ ಹಾರ್ಟ್ ಬ್ರದರ್. ಇದು ತುಂಬಾ ಸುಂದರವಾಗಿದೆ. ನಾನು ಈ ವಿಚಾರವನ್ನು ಇಷ್ಟ ಪಡುತ್ತೇನೆ. ಅನಿಶ್, ನಿನಗೆ ಚಿನ್ನದ ಹೃದಯವಿದೆ. ನೀವು ಯಾವಾಗಲೂ ಸಂತೋಷವಾಗಿರಿ ಹೀಗೆ ಈ ವಿಡಿಯೋ ನೋಡಿದ ವೀಕ್ಷಕರು ಒಂದೊಂದು ರೀತಿ ಕಾಮೆಂಟ್ ಮಾಡಿ ಈ ಅನಿಶ್ ನಡೆಯನ್ನು ಶ್ಲಾಘಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..