
ನವದೆಹಲಿ(ಮೇ.05): ಭಾರತದಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್ ಪ್ರಕರಣ ಸಂಖ್ಯೆ ಏರಿಕೆಯಾಗುತ್ತಿದೆ. ಹಲವು ರಾಜ್ಯಗಳು ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ ಮಾಡಿದೆ. ಇದೀಗ ಮತ್ತೊಂದು ಆತಂಕ ಎದುರಾಗಿದೆ. ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 55 ಕೋವಿಡ್ ಸಾವುಗಳು ಸಂಭವಿಸಿದೆ.
ಕಳೆದ 24 ಗಂಟೆಯಲ್ಲಿ ದೇಶದಲ್ಲಿ 3,275 ಪ್ರಕರಣ ದಾಖಲಾಗಿದೆ. ಈ ಮೂಲಕ ಗಣನೀಯ ಏರಿಕೆ ಕಂಡಿದೆ. ಈ ಮೂಲಕ ಸಕ್ರೀಯ ಪ್ರಕರಣಗಳ ಸಂಖ್ಯೆ 19,719ಕ್ಕೆ ಏರಿಕೆಯಾಗಿದೆ. ಇತ್ತ ಭಾರತದಲ್ಲಿ ಮೊದಲ ಓಮಿಕ್ರಾನ್ XE ಪ್ರಕರಣ ಕೂಡ ಖಚಿತಗೊಂಡಿದೆ. ಹೀಗಾಗಿ ದೇಶದ ಕೊರೋನಾ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಒಮಿಕ್ರೋನ್ ಮಾಯ, ಮತ್ತೆ ಡೆಲ್ಟಾ ಉಗಮ: 2 ತಿಂಗಳಲ್ಲಿ 4ನೇ ಅಲೆ: ಇಸ್ರೇಲಿ ತಜ್ಞರು!
ಬುಧವಾರದ ವರದಿಯಲ್ಲಿ ದೇಶದಲ್ಲಿ 3205 ಕೊರೋನಾ ಪ್ರಕರಣ ದಾಖಲಾಗಿತ್ತು. ಒಂದೇ ದಿನದ ಅಂತರದಲ್ಲಿ 75 ಪ್ರಕರಣಗಳು ಹೆಚ್ಚಾಗಿದೆ. ತಜ್ಞರ ಪ್ರಕಾರ ಜೂನ್ ತಿಂಗಳಲ್ಲಿ ಭಾರತದಲ್ಲಿ 4ನೇ ಅಲೆ ಆತಂಕ ಕಾಡಲಿದೆ ಅನ್ನೋ ಮಾತುಗಳು ಎಚ್ಚರಿಕೆ ನೀಡುತ್ತಿದೆ. ಬುಧವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಒಟ್ಟು 3205 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದೇ ವೇಳೆಯಲ್ಲಿ 31 ಸೋಂಕಿತರು ಸಾವಿಗೀಡಾಗಿದ್ದಾರೆ. ಇದರಲ್ಲಿ 29 ಸಾವುಗಳು ಕೇರಳದಲ್ಲಿಯೇ ವರದಿಯಾಗಿವೆ. ದೆಹಲಿ ಹಾಗೂ ಮಹಾರಾಷ್ಟ್ರದಲ್ಲಿ ತಲಾ ಒಂದು ಸಾವು ದಾಖಲಾಗಿದೆ. ಸಕ್ರಿಯ ಸೋಂಕಿತರ ಸಂಖ್ಯೆಯು 19,509 ಕ್ಕೆ ಏರಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವು ಶೇ.0.98 ರಷ್ಟಿದ್ದು, ವಾರದ ಪಾಸಿಟಿವಿಟಿ ದರವು ಶೇ.0.76ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೆ 189.48 ಕೋಟಿ ಡೋಸು ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ.
ಮುಂಬೈನಲ್ಲಿ 117 ಕೇಸು, 2 ತಿಂಗಳ ಗರಿಷ್ಠ: ದಿಲ್ಲಿ ಪಾಸಿಟಿವಿಟಿ ಶೇ.7.64
ಮಹಾರಾಷ್ಟ್ರದಲ್ಲಿ ಬುಧವಾರ 188 ಹೊಸ ಕೋವಿಡ್ ಪ್ರಕರಣ ದೃಢಪಟ್ಟಿದೆ, ಆದರೆ ಯಾವುದೇ ಸಾವು ಸಂಭವಿಸಿಲ್ಲ. ಇಡೀ ರಾಜ್ಯದ ಒಟ್ಟು ಕೇಸಿನ ಪೈಕಿ 117 ಕೇಸುಗಳು ಕೇವಲ ರಾಜಧಾನಿ ಮುಂಬೈ ಒಂದರಲ್ಲೇ ದಾಖಲಾಗಿದೆ. ಇದು 2 ತಿಂಗಳಲ್ಲೇ ಗರಿಷ್ಠ ದೈನಂದಿನ ಪ್ರಕರಣವಾಗಿದೆ. ಮುಂಬೈನಲ್ಲಿ ಸತತ 2 ದಿನಗಳಿಂದ 100ಕ್ಕಿಂತ ಹೆಚ್ಚು ಪ್ರಕರಣ ದಾಖಲಾಗುತ್ತಿದೆ. ಈ ಹಿಂದೆ ಫೆ.25ರಂದು 128 ಕೇಸು ದಾಖಲಾಗಿದ್ದೇ ಹಿಂದಿನ ಗರಿಷ್ಠವಾಗಿತ್ತು. ಈ ನಡುವೆ ದೆಹಲಿಯಲ್ಲಿ ಬುಧವಾರ 1354 ಹೊಸ ಕೇಸು ದಾಖಲಾಗಿದ್ದು, 1 ಸಾವು ಸಂಭವಿಸಿದೆ. ಪಾಸಿಟಿವಿಟಿ ದರ ಶೆ.7.64ರಷ್ಟಿದೆ.
ವಾರಕ್ಕೆ 3 ದಿನ ಕಚೇರಿಗೆ ಬನ್ನಿ ಎಂದಿದ್ದಕ್ಕೆ ಟೆಕ್ಕಿಗಳೆಲ್ಲಾ ಗರಂ, ಬಹುತೇಕರು ರಾಜೀನಾಮೆಗೆ ಒಲವು!
ಕೋವಿಡ್ ಪಾಸಿಟಿವಿಟಿ 2.5 ತಿಂಗಳ ಗರಿಷ್ಠ
ರಾಜ್ಯದಲ್ಲಿ ಬುಧವಾರ 148 ಮಂದಿಯಲ್ಲಿ ಕೋವಿಡ್-19 ದೃಢಪಟ್ಟಿದೆ. 162 ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್ ಸಾವು ದಾಖಲಾಗಿಲ್ಲ. ಆದರೆ, ಎರಡೂವರೆ ತಿಂಗಳ ನಂತರ ಅತ್ಯಧಿಕ ಕೋವಿಡ್ ಪಾಸಿಟಿವಿಟಿ ದರ ದಾಖಲಾಗಿದೆ. 8,037 ಪರೀಕ್ಷೆ ನಡೆದಿದ್ದು ಶೇ. 1.84ರ ಪಾಸಿಟಿವಿಟಿ ದರ ದಾಖಲಾಗಿದೆ. ಫೆ.16ರಂದು ಶೇ.1.90 ಪಾಸಿಟಿವಿಟಿ ದರ ದಾಖಲಾಗಿತ್ತು.ಬೆಂಗಳೂರು ನಗರದಲ್ಲಿ 142 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಮೈಸೂರಲ್ಲಿ 3, ಮಂಡ್ಯ, ಕೋಲಾರ ಮತ್ತು ಬಳ್ಳಾರಿಯಲ್ಲಿ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಸದ್ಯ 1801 ಸಕ್ರಿಯ ಪ್ರಕರಣಗಳಿವೆ. ಬಾಗಲಕೋಟೆ, ಚಾಮರಾಜನಗರ, ದಾವಣಗೆರೆ, ಧಾರವಾಡ, ಗದಗ, ಕೊಡಗು, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಸೋಂಕಿತರಿಲ್ಲ. ಬೆಂಗಳೂರು ನಗರದಲ್ಲಿ ಗರಿಷ್ಠ 1,720 ಸೋಂಕಿತರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ