ಸ್ನೇಹಿತರೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ಕುಸಿದು ಬಿದ್ದು ಸಾವನ್ನಪ್ಪಿದ್ದು, ಆ ಆಘಾತಕಾರಿ ಘಟನೆಯ ದೃಶ್ಯಾವಳಿ ಅಲ್ಲೇ ಸಮೀಪದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.
ಮೀರತ್: ಇತ್ತೀಚೆಗೆ ಎಳೆ ಪ್ರಾಯದ ಯುವಕ ಯುವತಿಯರು ನೋಡು ನೋಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ದಿನಗಳ ಹಿಂದಷ್ಟೇ ವ್ಯಕ್ತಿಯೊಬ್ಬರು ಸಾಯಿಬಾಬಾ ದರ್ಶನ ಪಡೆದ ಬಳಿಕ ದೇವಸ್ಥಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಹಾಗೆಯೇ ಈಗ ಸ್ನೇಹಿತರೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ಕುಸಿದು ಬಿದ್ದು ಸಾವನ್ನಪ್ಪಿದ್ದು, ಆ ಆಘಾತಕಾರಿ ಘಟನೆಯ ದೃಶ್ಯಾವಳಿ ಅಲ್ಲೇ ಸಮೀಪದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.
ಉತ್ತರಪ್ರದೇಶದ ಮೀರತ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಬೆಚ್ಚಿ ಬೀಳಿಸುವಂತಿದೆ. ವಿಡಿಯೋದಲ್ಲಿ ಕಾಣಿಸುವಂತೆ ಯುವಕನೋರ್ವ ತನ್ನ ಸ್ನೇಹಿತನ ಜೊತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಒಮ್ಮೆಲೇ ಕುಸಿದು ಬೀಳುತ್ತಾನೆ. ಪ್ರಜ್ಞೆ ತಪ್ಪಿ ಬಿದ್ದ ಆತನನ್ನು ಕೂಡಲೇ ಆತನ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದು, ಅಷ್ಟರಲ್ಲಾಗಲೇ ಆತ ತೀರಿಕೊಂಡು ಬಿಟ್ಟಿದ್ದಾನೆ. ವೈದ್ಯರು ಮಾರ್ಗಮಧ್ಯೆಯೇ ಆತ ಪ್ರಾಣ ಬಿಟ್ಟಿದ್ದಾನೆ ಎಂದು ಘೋಷಿಸಿದ್ದಾರೆ. ಮನೆಯೊಂದರ ಮುಂದೆ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಈ ವಿಡಿಯೋ ಸೆರೆ ಆಗಿದೆ.
मेरठ मौत का लाइव वीडियो सीसीटीवी में हुआ कैद| pic.twitter.com/NMN5tSr7YA
— Priya singh (@priyarajputlive)
ವೇದಿಕೆಯಲ್ಲೇ ಕುಸಿದ ವಧು, ಮಾರನೇ ದಿನ ಹೃದಯಾಘಾತದಿಂದ ಸಾವು..!
ಮೀರತ್‌ನ (Meerut) ಕಿದ್ವಾಯಿ ನಗರದ (Kidwai) ಅಹ್ಮದ್ ನಗರದಲ್ಲಿ (Ahmed nagar) ಈ ಘಟನೆ ನಡೆದಿದೆ. ಡಿಸೆಂಬರ್ 2 ರಂದು ರಾತ್ರಿ 10. 30 ರ ಸುಮಾರಿಗೆ ಈ ಅನಾಹುತ ನಡೆದಿದೆ. ನಾಲ್ವರು ಯುವಕರು ಪರಸ್ಪರ ಮಾತನಾಡುತ್ತಾ ರಸ್ತೆಯಲ್ಲಿ ನಡೆದುಕೊಂಡು ಮುಂದೆ ಹೋಗುತ್ತಿರುವಾಗ ಅವರಲ್ಲಿದ್ದ ಒಬ್ಬ ಯುವಕ ತನ್ನ ತಲೆಯನ್ನು ಹಿಡಿದುಕೊಂಡು ಕುಸಿದು ಕೆಳಗೆ ಬೀಳುತ್ತಾನೆ. ನಂತರ ಆತ ತನ್ನ ಗಂಟಲಲ್ಲಿ(Neck) ಏನೋ ಸಿಕ್ಕಿ ಹಾಕಿಕೊಂಡಂತೆ ತನ್ನ ಕೈಯನ್ನು ಕುತ್ತಿಗೆಯನ್ನು ಹಿಡಿದುಕೊಂಡು ಹೊರಳಾಡಿದ್ದಾನೆ. ಕೂಡಲೇ ಆತನ ಸ್ನೇಹಿತರು (friends) ಆತನನ್ನು ಏಳಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಆತ ಮೇಲೇಳಿಲ್ಲ. ಕೂಡಲೇ ಅವರು ಬೈಕೊಂದನ್ನು ತೆಗೆದುಕೊಂಡು ಬಂದು ಅದರಲ್ಲಿ ಆತನನ್ನು ಕೂರಿಸಿಕೊಂಡು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ಆತನನ್ನು ತಪಾಸಣೆ ನಡೆಸಿದ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದಾರೆ.
ಛೇ ಇದೆಂತಾ ದುರಂತ.. ಅಭ್ಯಾಸ ಮಾಡುವಾಗಲೇ ನಿಂತು ಹೋಯ್ತು 23 ವರ್ಷದ ಫುಟ್‌ಬಾಲ್ ತಾರೆಯ ಹೃದಯ!'
ಎರಡು ದಿನಗಳ ಹಿಂದಷ್ಟೇ ಮಧ್ಯಪ್ರದೇಶದ (Madhyap radesh) ಕತ್ನಿಯಲ್ಲಿರುವ ಸಾಯಿಬಾಬಾ ದೇಗುಲದಲ್ಲಿ(Saibaba Temple) ದೇವರ ದರ್ಶನಕ್ಕೆ ಬಂದ ವ್ಯಕ್ತಿಯೊಬ್ಬರು ದೇಗುಲದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಈ ಘಟನೆಯ ದೃಶ್ಯಾವಳಿ ಅಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮೃತ ವ್ಯಕ್ತಿಯನ್ನು ರಾಜೇಶ್ ಮೆಹನಿ (Rajesh mehani) ಎಂದು ಗುರುತಿಸಲಾಗಿದೆ. ಸಾಯಿಬಾಬಾ ಭಕ್ತರಾಗಿದ್ದ ರಾಜೇಶ್ ಮೆಹನಿ, ದೇಗುಲದಲ್ಲಿ ಪ್ರಾರ್ಥನೆ ಮಾಡಲು ಸಾಯಿಬಾಬಾ ವಿಗ್ರಹದ ಬಳಿ ನೆಲದ ಮೇಲೆ ಕುಳಿತುಕೊಳ್ಳುತ್ತಾರೆ. ಆದರೆ ಬಳಿಕ ಅವರಿಗೆ ಎದ್ದೇಳಲು ಆಗಲೇ ಇಲ್ಲ. ವ್ಯಕ್ತಿ ಅದೇ ಸ್ಥಳದಲ್ಲಿ ಸ್ವಲ್ಪ ಸಮಯದಿಂದ ಕೂತಿದ್ದರಿಂದ ಇತರೆ ಭಕ್ತರು ಅನುಮಾನಗೊಂಡು ಅವರನ್ನು ಎಬ್ಬಿಸಲು ಹೋದರೂ 15 ನಿಮಿಷಗಳಾದರೂ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದ ಇತರೆ ಭಕ್ತರು ಅನುಮಾನಗೊಂಡು ಅಲ್ಲಿನ ಅರ್ಚಕರನ್ನು ಕರೆದರು. ನಂತರ, ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಅವರು ಅಲ್ಲಿಗೆ ಹೋಗುವಷ್ಟರಲ್ಲಿ ಮೃತಪಟ್ಟಿದ್ದರು ಎಂದು ವೈದ್ಯರು ಘೋಷಿಸಿದ್ದರು. ಇದಕ್ಕೆ ಕಾರಣ ಅವರಿಗೆ ಸೈಲೆಂಟ್ ಹಾರ್ಟ್ ಅಟ್ಯಾಕ್ ಆಗಿದೆ (Silent Heart Attack) ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಸಾವಿನಲ್ಲೂ ಒಂದಾದ ತಾಯಿ-ಮಗ; ವಿಜಯಪುರದಲ್ಲಿ ಮನಕಲುಕುವ ಘಟನೆ
ಸೈಲೆಂಟ್ ಹಾರ್ಟ್ ಅಟ್ಯಾಕ್ ಅಂದರೇನು..?
ಈ ರೀತಿ ದಿಢೀರ್ ಹೃದಯಘಾತ ಪ್ರಕರಣಗಳು ಇತ್ತೀಚೆಗೆ ಹೆಚ್ಚು ವರದಿಯಾಗುತ್ತಲೇ ಇದೆ. ಇದ್ದಕ್ಕಿದ್ದಂತೆ ಹೃದಯಾಘಾತವಾಗುವುದು, ಅವರಿಗೆ ಈ ಹಿಂದೆ ಯಾವುದೇ ಹೃದಯದ ತೊಂದರೆ ಇಲ್ಲದಿದ್ದರೂ, ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಮೃತಪಡುವಂತಹ ಘಟನೆಗಳು ವರದಿಯಾಗುತ್ತಿವೆ.ಸೈಲೆಂಟ್ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಅನ್ನು ಸೈಲೆಂಟ್ ಹಾರ್ಟ್ ಅಟ್ಯಾಕ್ ಎನ್ನಲಾಗುತ್ತದೆ. ಈ ವೇಳೆ ರೋಗ ಲಕ್ಷಣಗಳು ಸಹ ಸೈಲೆಂಟ್ ಆಗಿರುತ್ತದೆ. ಅಂದರೆ, ಹೆಚ್ಚು ಎದೆ ನೋವು ಬರುವುದಿಲ್ಲ, ಹೃದಯದಲ್ಲಿ ಹೆಚ್ಚು ಒತ್ತಡ ಕಂಡುಬರುವುದಿಲ್ಲ, ಹಠಾತ್ ಉಸಿರಾಟದ ತೊಂದರೆ, ಮತ್ತು ತಲೆತಿರುಗುವಿಕೆ ಮುಂತಾದ ರೋಗಲಕ್ಷಣಗಳು ಕಂಡುಬರುತ್ತವೆ ಎಂದು ಹೇಳಿದ್ದಾರೆ.
ಕ್ಯಾನ್ಸರ್ ಗೆದ್ದ ಯುವ ನಟಿ ಐಂದ್ರಿಲಾ ಶರ್ಮಾ ಹೃದಯಾಘಾತದಿಂದ ನಿಧನ