ಶ್ವಾನದೊಂದಿಗೆ ಹೊಸ ಜೀವನಕ್ಕೆ ಎಂಟ್ರಿ ಕೊಟ್ಟ ಮದುಮಗ..!

By Anusha Kb  |  First Published Dec 5, 2022, 12:42 PM IST

ಇತ್ತೀಚೆಗೆ ಮದುವೆ ಮನೆಗೆ ವಧು ವರರು ಪ್ರವೇಶಿಸುವ ರೀತಿಯೇ ಒಂದು ಟ್ರೆಂಡ್ ಆಗಿದೆ. ಕೆಲವರು ಜೆಸಿಬಿ, ಟ್ರಾಕ್ಟರ್, ಬುಲೆಟ್, ಕುದುರೆ, ಕತ್ತೆಯ ಮೂಲಕವೂ ಮದ್ವೆ  ಮನೆಗೆ ಎಂಟ್ರಿ ಕೊಡುತ್ತಾರೆ. ಆದರೆ ಇಲ್ಲಿ ಒಬ್ಬ ಮಧುಮಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ತನ್ನ ಶ್ವಾನದೊಂದಿಗೆ ಮದ್ವೆ ಮನೆಗೆ ಎಂಟ್ರಿ ಕೊಟ್ಟಿದ್ದಾನೆ.


ಇತ್ತೀಚೆಗೆ ಮದುವೆ ಮನೆಗೆ ವಧು ವರರು ಪ್ರವೇಶಿಸುವ ರೀತಿಯೇ ಒಂದು ಟ್ರೆಂಡ್ ಆಗಿದೆ. ಎಲ್ಲರಿಗಿಂತ ತಮ್ಮ ಮದುವೆ ತುಂಬಾ ವಿಭಿನ್ನವಾಗಿರಬೇಕು. ನಾವು ಹೊಸದಾಗಿ ಏನಾದರೊಂದು ಟ್ರೆಂಡ್ ಶುರು ಮಾಡಬೇಕು ಎಂದು ಅನೇಕ ವಧು ವರರು ಇನ್ನಿಲ್ಲದ ಸಾಹಸ ಮಾಡುತ್ತಾರೆ. ಇದಕ್ಕಾಗಿ ಕೆಲವರು ಹೆಲಿಕಾಪ್ಟರ್ ಮೂಲಕ ಮದ್ವೆ ಮನೆಗೆ ಬಂದರೆ ಮತ್ತೆ ಕೆಲವರು ಜೆಸಿಬಿ, ಟ್ರಾಕ್ಟರ್, ಬುಲೆಟ್, ಕುದುರೆ, ಕತ್ತೆಯ ಮೂಲಕವೂ ಮದ್ವೆ  ಮನೆಗೆ ಎಂಟ್ರಿ ಕೊಡುತ್ತಾರೆ. ಆದರೆ ಇಲ್ಲಿ ಒಬ್ಬ ಮಧುಮಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ತನ್ನ ಶ್ವಾನದೊಂದಿಗೆ ಮದ್ವೆ ಮನೆಗೆ ಎಂಟ್ರಿ ಕೊಟ್ಟಿದ್ದಾನೆ.

ಸಾಮಾನ್ಯವಾಗಿ ಶ್ವಾನಪ್ರಿಯರು ತಮ್ಮ ಶ್ವಾನಕ್ಕೆ ಮನುಷ್ಯರಿಗಿಂತಲೂ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅದರಲ್ಲೂ ತಮ್ಮ ಮನೆಯ ಸದಸ್ಯರಂತೆ ಅವುಗಳನ್ನು ನೋಡಿಕೊಳ್ಳುತ್ತಾರೆ. ಅವಗಳಿಗೆ ಹೊಸಬಟ್ಟೆ ಧರಿಸುವುದು, ಅವುಗಳ ಬರ್ತ್‌ಡೇ ಆಚರಿಸುವ ಮೂಲಕ ಶ್ವಾನವನ್ನು ಖುಷಿಯಾಗಿಡಲು ಏನೂ ಸಾಧ್ಯವೋ ಅದೆಲ್ಲವನ್ನು ಮಾಡುತ್ತಾರೆ. ಕೆಲವರಂತೂ ಶ್ವಾನವನ್ನು ತಾವು ಹೋದಲ್ಲೆಲ್ಲಾ ಕರೆದೊಯ್ಯುತ್ತಾರೆ. ಹಾಗೆಯೇ ಇಲ್ಲೊಬ್ಬ ತನ್ನ ಮದುವೆಯ ದಿನವೂ ಶ್ವಾನದೊಂದಿಗೆ ಮದುವೆ ಮನೆಗೆ ಬಂದಿದ್ದಾನೆ. ಬೈಕ್‌ನಲ್ಲಿ ಶ್ವಾನವನ್ನು ಕೂರಿಸಿಕೊಂಡು ಮದುಮಗ ಮದ್ವೆ ಮನೆ ಪ್ರವೇಶಿಸುತ್ತಿದ್ದರೆ ಎಲ್ಲರೂ ಅಚ್ಚರಿಗೆ ಒಳಗಾಗಿದ್ದಾರೆ. ಇತ್ತ ಶ್ವಾನ ಮದುಮಗಳಂತೆ ಬೈಕ್ ಮುಂದೆ ಕುತುಕೊಂಡು ಸಖತ್ ಆಗಿ ಫೋಸ್ ನೀಡಿದೆ.

 
 
 
 
 
 
 
 
 
 
 
 
 
 
 

Tap to resize

Latest Videos

A post shared by Darshan Nandu Pol (@supremebakarwadi)

 

ವಿಡಿಯೋದಲ್ಲಿ ಕಾಣಿಸುವಂತೆ ಶೇರ್ವಾನಿ (Sherwani) ಧರಿಸಿ ಸಿಂಗಾರಗೊಂಡಿರುವ ಮದುಮಗ(Groom) ಬೈಕ್‌ನಲ್ಲಿ ಮುಂದೆ ಶ್ವಾನವನ್ನು(Dog) ಕೂರಿಸಿಕೊಂಡು ಮದ್ವೆ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಶ್ವಾನಕ್ಕೂ ಮಿರಿ ಮಿರಿ ಮಿಂಚುವಂತಹ ಮೆರೂನ್ ಹಾಗೂ ಚಿನ್ನದ ಬಣ್ಣದ ಸಂಯೋಜನೆಯ ಬಟ್ಟೆಯನ್ನು ತೊಡಿಸಲಾಗಿದೆ. ಈ ವಿಡಿಯೋ ನೋಡಿದ ಅನೇಕರು  ಹೃದಯದ ಇಮೋಜಿಗಳಿಂದ ಮೆಚ್ಚುಗೆ ಸೂಚಿಸಿದ್ದಾರೆ. ಸುಪ್ರೀಂಬಕರ್ವಾಡಿ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವಿಡಯೋವನ್ನು ಅಪ್‌ಲೋಡ್ ಮಾಡಲಾಗಿದ್ದು, ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

ಮಾಲೀಕನೊಂದಿಗೆ ಶ್ವಾನದ ಲಡಾಖ್ ಟ್ರಿಪ್... ವಿಡಿಯೋ ವೈರಲ್

ನಿನ್ನೊಬ್ಬ ನಿಜವಾದ ಮಾನವ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ನೋಡಿ ನನ್ನ ಹೃದಯ ತುಂಬಿ ಬಂತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ, ಇದೊಂದು ನಾನು ನೋಡಿದ ಅದ್ಬುತವಾದ ದೃಶ್ಯ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಶ್ವಾನದ ಬರ್ತ್‌ಡೇ

ಕೆಲದಿನಗಳ ಹಿಂದೆ ಜಾರ್ಖಂಡ್‌ನ ಧನ್ಬಾದ್‌ನಲ್ಲಿ(Dhanbad) ಜೋಡಿಯೊಂದು ತಮ್ಮ ಮೆಚ್ಚಿನ ಶ್ವಾನದ ಹುಟ್ಟುಹಬ್ಬ ಆಚರಿಸಿತ್ತು. ಬರೀ ಹುಟ್ಟುಹಬ್ಬ ಆಚರಿಸಿದ್ದರೆ ಈ ವಿಚಾರ ದೊಡ್ಡದಾಗುತ್ತಿರಲಿಲ್ಲ. ಆದರೆ ಇವರು ಶ್ವಾನದ ಹುಟ್ಟುಹಬ್ಬದ ಸಲುವಾಗಿ 350 ಜನರಿಗೆ ಊಟವನ್ನು ಹಾಕಿದ್ದರು. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ ಕಾಣಿಸುವಂತೆ ಶ್ವಾನದ ಹುಟ್ಟುಹಬ್ಬಕ್ಕಾಗಿ ಮನೆಯನ್ನು ಸುಂದರವಾಗಿ ಅಲಂಕರಿಸಲಾಗಿದ್ದು, ಎಲ್ಲರೂ ಮನೆ ಮದುವೆಯಂತೆ (Wedding) ಅಲಂಕಾರದೊಂದಿಗೆ ತಯಾರಾಗಿದ್ದಾರೆ.

ವಿಘ್ನ ನಿವಾರಕನಿಗೆ ತಲೆಬಾಗಿಸಿ ಕೈ ಮುಗಿದ ಶ್ವಾನ... ವಿಡಿಯೋ ವೈರಲ್

ಈ ವಿಚಿತ್ರ ಘಟನೆ ನಡೆದಿದೆ. ಶ್ವಾನ ಕುಟುಂಬದ ನೆಂಟರು, ಬಂಧುಗಳು, ಆತ್ಮೀಯರ ಸಮ್ಮುಖದಲ್ಲಿ ಶ್ವಾನಕ್ಕೆ ಹುಟ್ಟುಹಬ್ಬದ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಶ್ವಾನ ಹುಟ್ಟುಹಬ್ಬಕ್ಕಾಗಿ ಮನೆಯನ್ನು ಸುಂದರವಾಗಿ ಅಲಂಕರಿಸಲಾಗಿದ್ದು, ಎಲ್ಲರೂ ಮನೆ ಮದುವೆಯಂತೆ (Wedding) ಅಲಂಕಾರದೊಂದಿಗೆ ತಯಾರಾಗಿದ್ದಾರೆ. ಶ್ವಾನದ ಮಾಲೀಕ ಶ್ವಾನವನ್ನು ತನ್ನ ಮಗುವಿನಂತೆ ಎತ್ತಿಕೊಂಡಿದ್ದು, ಆತನ ಪತ್ನಿ ಶ್ವಾನಕ್ಕೆ ಮುತ್ತಿಕ್ಕಿ ಬಳಿಕ ಕೇಕ್ ಕಟ್ ಮಾಡಲಾಗುತ್ತದೆ.

ನಾಯಿಗೆ ಮದುವೆ ಮಾಡಿ ಕನ್ಯಾದಾನದ ಬಯಕೆ ತೀರಿಸಿಕೊಂಡ ಮಕ್ಕಳಿಲ್ಲದ ದಂಪತಿ

ಅಲ್ಲದೇ ಈ ಶ್ವಾನದ ಸಮಾರಂಭಕ್ಕೆ ಬಂದ ಅತಿಥಿಗಳು ಶ್ವಾನಕ್ಕೆ(Dog) ಉಡುಗೊರೆಗಳನ್ನು (Gift) ಕೂಡ ತಂದಿದ್ದರು. ಧನ್ಬಾದ್‌ನ ಲೋಯಾಬಾದ್‌ನಲ್ಲಿ(Loyabad) ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೀಗೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಶ್ವಾನದ ಹೆಸರು ಅಕ್ಸರ್, ಅಕ್ಸರ್‌ನ ಪೋಷಕರಾದ ಸುಮಿತ್ರಾ ಕುಮಾರಿ (Sumitra Kumari) ಹಾಗೂ ಸಂದೀಪ್ ಕುಮಾರ್ ಈ ಕಾರ್ಯಕ್ರಮವಾಗಿ ಸುಂದರವಾದ ಆಮಂತ್ರಣ ಪತ್ರವನ್ನು ಕೂಡ ಸಿದ್ಧಪಡಿಸಿದ್ದರು. ಅಷ್ಟೇ ಅಲ್ಲದೇ ಶ್ವಾನಕ್ಕಾಗಿ 4500 ರೂಪಾಯಿ ಮೊತ್ತದ ಬಟ್ಟೆಯನ್ನು ಕೊಂಡು ತಂದಿದ್ದರು. ಒಟ್ಟಿನಲ್ಲಿ ಯಾವುದರಲ್ಲೂ ಕಡಿಮೆ ಇಲ್ಲದಂತೆ ತಮ್ಮ ಶ್ವಾನದ ಹುಟ್ಟುಹಬ್ಬವನ್ನು ಈ ದಂಪತಿ ಆಚರಿಸಿದ್ದಾರೆ. 
 

click me!