ಮಧ್ಯಪ್ರದೇಶದ ನಿವೃತ್ತ ಸರ್ಕಾರಿ ಉದ್ಯೋಗಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದ ಮಧ್ಯಪ್ರದೇಶದ ಲೋಕಾಯುಕ್ತ ಪೊಲೀಸರು 90 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ.
ಭೋಪಾಲ್: ಮಧ್ಯಪ್ರದೇಶದ ನಿವೃತ್ತ ಸರ್ಕಾರಿ ಉದ್ಯೋಗಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದ ಮಧ್ಯಪ್ರದೇಶದ ಲೋಕಾಯುಕ್ತ ಪೊಲೀಸರು 90 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ.
ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಕಿರಿಯ ಲೆಕ್ಕ ಪರಿಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ರಮೇಶ್ ಹಿಂಗೊರಾನೀಗೆ ಸೇರಿದ ಸ್ಥಳಗಳು, ಅವರ ಪರಿವಾರದವರು ನಡೆಸುತ್ತಿದ್ದ 2 ಶಾಲೆಗಳು, ಪಾರ್ಟಿಹಾಲ್‌ಗಳ ಮೇಲೆ ಲೋಕಾಯುಕ್ತದ ಪೊಲೀಸರ 6 ತಂಡಗಳು ಗುರುವಾರ ದಾಳಿ ನಡೆಸಿವೆ. ದಾಳಿ ವೇಳೆ ರಮೇಶ್, ರಾಜಧಾನಿ ಭೋಪಾಲ್ ಹಾಗೂ ಅನ್ಯ ರಾಜ್ಯಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆ ಮಾಡಿದ್ದರ ಬಗ್ಗೆ ದಾಖಲೆಗಳು ಸಿಕ್ಕಿವೆ ಎನ್ನಲಾಗಿದೆ. ಅಲ್ಲದೆ ದಾಳಿ ವೇಳೆ 70 ಲಕ್ಷ ರು. ಬೆಲೆಯ ಚಿನ್ನಾಭರಣ, 12 ಲಕ್ಷ ರು. ನಗದು, 4 ಐಷಾರಾಮಿ ಕಾರು ಪತ್ತೆಯಾಗಿದೆ. ಸ್ಥಿರಾಸ್ತಿಯ ಮೌಲ್ಯವನ್ನು ಇನ್ನೂ ಲೆಕ್ಕ ಹಾಕಲಾಗುತ್ತಿದೆ. ಇನ್ನು ರಮೇಶ್ ಮಗ ನಿಲೇಶ್ ಅವರ ಬಳಿ ಇದ್ದ ಪರವಾನಗಿ ಇಲ್ಲದ ಪಿಸ್ತೂಲನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಕ್ರಮ ಹಣದಲ್ಲಿ ಲಂಡನ್ ಮನೆ ನವೀಕರಿಸಿದ ಸೋನಿಯಾ ಅಳಿಯ: ವಾದ್ರಾ ವಿರುದ್ಧ ಇ.ಡಿ. ಆರೋಪ
ಸಿಜೆಐ ಹುದ್ದೆಗೆ ಸಂಜೀವ್ ಖನ್ನಾ ಹೆಸರು ಶಿಫಾರಸು
ನವದೆಹಲಿ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನ್ಯಾ. ಡಿ.ವೈ. ಚಂದ್ರಚೂಡ್ ತಮ್ಮ ಉತ್ತರಾಧಿಕಾರಿಯಾಗಿ ಹಿರಿಯ ನ್ಯಾಯಾಧೀಶ ನ್ಯಾ. ಸಂಜೀವ್ ಖನ್ನಾ ಹೆಸರು ಪ್ರಸ್ತಾಪಿಸಿದ್ದಾರೆ. ಈ ಕುರಿತು ಚಂದ್ರಚೂಡ್ ಕೇಂದ್ರ ಕಾನೂನು ಸಚಿವಾಲಯಕ್ಕೆ ಶಿಫಾರಸು ಪತ್ರ ರವಾನಿಸಿದ್ದಾರೆ. ಈ ಪ್ರಸ್ತಾಪವನ್ನು ಸರ್ಕಾರ ಅನುಮೋದಿಸಿದರೆ ಖನ್ನಾ ಅವರು ನ.10ರಂದು 51ನೇ ಸಿಜೆಐ ಆಗಿ ನೇಮಕಗೊಳ್ಳಲಿದ್ದು, 2025ರ ಮೇ 13ರವರೆಗೆ(6 ತಿಂಗಳು) ಸೇವೆ ಸಲ್ಲಿಸಲಿದ್ದಾರೆ. ನ್ಯಾ. ಚಂದ್ರಚೂಡ್ ಅವರು ನ.8ರಂದು ನಿವೃತ್ತಿ ಹೊಂದಲಿದ್ದಾರೆ.
ಖನ್ನಾ ಅವರು ಚುನಾವಣೆಯಲ್ಲಿ ಇವಿಎಂ ಯಂತ್ರಗಳ ಬಳಕೆಯನ್ನು ಎತ್ತಿಹಿಡಿದು ತೀರ್ಪು ಹೊರಡಿಸಿದ್ದರು. ಚುನಾವಣಾ ಬಾಂಡ್‌ಗಳು ಅಸಂವಿಧಾನಿಕ ಎಂದ ಸಾಂವಿಧಾನಿಕ ಪೀಠ ಹಾಗೂ 370 ವಿಧಿಯನ್ನು ರದ್ದುಗೊಳಿಸಿದ ಸಾಂವಿಧಾನಿಕ ಪೀಠದ ಭಾಗವಾಗಿದ್ದರು. 1983ರಲ್ಲಿ ದೆಹಲಿಯ ಬಾರ್‌ಕೌನ್ಸಿಲ್‌ನಲ್ಲಿ ವಕೀಲರಾಗಿ ವೃತ್ತಿಜೀವನವನ್ನು ಆರಂಭಿಸಿದ ನ್ಯಾ|ಸಂಜೀವ್ ಖನ್ನಾ, ತೀಸ್ ಹಜಾರಿ ಸಂಕೀರ್ಣದಲ್ಲಿರುವ ಜಿಲ್ಲಾ ನ್ಯಾಯಾಲಯಗಳಲ್ಲಿ ಅಭ್ಯಾಸ ಮಾಡಿದರು. 2006ರಲ್ಲಿ ಖಾಯಂ ನ್ಯಾಯಾಧೀಶರಾಗಿ ನೇಮಕವಾಗಿದ್ದರು. 2019ರ ಜ.18ರಂದು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.
ಪಾಳು ಬಂಗ್ಲೇಲಿ 329 ಕೋಟಿ ರು. ಮುಚ್ಚಿಟ್ಟಿದ್ದ ಕೈ ಸಂಸದ ಸಾಹು!