ಮೋದಿ 10 ವರ್ಷದ ಅವಧಿಯಲ್ಲಿ ತೆರಿಗೆ ಸಂಗ್ರಹ ಶೇ.182 ಏರಿಕೆ

By Kannadaprabha News  |  First Published Oct 18, 2024, 9:20 AM IST

ಪ್ರಧಾನಿ ನರೇಂದ್ರ ಮೋದಿ ಅವರ ಕಳೆದ 10 ವರ್ಷದ ಅಧಿಕಾರವಧಿಯಲ್ಲಿ ದೇಶದಲ್ಲಿ ನೇರ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ದಾಖಲೆಯ ಶೇ.182ರಷ್ಟು ಏರಿಕೆ ದಾಖಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ.


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕಳೆದ 10 ವರ್ಷದ ಅಧಿಕಾರವಧಿಯಲ್ಲಿ ದೇಶದಲ್ಲಿ ನೇರ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ದಾಖಲೆಯ ಶೇ.182ರಷ್ಟು ಏರಿಕೆ ದಾಖಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ.

ಮೋದಿ ಅಧಿಕಾರಕ್ಕೆ ಬಂದ ವರ್ಷವಾದ 2014-15ರಲ್ಲಿ 4.29 . ಕಾರ್ಪೊರೆಟ್ ತೆರಿಗೆ ಮತ್ತು 2.66 ಲಕ್ಷ ಕೋಟಿ ರು. ವೈಯಕ್ತಿಕ ತೆರಿಗೆ ಸೇರಿ ಒಟ್ಟು 6.96 ಲಕ್ಷ ಕೋಟಿ ರು. ನೇರ ತೆರಿಗೆ ಸಂಗ್ರಹವಾಗಿತ್ತು. ಇದೀಗ ಮೋದಿ ಅವರ ಅಧಿಕಾರದ 10ನೇ ವರ್ಷದವಾದ 2023-24ರಲ್ಲಿ ನೇರ ತೆರಿಗೆ ಸಂಗ್ರಹ 9.11 ಲಕ್ಷ ಕೋಟಿ ರು. ತಲುಪಿದೆ. ಅಂದರೆ ನೇರ ತೆರಿಗೆ ಸಂಗ್ರಹದಲ್ಲಿ ಶೇ.182ರಷ್ಟು ಏರಿಕೆಯಾಗಿದೆ ಎಂದು ತೆರಿಗೆ ಇಲಾಖೆ ಹೇಳಿದೆ.

Tap to resize

Latest Videos

ಇನ್ನು 2014-15ರಲ್ಲಿ 4.04 ಕೋಟಿಯಿದ್ದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಸಂಖ್ಯೆ 2023-24ರಲ್ಲಿ 8.61 ಕೋಟಿಯಾಗಿದೆ. ನೇರ ತೆರಿಗೆ-ಜಿಡಿಪಿ ಅನುಪಾತ ಶೇ.5.55 ರಿಂದ ಶೇ.6.64ಕ್ಕೆ ಏರಿದೆ. ಕಳೆದ 10 ವರ್ಷದಲ್ಲಿ ತೆರಿಗೆದಾರರ ಸಂಖ್ಯೆಯೂ 5.70 ಕೋಟಿಯಿಂದ 10.41ಕ್ಕೆ ತಲುಪಿದೆ ಎಂದು ಇಲಾಖೆ ಹೇಳಿದೆ.

ನಿರ್ಮಲಾ ಸೀತಾರಾಮನ್‌ ನಕಲಿ ಪ್ರೊಫೈಲ್ ವೈರಲ್: ಬಯೋದಲ್ಲಿನ ಮಾಹಿತಿ ನೋಡಿ ನಕ್ಕ ನೆಟ್ಟಿಗರು

click me!