ಚೀನಿಯರಿಗೆ ವೀಸಾ ಕೊಡಿಸಲು ಲಂಚ : ಚಿದಂಬರಂ ಪುತ್ರನ ವಿರುದ್ಧ ಸಿಬಿಐ ಚಾರ್ಜ್‌ಶೀಟ್

By Kannadaprabha News  |  First Published Oct 18, 2024, 9:40 AM IST

ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ವಿರುದ್ಧ ಸಿಬಿಐ ಗುರುವಾರ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ.


ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ವಿರುದ್ಧ ಸಿಬಿಐ ಗುರುವಾರ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. ಹಣ ಪಡೆದು ಚೀನಿ ನಾಗರಿಕರಿಗೆ ದೇಶದ ವೀಸಾ ಕೊಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಈ ಚಾರ್ಜ್‌ಶೀಟ್ ದಾಖಲಾಗಿದೆ.

ತಮ್ಮ ತಂದೆ ಪಿ.ಚಿದಂಬರಂ ಕೇಂದ್ರ ಸಚಿವರಾಗಿದ್ದ ವೇಳೆ ಕೆಲ ಚೀನಾ ನಾಗರಿಕರಿಗೆ ಭಾರತೀಯ ವೀಸಾ ಕೊಡಿಸಲು ಲಂಚ ಸ್ವೀಕರಿಸಿದ್ದರು ಎಂಬ ಆರೋಪ ಕಾರ್ತಿ ಚಿದಂಬರಂ ಮೇಲಿತ್ತು. ಈ ಸಂಬಂಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ವಿರುದ್ಧ ಸಿಬಿಐ ಗುರುವಾರ ಹೊಸ ಆರೋಪಪಟ್ಟಿ ಸಲ್ಲಿಸಿದೆ. ಅದರಲ್ಲಿ ಕಾರ್ತಿ ಮತ್ತು ಇತರರ ವಿರುದ್ದ ಅಪರಾಧ ಪಿತೂರಿ, ವಂಚನೆ, ನಕಲಿ ಸಹಿ ಹಾಕಿದ ಆರೋಪ ಹೊರಿಸಲಾಗಿದೆ. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಬಿಐ, ಎಫ್‌ಐಆರ್ ದಾಖಲಿಸಿದ 2 ವರ್ಷಗಳ ಬಳಿಕ ಜಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ.

Latest Videos

undefined

ರಾಹುಲ್ ಗಾಂಧಿಗಿಂತ ಮೋದಿ ಜನಪ್ರಿಯ ಹೇಳಿಕೆ, ಕಾರ್ತಿ ಚಿದಂಬರಂಗೆ ಕಾಂಗ್ರೆಸ್ ನೋಟಿಸ್!

ಲಂಚ ಪ್ರಕರಣದ ಹಿನ್ನೆಲೆ ಏನು?
ಪಂಜಾಬ್ ಮೂಲದ ಟಿಎಸ್‌ಪಿಎಲ್ ಕಂಪನಿಯು 2011ರಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆ ಗುತ್ತಿಗೆಯನ್ನು ಚೀನಾ ಕಂಪನಿಗೆ ನೀಡಿತ್ತು. ಈ ಕಂಪನಿಯ ಸಿಬ್ಬಂದಿ ಭಾರತಕ್ಕೆ ಬರಲು ವೀಸಾ ಬೇಕು ಈ ವೀಸಾ ಕೊಡಿಸಲು ಕಾರ್ತಿ ಚಿದಂಬರಂ ಲಂಚವನ್ನು ಸ್ವೀಕರಿಸಿದ್ದರು ಎಂಬ ಆರೋಪವಿದೆ.

Money Laundering case ಕಾರ್ತಿ ಚಿದಂಬರಂ ನಿರೀಕ್ಷಣಾ ಜಾಮೀನು ಅರ್ಜಿ ವಜಾ!

click me!