ಓ ಮೈನಾ ಓ ಮೈನಾ... ಗಿಣಿಗೆ ಮೈನಾದ ಜೊತೆ ಅದ್ದೂರಿ ಮದುವೆ

By Anusha KbFirst Published Feb 8, 2023, 9:32 PM IST
Highlights

ನೀವು ನಾಯಿಗಳಿಗೆ, ಬೆಕ್ಕು ಕತ್ತೆ, ಕಪ್ಪೆಗಳಿಗೆ ಮದುವೆ ಮಾಡುವುದನ್ನು ನೋಡಿರಬಹುದು ಕೇಳಿರಬಹುದು. ಆದರೆ ಇಲ್ಲೊಂದು ಕಡೆ ಗಿಳಿಗೆ ಮೈನಾ ಹಕ್ಕಿಯೊಂದಿಗೆ ಮದುವೆ ಮಾಡಿಸಿದ್ದಾರೆ ಇವುಗಳ ಮಾಲೀಕರು

ಭೋಪಾಲ್: ಮದುವೆ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ, ಪ್ರಾಯಕ್ಕೆ ಬಂದ ಮಕ್ಕಳು ಮನೆಯಲ್ಲಿದ್ದರೆ ಪೋಷಕರಿಗೆ ಅವರ ಮದುವೆಯದ್ದೇ ಚಿಂತೆ. ಆದರೆ ಮಕ್ಕಳಿದಲ್ಲದ ದಂಪತಿಯೂ ಮದುವೆ ವಿಚಾರದಲ್ಲಿ ಸುಮ್ಮನೇ ಕೂರುವವರಲ್ಲ. ಮಕ್ಕಳಿಲ್ಲದಿದ್ದರೇನಂತೆ ಮನೆಯಲ್ಲಿದ್ದ ತಮ್ಮ ಪ್ರೀತಿಯ ಪ್ರಾಣಿಗಳಿಗೆ ಮದುವೆ ಮಾಡಿಸಲು ಶುರು ಮಾಡುತ್ತಾರೆ. ಕೆಲ ದಿನಗಳ ಹಿಂದೆ ಮಕ್ಕಳಿಲ್ಲದ ದಂಪತಿ ತಮ್ಮ ಮನೆಯ ಪ್ರೀತಿಯ ಶ್ವಾನಕ್ಕೆ ಪಕ್ಕದ ಮನೆಯ ಶ್ವಾನದೊಂದಿಗೆ ಬಹಳ ಅದ್ದೂರಿಯಾಗಿ ಮದುವೆ ಮಾಡಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈಗ ಹೊಸ ವಿಚಾರ ಏನೆಂದರೆ ಮಧ್ಯಪ್ರದೇಶದಲ್ಲಿ ವಿಶೇಷವಾದ ಮದುವೆಯೊಂದು ನಡೆದಿದೆ. 

ನೀವು ನಾಯಿಗಳಿಗೆ, ಬೆಕ್ಕು ಕತ್ತೆ, ಕಪ್ಪೆಗಳಿಗೆ ಮದುವೆ ಮಾಡುವುದನ್ನು ನೋಡಿರಬಹುದು ಕೇಳಿರಬಹುದು. ಆದರೆ ಇಲ್ಲೊಂದು ಕಡೆ ಗಿಳಿಗೆ ಮೈನಾ ಹಕ್ಕಿಯೊಂದಿಗೆ ಮದುವೆ ಮಾಡಿಸಿದ್ದಾರೆ ಇವುಗಳ ಮಾಲೀಕರು. ಮಧ್ಯಪ್ರದೇಶದ (Madhya Pradesh) ಕರೇಲಿ (Kareli) ಗ್ರಾಮದ ಪಿಪರಿಯಾ ಎಂಬಲ್ಲಿ ಈ ವಿಚಿತ್ರ ಘಟನೆ ನಡೆದಿದೆ.  ಸಂಪ್ರದಾಯಬದ್ಧವಾಗಿ ವೇದ ಘೋಷ ಬ್ಯಾಂಡ್ ಭಜಂತ್ರಿಯೊಂದಿಗೆ ಈ ಮದುವೆ ನಡೆದಿದೆ. ಮದುವೆಗೂ ಮೊದಲು ಇವೆರಡು ಹಕ್ಕಿಗಳ ಜಾತಕವನ್ನು ಕೂಡ ನೋಡಲಾಗಿದೆಯಂತೆ. ಭಾರತೀಯ ಸಂಪ್ರದಾಯದಲ್ಲಿ ವಿವಾಹ ಮಾಡಲು ಜಾತಕ ಮ್ಯಾಚ್ ಆಗಬೇಕು. ಹಾಗೆಯೇ ಇಲ್ಲಿ ಈ ಹಕ್ಕಿಗಳ ಜಾತಕ ನೋಡಿ ಮದ್ವೆ ಮಾಡಿಸಿದ್ದಾಗಿ ಮಾಲೀಕರು ಹೇಳಿಕೊಂಡಿದ್ದಾರೆ. 

ಒಂದೆಡೆ ಪ್ರವಾಹ ಮತ್ತೊಂದೆಡೆ ಬರ: ಮಳೆಗಾಗಿ ಕಪ್ಪೆಗಳಿಗೆ ಮದ್ವೆ

ಪಿಪಾರಿಯಾದಲ್ಲಿ  ವಾಸ ಮಾಡುವ ರಾಮಸ್ವರೂಪ್ ಅವರು ಮೈನಾ ಹಕ್ಕಿಯನ್ನು ತಮ್ಮ ಮನೆ ಮಗಳಂತೆ ಸಾಕಿದ್ದರು. ಅದಕ್ಕೆ ತಕ್ಕಂತೆ ಬಡ್ಡಲ್ ವಿಶ್ವಕರ್ಮ ಗ್ರಾಮದ (Vishwakarma village) ಬಾದಲ್ ಲಾಲ್ ವಿಶ್ವಕರ್ಮ (Badal Lal Vishwakarma) ಅವರ ಬಳಿ ಒಂದು ಗಿಳಿ ಇತ್ತು. ಹೀಗಾಗಿ ಇವರಿಬ್ಬರು ಸೇರಿ ಮೈನಾ ಹಾಗೂ ಗಿಳಿಗೆ ಮದುವೆ ಮಾಡಲು ನಿರ್ಧರಿಸಿದರು. ಅದರಂತೆ  ಬದ್ದಲ್ ವಿಶ್ವಕರ್ಮ ಗ್ರಾಮದ ಹಿರಿಯ ನಾಗರಿಕರು, ಜಿಲ್ಲಾ ಸದಸ್ಯರಾದ ವಿಜಯ್ ಪಟೇಲ್, ಆದಿತ್ಯ ಮೋಹನ್ ಪಟೇಲ್, ಪಿತಮ್ ಪಟೇಲ್, ದೇವಿ ಸಿಂಗ್ ಪಟೇಲ್, ಅಶೋಕ್ ಪಟೇಲ್, ರಾಮು ಪಟೇಲ್, ರಜ್ಜು ಪಟೇಲ್, ಪುರುಷೋತ್ತಮ ಶಿವಣ್ಣ, ಸುನೀಲ್ ಪಟೇಲ್, ವಿಮಲೇಶ್ ಪಟೇಲ್ ಸೇರಿದಂತೆ ಅನೇಕರು ಈ  ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.  ಗಿಳಿಯ ಸಂಬಂಧಿಗಳಂತೆ ಮೆರವಣಿಗೆಯಲ್ಲಿ ಆಗಮಿಸಿದ ಇವರು ಮದುವೆಯ ಬ್ಯಾಂಡ್ ಸೆಟ್‌ಗೆ ಸಖತ್ ಆಗಿ ಡಾನ್ಸ್ ಮಾಡಿದ್ದಾರೆ. 

ಇತ್ತ  ಗಿಳಿ ಹಾಗೂ ಮದುವಣ ಗಿತ್ತಿ ಮೈನಾ ಳನ್ನು (Maina) ಸಣ್ಣದಾದ ನಾಲ್ಕು ಚಕ್ರದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆದುಕೊಂಡು ಹೋದ ಘಟನೆಯೂ ನಡೆಯಿತು. ಇದನ್ನು ನೋಡಲು ಸುತ್ತ ಮುತ್ತಲ ಜನ ರಸ್ತೆಯ ಅತ್ತಿತ್ತ ನಿಂತು ವೀಕ್ಷಿಸಿದ್ದಾರೆ. ಈ ಎಲ್ಲಾ ಕಾರ್ಯಕ್ರಮವೂ ರಾಮಸ್ವರೂಪ್ ಅವರ ಮನೆಯಲ್ಲಿ ನಡದಿದ್ದು, ಈ ವಿಶಿಷ್ಟ ಮದುವೆ ಜನರ ಬಾಯಲ್ಲಿ ಚರ್ಚೆಯ ವಿಚಾರವಾಗಿದೆಯಂತೆ..!

ನಿನಗೆ ನಾನು ನನಗೆ ನೀನು : ಮೂರಡಿ ಯುವಕನ ಮದ್ವೆ ಆದ 2.8 ಅಡಿಯ ಯುವತಿ

click me!