ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭೂಕಂಪಕ್ಕೆ ಸಾವಿನ ಸಂಖ್ಯೆ 9,500 ದಾಟಿದೆ. ಈ ಅತೀ ದೊಡ್ಡ ಪ್ರಾಕೃತಿಕ ವಿಕೋಪದಲ್ಲಿ ಬೆಂಗಳೂರಿನ ಉದ್ಯಮಿಯೊಬ್ಬರು ನಾಪತ್ತೆಯಾಗಿದ್ದಾರೆ. ಇಷ್ಟೇ ಅಲ್ಲ 10ಕ್ಕೂ ಹೆಚ್ಚು ಭಾರತೀಯರು ಸಿಲುಕಿಕೊಂಡಿದ್ದಾರೆ.
ನವದೆಹಲಿ(ಫೆ.08): ಟರ್ಕಿ ಹಾಗೂ ಸಿರಿಯಾದಲ್ಲಿನ ಭೂಕಂಪದ ದೃಶ್ಯಗಳು ಮನಕಲುಕುವಂತಿದೆ. ಪೋಷಕರನ್ನು ಕಳೆದುಕೊಂಡಿರುವ ಪುಟ್ಟ ಬಾಲಕಿ ನನ್ನ ಅಮ್ಮ ಎಲ್ಲಿ ಎಂದು ಕೇಳುತ್ತಿರುವ ಪ್ರಶ್ನೆ ಉತ್ತರಿಸಲು ಸಾಧ್ಯವಾಗದ ಪರಿಸ್ಥಿತಿ. ಭೂಕಂಪಕ್ಕೆ ಕೆಲವೇ ಕ್ಷಣಗಳ ಮೊದಲು ಜನಿಸಿದ ಪುಟ್ಟ ಮಗು ಸೇರಿದಂತೆ ಹಲವು ಮಾಹಿತಿಗಳು ಎಲ್ಲರ ಮನಸ್ಸಿಗೆ ತೀವ್ರ ನೋವುಂಟು ಮಾಡುತ್ತಿದೆ. ಈಗಾಗಲೇ ಭೂಕಂಪದಲ್ಲಿ ಸಾವಿನ ಸಂಖ್ಯೆ 9,500ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 20 ಸಾವಿರಕ್ಕೂ ಹೆಚ್ಚು ಅನ್ನೋ ಲೆಕ್ಕಾಚಾರಗಳು ಕೇಳಿಬರುತ್ತಿದೆ. ಇದರ ನಡುವೆ ಇದೇ ಟರ್ಕಿ ಬೂಕಂಪದಲ್ಲಿ ಬೆಂಗಳೂರಿನ ಉದ್ಯಮಿಯೊಬ್ಬರು ನಾಪತ್ತೆಯಾಗಿದ್ದಾರೆ. ಇವರ ಕುರಿತು ಯಾವುದೇ ಸುಳಿವು ಸಿಗುತ್ತಿಲ್ಲ. ಇನ್ನೂ ಭೂಕಂಪದಿಂದ ಹಲವೆಡೆ ಸಿಲುಕಿರುವ 10ಕ್ಕೂ ಹೆಚ್ಚು ಭಾರತೀಯರ ರಕ್ಷಣಾ ಕಾರ್ಯ ನಡೆಯುತ್ತಿದೆ. ಸದ್ಯ 10 ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ಸಂಜಯ್ ವರ್ಮಾ ಹೇಳಿದ್ದಾರೆ.
ಟರ್ಕಿ ಹಾಗೂ ಸಿರಿಯಾದಲ್ಲಿನ ರಕ್ಷಣಾ ಕಾರ್ಯದಲ್ಲಿ 9,500 ಮೃತದೇದಹಳನ್ನು ಹೊರಕ್ಕೆ ತೆಗೆಯಲಾಗಿದೆ. ಈ ಸಂಖ್ಯೆ 20,000ಕ್ಕೂ ಅಧಿಕವಾಗಲಿದೆ ಎಂದು ವಿಶ್ವ ಸಂಸ್ಥೆ ವರದಿ ನೀಡಿದೆ. ಹೀಗಾಗಿ ಟರ್ಕಿಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಸಿಲುಕಿರುವ ಭಾರತೀಯರ ಕುರಿತು ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಆದರೆ ಭಾರತೀಯ ಕುಟುಂಬಗಳ ಜೊತೆ ಸರ್ಕಾರ ಸಂಪರ್ಕದಲ್ಲಿದೆ. ಇತ್ತ ಕರ್ನಾಟಕ ಸರ್ಕಾರ ಕೂಡ ಕನ್ನಡಿಗ ಕುಟುಂಬಗಳ ಜೊತೆ ಸಂಪರ್ಕದಲ್ಲಿದ್ದು, ಅಗತ್ಯ ನೆರವು ನೀಡಲು ಬದ್ಧ ಎಂದಿದೆ.
ಟರ್ಕಿಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಹೆಲ್ಪ್‌ಲೈನ್
ಟರ್ಕಿಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಸಹಾಯವಾಣಿ ಆರಂಭಿಸಲಾಗಿದೆ. ಟರ್ಕಿಯಲ್ಲಿ ಯಾವುದೇ ಕನ್ನಡಿಗರು ಸಂಕಷ್ಟದಲ್ಲಿ ಸಿಲುಕಿದ್ದಲ್ಲಿ ಅವರ ರಕ್ಷಣೆಗಾಗಿ 080-1070 ಅಥವಾ 080-22340676ಗೆ ಕರೆ ಮಾಡಬಹುದು ಎಂದು ಸರ್ಕಾರ ತಿಳಿಸಿದೆ.
ಭೂಕಂಪದಿಂದಾಗಿ ಉಂಟಾಗಿರುವ ಅನಾಹುತದಲ್ಲಿ ನೆರವು ಒದಗಿಸುವ ಸಲುವಾಗಿ 101 ಸಿಬ್ಬಂದಿ ಇರುವ ರಾಷ್ಟ್ರೀಯ ತುರ್ತು ನಿರ್ವಹಣಾ ತಂಡವನ್ನು (ಎನ್‌ಡಿಆರ್‌ಎಫ್) ಟರ್ಕಿಗೆ ರವಾನಿಸಲಾಗಿದೆ. ಇದರದಲ್ಲಿ 2 ಸಚ್‌ರ್ ಡಾಗ್‌ಗಳು, 4 ಚಕ್ರದ ವಾಹನಗಳು, ಸುತ್ತಿಗೆಗಳು, ಕತ್ತರಿಸುವ ಸಲಕರಣೆಗಳು, ಪ್ರಾಥಮಿಕ ಔಷಧಗಳು ಮತ್ತು ಸಂವಹನ ಸಾಧನಗಳನ್ನು ಕಳುಹಿಸಲಾಗಿದೆ. ಟರ್ಕಿಯಲ್ಲಿ ಈಗಾಗಲೇ ಭಾರತೀಯ ತಂಡ ಕಾರ್ಯಚರಣೆ ನಡೆಸುತ್ತಿದೆ. ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.
Indian teams have now reached Gaziantep and commenced search and rescue operations.
Wish them the very best in their efforts.
pic.twitter.com/SG9JCvQWuU
Turkey Syria Earthquake: 9500ರ ಗಡಿ ದಾಟಿದ ಸಾವಿನ ಸಂಖ್ಯೆ!
7 ತಾಸು ಅವಶೇಷದಡಿ ಸಿಲುಕಿದ್ದ 5 ವರ್ಷ ಬಾಲೆಯ ಧೈರ್ಯದ ಮಾತು
7 ತಾಸುಗಳ ಕಾಲ ನೆಲಸಮವಾದ ಕಟ್ಟಡದ ಅಡಿ ಸಿಲುಕಿದ್ದ 5 ವರ್ಷದ ಹೆಣ್ಣು ಮಗುವೊಂದು ಧೈರ್ಯವಾಗಿ ‘ಅಪ್ಪಾ ನಾನು ಹುಶಾರಾಗಿದ್ದೀನಿ’ ಎಂದು ಹೇಳಿದ ಘಟನೆ ಟರ್ಕಿಯ ಕಹ್ರಮನ್ಮರಸ್‌ನಲ್ಲಿ ನಡೆದಿದೆ. ಅಯ್ಸೆ ಕುಬ್ರಾ ಗುನೆಸ್ ಎಂಬ ಮಗು ಹಾಗೂ ಕುಟುಂಬ ವಾಸಿಸುತ್ತಿದ್ದ 6 ಅಂತಸ್ತಿನ ಕಟ್ಟಡವು ಭೂಕಂಪದ ತೀವ್ರತೆಗೆ ನೆಲಸಮವಾಗಿತ್ತು. ಹೀಗಾಗಿ 7 ತಾಸುಗಳ ಕಾಲ ಚಲಿಸಲಾಗದೆ ಮಗು ಅವಶೇಷದಡಿ ಸಿಲುಕಿತ್ತು. ಈ ವೇಳೆ ಆಕೆಯ ತಂದೆ ಆಕೆಯ ನೋಡಿ ನೋವಿನಿಂದ ಅಳುತ್ತಿದ್ದ ವೇಳೆ, ಅಪ್ಪಾ ನಾನು ಫೈನ್ ಎಂದು ತಂದೆಗೆ ಧೈರ್ಯ ಹೇಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಆಕೆಯ ಕುಟುಂಬ ಸದಸ್ಯರನ್ನು ಬೇಗ ರಕ್ಷಣೆ ಮಾಡಲಾಗಿತ್ತಾದರೂ, ಆಯ್ಸೆಯನ್ನು ಸುಮಾರು 7 ತಾಸು ಕಾರ್ಯಾಚರಣೆ ಬಳಿಕ ರಕ್ಷಿಸಲಾಗಿದೆ.