ಚಲಿಸುವ ಬೈಕ್‌ನಲ್ಲಿ ಪ್ರೇಮಿಗಳ ರೋಮ್ಯಾನ್ಸ್: ವಿಡಿಯೋ ವೈರಲ್

Published : Feb 08, 2023, 07:49 PM IST
ಚಲಿಸುವ ಬೈಕ್‌ನಲ್ಲಿ ಪ್ರೇಮಿಗಳ ರೋಮ್ಯಾನ್ಸ್:  ವಿಡಿಯೋ ವೈರಲ್

ಸಾರಾಂಶ

ರಾಜಸ್ಥಾನದ ಅಜ್ಮೀರ್‌ನಲ್ಲಿ ಚಲಿಸುವ ಬೈಕ್ ಮೇಲೆ ಪ್ರೇಮಿಗಳು ರೋಮ್ಯಾನ್ಸ್ ಮಾಡಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ಅಜ್ಮೀರ್: ರಾಜಸ್ಥಾನದ ಅಜ್ಮೀರ್‌ನಲ್ಲಿ ಚಲಿಸುವ ಬೈಕ್ ಮೇಲೆ ಪ್ರೇಮಿಗಳು ರೋಮ್ಯಾನ್ಸ್ ಮಾಡಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ವಿಡಿಯೋದಲ್ಲಿ ಕಾಣಿಸುವಂತೆ ಹುಡುಗಿಯನ್ನು ತನಗೆ ಎದುರಾಗಿ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿಕೊಂಡ ಬೈಕ್ ಸವಾರ  ವಾಹನ ಸಂದಣಿ ಇರುವ ರಸ್ತೆಯಲ್ಲಿ ಬೈಕ್ ಚಲಾಯಿಸುತ್ತಿದ್ದಾನೆ.  ಇದನ್ನು ಆ ರಸ್ತೆಯಲ್ಲೇ ಬೈಕ್ ಹಿಂದೆ ಸಾಗುತ್ತಿದ್ದ ಇತರ ವಾಹನ ಸವಾರರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಇದು ಈಗ ಟ್ವಿಟ್ಟರ್‌ನಲ್ಲಿ ಪೋಸ್ಟ್ ಆಗಿದ್ದು, ಪ್ರೇಮಿಗಳ ಅಸಭ್ಯ ವರ್ತನೆಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಘಟನೆಗೆ ಸಂಬಂಧಿಸಿದಂತೆ ಅಜ್ಮೀರ್‌ನ ಕ್ರಿಶ್ಚಿಯನ್ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗಂತ ಈ ಪ್ರಕರಣ ಹೊಸದೇನಲ್ಲ. ಈ ಹಿಂದೆ ಉತ್ತರಪ್ರದೇಶದ ಲಕ್ನೋ ಹಾಗೂ ನೆರೆಯ ರಾಜ್ಯ ತೆಲಂಗಾಣದಲ್ಲೂ ಇಂತಹ ಚಲಿಸುವ ಬೈಕ್ ಮೇಲೆ ಪ್ರೇಮಿಗಳ ರೋಮ್ಯಾನ್ಸ್ ಪ್ರಕರಣಗಳು ನಡೆದಿದ್ದವು. 

ಪ್ರೀತಿಯನ್ನು ವ್ಯಕ್ತಪಡಿಸಬೇಕು ನಿಜ ಆದರೆ ತಮ್ಮ ಜೀವವನ್ನು ಅಪಾಯಕ್ಕೊಡ್ಡಿ ಅದು ಸಾರ್ವಜನಿಕ ಸ್ಥಳದಲ್ಲಿ ಈ ರೀತಿಯ ಸಾಹಸ ಬೇಕಾ ಎಂಬುದ್ನು ಯುವ ಸಮೂಹ ಯೋಚಿಸಬೇಕಾಗಿದೆ.  ಇನ್ನು ಹೀಗೆ ಚಲಿಸುವ ಬೈಕ್ ಮೇಲೆ ಸರಸವಾಡುತ್ತಿದ್ದ ಈ ಜೋಡಿ ಪ್ರಾದೇಶಿಕ ಕಾಲೇಜು ಕ್ರಾಸ್‌ರೋಡ್‌ನಿಂದ ನೌಸರ್ ಕಣಿವೆಗೆ ( Nausar Valley) ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಚಲಿಸುವ ಸ್ಕೂಟಿ ಮೇಲೆ ಪ್ರೇಮಿಗಳ ರೊಮ್ಯಾನ್ಸ್, ಹುಡುಕಾಟ ಆರಂಭಿಸಿದ ಪೊಲೀಸ್‌!

ಆದರೆ ಈ ವಿಡಿಯೋ ಆನ್‌ಲೈನ್‌ನಲ್ಲಿ ಪೋಸ್ಟ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಅಜ್ಮೀರ್‌ನ ಕ್ರಿಶ್ಚಿಯನ್ ಗಂಜ್ (Christian Ganj) ಪೊಲೀಸರು ಈ ಜೋಡಿ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 (ಜೀವಕ್ಕೆ ಅಪಾಯ) ಸೆಕ್ಷನ್ 279 (ನಿರ್ಲಕ್ಷ್ಯದ ಕೃತ್ಯ) ಸೆಕ್ಷನ್ 294 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕೃತ್ಯ) ಈ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿದ್ದಾರೆ.  ಅಲ್ಲದೇ ಈ ಬಗ್ಗೆ ತನಿಖೆಗಿಳಿದ ಪೊಲೀಸರು,  ಹೀಗೆ ಹುಡುಗಿಯನ್ನು ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿಕೊಂಡು ಬೈಕ್ ಚಲಾಯಿಸುತ್ತಿದ್ದ ಮಹಾನ್ ಪ್ರೇಮಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈತನನ್ನು ಫೇ ಸಾಗರ್‌ (Fay sagar) ರಸ್ತೆಯ ನಿವಾಸಿ ಸಾಹಿಲ್ ಎಂದು ಗುರುತಿಸಲಾಗಿದೆ. 

ಚಲಿಸುವ ಬೈಕ್ ಮೇಲೆ ರೊಮ್ಯಾನ್ಸ್ ಮಾಡಿ ವೈರಲ್ ಆದ ಜೋಡಿಯ ಬಂಧನ

 ಇತ್ತೀಚೆಗೆ ಚಲಿಸುವ ಬೈಕ್ ಮೇಲೆ ಪ್ರೇಮಿಗಳು ಸರಸವಾಡುವ ಪ್ರಕರಣಗಳು ಆಗಾಗ ಬೆಳಕಿಗೆ ಬಂದಿವೆ.  ದಂಡ ಕಟ್ಟಿ ಶಿಕ್ಷೆಗೆ ಗುರಿಯಾದರೂ ಈ ಪ್ರಕರಣಗಳನ್ನು ಇತರ ಪ್ರೇಮಿಗಳು ಪಾಠವಾಗಿ ತೆಗೆದುಕೊಳ್ಳುವ ಬದಲು ಥ್ರಿಲ್ ಅಗಿ ತೆಗೆದುಕೊಳ್ಳಲು ಶುರು ಮಾಡಿದ್ದಾರೋ  ಹೇಗೆ ಎಂಬ ಚಿಂತೆ ಪೊಲೀಸರಿಗೆ ಶುರುವಾಗಿದೆ. ಇದಕ್ಕೆ ಕಾರಣ ಇಂತಹದ್ದೇ ಪ್ರಕರಣ ಮತ್ತೆ ಮತ್ತೆ ಮರುಕಳಿಸುತ್ತಿರುವುದು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು