ರೋಗಿಯ ಹೊರಗೆಸೆದು ಆತನ ಪತ್ನಿ ಮೇಲೆ ಅತ್ಯಾಚಾರವೆಸಗಿದ ಆಂಬುಲೆನ್ಸ್‌ ಚಾಲಕ: ರೋಗಿ ಸಾವು

By Anusha Kb  |  First Published Sep 5, 2024, 3:13 PM IST

ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್‌ನಲ್ಲೇ ಚಾಲಕ ಹಾಗೂ ಆತನ ಸಹಾಯಕ ರೋಗಿಯ ಪತ್ನಿಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರವೆಸಗಿದ ಘಟನೆ  ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದಿದೆ.


ಲಕ್ನೋ: ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್‌ನಲ್ಲೇ ಚಾಲಕ ಹಾಗೂ ಆತನ ಸಹಾಯಕ ರೋಗಿಯ ಪತ್ನಿಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರವೆಸಗಿದ ಘಟನೆ  ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದಿದೆ. ಅಲ್ಲದ್ದೇ ಈ ವೇಳೆ ತಡೆಯಲು ಬಂದ ಪತಿಯನ್ನು ಈ ದುಷ್ಕರ್ಮಿಗಳು ಆಂಬುಲೆನ್ಸ್‌ನಿಂದ ಹೊರಕೆಸೆದಿದ್ದು, ಪರಿಣಾಮ ಆತನಿಗೆ ಗಂಭೀರ ಗಾಯಗಳಾಗಿ ಆತ  ಸಾವನ್ನಪ್ಪಿದ್ದಾನೆ. ಲಕ್ನೋದ ಗಾಜಿಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು,ತಡವಾಗಿ ಬೆಳಕಿಗೆ ಬಂದಿದೆ. 

ರೋಗಿಯನ್ನು ಆಂಬುಲೆನ್ಸ್‌ನಲ್ಲಿ ಸಿದ್ಧಾರ್ಥನಗರ ಜಿಲ್ಲೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಆಂಬುಲೆನ್ಸ್‌ನಲ್ಲಿ ರೋಗಿಯ ಪತ್ನಿ ಹಾಗೂ ಆಕೆಯ ಸಹೋದರನೂ ಇದ್ದರು. ಆದರೆ ಘಟನೆ ನಡೆಯುವ ವೇಳೆ ಆತನನ್ನು ಆಂಬುಲೆನ್ಸ್‌ನ ಹಿಂದಿನ ಕ್ಯಾಬಿನ್‌ನಲ್ಲಿ ಬಂಧಿಸಿದ ಚಾಲಕ ಹಾಗೂ ಆತನ ಸಹಾಯಕ ಮಹಿಳೆಗೆ ಲೈಂಗಿಕ ಕಿರುಕುಳವೆಸಗಲು ಮುಂದಾಗಿದ್ದಾರೆ. ಈ ವೇಳೆ ತಡೆಯಲು ಬಂದ ಅನಾರೋಗ್ಯಪೀಡಿತ ಪತಿಯನ್ನು ಎತ್ತಿ ಆಂಬುಲೆನ್ಸ್‌ನಿಂದ ಹೊರಗೆಸೆದಿದ್ದಾರೆ. ಪರಿಣಾಮ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರು ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದು ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಲಕ್ನೋದಿಂದ ಸಿದ್ಧಾರ್ಥ್‌ನಗರ ಜಿಲ್ಲೆಗೆ ಹೋಗುತ್ತಿದ್ದ ವೇಳೆ ಬಸ್ತಿ ಜಿಲ್ಲೆಯಲ್ಲಿ ಆಂಬುಲೆನ್ಸ್ ಚಾಲಕ ಹಾಗೂ ಆತನ ಸಹಾಯಕ ಈ ಕೃತ್ಯವೆಸಗಿದ್ದಾರೆ.

Tap to resize

Latest Videos

ಪೋಕ್ಸೋ ಕಾಯ್ದೆಗೂ, ದೇಶದಲ್ಲಿ ಸದ್ದು ಮಾಡುತ್ತಿರುವ ಅತ್ಯಾಚಾರ ವಿರೋಧಿ ಕಾನೂನಿಗಿರುವ ವ್ಯತ್ಯಾಸಗಳೇನು?

ಇವರ ವಿರುದ್ಧ ಉದ್ದೇಶಪೂರಿತ ಹತ್ಯೆ ಪ್ರಕರಣ ದಾಖಲಿಸಲಾಗಿದೆ. ಇವರಿಬ್ಬರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸಹಾಯಕ ಡಿಸಿಪಿ ಜಿತೇಂದ್ರ ದುಬೆ ಹೇಳಿದ್ದಾರೆ. ಪೊಲೀಸರ ಪ್ರಕಾರ, ಈ ದಂಪತಿ ಸಿದ್ಧಾರ್ಥನಗರ ಜಿಲ್ಲೆಯವರಾಗಿದ್ದು, ಪತಿಗೆ ನರ ಸಂಬಂಧಿ ಚಿಕಿತ್ಸೆಗಾಗಿ (neuro care) ಲಕ್ನೋದ ಆಸ್ಪತ್ರೆಯೊಂದಕ್ಕೆ ಬಂದಿದ್ದರು.  ಆದರೆ ಆಸ್ಪತ್ರೆಯ ಅತೀ ದುಬಾರಿ ವೆಚ್ಚ ಕೇಳಿ ಇದನ್ನು ತಮ್ಮಿಂದ ಭರಿಸಲು ಸಾಧ್ಯವಿಲ್ಲವೆಂದು ಅರಿತು ಮತ್ತೆ ತಮ್ಮೂರಿಗೆ ಹೋಗಲು ಬಯಸಿದ್ದರು.ಅದರಂತೆ ಆಸ್ಪತ್ರೆಯ ವೈದ್ಯರೊಬ್ಬರು ಮಹಿಳೆ ಹಾಗೂ ಆಕೆಯ ಸೋದರನಿಗೆ ಆಂಬುಲೆನ್ಸ್ ಚಾಲಕನ ನಂಬರ್ ನೀಡಿದ್ದರು. ಈ ನಂಬರ್‌ಗೆ ಕರೆ ಮಾಡಿದ ದಂಪತಿ ಬಳಿಕ ಆ ಆಂಬುಲೆನ್ಸ್‌ನಲ್ಲಿ ತಮ್ಮೂರಿಗೆ ಹೊರಟಿದ್ದರು ಎಂದು ಪೊಲೀಸರು ಹೇಳಿದ್ದಾರೆ. 

ನನ್ನ ಸೋದರನಿದ್ದರೂ ಆತನನ್ನು ಪತಿಯ ಜೊತೆ ಹಿಂದೆ ಕೂರುವಂತೆ ಹೇಳಿ ನನ್ನನ್ನು ಒತ್ತಾಯಪೂರ್ವಕವಾಗಿ ಆಂಬುಲೆನ್ಸ್‌ನ ಮುಂಭಾಗದ ಸೀಟಿನಲ್ಲಿ ಕೂರಿಸಿದರು.  ದಾರಿಮಧ್ಯೆ ಚಾಲಕ ಹಾಗೂ ಆತನ ಸಹಾಯಕ ನನ್ನನ್ನು ಅಸಭ್ಯವಾಗಿ ಮುಟ್ಟಲು ಆರಂಭಿಸಿದರು. ಆದರೆ ಇದಕ್ಕೆ ನಾನು ವಿರೋಧ ವ್ಯಕ್ತಪಡಿಸಿದೆ. ಆದರೆ ಅವರು ನನ್ನ ಮಾತು ಕೇಳಲಿಲ್ಲ. ಆಂಬುಲೆನ್ಸ್‌ನ ಗ್ಲಾಸ್‌ಗಳು ಫುಲ್ ಬಂದ್ ಆಗಿದ್ದರಿಂದ ನಾನು ಕೂಗಿಕೊಂಡರು ಹೊರಗೆ ಧ್ವನಿ ಕೇಳಿಸಲಿಲ್ಲ ಎಂದು ಮಹಿಳೆ ತಮಗಾದ ಕೆಟ್ಟ ಅನುಭವವನ್ನು ಹೇಳಿಕೊಂಡಿದ್ದಾರೆ. 

'ಲಿವ್ ಇನ್ ರಿಲೇಷನ್‌ ಶಿಪ್ ಅಗ್ರಿಮೆಂಟ್'ತೋರಿಸಿ ರೇಪ್ ಕೇಸ್‌ನಲ್ಲಿ ಬೇಲ್ ಪಡೆದ ವ್ಯಕ್ತಿ

ಈ ವೇಳೆ ನನ್ನ ಪತಿ ಹಾಗೂ ಸೋದರನಿಗೆ ನಾನು ತೊಂದರೆಯಲ್ಲಿರುವುದು ಗೊತ್ತಾಗಿದ್ದು, ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಕುಪಿತಗೊಂಡ ಆಂಬುಲೆನ್ಸ್ ಚಾಲಕ ಹಾಗೂ ಆತನ ಸಹಾಯಕ ನನ್ನ ಪತಿಗೆ ಅಳವಡಿಸಿದ ಆಂಬುಲೆನ್ಸ್ ಸಿಲಿಂಡರ್ ಹಾಗೂ ಮಾಸ್ಕ್‌ನ್ನು ಕಿತ್ತು ಹಾಕಿ ಆತನನ್ನು ಆಂಬುಲೆನ್ಸ್‌ನಿಂದ ಹೊರಗೆಸೆದರು. ನನ್ನ ಸೋದರನ ಮೇಲೆಯೂ ಹಲ್ಲೆ ನಡೆಸಿದರು. ನಂತರ ನನ್ನ ಬಳಿ ಪರ್ಸ್‌ನಲ್ಲಿದ್ದ 10 ಸಾವಿರ ರೂಪಾಯಿ ಹಣ ನನ್ನ ಮೈಮೇಲಿದ್ದ ಆಭರಣ ಹಾಗೂ ಆಸ್ಪತ್ರೆಯ ವೈದ್ಯಕೀಯ ರಿಪೋರ್ಟ್‌ಗಳನ್ನು ಕಸಿದುಕೊಂಡು ಪರಾರಿಯಾದರು. ಆಗಸ್ಟ್ 29ರ ರಾತ್ರಿ ಈ ಘಟನೆ ನಡೆದಿದ್ದು, ಬಳಿಕ ಗೋರಕ್‌ಪುರದ ಆಸ್ಪತ್ರೆಗೆ ಪತಿಯನ್ನು ದಾಖಲಿಸಲಾಯ್ತು ಆದರೆ. ಆಗಸ್ಟ್ 30ರಂದು ಅವರು ಸಾವನ್ನಪ್ಪಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ.

click me!