ಮದುವೆ ಮಂಟಪದಲ್ಲೇ ವಧುವರರಿಗೆ ಸಾರಾಯಿ ಕುಡಿಸಿದ ಸ್ನೇಹಿತರು

Published : Apr 04, 2022, 12:48 PM IST
 ಮದುವೆ ಮಂಟಪದಲ್ಲೇ ವಧುವರರಿಗೆ ಸಾರಾಯಿ ಕುಡಿಸಿದ ಸ್ನೇಹಿತರು

ಸಾರಾಂಶ

ಮದುವೆ ಮನೆಯಲ್ಲಿ ಸ್ನೇಹಿತರ ಕಿತಾಪತಿಯ ವಿಡಿಯೋ ವೈರಲ್ ಜ್ಯೂಸ್‌ಗೆ ಮದ್ಯ ಮಿಕ್ಸ್ ಮಾಡಿ ವಧುವರರಿಗೆ ಕೊಟ್ಟ ಸ್ನೇಹಿತರು ಮದುವ ಮಂಟಪದಲ್ಲೇ ಸ್ನೇಹಿತರ ದುಸ್ಸಾಹಸ

ವರನ ಸ್ನೇಹಿತರು ವಧು ವರನಿಗೆ ಪಾನೀಯ ಕೊಡುವ ನೆಪದಲ್ಲಿ ರಹಸ್ಯವಾಗಿ ಎಣ್ಣೆ ಕುಡಿಸಿದ್ದು, ಇದರ ವಿಡಿಯೋ (video) ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಮದುವೆ ಅಂದರೆ ಅಲ್ಲಿ ವಧು (Groom) ವರರ (Bride) ಸ್ನೇಹಿತರ (Friends) ಕಿತಾಪತಿಗೆ ಲೆಕ್ಕವೇ ಇರುವುದಿಲ್ಲ. ಹೇಳಿ ಕೇಳಿ ಭಾರತದ ಮದುವೆಯಲ್ಲಿ ಮದುವೆ ಗಂಡು ಅಥವಾ ಹೆಣ್ಣಿನ ಸಂಭ್ರಮಕ್ಕಿಂತ ಸ್ನೇಹಿತು ಬಂಧುಗಳ ಸಂಭ್ರಮವೇ ಹೆಚ್ಚು. ಬಂಧುಗಳು ಊರವರು ಮದುವೆಗೆ ಸೊಗಸಾದ ಭೋಜನ (Food) ಸವಿಯಲು ಬಂದರೆ, ಸ್ನೇಹಿತರು ಎಲ್ಲರ ಜೊತೆ ಎಂಜಾಯ್ ಮಾಡಲು ಮದುವೆಗೆ ಆಗಮಿಸುತ್ತಾರೆ. ಅಲ್ಲದೇ ವಧು ವರರಿಗೆ ಏನಾದರೊಂದು ಕೀಟಲೆಗಳನ್ನು ಮಾಡುತ್ತ ಮಜಾ ತೆಗೆದುಕೊಳ್ಳುತ್ತಾರೆ. ಹಾಗೆಯೇ ಇಲ್ಲಿ ಮದುವೆಯೊಂದರಲ್ಲಿ ವರನ ಸ್ನೇಹಿತರು ವಧು ಹಾಗೂ ವರನಿಗೆ ಜ್ಯೂಸ್ ನೀಡುವ ನೆಪದಲ್ಲಿ ಸರಾಯಿ ಕುಡಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

ಭಾರತದಲ್ಲಿ ಕೋವಿಡ್ (covid) ನಿರ್ಬಂಧಗಳಿಂದಾಗಿ ಅನೇಕ ಮದುವೆಗಳು ಮುಂದೂಡಲ್ಪಟ್ಟಿದ್ದವು. ಪ್ರಸ್ತುತ ಇದು ಮದುವೆ (Wedding) ಸೀಸನ್ ಆಗಿದ್ದು, ಮದುವೆಯ ವೈರಲ್‌ ಆದ ಅನೇಕ ವಿಡಿಯೋಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಹಾಗೆಯೇ ಇಲ್ಲಿ ಸ್ನೇಹಿತರು ಮದುವೆಯಲ್ಲಿ ಮಾಡಿದ ಕಿತಾಪತಿ ವೈರಲ್ ಆಗಿದೆ. brides_special ಎಂಬ ಇನ್ಸ್ಟಾಗ್ರಾಮ್‌ ಖಾತೆಯಿಂದ ಈ ವಿಡಿಯೋ ಅಪ್‌ಲೋಡ್‌ ಆಗಿದೆ. ಇದನ್ನು ಈಗಾಗಲೇ ಸಾವಿರಾರು ಜನರು ವೀಕ್ಷಿಸಿದ್ದಾರೆ. ಈ ವಿಡಿಯೋದಲ್ಲಿ ಕಾಣಿಸುವಂತೆ ಯುವಕರಿಬ್ಬರು ಮದ್ಯದ (drinks) ಬಾಟಲಿಯಿಂದ ಸಿರೀಂಜ್‌ ಮೂಲಕ ಮಧ್ಯವನ್ನು ಹೊರ ತೆಗೆದು ಅದನ್ನು ಜ್ಯೂಸ್‌ ಇರುವ ಪಾಕೆಟ್‌ಗೆ ಸಿರೀಂಜ್‌ ಮೂಲಕ ಇಂಜೆಕ್ಟ್‌ ಮಾಡುತ್ತಾರೆ. ಮಾವಿನ ರಸ ತುಂಬಿರುವ ರೆಡಿಮೇಡ್‌ ಜ್ಯೂಸ್ (Juice) ಪ್ಯಾಕೇಟ್‌ಗೆ ಇವರು ಮದ್ಯವನ್ನು ಸಿರೀಂಜ್ ಮೂಲಕ ತುಂಬಿಸುತ್ತಾರೆ.

 

ಅವರ ಕಿತಾಪತಿಯನ್ನು ಛಾಯಾಗ್ರಾಹಕ (Photographer) ಸೆರೆ ಹಿಡಿದಿದ್ದಾನೆ. ನಂತರ ವಧು ಹಾಗೂ ವರನನ್ನು ನಿಲ್ಲಿಸಿದ ವೇದಿಕೆಗೆ ತೆರಳುವ ಇವರು ಹೀಗೆ ಅಲ್ಕೋಹಾಲ್ ಮಿಕ್ಸ್ ಮಾಡಿದ ಜ್ಯೂಸ್‌ ಅನ್ನು ವೇದಿಕೆ ಮೇಲಿದ್ದ ವಧು ಹಾಗೂ ವರನಿಗೆ ನೀಡುತ್ತಾರೆ. ಮೊದಲಿಗೆ ವರನಿಗೆ ಜ್ಯೂಸ್ ನೀಡುತ್ತಾರೆ. ಎರಡು ಸಿಪ್‌ ಕುಡಿದ ಕೂಡಲೇ ಅವನಿಗೆ ಅದಕ್ಕೆ ಅಲ್ಕೋಹಾಲ್ ಮಿಕ್ಸ್‌ ಮಾಡಿರುವುದು ತಿಳಿಯುತ್ತದೆ. ಅವನು ಸ್ನೇಹಿತರ ಕಿತಾಪತಿ ತಿಳಿದು ನಗುತ್ತಾನೆ. ಕೂಡಲೇ ಸ್ನೇಹಿತರು ವಧುವಿಗೆ ಅದನ್ನು ನೀಡುತ್ತಾರೆ. ಆದರೆ ಆಕೆಗೆ ಅಲ್ಕೋಹಾಲ್ ಮಿಕ್ಸ್ ಆಗಿರುವುದು ತಿಳಿದಂತೆ ಕಾಣುವುದಿಲ್ಲ. ವಿಡಿಯೋದ ಕೊನೆಯಲ್ಲಿ ಸ್ನೇಹಿತ ಕ್ಯಾಮರಾದತ್ತ ಕಣ್ಣು ಮಿಟುಕಿಸುತ್ತಾನೆ.

ಮದುವೆ ನೆರವೇರಿಸಿಕೊಟ್ಟ ಮುಸ್ಲಿಂ ಮಹಿಳಾ ಧರ್ಮಗುರು : ವಿಡಿಯೋ ವೈರಲ್

ಈ ವಿಡಿಯೋದ ಹಿನ್ನೆಲೆಯಲ್ಲಿ ರಾಜೀವ್ ರಾಜಾ (Rajeev Raja) ಅವರ ಸ್ನೇಹಿತರ ಬಗೆಗಿನ ಗೀತೆ 'ತುಮ್ ಜೈಸೆ ಬೇವಾದೋಂ ಕಾ ಸಹಾರಾ ಹೈ ದೋಸ್ತೋ...ಯೇ ದಿಲ್ ತುಮ್ಹಾರೆ ಪ್ಯಾರ್ ಕಾ ಮಾರಾ ಹೈ ದೋಸ್ತೋ' ಎಂಬ ಹಾಡು ಕೇಳಿ ಬರುತ್ತಿದೆ. ಈ ಹಾಡು ಈ ವಿಡಿಯೋಗೆ ಸಖತ್ ಮ್ಯಾಚ್ ಆಗ್ತಿದೆ. ಒಟ್ಟಿನಲ್ಲಿ ಸ್ನೇಹಿತರ ಕಿತಾಪತಿಯಿಂದ ಮದುವೆ ದಿನವೇ ಮದ್ಯ ಕುಡಿದ ವಧುವರರು ವೇದಿಕೆಯಲ್ಲಿ ಬೀಳದೆ ಇದ್ದಿದ್ದು ಪುಣ್ಯ.

Wedding Trends: ಮದುವೆಯಲ್ಲಿ ಮದುಮಗಳು ನಗೋದು ತಪ್ಪಾ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ
ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್