ವ್ಯಕ್ತಿಯೊಬ್ಬ ತಾನು ಕೆಲಸ ಮಾಡುವ ಸ್ಥಳದ ಹೊರಗೆ ಮಲಗಿದ್ದ ವೇಳೆ ಚಿರತೆಯೊಂದು ಬಂದು ಆತನ ಸಾಕು ನಾಯಿಯನ್ನು ಹೊತ್ತೊಯ್ದಿದ್ದು, ಆತ ಜಸ್ಟ್ ಮಿಸ್ ಆಗಿದ್ದಾನೆ.
ಪುಣೆ: ಬೇಸಿಗೆಯ ಬಿರು ಬಿಸಿಲು ಅನೇಕ ಪ್ರದೇಶಗಳಲ್ಲಿ ತೀವ್ರವಾಗಿದ್ದು, ಸೆಖೆ ತಡೆಯಲಾಗದೇ ಜನ ಮನೆಯ ಮಹಡಿಗಳಲ್ಲಿ ಮನೆಯ ಹೊರಗೆ ಅಂಗಳದಲ್ಲಿ ಹೀಗೆ ರಾತ್ರಿಯ ಹೊತ್ತು ತಂಪು ಗಾಳಿ ಬೀಸುವ ಸ್ಥಳ ನೋಡಿ ಮಲಗುತ್ತಾರೆ. ಹೀಗೆ ಸೆಖೆ ತಡೆಯಲಾಗದೇ ಹೊರಗೆ ಮಲಗಿದ್ದವನೋರ್ವನಿಗೆ ಶಾಕ್ ಕಾದಿದೆ. ವ್ಯಕ್ತಿಯೊಬ್ಬ ತಾನು ಕೆಲಸ ಮಾಡುವ ಸ್ಥಳದ ಹೊರಗೆ ಮಲಗಿದ್ದ ವೇಳೆ ಚಿರತೆಯೊಂದು ಬಂದು ಆತನ ಸಾಕು ನಾಯಿಯನ್ನು ಹೊತ್ತೊಯ್ದಿದ್ದು, ಆತ ಜಸ್ಟ್ ಮಿಸ್ ಆಗಿದ್ದಾನೆ. ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದೆ. ಪುಣೆಯ ಅಲೆಫಟಾ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕಲ್ಯಾಣ ನಗರದಲ್ಲಿ ಈ ಘಟನೆ ನಡೆದಿದ್ದು, ಇದರ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿವೆ.
ಈ ವೀಡಿಯೋದಲ್ಲಿ ಕಾಣಿಸುವಂತೆ ಇದೊಂದು ಗ್ಯಾರೇಜ್‌ನಂತೆ ಕಾಣಿಸುತ್ತಿದ್ದು, ಬಹುಶಃ ಅಲ್ಲೇ ಕೆಲಸ ಮಾಡುವ ವ್ಯಕ್ತಿಯೋ ಏನೋ ತಿಳಿಯದು ಆತ ಸಾಲಾಗಿ ನಿಲ್ಲಿಸಿರುವ ಲಾರಿಗಳ ಮುಂದೆ ಬೆಂಚೊಂದನ್ನು ಜೋಡಿಸಿ ಅದರ ಮೇಲೆ ಮಲಗಿದ್ದಾನೆ. ಆತನ ಪಕ್ಕದಲ್ಲೇ ನಾಯೊಂದು ಕೆಳಗೆ ಮಲಗಿದೆ. ಮಧ್ಯರಾತ್ರಿ ವೇಳೆ ಇಲ್ಲಿಗೆ ಚಿರತೆಯೊಂದು ಬಂದಿದ್ದು, ಸ್ವಲ್ಪ ಕಾಲ ಸಂದರ್ಭವನ್ನು ಅವಲೋಕಿಸಿದ ಚಿರತೆ ಸ್ವಲ್ಪ ಮುಂದೆ ಬಂದು ನಾಯಿಯನ್ನು ಎಳೆದುಕೊಂಡು ಅಲ್ಲಿಂದ ಕ್ಷಣದಲ್ಲಿ ಮರೆಯಾಗಿದೆ. ಈ ವೇಳೆ ನಾಯಿ ಜೋರಾಗಿ ಬೊಬ್ಬೆ ಹಾಕಿದ್ದು, ಈ ಸದ್ದು ಕೇಳಿ ಎದ್ದ ಮಾಲೀಕನಿಗೆ ಏನಾಗುತ್ತಿದೆ ಎಂಬುದೇ ತಿಳಿಯದಾಗಿದೆ.
ರಾತ್ರೋರಾತ್ರಿ ಮನೆಗೆ ನುಗ್ಗಿದ ಚಿರತೆ: ಕಕ್ಕಾಬಿಕ್ಕಿಯಾದ ಮನೆಯ ನಿವಾಸಿಗಳು!
ನಿದ್ದೆ ಮಂಪರಿನಲ್ಲಿದ್ದ ಆತ ಸಂಪೂರ್ಣವಾಗಿ ವಾಸ್ತವಕ್ಕೆ ಬರುವ ವೇಳೆ ಚಿರತೆ ಆತನ ಶ್ವಾನವನ್ನು ಎತ್ತಿಕೊಂಡು ಮಾರು ದೂರ ತಲುಪಿಯಾಗಿದೆ. ಅದೃಷ್ಟವಶಾತ್ ಚಿರತೆ ನಾಯಿಯನ್ನು ಬಿಟ್ಟು ಆತನ ಮೇಲೆ ದಾಳಿ ಮಾಡದಿರುವುದು ಪುಣ್ಯ. ಈ ದೃಶ್ಯಾವಳಿ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ವೈರಲ್ ಆಗಿದ್ದು, ವೀಡಿಯೋ ನೋಡಿದ ಅನೇಕರು ದಿಗ್ಭ್ರಾಂತರಾಗಿದ್ದಾರೆ.
ಆಫ್ರಿಕಾದಿಂದ ತಂದಿದ್ದ ಮತ್ತೊಂದು ಚೀತಾ ಸಾವು: ತಿಂಗಳಲ್ಲೇ ಎರಡನೇ ಚೀತಾ ಸಾವಿನ ಕಹಿಸುದ್ದಿ
ಜೊತೆಯಾಗಿ ಸಾಗುತ್ತಿರುವ ಚಿರತೆ, ಬ್ಲಾಕ್ ಪಾಂಥೆರ್ : ಅಪರೂಪದ ವಿಡಿಯೋ ವೈರಲ್
ಕಪ್ಪು ಬಣ್ಣದ ಬ್ಲಾಕ್ ಪಾಂಥೆರ್ ಹಾಗೂ ಸಾಮಾನ್ಯವಾಗಿ ಕಂಡು ಬರುವ ಕಪ್ಪು ಚುಕ್ಕಿಗಳಿರುವ ಚಿರತೆಗಳು ಎರಡೂ ಜೊತೆಯಾಗಿ ಓಡಾಡುವ ದೃಶ್ಯವೊಂದು ವೈರಲ್ ಆಗಿದೆ.
ನೀವು ವನ್ಯಜೀವಿಗಳ ಬಗ್ಗೆ ಆಸಕ್ತಿ ಹೊಂದಿರುವವರಾದರೆ ಈ ವಿಡಿಯೋ ನಿಮಗೆ ಸಾಕಷ್ಟು ಇಷ್ಟವಾಗಬಹುದು. ಎರಡು ಪ್ರಾಣಿಗಳು ಜೊತೆಯಾಗಿ ಕಾಡಿನಲ್ಲಿ ಸ್ವಚ್ಛಂದವಾಗಿ ವಿಹಾರಿಸುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಅಂದಹಾಗೆ ಈ ಇವರೆಡು ಚಿರತೆ ಪ್ರಭೇದಗಳಿಗೆ ಸಯಾ ಹಾಗೂ ಕ್ಲಿಯೋ ಎಂಬ ಹೆಸರಿನಿಂದ ಗುರುತಿಸಲಾಗಿದೆ. ನಿಮ್ಮ ನೆರಳು ನಿಮ್ಮ ಬೆಸ್ಟ್ ಫ್ರೆಂಡ್, ವಿಶ್ವ ವನ್ಯಜೀವಿ ದಿನದ ಅಂಗವಾಗಿ ನಾನು ಇದುವರೆಗೆ ಸೆರೆ ಹಿಡಿದ ಅತ್ಯಂತ ವೈವಿಧ್ಯಮಯವೆನಿಸಿದ ದೃಶ್ಯ ಇದಾಗಿದೆ. ಜೊತೆಯಾಗಿ ಹೆಜ್ಜೆ ಹಾಕುತ್ತಿರುವ ಇವುಗಳು ಒಮ್ಮೆಗೆ ಕ್ಯಾಮರಾದತ್ತ ಗಂಭೀರ ದೃಷ್ಟಿ ಹರಿಸುವುದನ್ನು ನೋಡಿದರೆ ಒಂದು ಕ್ಷಣ ಮೈ ರೋಮಗಳೆಲ್ಲಾ ನವಿರೇಳುತ್ತವೆ ಎಂದು ಶಾಜ್ ಜುಂಗ್ (Shaaz Jung) ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, ಮೈ ರೋಮಾಂಚನವಾಗುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಮಧ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಅಪರೂಪದ ಕರಿ ಚಿರತೆ
ಮೃಗಾಲಯ, ರಾಷ್ಟ್ರೀಯ ಉದ್ಯಾನವನಗಳಲ್ಲಿ ಕಾಣಿಸಿಕೊಂಡ ಅಪರೂಪದ ಕಾಡು ಪ್ರಾಣಿಗಳ ಫೋಟೋ, ವಿಡಿಯೋಗಳನ್ನು ಜನರು ಸಫಾರಿಗೆ ಹೋದಾಗ ತೆಗೆಯುತ್ತಾರೆ. ಅಲ್ಲದೆ, ಅಪರೂಪಕ್ಕೆ ಕಾಣಸಿಗುವ ಪ್ರಾಣಿಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಶೇರ್ ಮಾಡಲಾಗುತ್ತದೆ. ಇದೇ ರೀತಿ ಇತ್ತೀಚೆಗೆ ಮಧ್ಯ ಪ್ರದೇಶದ ಪೆಂಚ್ ಹುಲಿ ಸಂರಕ್ಷಿತ ಪ್ರದೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.