ಕರ್ನಾಟಕದಲ್ಲಿ ಗೆದ್ದೆವು ಎಂದ ಮಾತ್ರಕ್ಕೆ ಇವಿಎಂ ಬಗೆಗಿನ ನಮ್ಮ ಪ್ರಶ್ನೆಗಳು ನಿಲ್ಲಲ್ಲ: ಕಾಂಗ್ರೆಸ್ ನಾಯಕ ಪವನ್ ಖೇರಾ

By Gowthami K  |  First Published May 17, 2023, 11:11 AM IST

ಕರ್ನಾಟಕ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸಿದ್ದರೂ  ಇವಿಎಂ  ಸಂಬಂಧಿಸಿದಂತೆ  ಕಾಂಗ್ರೆಸ್ ಪಕ್ಷದ ಪ್ರಶ್ನೆಗಳು ಮುಂದುವರಿದಿವೆ ಎಂದು ಕೈ ನಾಯಕ ಪವನ್ ಖೇರಾ ಹೇಳಿದ್ದಾರೆ.


ನವದೆಹಲಿ (ಮೇ.17): ಕರ್ನಾಟಕ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸಿದ್ದರೂ ವಿದ್ಯುನ್ಮಾನ ಮತಯಂತ್ರಗಳಿಗೆ (ಇವಿಎಂ) ಸಂಬಂಧಿಸಿದಂತೆ  ಕಾಂಗ್ರೆಸ್ ಪಕ್ಷದ ಪ್ರಶ್ನೆಗಳು ಮುಂದುವರಿದಿವೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಮಂಗಳವಾರ ಹೇಳಿದ್ದಾರೆ.  ಇವಿಎಂಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಕಳವಳಗಳು, ಫಲಿತಾಂಶಗಳೊಂದಿಗೆ ವಿವಿಪ್ಯಾಟ್‌ಗಳ ತಾಳೆ ಮಾಡುವುದು, ಕಳೆದುಹೋದ ಯಂತ್ರಗಳು ಮತ್ತು ದೋಷಯುಕ್ತ ಯಂತ್ರಗಳು ಮತ್ತು ಇತ್ತೀಚೆಗೆ ಬೆಳಕಿಗೆ ಬಂದ ದೋಷಯುಕ್ತ ಯಂತ್ರಗಳಲ್ಲಿ ಎಸ್‌ಒಪಿಗಳನ್ನು ಅನುಸರಿಸದಿರುವುದು ನಮ್ಮ ಪ್ರಶ್ನೆಯಲ್ಲಿ ಇದೆ. ನಾವು ಕರ್ನಾಟಕ ಮತ್ತು ಹಿಮಾಚಲವನ್ನು ಗೆದ್ದಿದ್ದೇವೆ ಎಂದ ಮಾತ್ರಕ್ಕೆ ಇವಿಎಂಗಳ ಮೇಲಿನ ನಮ್ಮ ಪ್ರಶ್ನೆಗಳು ನಿಲ್ಲುವುದಿಲ್ಲ ಎಂದು ಪವನ್ ಖೇರಾ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಕರ್ನಾಟಕದ ನೂತನ ಮುಖ್ಯಮಂತ್ರಿಯ ನೇಮಕದ ಬಗ್ಗೆ ಮಾತನಾಡಿರುವ ಪವನ್ ಖೇರಾ ಅವರು, ಇನ್ನೆರಡು ದಿನದಲ್ಲಿ ಈ ಬಗ್ಗೆ  ಗೊತ್ತಾಗಲಿದೆ. ಹೊಸದಾಗಿ ಆಯ್ಕೆಯಾದ ಕರ್ನಾಟಕದ ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ ಮತ್ತು ಕೇಂದ್ರದ ನಾಯಕರ ಅಭಿಪ್ರಾಯವನ್ನು ಕೂಡ ತೆಗೆದುಕೊಳ್ಳಲಾಗಿದೆ ಎಂದು ಖೇರಾ ಹೇಳಿದ್ದಾರೆ. ಪ್ರತಿ ರಾಜ್ಯದಲ್ಲೂ ವಿರೋಧ ಪಕ್ಷದ ನಾಯಕನ ಸ್ಥಾನ ಸಮಾನವಾಗಿ ಮಹತ್ವದ್ದಾಗಿದೆ ಎಂದ ಅವರು, ಕರ್ನಾಟಕದಲ್ಲಿ  ಬಿಜೆಪಿ ಯಾವಾಗ ವಿರೋಧ ಪಕ್ಷ ನಾಯಕನನ್ನು ನೇಮಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.

Tap to resize

Latest Videos

ಮುಖ್ಯಮಂತ್ರಿಯನ್ನು ನೇಮಿಸುವುದು ಸುಲಭದ ಮಾತಲ್ಲ. ಅದನ್ನು ದೆಹಲಿಯಿಂದ ಹೇರಲು ಸಾಧ್ಯವಿಲ್ಲ. ಎಲ್ಲರ ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ನಾವು ಪ್ರತಿ ನಾಯಕನ ಅಭಿಪ್ರಾಯ ಸಂಗ್ರಹಿಸಬೇಕು. ಬಳಿಕಮುಖ್ಯಮಂತ್ರಿ ಯಾರೆಂದು ನಿರ್ಧರಿಸಬೇಕು ಎಂದು ಖೇರಾ ಹೇಳಿದರು. 

ಕರ್ನಾಟಕದಲ್ಲಿ ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧದ ಬಗ್ಗೆ ಮಾತನಾಡಿರುವ ಅವರು, ಯಾವುದೇ ಸಂಘಟನೆಯು ದ್ವೇಷ ಹರಡುವುದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

2024ರ ಸಂಸತ್ ಚುನಾವಣೆಗೆ ತೆಲಂಗಾಣದಲ್ಲಿ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿಯೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳನ್ನು 'ಮುಖಾಮುಖಿ'ಯಾಗಿ ಎದುರಿಸಿ ಸೋಲಿಸುವ ರಾಜ್ಯಗಳಲ್ಲಿ ತೆಲಂಗಾಣವೂ ಒಂದು. ಅದೇ ರೀತಿ, ಪಂಜಾಬ್‌ನಲ್ಲಿ ಎಎಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕಾಂಗ್ರೆಸ್ ಯೋಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜಸ್ಥಾನದಲ್ಲಿ ಭಿನ್ನಮತೀಯ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರ ಯಾತ್ರೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಖೇರಾ, ಆ ರಾಜ್ಯದ ಪಕ್ಷದ ನಾಯಕರ ಅಭಿಪ್ರಾಯಗಳನ್ನು ರಾಜಸ್ಥಾನ ಉಸ್ತುವಾರಿ ಪಡೆದಿದ್ದು, ಅವರ ವರದಿಯ ಮೇರೆಗೆ ಪಕ್ಷವು ಕಾರ್ಯನಿರ್ವಹಿಸುತ್ತದೆ ಎಂದರು.

ಸಮ್ಮಿಶ್ರ ಸರ್ಕಾರದ ಪತನದಲ್ಲಿ ಸಿದ್ದರಾಮಯ್ಯ ಪಾತ್ರ ನಿರಾಕರಿಸಲು ಸಾಧ್ಯವೇ?

ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪಕ್ಷದಲ್ಲಿ ಒಬ್ಬರಿಗಿಂತ ಹೆಚ್ಚು ಸಮರ್ಥ ನಾಯಕರಿದ್ದು, ಒಬ್ಬನೇ ನಾಯಕ ಮುಖ್ಯಮಂತ್ರಿಯಾಗುತ್ತಾರೆ ಎಂದರು. ಇತರ ನಾಯಕರಿಗೂ ಭರವಸೆ ಮತ್ತು ಮಹತ್ವಾಕಾಂಕ್ಷೆಗಳಿವೆ ಎಂದು ಹೇಳಿದರು.

ಕರ್ನಾಟಕದ ನೂತನ ಸಿಎಂ ಆಯ್ಕೆ: ಖರ್ಗೆ ಸಭೆಯತ್ತ ಎಲ್ಲರ ಚಿತ್ತ..!

ಪಕ್ಷಕ್ಕೆ ಯಾಂತ್ರಿಕ ವ್ಯವಸ್ಥೆ ಇದೆ. ಪ್ರತಿ ಪಕ್ಷವೂ ಹೊಂದಿರುತ್ತದೆ ಮತ್ತು ನಮ್ಮ ಪಕ್ಷವೂ ಹೊಂದಿದೆ.  ರಾಜಸ್ತಾನದಲ್ಲಿ ನಮ್ಮ ಉಸ್ತುವಾರಿ ಇದೆ. ಅಲ್ಲಿ ಸುಖಜಿಂದರ್ ರಾಂಧವ ನಮ್ಮ ಉಸ್ತುವಾರಿಯಾಗಿದ್ದಾರೆ. ಎಲ್ಲರೊಂದಿಗೆ ಮಾತನಾಡಿದ ನಂತರ ಅವರು ನೀಡುವ ವರದಿಯ ಪ್ರಕಾರ ನಾವು ಕಾರ್ಯನಿರ್ವಹಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ಹೇಳಿದರು. 

click me!