ಹೊಸ ವರ್ಷಕ್ಕೆ ಕಿಚ್ಚನ ಗುಡ್ ನ್ಯೂಸ್, ಬಜೆಟ್‌ಗೆ ಮುಹೂರ್ತ ಫಿಕ್ಸ್; ಡಿ.30ರ ಟಾಪ್ 10 ಸುದ್ದಿ!

By Suvarna News  |  First Published Dec 30, 2019, 5:25 PM IST

ಹೊಸ ವರ್ಷ ಆಚರಣೆಗೆ ಹಲವರ ಪ್ಲಾನ್ ರೆಡಿಯಾಗಿದೆ. ಕೌಂಟ್‌ಡೌನ್ ಕೂಡ ಶುರುವಾಗಿದೆ. ಆದರೆ ಕೆಲ ಪ್ರಮುಖ ತಾಣಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಇನ್ನು ಹೊಸ ವರ್ಷದಲ್ಲಿ ಕಂಠಪೂರ್ತಿ ಕುಡಿಯುವವರನ್ನು ಬಾರ್ ಮಾಲೀಕರೇ ಮನೆ ತಲುಪಿಸಬೇಕು ಅನ್ನೋ ನಿಯಮವೂ ಜಾರಿಯಾಗಿದೆ. ಹೊಸ ವರ್ಷದಲ್ಲಿ ಕಿಚ್ಚ ಸುದೀಪ್ ನೀಡುತ್ತಿದ್ದಾರೆ ಗುಡ್ ನ್ಯೂಸ್, ಯಡಿಯೂರಪ್ಪ ಬಜೆಟ್‌ಗೆ ದಿನಾಂಕ ಫಿಕ್ಸ್ ಸೇರಿದಂತೆ ಡಿಸೆಂಬರ್ 31ರ ಟಾಪ್ 10 ಸುದ್ದಿ ಇಲ್ಲಿವೆ.


BSY ಸರ್ಕಾರದ ಪ್ರಸಕ್ತ ಅವಧಿಯ ಚೊಚ್ಚಲ ಬಜೆಟ್‌ಗೆ ಮುಹೂರ್ತ ಫಿಕ್ಸ್

Tap to resize

Latest Videos

ಬಿಜೆಪಿ ಸರ್ಕಾರದ ಪ್ರಸಕ್ತ ಅವಧಿಯ ಚೊಚ್ಚಲ ಬಜೆಟ್‌ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್ ಆಗಿದೆ.ಇಂದು (ಸೋಮವಾರ) ನಡೆದ ಸಚಿವ ಸಂಪುಟದಲ್ಲಿ ಈ ಬಗ್ಗೆ ಅಂತಿಮ ನಿರ್ಧಾರವಾಗಿದೆ. 

2020 ಹೊಸ ವರ್ಷಕ್ಕೆ ನಂದಿ ಬೆಟ್ಟಕ್ಕಿಲ್ಲ ಪ್ರವೇಶ

 ಹೊಸ ವರ್ಷಕ್ಕೆ ಇನ್ನೊಂದು ದಿನ ಬಾಕಿ ಉಳಿದಿದೆ. ಇದೇ ಸಂರ್ಭದಲ್ಲಿ  ಬೆಂಗಳೂರಿನ ಸಮೀಪ ಇರುವ ಪ್ರವಾಸಿಗರ ಹಾಟ್ ಸ್ಪಾಟ್ ಎನಿಸಿಕೊಂಡಿರುವ ಪ್ರಸಿದ್ಧ ಗಿರಿಧಾಮ ನಂದಿ ಬೆಟ್ಟದಲ್ಲಿ ಹೊಸ ವರ್ಷದ ಆಚರಣೆ ಪ್ಲಾನ್ ಮಾಡಿದವರಿಗೆ ಇಲ್ಲಿನ ಜಿಲ್ಲಾಡಳಿತ ಶಾಕ್ ನೀಡಿದೆ. 

'ಮಹಾ' ಪುಂಡಾಟಿಕೆ: ಯಡಿಯೂರಪ್ಪ ಪ್ರತಿಕೃತಿ ದಹನ, ಕನ್ನಡ ಚಿತ್ರಗಳಿಗೆ ತಡೆ!

ಗಡಿ ವಿವಾದ ಸಂಬಂಧ ಕರ್ನಾಟಕದ ವಿರುದ್ಧ ಸದಾ ಹಲ್ಲು ಮಸೆಯುವ ಶಿವಸೇನೆ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡಾಟಿಕೆ ಭಾನುವಾರವೂ ಮುಂದುವರೆದಿದೆ. ಶನಿವಾರ ಕರ್ನಾಟಕ ಧ್ವಜಕ್ಕೆ ಬೆಂಕಿ ಹಾಕಿದ್ದ ಶಿವಸೇನೆ ಕಾರ್ಯಕರ್ತರು ಭಾನುವಾರ, ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪ್ರತಿಕೃತಿ ದಹಿಸುವ ಮೂಲಕ ಪುಂಡಾಟಿಕೆ ನಡೆಸಿದ್ದಾರೆ.

ಜಗತ್ತನ್ನು ರೂಪಿಸಿದ ಪ್ರಭಾವಿಗಳಲ್ಲಿ ಮೋದಿ ನಂ.4!

ತಮ್ಮ ನೀತಿಗಳು ಮತ್ತು ಅಧಿಕಾರದ ಮೂಲಕ ಜಗತ್ತಿನ ಮೇಲೆ ಪ್ರಭಾವ ಬೀರಿದ ಟಾಪ್‌ 6 ರಾಜಕೀಯ ನಾಯಕರ ಪಟ್ಟಿಯೊಂದನ್ನು ಅಮೆರಿಕದ ಟೈಮ್‌ ಮ್ಯಾಗಜಿನ್‌ ಬಿಡುಗಡೆ ಮಾಡಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ 4ನೇ ಸ್ಥಾನ ಪಡೆದಿದ್ದಾರೆ.

'ಕುಡುಕರನ್ನ ಮನೆಗೆ ತಲುಪಿಸುವ ಜವಾಬ್ದಾರಿ ಬಾರ್‌ ಮಾಲೀಕರದ್ದು'

ಹೊಸ ವರ್ಷಾಚರಣೆಗೆ ಹುಬ್ಬಳ್ಳಿ ಧಾರವಾಡ ಅವಳಿ‌ನಗರ ಸಕಲ ಸಜ್ಜುಗೊಂಡಿದೆ. ಹೊಸ ವರ್ಷ ಆಚರಣೆಯ ಹಿನ್ನೆಲೆಯಲ್ಲಿ ಅವಳಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಆರ್. ದಿಲೀಪ್ ಹೇಳಿದ್ದಾರೆ. 

HR ಕೆಲಸ ಬಿಟ್ಟು 'ರಂಗನಾಯಕಿ' ಯಾದ ಸ್ಟೈಲ್ ಐಕಾನ್ ಈಕೆ!

ಏನ್‌ ಗುರು ಸಿಕ್ಕಾಪಟ್ಟೆ ಸಖತ್ ಆಗವ್ಳೆ ಹುಡ್ಗಿ, ಅಂತಾ ಹೇಳೋರಿಗೆ ಜಸ್ಟ್‌ ಒಂದೇ ಒಂದು ಲುಕ್ ಮೂಲಕ ಭಯ ಹುಟ್ಟಿಸೋ ಈಕೆ  ರಂಗನಾಯಕಿಯ ಸ್ಟೈಲಿಶ್ ಐಕಾನ್ ವಿಭಾ ಅಲಿಯಾಸ್ ಅನುಶ್ರೀ ಜನಾರ್ಧನ್.

7 ವರ್ಷಗಳ ನಂತರ ಬ್ರೇಕಿಂಗ್ ನ್ಯೂಸ್ ಕೊಟ್ರು ಕಿಚ್ಚ ಸುದೀಪ್!

ಕಿಚ್ಚ ಸುದೀಪ್‌ಗೆ 2019 ಒಂದು ರೀತಿಯಲ್ಲಿ ಲಕ್ಕಿ ಇಯರ್ ಅಂತಾನೇ ಹೇಳಬಹುದು. ಸ್ಯಾಂಡಲ್‌ವುಡ್‌ನಲ್ಲಿ 'ಪೈಲ್ವಾನ್' ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತು. ಬಾಲಿವುಡ್‌ನಲ್ಲಿ 'ದಬಾಂಗ್ -3' ಸದ್ದು ಮಾಡಿತು. ಇದುವರೆಗೂ ಬರೀ ಸಿನಿಮಾಗಳಲ್ಲಿಮಾತ್ರ ಬ್ಯುಸಿಯಿದ್ದ ಕಿಚ್ಚ ಸುದೀಪ್ ಈಗ ಇಯರ್ ಎಂಡ್‌ನಲ್ಲಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ್ದಾರೆ. 

ರಾಹುಲ್-ಆತಿಯಾ ಲವ್ ಸ್ಟೋರಿ: ಸುನಿಲ್ ಶೆಟ್ಟಿ ಎಂಟ್ರಿ..!...

ಈ ಜೋಡಿ ಕಳೆದೊಂದು ವರ್ಷದಿಂದ ಕದ್ದುಮುಚ್ಚಿ ಓಡಾಡುತ್ತಿರುವ ವಿಚಾರ ಈ ಹಿಂದೆಯೇ ಸಾಕಷ್ಟು ಸುದ್ದಿಯಾಗಿತ್ತು. ಈ ಜೋಡಿಯ ಬಗ್ಗೆ ಗಾಳಿಸುದ್ದಿಗಳು ಹರಿದಾಡಿದ್ದವು. ಇದೀಗ ಬಾಲಿವುಡ್ ಹಿರಿಯ ನಟ ಸುನಿಲ್ ಶೆಟ್ಟಿ ಎಂಟ್ರಿ ಮೂಲಕ ಬಹುತೇಕ ಖಚಿತಗೊಂಡಿದೆ.

2020ರಲ್ಲಿ ಈ ಟೆಕ್ನಾಲಜಿಯೆಲ್ಲ ನಿಜವಾಗುತ್ತಾ?

ಕಾರುಗಳು ರಸ್ತೆ ಬಿಟ್ಟು ಆಕಾಶದಲ್ಲಿ ಹಾರುತ್ತವೆ; ಆರ್ಡರ್‌ ಕೊಟ್ಟರೆ ಸಾಕು ನಿಮ್ಮ ಮನೆಗೆ ಡ್ರೋನ್‌ನಲ್ಲಿ ಫುಡ್‌ ಬಂದು ತಲುಪುತ್ತದೆ. ಇದನ್ನೆಲ್ಲ 2020ರಲ್ಲಿ ಈಡೇರಬಹುದು ಅಂತ ನಾವು ನಿರೀಕ್ಷಿಸಬಹುದಾ? ಈ ಸುದ್ದಿ ನಿಮಗೆ ಹೆಚ್ಚಿನ ವಿವರ ನೀಡಲಿದೆ.

ಮಿಲಿಟರಿಗೆ ಹೊಸ ಬಾಸ್‌: ಬಿಪಿನ್ ರಾವತ್ ದೇಶದ ಮೊದಲ CDS!

ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆ ಮುಖ್ಯಸ್ಥರ ಹುದ್ದೆಗಳ ಮೇಲೆ ‘ಸಶಸ್ತ್ರಪಡೆ ಮುಖ್ಯಸ್ಥ’ ಎಂಬ ಹೊಸ ಹುದ್ದೆ ಸೃಷ್ಟಿಸುವ ಐತಿಹಾಸಿಕ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟ ಇತ್ತೀಚೆಗಷ್ಟೇ ಕೈಗೊಂಡಿತ್ತು ಇದರ ಬೆನ್ನಲ್ಲೇ, ನಿವೃತ್ತಿ ಪಡೆಯುವ ಹಂತದಲ್ಲಿದ್ದ ಜನರಲ್ ಬಿಪಿನ್ ರಾವತ್ ದೇಶದ ಮೊದಲ CDS ಆಗಿ ನೇಮಕಗೊಂಡಿದ್ದಾರೆ.

click me!