Asianet Suvarna News Asianet Suvarna News

2020 ಹೊಸ ವರ್ಷಕ್ಕೆ ನಂದಿ ಬೆಟ್ಟಕ್ಕಿಲ್ಲ ಪ್ರವೇಶ

ಹೊಸ ವರ್ಷ ಸ್ವಾಗತಿಸಲು ಪ್ರವಾಸಿಗರ ಹಾಟ್ ಸ್ಪಾಟ್ ಎಂದೇ ಕರೆಸಿಕೊಳ್ಳುವ ನಂದಿ ಬೆಟ್ಟಕ್ಕೆ ಹೋಗಬೇಕೆಂದುಕೊಂಡಿದ್ದರೆ ಈ ಪ್ಲಾನ್ ಕ್ಯಾನ್ಸಲ್ ಮಾಡಿ..

No Entry To Nandi hills For this New Year 2020
Author
Bengaluru, First Published Dec 30, 2019, 3:35 PM IST
  • Facebook
  • Twitter
  • Whatsapp

ಚಿಕ್ಕಬಳ್ಳಾಪುರ [ಡಿ.30] : ಹೊಸ ವರ್ಷಕ್ಕೆ ಇನ್ನೊಂದು ದಿನ ಬಾಕಿ ಉಳಿದಿದೆ. ಇದೇ ಸಂರ್ಭದಲ್ಲಿ  ಬೆಂಗಳೂರಿನ ಸಮೀಪ ಇರುವ ಪ್ರವಾಸಿಗರ ಹಾಟ್ ಸ್ಪಾಟ್ ಎನಿಸಿಕೊಂಡಿರುವ ಪ್ರಸಿದ್ಧ ಗಿರಿಧಾಮ ನಂದಿ ಬೆಟ್ಟದಲ್ಲಿ ಹೊಸ ವರ್ಷದ ಆಚರಣೆ ಪ್ಲಾನ್ ಮಾಡಿದವರಿಗೆ ಇಲ್ಲಿನ ಜಿಲ್ಲಾಡಳಿತ ಶಾಕ್ ನೀಡಿದೆ. 

2019 ಕಳೆದು ಹೊಸ ವರ್ಷ 2020ನ್ನು ಸ್ವಾಗತಿಸಲು ನಂದಿ ಬೆಟ್ಟದಲ್ಲಿ ಅವಕಾಶ ಇರುವುದಿಲ್ಲ.  ಜನವರಿ 31ರಿಂದಲೇ ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾಗಿ  ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್. ಲತಾ ಆದೇಶ ನೀಡಿದ್ದಾರೆ. 

ಜನವರಿ 31ರ ಮಂಗಳವಾರ ಸಂಜೆ 4 ಗಂಟೆಯಿಂದ ಜನವರಿ 1ರ  ಬೆಳಗ್ಗೆ 8ರ ವರೆಗೆ ಇಲ್ಲಿ ನಿಷೇಧಾಜ್ಞೆ ಇರಲಿದೆ. ಈ ನಿಟ್ಟಿನಲ್ಲಿ ನಂದಿ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ರೀತಿಯ ಆಚರಣೆಗಳನ್ನು ಮಾಡುವಂತಿಲ್ಲ. 

ಪ್ರಸಿದ್ಧ ಗಿರಿಧಾಮ ನಂದಿ ಬೆಟ್ಟಕ್ಕೆ KSRTC ಬಸ್...

ಆದರೆ ಹೊಸ ವರ್ಷದ ದಿನ ಬೆಳಗ್ಗೆ 8 ಗಂಟೆಯ ನಂತರ ನಂದಿ ಬೆಟ್ಟಕ್ಕೆ ಆಗಮಿಸಲು ಯಾವುದೇ ರೀತಿಯ ನಿರ್ಬಂಧ ಇರುವುದಿಲ್ಲ ಎಂದು ಚಿಕ್ಕಬಳ್ಳಾಪುರ ಎಸ್ ಪಿ ಅಭಿನವ್ ಖರೆ  ತಿಳಿಸಿದ್ದಾರೆ. 

ನಂದಿ ಬೆಟ್ಟವು ಅತ್ಯಂತ ಸುಂದರವಾಗಿದ್ದು, ಅತ್ಯಂತ ಹೆಚ್ಚು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಹೊಸ ವರ್ಷದಂದು ಇಲ್ಲಿ ಆಗಮಿಸಿ ವಿವಿಧ ರೀತಿ ಅಚಾತುರ್ಯಗಳು ಸಂಭವಿಸದಂತೆ ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಕ್ರಮ ಕೈಗೊಂಡಿದೆ. 

ಡಿಸೆಂಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios