ಮದುವೆಯಲ್ಲಿ ಉತ್ಸಾಹದಿಂದ ಚಂಡೆ ಬಾರಿಸಿದ ಕೇರಳದ ವಧು: ವಿಡಿಯೋ ವೈರಲ್..!

Published : Dec 27, 2022, 03:01 PM ISTUpdated : Dec 27, 2022, 03:03 PM IST
ಮದುವೆಯಲ್ಲಿ ಉತ್ಸಾಹದಿಂದ ಚಂಡೆ ಬಾರಿಸಿದ ಕೇರಳದ ವಧು: ವಿಡಿಯೋ ವೈರಲ್..!

ಸಾರಾಂಶ

ಕೇರಳ, ಕರ್ನಾಟಕ ಸೇರಿ ಹಲವೆಡೆ ಪ್ರಸಿದ್ಧಿಯಾದ ಸಂಗೀತ ವಾದ್ಯ ಚಂಡೆಯನ್ನು ವಧು ಉತ್ಸಾಹದಿಂದ ಬಾರಿಸುತ್ತಿರುವುದನ್ನು ಕಾಣಬಹುದು. ವಧು ಮಾತ್ರವಲ್ಲದೆ, ಅನೇಕ ಪ್ರದರ್ಶಕರು ಸಹ ವಾದ್ಯವನ್ನು ಸಂತೋಷದಿಂದ ಬಾರಿಸಿದ್ದಾರೆ.

ಗುರುವಾಯೂರು (ಡಿಸೆಂಬರ್ 27, 2022): ಮದುವೆ (Wedding) ಅಂದರೆ ಅಲ್ಲಿ ಸಂತೋಷಕ್ಕೆ ಸಾಕಷ್ಟು ಜಾಗವಿರುತ್ತದೆ. ಅದರಲ್ಲೂ ವಧು (Bride) - ವರರಿಗಂತೂ (Bride Groom) ಬಹುತೇಕರಿಗೆ ನಮ್ಮ ಮದುವೆ ಹಾಗಿರಬೇಕು, ಹೀಗಿರಬೇಕು ಎಂಬ ಕನಸಿರುತ್ತದೆ. ಇತ್ತೀಚೆಗೆ ಮದುವೆಗಳಲ್ಲಿ ವಧು - ವರ, ಸಂಬಂಧಿಕರು (Relation) ಹಾಗೂ ಸ್ನೇಹಿತರು (Friends) ಡ್ಯಾನ್ಸ್‌ (Dance) ಮಾಡುವುದಂತೂ ಸಾಮಾನ್ಯವಾಗಿದೆ. ಆದರೆ, ಕೇರಳದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವಧು ಉತ್ಸಾಹದಿಂದ ಚಂಡೆ ಅಥವಾ ಡ್ರಮ್ ಬಾರಿಸುತ್ತಿರುವ ವಿಡಿಯೋ ವೈರಲ್ (Video Viral) ಆಗಿದೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಅಪ್‌ಲೋಡ್‌ ಮಾಡಲಾದ ಕ್ಲಿಪ್‌ನಲ್ಲಿ, ಕೇರಳ, ಕರ್ನಾಟಕ ಸೇರಿ ಹಲವೆಡೆ ಪ್ರಸಿದ್ಧಿಯಾದ ಸಂಗೀತ ವಾದ್ಯ ಚಂಡೆಯನ್ನು ವಧು ಉತ್ಸಾಹದಿಂದ ಬಾರಿಸುತ್ತಿರುವುದನ್ನು ಕಾಣಬಹುದು. ವಧು ಮಾತ್ರವಲ್ಲದೆ, ಅನೇಕ ಪ್ರದರ್ಶಕರು ಸಹ ವಾದ್ಯವನ್ನು ಸಂತೋಷದಿಂದ ಬಾರಿಸಿದ್ದಾರೆ.

ಕೇರಳದ ಗುರುವಾಯೂರ್ ದೇವಾಲಯದಲ್ಲಿ ವಧು ಚಂಡೆ ಬಾರಿಸಿದ್ದರೆ, ವಧುವಿನ ತಂದೆ ಮತ್ತು ವರ ಸಹ ವಧು ಜತೆಗೆ ಸೇರಿಕೊಂಡಿದ್ದಾರೆ ಎಂದು ವೈರಲ್‌ ಆಗುತ್ತಿರುವ ಈ ವಿಡಿಯೋ ಕ್ಯಾಪ್ಷನ್‌ ಹೇಳುತ್ತದೆ. ಗುರುವಾಯೂರು ದೇವಸ್ಥಾನದಲ್ಲಿ ಇಂದು ನಡೆದ ಮದುವೆ ಕಾರ್ಯಕ್ರಮ. ವಧುವಿನ ತಂದೆ ಚಂಡೆಯ ಮಾಸ್ಟರ್ ಮತ್ತು ಮಗಳು ಅದನ್ನು ಉತ್ಸಾಹದಿಂದ ಚಂಡೆ ಬಾರಿಸಿದ್ದಾಳೆ. ಮತ್ತು ಕೊನೆಯಲ್ಲಿ ಅವಳ ತಂದೆ ಕೂಡ ಮಗಳ ಜತೆಗೆ ಸೇರಿ ಚಂಡೆ ಬಾರಿಸಿದ್ದು, ವರ ಕೂಡ ಭಾಗವಹಿಸುತ್ತಿರುವಂತೆ ತೋರುತ್ತಿದೆ,'' ಎಂದು ವಿಡಿಯೋ ಜತೆಗೆ ಟ್ವೀಟ್‌ ಮಾಡಿರುವ ಶೀರ್ಷಿಕೆ ಹೇಳುತ್ತದೆ. 

ಇದನ್ನು ಓದಿ: ಹೆಂಗೆಳೆಯರು ಹೆಮ್ಮಾರಿಗಳಾದರ: ಗರ್ಲ್ಸ್‌ ಗ್ಯಾಂಗ್‌ನಿಂದ ಯುವತಿ ಮೇಲೆ ನಡುರಸ್ತೆಯಲ್ಲೇ ಹಲ್ಲೆ

ಡಿಸೆಂಬರ್ 26, 2022 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಟ್ವಿಟ್ಟರ್‌ನಲ್ಲೇ 1 ಲಕ್ಷ 57 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದ್ದು, ಅನೇಕ ನೆಟ್ಟಿಗರ ಹೃದಯಗಳನ್ನು ಗೆದ್ದಂತೆ ತೋರುತ್ತಿದೆ. ಈ ಹಿನ್ನೆಲೆ ಈ ವಿಡಿಯೋಗೆ ಸಾಕಷ್ಟು ಕಮೆಂಟ್‌ಗಳು ಹರಿದುಬಂದಿದ್ದು, ಸುಮಾರು 10 ಸಾವಿರ ಜನರು ಈ ವಿಡಿಯೋಗೆ ಲೈಕ್‌ ಮಾಡಿದ್ದಾರೆ.  “ವಧು ಮತ್ತು ವರನ ಮುಖದಲ್ಲಿರುವ ಸಂತೋಷವು ಮೋಡಿಮಾಡುವಂತಿದೆ. ಮತ್ತು ಅವಳ ತಂದೆ ಕೊನೆಯಲ್ಲಿ ಸೇರುವುದು ಅದ್ಭುತವಾಗಿದೆ. ದಿನವನ್ನು ಪ್ರಾರಂಭಿಸಲು ಉತ್ತಮವಾದದ್ದು" ಎಂದೂ ಬಳಕೆದಾರರು ಬರೆದಿದ್ದಾರೆ. 

ಉತ್ತಮ ಸಂಗೀತ ಕಾರ್ಯಕ್ರಮ ನೀಡಿದ ಔಧುವನ್ನು ಹಲವರು ಮೆಚ್ಚಿಕೊಂಡಿದ್ದಾರೆ. “ವಧುವಿಗೆ ಹ್ಯಾಟ್ಸ್ ಆಫ್, ವಾದ್ಯವನ್ನು ಆನಂದಿಸುವುದು ಮಾತ್ರವಲ್ಲದೆ ಲಯವನ್ನು ಹಿಡಿದಿಟ್ಟುಕೊಳ್ಳುವುದು ಮತ್ತು ಕಲೆಯನ್ನು ನಿರ್ವಹಿಸುವಲ್ಲಿ ತನ್ನ ವೃತ್ತಿಪರತೆಯನ್ನು ತೋರಿಸುತ್ತಿದ್ದಾರೆ. ಈ ಟೆಂಪೋವನ್ನು ಮುಂದುವರಿಸಿ...” ಎಂದು ಟ್ವೀಟಿಗರೊಬ್ಬರು ಕಾಮೆಂಟ್‌ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Christmas 2022: ಸಾಂತಾ ಟೋಪಿ ಧರಿಸಿರುವ ಎಮಿರೇಟ್ಸ್ ವಿಮಾನದ ಪೋಸ್ಟ್ ವೈರಲ್‌

“ಈ ವಧು-ವರರು ಎಂತಹ ಪ್ರೀತಿ ಮತ್ತು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಅವರು ಸುಂದರವಾದ ಜೀವನವನ್ನು ಹೊಂದಿರುತ್ತಾರೆ ಎಂದು ನನಗೆ ಖಾತ್ರಿಯಿದೆ! ದೇವರು ಒಳ್ಳೆಯದು ಮಾಡಲಿ!!" ಎಂದೂ ಬಳಕೆದಾರರೊಬ್ಬರು ಬರೆದಿದ್ದಾರೆ.

ಒಬ್ಬ ವ್ಯಕ್ತಿ ಹೇಳಿದರು, “ಒಬ್ಬರ ಬೇರುಗಳು ಮತ್ತು ಸೇರಿದವರ ಸಂತೋಷ ಹಾಗೂ ಹೆಮ್ಮೆ ಸ್ಪಷ್ಟವಾಗಿದೆ. ಅವರೆಲ್ಲರೂ ಆಶೀರ್ವಾದ ಹೊಂದಿರಲಿ ಎಂದೂ ಮತ್ತೊಬ್ಬರು ಬರೆದುಕೊಂಡಿದ್ದಾರೆ. 

ಇದನ್ನೂ ಓದಿ: ಮದುವೆಗೆ ನಿರಾಕರಿಸಿದ ಯುವತಿ: ಅಮಾನುಷವಾಗಿ ಹಲ್ಲೆ ಮಾಡಿದ ಬಾಯ್‌ಫ್ರೆಂಡ್‌; ಕ್ಯಾಮೆರಾದಲ್ಲಿ ಸೆರೆ

ಇನ್ನು, ವಧುವನ್ನು ಈ ವಿಡಿಯೋದ ತಾರೆ ಎಂದು ಮತ್ತೊಬ್ಬರು ಬರೆದಿದ್ದು, ಇದು ಅವಳ ಬಗ್ಗೆ. ಅವಳ ಮುಖಭಾವ, ಅವಳ ಸೀರೆ, ಅವಳ ಶಕ್ತಿ.... ಮುಖ್ಯವಾಗಿ ಅವಳ ಮದುವೆ. ದೇವರು ಅವಳನ್ನು ಆಶೀರ್ವದಿಸುತ್ತಾನೆ. ಮತ್ತು, ಅವಳು ಸುಂದರ ವಧು." ಎಂದೂ ಬರೆದುಕೊಂಡಿದ್ದಾರೆ.

ಅಲ್ಲದೆ, ಮತ್ತೊಬ್ಬರು, "ಸುಂದರವಾಗಿದೆ, ವಧು ಪೂರ್ಣ ಉತ್ಸಾಹದಿಂದ ಭಾಗವಹಿಸುವುದನ್ನು ನೋಡಲು ತುಂಬಾ ಸಂತೋಷವಾಗಿದೆ" ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ದೊಡ್ಡ ಅನಾಹುತದಿಂದ ಅಮ್ಮನ ರಕ್ಷಿಸಿದ ಪುಟಾಣಿ... ವಿಡಿಯೋ ವೈರಲ್

ಶಿಲ್ಪಾ ಎಂದು ಗುರುತಿಸಲಾದ ಈ ವಧು ಚಂಡೆಯ ಕಲಾವಿದೆ ಎಂದು ಕೇರಳದ ಮಾಧ್ಯಮವೊಂದು ವರದಿ ಮಾಡಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?
ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್‌ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!