
ಬೆಂಗಳೂರಿನ (Bengaluru) ಜನರು ಅಬ್ಬಾ ಏನು ಚಳಿ (Cold) ಅಂತ ಹಲವು ದಿನಗಳಿಂದ ಗೊಣಗುತ್ತಿದ್ದೀರಾ..? ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಚಳಿಯ ಅಬ್ಬರ ಹೆಚ್ಚಾಗಿದ್ದು, ರಾತ್ರಿ ಹಾಗೂ ಬೆಳಗ್ಗೆ ತಾಪಮಾನ (Temperature) ತೀವ್ರ ಕುಸಿದಿರುತ್ತದೆ. ಆದರೂ, ಉತ್ತರ ಭಾರತಕ್ಕೆ (North India) ಹೋಲಿಸಿದರೆ ನಮ್ಮ ಚಳಿ ಏನೂ ಇಲ್ಲ ಬಿಡಿ. ಹೌದು, ಶೀತ ಮಾರುತಗಳ (Cold Wave) ಅಬ್ಬರದಿಂದ ಉತ್ತರ ಭಾರತದಲ್ಲಿ ಮೈ ಕೊರೆಯುವ ಚಳಿ ಶುರುವಾಗಿದೆ. ಕಳೆದ 2 - 3 ದಿನಗಳಿಂದ ತೀವ್ರ ಚಳಿಗೆ ಜನ ತತ್ತರಿಸಿ ಹೋಗಿದ್ದು, ಅದರಲ್ಲೂ ಮಕ್ಕಳು (Children) , ವೃದ್ಧರು ಹಾಗೂ ಅಸ್ತಮಾ ರೋಗಿಗಳು (Asthma Patients) ಕಷ್ಟ ಅನುಭವಿಸುವಂತಾಗಿದೆ. ಇನ್ನು, ರಾಷ್ಟ್ರ ರಾಜಧಾನಿ ದೆಹಲಿಯ (Delhi) ಜನತೆ ಇಂದು ಬೆಳಗ್ಗೆಯೂ ತೀವ್ರ ಚಳಿಯಿಂದ ತತ್ತರಿಸಿದ್ದು, ಜನ ಬೆಳಗ್ಗೆ ಏಳಲು ಸಹ ಕಷ್ಟ ಪಟ್ಟಿದ್ದಾರೆ.
ದೆಹಲಿಯ ರಸ್ತೆಗಳು ದಟ್ಟವಾದ ಮಂಜಿನ ಹೊದಿಕೆಯಿಂದ ಆವರಿಸಿದ್ದು, ಈ ಹಿನ್ನೆಲೆ ಗೋಚರತೆಯ ಮಟ್ಟ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಆದರೆ, ಬುಧವಾರದ ನಂತರ ತಾಪಮಾನವು ಹೆಚ್ಚಾಗಬಹುದು ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದ್ದು, ಇದರಿಂದ ಮಂಜು ಕಡಿಮೆಯಾಗುತ್ತದೆ ಮತ್ತು ಹೆಚ್ಚಿನ ಸೂರ್ಯನ ಬೆಳಕನ್ನು ಮೇಲ್ಮೈಗೆ ಅಪ್ಪಳಿಸುತ್ತದೆ ಎಂದೂ ತಿಳಿದುಬಂದಿದೆ.
ಇದನ್ನು ಓದಿ: ಉತ್ತರ ಭಾರತ ಗಢಗಢ: ಶೂನ್ಯ ಡಿಗ್ರಿಯತ್ತ ತಾಪಮಾನ
ಇಂದು ಬೆಳಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ ತಾಪಮಾನವು 5.6 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಏಕೆಂದರೆ ಶೀತ ಅಲೆಯು ಉತ್ತರ ಭಾರತದಾದ್ಯಂತ ಬೀಸುತ್ತಿದ್ದು, ಈ ಹಿನ್ನೆಲೆ ತಾಪಮಾನ ಸಾಮಾನ್ಯಕ್ಕಿಂತ ಒಂದು ಡಿಗ್ರಿ ಕಡಿಮೆಯಾಗಿದೆ. ಅಲ್ಲದೆ, ಪ್ರಖ್ಯಾತ ಪ್ರವಾಸೋದ್ಯಮ ಸ್ಥಳವಾದ ಗಿರಿಧಾಮ ನೈನಿತಾಲ್‌ನಲ್ಲೂ ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಸಿಯಸ್ ಇದ್ದು, ಅಲ್ಲಿಗಿಂತ ದೆಹಲಿಯಲ್ಲೇ ತಾಪಮಾನ ಕಡಿಮೆ ಇದೆ.
.
ದೆಹಲಿ, ಹರಿಯಾಣ, ಪಂಜಾಬ್ ಮತ್ತು ಉತ್ತರಾಖಂಡದ ಕೆಲವು ಭಾಗಗಳು ದಟ್ಟವಾದ ಮತ್ತು ಅತ್ಯಂತ ದಟ್ಟವಾದ ಮಂಜಿನ ಹೊಂದಿಕೆಯಿಂದ ತುಂಬಿಕೊಂಡಿದೆ. ಈ ಹಿನ್ನೆಲೆ ದಿಲ್ಲಿಯ ರಸ್ತೆಗಳಲ್ಲಿ ಓಡಾಡಲು ಚಾಲಕರು ಮಂಜಿನ ಹೊದಿಕೆಯ ಮೂಲಕ ಚಲಿಸಲು ಅಪಾಯದ ದೀಪಗಳನ್ನು ಆನ್ ಮಾಡಿಕೊಂಡೇ ವಾಹನ ಚಲಿಸುವಂತಾಗಿದೆ. ದೆಹಲಿಯಲ್ಲಿ ಇಂದು ಭೀಕರ ಪರಿಸ್ಥಿತಿ ಎದುರಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸಹ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಕೊರೆಯುವ ಚಳಿ: ಪ್ರತಿಭಟನೆ ನಡೆಸುತ್ತಿದ್ದ ರೈತ ಸಾವು
"ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ ಮತ್ತು ಪಶ್ಚಿಮ ರಾಜಸ್ಥಾನದ ಕೆಲವು ಭಾಗಗಳಲ್ಲಿ ಶೀತ ದಿನ/ತೀವ್ರ ಶೀತ ದಿನದ ಪರಿಸ್ಥಿತಿಗಳು ಮತ್ತು ಉತ್ತರಾಖಂಡದ ಕೆಲವೆಡೆ 2022 ರ ಡಿಸೆಂಬರ್ 26 ಮತ್ತು 27 ರಂದು ಶೀತ ಪರಿಸ್ಥಿತಿ ಇರಲಿದೆ" ಎಂದು ಭಾರತೀಯ ಹವಾಮಾನ ಇಲಾಖೆ ಬುಲೆಟಿನ್ ನಲ್ಲಿ ನಿನ್ನೆ ಸಂಜೆ ತಿಳಿಸಿದೆ. "ಚಾಲ್ತಿಯಲ್ಲಿರುವ ಲಘು ಗಾಳಿ ಮತ್ತು ಕಡಿಮೆ ಉಷ್ಣವಲಯದ ಮಟ್ಟದಲ್ಲಿ ಹೆಚ್ಚಿನ ತೇವಾಂಶದ ಕಾರಣ, ಮುಂದಿನ 48 ಗಂಟೆಗಳಲ್ಲಿ ಉತ್ತರಾಖಂಡ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ದೆಹಲಿ ಹಾಗೂ ಪಶ್ಚಿಮ ರಾಜಸ್ಥಾನದ ಕೆಲವು ಭಾಗಗಳಲ್ಲಿ ದಟ್ಟದಿಂದ ತುಂಬಾ ದಟ್ಟವಾದ ಮಂಜು ಮುಂದುವರಿಯುವ ಸಾಧ್ಯತೆಯಿದೆ" ಎಂದೂ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಈ ಮಧ್ಯೆ, ದೆಹಲಿಯ ಗಾಳಿಯ ಗುಣಮಟ್ಟವು ಸಹ 'ಅತ್ಯಂತ ಕಳಪೆ' ವರ್ಗದಲ್ಲಿದೆ ಎಂದೂ ವರದಿಯಾಗಿದೆ. ಅಲ್ಲದೆ, ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಸಹ, ಲ್ಯಾಂಡಿಂಗ್ ಮತ್ತು ಟೇಕ್-ಆಫ್‌ಗಳು ಮುಂದುವರಿದಿದ್ದು, ಕಡಿಮೆ ಗೋಚರತೆಯ ಕಾರ್ಯಾಚರಣೆಗಳಿಗೆ ಸಜ್ಜುಗೊಳಿಸದ ವಿಮಾನಗಳು ಪರಿಣಾಮ ಬೀರಬಹುದು ಎಂದೂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹೆಪ್ಪುಗಟ್ಟಿದ ಕಾಶ್ಮೀರದ ದ್ರಾಸ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ