ಭಯೋತ್ಪಾದಕ ಎಂದ ಉಪನ್ಯಾಸಕರಿಗೆ ಮುಸ್ಲಿಂ ವಿದ್ಯಾರ್ಥಿಯ ಕ್ಲಾಸ್‌...

By Anusha KbFirst Published Nov 28, 2022, 5:58 PM IST
Highlights

ಕರಾವಳಿ ಭಾಗದ ಕಾಲೇಜೊಂದರ ಉಪನ್ಯಾಸಕರೊಬ್ಬರು ವಿದ್ಯಾರ್ಥಿಯನ್ನು ಭಯೋತ್ಪಾದಕ ಎಂದು ಕರೆದು ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಶಿಕ್ಷನ ಈ ಕಾಮೆಂಟ್‌ನಿಂದ ಸಿಟ್ಟಿಗೆದ್ದ ವಿದ್ಯಾರ್ಥಿ ಶಿಕ್ಷಕನಿಗೆ ಸರಿಯಾಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. 

ಮಂಗಳೂರು: ಕರಾವಳಿ ಭಾಗದ ಕಾಲೇಜೊಂದರ ಉಪನ್ಯಾಸಕರೊಬ್ಬರು ವಿದ್ಯಾರ್ಥಿಯನ್ನು ಭಯೋತ್ಪಾದಕ ಎಂದು ಕರೆದು ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಶಿಕ್ಷನ ಈ ಕಾಮೆಂಟ್‌ನಿಂದ ಸಿಟ್ಟಿಗೆದ್ದ ವಿದ್ಯಾರ್ಥಿ ಶಿಕ್ಷಕನಿಗೆ ಸರಿಯಾಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ.  ಈ ಘಟನೆಯನ್ನು ವಿದ್ಯಾರ್ಥಿಗಳೇ ಯಾರೋ ಚಿತ್ರೀಕರಿಸಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ವಿದ್ಯಾರ್ಥಿ, ಉಪನ್ಯಾಸಕರಿಗೆ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದು, ಈ ವೇಳೆ ಇಡೀ ತರಗತಿಯೇ ನಿಶ್ಯಬ್ಧಕ್ಕೆ ಜಾರಿದೆ. ಕೂಡಲೇ ಶಿಕ್ಷಕರು ತಮ್ಮ ಈ ಕಾಮೆಂಟ್‌ಗೆ ಕ್ಷಮೆ ಕೇಳಿದ್ದಾರೆ. 

ಘಟನೆಯ ಸಂಪೂರ್ಣ ದೃಶ್ಯ ವಿಡಿಯೋದಲ್ಲಿಲ್ಲ. ಮುಸ್ಲಿಂ ವಿದ್ಯಾರ್ಥಿಗೆ (Muslim Student) ಶಿಕ್ಷಕ ಭಯೋತ್ಪಾದಕ(Terrorist) ಎಂದಿದ್ದು, ಇದಕ್ಕೆ ಸಿಟ್ಟಿಗೆದ್ದ ವಿದ್ಯಾರ್ಥಿ ಈ ರೀತಿಯ ಹೇಳಿಕೆಯನ್ನು ನೀವು ನೀಡಲು ಹೇಗೆ ಸಾಧ್ಯ ಎಂದು ಕೇಳಿದ್ದಾರೆ. ತರಗತಿಯಲ್ಲಿ ಈ ಹೇಳಿಕೆಗೆ ಸಂಬಂಧಿಸಿದಂತೆ ವಾದ ವಿವಾದ ಮುಂದುವರೆದಿದ್ದು, ವಿದ್ಯಾರ್ಥಿಯ ಹೇಳಿಕೆಗೆ ಪ್ರತಿಯಾಗಿ ಉಪನ್ಯಾಸಕರು ನಾನು ಈ ಪದವನ್ನು ತಮಾಷೆಯಾಗಿ ಬಳಸಿದೆ ಎಂದು ಹೇಳಿದ್ದಾರೆ. ಆದರೆ ಇದು ವಿದ್ಯಾರ್ಥಿಯನ್ನು ಸಮಾಧಾನಗೊಳಿಸಿಲ್ಲ. ವಾದ ಮುಂದುವರಿಸಿದ ವಿದ್ಯಾರ್ಥಿ ಈ ಪದವನ್ನು ತಮಾಷೆಯಾಗಿ ಬಳಸುವುದಾದರು ಹೇಗೆ ಸಾಧ್ಯ? 26/11ರ ಮುಂಬೈ ದಾಳಿ (Mumbai Attack) ತಮಾಷೆಯ ವಿಚಾರವಲ್ಲ. ಓರ್ವ ಮುಸ್ಲಿಂ ವಿದ್ಯಾರ್ಥಿಯಾಗಿ ದೇಶದಲ್ಲಿ ಇಂತಹ ಪರಿಸ್ಥಿತಿಯನ್ನು ಎದುರಿಸುವುದು ತಮಾಷೆಯೂ ಅಲ್ಲ ಸುಲಭವೂ ಅಲ್ಲ ಎಂದು ವಿದ್ಯಾರ್ಥಿ ಹೇಳಿದ್ದಾನೆ. 

A Professor in a class room in India calling a Muslim student ‘terrorist’ - This is what it has been to be a minority in India! pic.twitter.com/EjE7uFbsSi

— Ashok Swain (@ashoswai)

ನಂತರ ಉಪನ್ಯಾಸಕರೇ ವಿದ್ಯಾರ್ಥಿ ಮುಂದೆ ಕ್ಷಮೆ ಕೇಳಿದ್ದು, ನೀನು ನನ್ನ ಪುತ್ರನಿಗೆ ಸಮ ಎಂದು ಹೇಳಿ ಸಮಾಧಾನಗೊಳಿಸಲು ಯತ್ನಿಸಿದ್ದಾರೆ. ಈ ವೇಳೆ ವಿದ್ಯಾರ್ಥಿ ನಿಮ್ಮ ಪುತ್ರನಿಗೆ ಇದೇ ರೀತಿಯ ಕಾಮೆಂಟ್ ಮಾಡುತ್ತೀರಾ? ಪುತ್ರನೊಂದಿಗೂ ಇದೇ ರೀತಿ ವರ್ತಿಸುತ್ತೀರಾ? ತರಗತಿಯ ಮುಂದೆ ಅದೂ ಎಲ್ಲರ ಎದುರು ಆತನನ್ನು ಭಯೋತ್ಪಾದಕ ಎಂದು ಲೇಬಲ್ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾನೆ. ಕೇವಲ ಕ್ಷಮಿಸು ಎಂದು ಹೇಳುವುದರಿಂದ ಇಲ್ಲಿ ಏನು ಬದಲಾಗುವುದಿಲ್ಲ ಸರ್, ನೀವು ನಿಮ್ಮನಿಲ್ಲಿ ಹೇಗೆ ಚಿತ್ರಿಸಿಕೊಂಡಿದ್ದೀರಿ ಎಂಬುದು ಬದಲಾಗುವುದಿಲ್ಲ ಎಂದು ವಿದ್ಯಾರ್ಥಿ (Student) ರೋಷಾವೇಶದಿಂದ ಹೇಳಿದ್ದಾನೆ. 

ಭಯೋತ್ಪಾದನೆಯಲ್ಲಿ ಭಾಗಿಯಾಗದಂತೆ ಮೌಲ್ವಿಗಳು ಬುದ್ಧಿ ಹೇಳಬೇಕು: ಕಾಣಿಯೂರುಶ್ರೀ

ನಂತರ ಈ ಉಪನ್ಯಾಸಕರು (Lecturer) ಈ ವಿದ್ಯಾರ್ಥಿಯ ಜೊತೆ ಮಾತುಕತೆ ನಡೆಸಿದ್ದು, ವೈಯಕ್ತಿಕವಾಗಿ ಕ್ಷಮೆ ಕೇಳಿದ್ದಾರೆ. ಅಲ್ಲದೇ ಈ ವಿವಾದವನ್ನು ಶಿಕ್ಷಕ ಹಾಗೂ ವಿದ್ಯಾರ್ಥಿ ಮಾತುಕತೆ ನಡೆಸಿ ಬಗೆಹರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಶೋಕ್ ಸ್ವೈನ್ ಎಂಬುವವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಭಾರತದ ಶಾಲಾ ತರಗತಿಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಯೊಬ್ಬನನ್ನು ಪ್ರೊಫೆಸರ್ (professor) ಒಬ್ಬರು ಭಯೋತ್ಪಾದಕ ಎಂದು ಕರೆದಿದ್ದಾರೆ. ಇದು ಭಾರತದಲ್ಲಿ ಅಲಸ್ಪಂಖ್ಯಾತರ ಸ್ಥಿತಿ ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ವೈರಲ್ ಆಗಿದ್ದು, ಅನೇಕರು ವಿದ್ಯಾರ್ಥಿಯ ವಾದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆತನ ವಾದವನ್ನು ಒಪ್ಪಿಕೊಂಡಿದ್ದಾಗಿ ಅನೇಕರು ಹೇಳಿದ್ದಾರೆ. ಒಂದು ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

Boycott Muslim Traders: ರಾಜ್ಯದಲ್ಲಿ ಮತ್ತೆ ಶುರುವಾಯ್ತು ಧರ್ಮ ದಂಗಲ್. ಕುಕ್ಕೆಯಲ್ಲಿ ಅನ್ಯಧರ್ಮೀರಿಗೆ ವ್ಯಾಪಾರ ನಿಷೇಧ!

click me!