ನೋಯ್ಡಾ: ರಸ್ತೆ ಬದಿ ಪಾನಿಪುರಿ ತಿನ್ನುತ್ತಿದ್ದ ಮೂವರು ಸಹೋದರಿಯರ ಮೇಲೆ ಕಾರೊಂದು ಹರಿದ ಪರಿಣಾಮ ತಂಗಿ ಮೃತಪಟ್ಟರು ಅಕ್ಕಂದಿರಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಕಾರು ಚಾಲಕ ಪಾನಮತ್ತನಾಗಿ ಕಾರು ಚಾಲಾಯಿಸಿದ ಪರಿಣಾಮ ಈ ಅವಘಡ ಸಂಭವಿಸಿದೆ. ನೋಯ್ಡಾದ ಸದರ್‌ಪುರ ಪ್ರದೇಶದಲ್ಲಿ ಸೋನಂ ಬಜಾರ್ ಎಂಬಲ್ಲಿ ಭಾನುವಾರ ಸಂಜೆ ಈ ಅವಘಡ ಸಂಭವಿಸಿದೆ.
ಪೊಲೀಸರ ಪ್ರಕಾರ ಖಜೂರ್ ಕಾಲೋನಿ (Khajur Colony) ನಿವಾಸಿ ಪುಷ್ಪಾ (Pushpa) ಎಂಬುವವರು ತಮ್ಮ ಮೂವರು ಮಕ್ಕಳಾದ ಆರು ವರ್ಷದ ರಿಯಾ (Riya) 15 ವರ್ಷದ ಅನು (Anu) ಹಾಗೂ 18 ವರ್ಷದ ಅಂಕಿತಾ (Ankita) ಜೊತೆ ಸೋಮ್ ಬಜಾರ್‌ಗೆ (Som Bazar) ತೆರಳುತ್ತಿದ್ದರು. ಈ ವೇಳೆ ಮಕ್ಕಳು ಪಾನಿಪುರಿ (golgappas) ತಿನ್ನಬೇಕು ಎಂದು ಆಸೆ ವ್ಯಕ್ತಪಡಿಸಿದ್ದು, ಅದರಂತೆ ಮಕ್ಕಳು ರಸ್ತೆ ಬದಿ ನಿಂತುಕೊಂಡು ಪಾನಿಪುರಿ ತಿನ್ನುತ್ತಿರುವಾಗ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಮೂವರು ಸಹೋದರಿಯರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆರು ವರ್ಷ ಮಗು ರಿಯಾ ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ಎಣ್ಣೆ ಅಮಲು, ತಡೆದ ಪೊಲೀಸರಿಗೆ ಎಂತೆಂಥಾ ಶಬ್ದ ಬಳಸಿದ ನಿರ್ದೇಶಕಿ
ಮೂವರು ಮಕ್ಕಳನ್ನು ನೋಯ್ಡಾದ ಪೋಸ್ಟ್ ಗ್ರಾಜ್ಯುಯೇಟ್ ಇನ್ಸ್‌ಟಿಟ್ಯೂಟ್ ಆಪ್ ಚೈಲ್ಡ್ ಹೆಲ್ತ್ ಆಸ್ಪತ್ರೆಗೆ (Post Graduate Institute of Child Health) ದಾಖಲಿಸಲಾಗಿತ್ತು. ಇನ್ನು ಅಪಘಾತಕ್ಕೊಳಗಾದ ಕಾರಿನಲ್ಲಿ ನಾಲ್ವರು ಯುವಕರಿದ್ದು, ಎಲ್ಲರೂ ಪಾನಮತ್ತರಾಗಿದ್ದರು. ಕಾರು ಚಲಾಯಿಸುತ್ತಿದ್ದವನೂ ಕೂಡ ಪಾನಮತ್ತನಾಗಿದ್ದು, ಇದರಿಂದ ಕಾರು ಆತನ ನಿಯಂತ್ರಣ ತಪ್ಪಿ ಈ ಅನಾಹುತ ಸಂಭವಿಸಿದೆ.
ಡ್ರಿಂಕ್ & ಡ್ರೈವ್‌ಗಿಂತ ಟಚ್ ಸ್ಕ್ರೀನ್ ಬಳಸುವುದು ಅತ್ಯಂತ ಅಪಾಯಕಾರಿ; ಕಾರಣ ಇಲ್ಲಿದೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ