ರಾಜ್ಯೋತ್ಸವದಲ್ಲಿ ರಾಜಕುಮಾರನಿಲ್ಲದ ಕೊರಗು, ಉಗ್ರರ ವಿರುದ್ಧ ಯೋಗಿ ಗುಡುಗು; ನ.1ರ ಟಾಪ್ 10 ಸುದ್ದಿ!

Published : Nov 01, 2021, 04:50 PM ISTUpdated : Nov 01, 2021, 05:52 PM IST
ರಾಜ್ಯೋತ್ಸವದಲ್ಲಿ ರಾಜಕುಮಾರನಿಲ್ಲದ ಕೊರಗು, ಉಗ್ರರ ವಿರುದ್ಧ ಯೋಗಿ ಗುಡುಗು; ನ.1ರ ಟಾಪ್ 10 ಸುದ್ದಿ!

ಸಾರಾಂಶ

ಕನ್ನಡ ರಾಜ್ಯೋತ್ಸವವನ್ನು ರಾಜ್ಯದೆಲ್ಲೆಡೆ ಆಚರಿಸಲಾಗಿದೆ. ಆದರೆ ಈ ಬಾರಿ ಕನ್ನಡ ಕುವರ ಪುನೀತ್ ರಾಜ್‌ಕುಮಾರ್ ಇಲ್ಲ ಅನ್ನೋ ಕೊರಗು ಕನ್ನಡಿಗರನ್ನು ಕಾಡಿದೆ. ದೀಪಾವಳಿ ಹಬ್ಬಕ್ಕೂ ಮುನ್ನ  ವಾಣಿಜ್ಯ ಬಳಕೆಯ LPG ಸಿಲಿಂಡರ್‌ ದರ ಎರಿಕೆಯಾಗಿದೆ . ಶಿವಣ್ಣನ ಪರಿಸ್ಥಿತಿಯನ್ನು ಕಿಚ್ಚ ಸುದೀಪ್ ಬಿಚ್ಚಿದ್ದಾರೆ. ಅಪಘಾತಕ್ಕೆ ಮಿಸ್ ಕೇರಳ ಬಲಿ, ಟೀಂ ಇಂಡಿಯಾ ವಿರುದ್ಧ ಅಭಿಮಾನಿಗಳ ಆಕ್ರೋಶ ಸೇರಿದಂತೆ ನವೆಂಬರ್ 1ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.  

ಭಯೋತ್ಪಾದನೆ ಭಾರತದತ್ತ ತಿರುಗಿದರೆ ವಾಯುದಾಳಿಗೆ ಸಿದ್ಧರಾಗಿ; ತಾಲಿಬಾನ್ ಉಗ್ರರಿಗೆ ಯೋಗಿ ನೇರ ಎಚ್ಚರಿಕೆ!

ಭಾರತದತ್ತ ಕಣ್ಣು ಹಾಕಿರುವ ತಾಲಿಬಾನ್ ಉಗ್ರರಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್(Yogi adityanath) ನೇರ ಎಚ್ಚರಿಕೆ ನೀಡಿದ್ದಾರೆ. ತಾಲಿಬಾನ್ ಉಗ್ರರು ಭಾರತದತ್ತ(India) ಸಾಗುವ ಧೈರ್ಯ ಮಾಡಿದರೆ, ಏರ್‍‌ಸ್ಟ್ರೈಕ್(Airstrike) ಎದುರಿಸಲು ಸಿದ್ದರಾಗಿ ಎಂದು ಯೋಗಿ ಆದಿತ್ಯನಾಥ್ ಎಚ್ಚರಿಸಿದ್ದಾರೆ.

ಸಮುದ್ರದಾಳದಲ್ಲಿ-ಆಕಾಶದೆತ್ತರದಲ್ಲೂ ಹಾರಿದ ಕನ್ನಡದ ಬಾವುಟ

ಇಂದು ನಾಡಿನ ಎಲ್ಲೆಡೆ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ. ಕರುನಾಡ ಈ ಹಬ್ಬವನ್ನು  ಸಂಭ್ರಮದಿಂದ ಆಚರಿಸಲಾಗುತ್ತಿದೆ. ರಾಜ್ಯದ ವಿವಿಧೆಡೆ ಇಂದು ಸಂಭ್ರಮಾಚರಣೆ ಇದ್ದು ವಿಭಿನ್ನವಾಗಿ ಕನ್ನಡದ ಬಾವುಟ ಹಾರಾಡಿದೆ. ಎಲ್ಲೆಲ್ಲಿ ಹೇಗಿದೆ..?

ದೀಪಾವಳಿಗೆ ಆಘಾತ: ವಾಣಿಜ್ಯ ಬಳಕೆಯ LPG ಸಿಲಿಂಡರ್‌ ದರ 266 ರೂ. ಹೆಚ್ಚಳ!

ದೀಪಾವಳಿ (Diwali) ಸಂಭ್ರಮಕ್ಕೆ ನಡೆಯುತ್ತಿರುವ ಸಿದ್ಧತೆ ಮಧ್ಯೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆ ಗ್ರಾಹಕರಿಗೆ ಆಘಾತ ನೀಡಿದೆ. ಹೌದು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ (Commercial cooking gas) ದರ ಇಂದು, ಸೋಮವಾರದಿಂದ 266 ರೂ. ಹೆಚ್ಚಿಸಲಾಗಿದೆ. ಈ ನಡುವೆ ಗೃಹ ಬಳಕೆಯ ಗೃಹ ಬಳಕೆಯ ಎಲ್‌ಪಿಜಿ (LPG) ದರ ಏರಿಕೆಯಾಗಿಲ್ಲ ಎಂಬುವುದೇ ಕೊಂಚ ಸಮಾಧಾನದ ವಿಚಾರವಾಗಿದೆ.

ಮೋದಿ ಸೇರಿ ಗಣ್ಯರಿಂದ ಕನ್ನಡ ರಾಜ್ಯೋತ್ಸವದ ಶುಭಾಶಯ: ಕನ್ನಡದಲ್ಲೇ ಪಿಎಂ ಟ್ವೀಟ್!

ಕನ್ನಡ ರಾಜ್ಯೋತ್ಸವವೆಂದರೆ ಕನ್ನಡದ ಎಲ್ಲ ಮನಸ್ಸುಗಳು ಈ ನಾಡಿನ ಭವ್ಯ ಇತಿಹಾಸವನ್ನು ಸ್ಮರಿಸಿ, ಗೌರವಿಸುವ ನಾಡ ಹಬ್ಬವಿದ್ದಂತೆ. ಸಂಭ್ರಮದ ಹೊರತಾಗಿ ಇದು ಕನ್ನಡನಾಡಿನ ಏಳ್ಗೆಗೆ ಹಾಗೂ ಕನ್ನಡದ ಉಳಿವಿಗೆ ಎಲ್ಲರೂ ಸೇರಿ ನಿಭಾಯಿಸಬೇಕಾದ ಜವಾಬ್ದಾರಿಯನ್ನು ನೆನಪಿಸುವ ದಿನ ಕೂಡ ಹೌದು. ಇಂತಹ ಶುಭ ಸಂದರ್ಭದಲ್ಲಿ ಪ್ರಧಾನಿ ಮೋದಿ (Prime Minister Narendra Modi) ಸೇರಿ ಹಲವಾರು ರಾಜಕೀಯ ಗಣ್ಯರು ಕನ್ನಡದಲ್ಲೇ ಟ್ವೀಟ್ ಮಾಡಿ ಕನ್ನಡಿಗರಿಗೆ ಶುಭ ಕೋರಿದ್ದಾರೆ.

ಕೋವಿಡ್‌ ಮೂಲ: ಅಮೆರಿಕ ವರದಿಗೆ ಚೀನಾ ಸಿಡಿಮಿಡಿ!

ಕೋವಿಡ್‌ ಉಗಮದ (Covid 19 Origin) ಕುರಿತು ಅಮೆರಿಕದ ಗುಪ್ತಚರ ಸಂಸ್ಥೆಗಳು ಸಲ್ಲಿಕೆ ಮಾಡಿರುವ ವರದಿ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಚೀನಾ (China) ಸರ್ಕಾರ, ಇದು ಸಂಪೂರ್ಣ ರಾಜಕೀಯ ಪ್ರೇರಿತ ಮತ್ತು ತಪ್ಪು ವರದಿ ಎಂದು ಕಿಡಿಕಾರಿದೆ.

T20 World Cup: ಟೀಂ ಇಂಡಿಯಾ ನೀರಸ ಪ್ರದರ್ಶನಕ್ಕೆ ಕಿಡಿಕಾರಿದ ಕ್ರಿಕೆಟ್ ಅಭಿಮಾನಿಗಳು..!

 ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ (Team India), ನ್ಯೂಜಿಲೆಂಡ್ ಎದುರು ಆಘಾತಕಾರಿ ಸೋಲು ಕಾಣುವ ಮೂಲಕ ಸೆಮೀಸ್‌ ಹಾದಿಯನ್ನು ಮತ್ತಷ್ಟು ದುರ್ಗಮಗೊಳಿಸಿಕೊಂಡಿದೆ.

ಶಿವಣ್ಣನ ಪರಿಸ್ಥಿತಿಯನ್ನು ಬಿಚ್ಚಿಟ್ಟರು ಕಿಚ್ಚ ಸುದೀಪ್!

ಕನ್ನಡ ಚಿತ್ರರಂಗ ಮುತ್ತು ರಾಜನ ಮೂರು ಪುತ್ರರು ಚಿತ್ರರಂಗದ ಆಸ್ತಿ. ಪ್ರಚಾರವೇ  ಜೀವನ ಎನ್ನುವ ಸಮಯದಲ್ಲಿ ಪ್ರಚಾರವನ್ನು ದಿಕ್ಕರಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಪುನೀತ್ ರಾಜ್‌ಕುಮಾರ್. ಅಪ್ಪು ಇಲ್ಲದೇ ಅದೆಷ್ಟೋ ಮನೆಗಳಲ್ಲಿ ದೀಪವೇ ಇಲ್ಲದಂತಾಗಿದೆ.  ಶಿವಣ್ಣನಿಗೆ ಆನೆ ಬಲದಂತಿದ್ದರು. ಈಗ ಒಂಟಿಯಾಗಿರುವ ಶಿವಣ್ಣ ಪರಿಸ್ಥಿತಿಯನ್ನು ಕಿಚ್ಚ ಸುದೀಪ್ ಬಿಚ್ಚಿಟ್ಟಿದ್ದಾರೆ.

ಪುನೀತ್‌ ನೋಡಿಕೊಳ್ಳುತ್ತಿದ್ದ 1800  ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊತ್ತ ವಿಶಾಲ್

ಸುಮಾರು 25  ಲಕ್ಷಕ್ಕೂ ಅಧಿಕ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಸಿನಿಮಾ ಲೋಕದ ಸ್ನೇಹಿತರು ಗೆಳೆಯನ ಸ್ಮರಿಸಿದ್ದಾರೆ.

ಭೀಕರ ರಸ್ತೆ ಅಪಘಾತ: ಮಾಜಿ ಮಿಸ್ ಕೇರಳ ಅನ್ಸಿ ಕಬೀರ್, ರನ್ನರ್ ಅಪ್ ಅಂಜನಾ ಬಲಿ!

2019ರ ಮಿಸ್ ಕೇರಳ(Miss Kerala-2019) ವಿಜೇತೆ ಅನ್ಸಿ ಕಬೀರ್(Ansi Kabeer) ಹಾಗೂ ರನ್ನರ್-ಅಪ್ ಅಂಜನಾ ಶಾಜನ್ (Anjana Shajan) ಕೊಚ್ಚಿ ಸಮೀಪದ ವಿಟಿಲ್ಲಾದಲ್ಲಿ ಸೋಮವಾರ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ವರದಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!