IPLಗೆ ಇನ್ನೆರಡು ತಂಡಕ್ಕೆ ಅವಕಾಶ, ರಾಜ್ಯಕ್ಕೆ ಲಾಕ್‌ಡೌನ್ ಆತಂಕ; ಮಾ.14ರ ಟಾಪ್ 10 ಸುದ್ದಿ!

By Suvarna News  |  First Published Mar 14, 2021, 4:41 PM IST

ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಸಿಎಂ ಯಡಿಯೂರಪ್ಪ ತುರ್ತು ಸಭೆ ಕರೆದಿದ್ದಾರೆ. ಇತ್ತ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೇಲೆ ದಾಳಿಯಾಗಿಲ್ಲ ಎಂದು ಚುನಾವಣಾ ಆಯೋಗ ವರದಿ ನೀಡಿದೆ. ಹೊಸ ಎರಡು ತಂಡಗಳ ಐಪಿಎಲ್ ಸೇರ್ಪಡೆಗೆ ಹರಾಜು ಪ್ರಕ್ರಿಯೆ ತಯಾರಿ ಆರಂಭಗೊಂಡಿದೆ. ಡೂಪ್ಲಿಕೇಟ್ ಸನ್ನಿ ಲಿಯೋನ್, ಶಾಲಾ-ಕಾಲೇಜುಗಳಿಗೆ 15 ದಿನ ರಜೆನಾ? ಸೇರಿದಂತೆ ಮಾರ್ಚ್ 14ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.


TMCಗೆ ತೀವ್ರ ಮುಖಭಂಗ; CM ಮಮತಾ ಮೇಲೆ ದಾಳಿ ನಡೆದಿಲ್ಲ ಎಂದ ಚುನಾವಣಾ ಆಯೋಗ!...

Latest Videos

undefined

ನಂದಿಗ್ರಾಮ ಪ್ರಚಾರ ವೇಳೆ ಗಾಯಗೊಂಡು ಆಸ್ಪತ್ರೆ ಸೇರಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚೇತರಿಸಿಕೊಂಡು ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ. ಇದರ ಬೆನ್ನಲ್ಲೇ ಈ ದಾಳಿ ಪೂರ್ವನಿಯೋಜಿತ ಎಂದಿದ್ದ ಮಮತಾ ಹಾಗೂ ಟಿಎಂಸಿಗೆ ತೀವ್ರ ಮುಖಭಂಗವಾಗಿದೆ.

ಕಾಲೇಜ್ ಕ್ಯಾಂಪಸ್‌ನಲ್ಲಿ ಪ್ರಪೋಸ್; ವಿದ್ಯಾರ್ಥಿಗಳಿಬ್ಬರನ್ನು ಸಸ್ಪೆಂಡ್ ಮಾಡಿದ ವಿಶ್ವವಿದ್ಯಾಲಯ!...

ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯ ಸ್ವರೂಪ ಪಡೆದುಕೊಂಡಿದೆ. ಕೊನೆಗೂ ಧೈರ್ಯ ಮಾಡಿದ ಹುಡುಗಿ ತನ್ನ ಇನಿಯನಿಗೆ ಗುಲಾಬಿ ಹೂ ಹಿಡಿದು ಮೊಣಕಾಲೂರಿ  ಪ್ರೇಮ ನಿವೇದನೆ ಮಾಡಿಕೊಂಡಿದ್ದಾಳೆ. ಆಕೆ ಪ್ರೀತಿಗೆ ಹುಡುಗ ಕೂಡ ಒಪ್ಪಿ ಬಿಗಿದಪ್ಪಿದ್ದಾನೆ. ಇಷ್ಟೆ ನೋಡಿ, ಇಬ್ಬರು ಕಾಲೇಜ್‌ನಿಂದ ಸಸ್ಪೆಂಡ್ ಆಗಿದ್ದಾರೆ.

ರಾಜ್ಯದಲ್ಲಿ ಕೊರೋನಾ ಹೆಚ್ಚಳ: ಮಹತ್ವದ ಸಭೆ ಕರೆದ ಸಿಎಂ...

ಕರ್ನಾಟಕದಲ್ಲಿ  ದಿನದಿಂದ ದಿನಕ್ಕೆ ಮತ್ತೆ ಕೊರೋನಾ ಪಾಸಿಟಿವ್ ಕೇಸ್‌ಗಳು ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಇನ್ನು ಈ ಸಂಬಂಧ ಸಿಎಂ ಸಭೆ ಕರೆದಿರುವುದು ಕುತೂಹಲ ಮೂಡಿಸಿದೆ.

ಮೇನಲ್ಲಿ 2 ಹೊಸ ಐಪಿಎಲ್‌ ತಂಡಗಳ ಹರಾಜು..!...

15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ 10 ತಂಡಗಳು ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನುವಂತಹ ಸುದ್ದಿಯೊಂದು ಹೊರಬಿದ್ದಿದ್ದು, ಮೇ ತಿಂಗಳಿಗನಲ್ಲಿ 2 ಹೊಸ ತಂಡಗಳು ಸೇರ್ಪಡೆಯಾಗಲಿವೆ ಎಂದು ವರದಿಯಾಗಿದೆ. 

ಥೇಟ್ ಸನ್ನಿ ಲಿಯೋನ್ ಥರಾನೇ ಇದ್ದಾಳೆ ಈ ಚೆಲುವೆ...

ಒಬ್ಬರ ತರ ಪ್ರಪಂದಲ್ಲಿ 7 ಜನ ಇರ್ತಾರೆ ಎನ್ನುತ್ತಾರಲ್ವಾ..? ಇದೀಗ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರನ್ನೇ ಹೋಲೋ ಹುಡುಗಿಯೊಬ್ಬಳು ವೈರಲ್ ಆಗ್ತಿದ್ದಾಳೆ.

ವಿಲೀನಗೊಂಡ ಬ್ಯಾಂಕ್‌ ಚೆಕ್‌ ಏ.1ರಿಂದ ಅಮಾನ್ಯ!...

ವಿಜಯಾ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌ ಸೇರಿದಂತೆ ಇತ್ತೀಚೆಗೆ ವಿಲೀನಗೊಂಡಿರುವ ಸಾರ್ವಜನಿಕ ವಲಯದ 8 ಬ್ಯಾಂಕುಗಳ ಚೆಕ್‌ ಮತ್ತು ಪಾಸ್‌ಬುಕ್‌ಗಳು ಏ.1ರಿಂದ ಅಮಾನ್ಯಗೊಳ್ಳಲಿವೆ. ಈ ಹಿನ್ನೆಲೆಯಲ್ಲಿ ಈ ಬ್ಯಾಂಕುಗಳ ಗ್ರಾಹಕರು ತಮ್ಮ ಬಳಿ ಇರುವ ಹಳೆಯ ಚೆಕ್‌ಬುಕ್‌ ಹಾಗೂ ಪಾಸ್‌ಬುಕ್‌ಗಳನ್ನು ಪರಿಷ್ಕರಿಸಿಕೊಳ್ಳಬೇಕಿದೆ.

2022ರ ಏ.1ರಿಂದ 15 ವರ್ಷ ಹಳೆಯ ಸರ್ಕಾರಿ ವಾಹನಗಳು ರಸ್ತೆಯಿಂದ ಔಟ್‌!...

ಪರಿಸರ ಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ 15 ವರ್ಷ ಹಳೆಯ ಸರ್ಕಾರಿ ವಾಹನಗಳನ್ನು ರಸ್ತೆಯಿಂದ ಹಿಂದಕ್ಕೆ ಪಡೆಯುವ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ಕೊಟ್ಟಿದೆ. 

ಶಾಲಾ-ಕಾಲೇಜುಗಳಿಗೆ 15 ದಿನ ರಜೆನಾ? ಸುತ್ತೋಲೆ ಬಗ್ಗೆ ಶಿಕ್ಷಣ ಇಲಾಖೆ ಸ್ಪಷ್ಟನೆ...

ಶಾಲಾ-ಕಾಲೇಜುಗಳ ರಜೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುತ್ತೋಲೆ ಅಸಲಿಯೋ,ನಕಲಿಯೋ ಎನ್ನುವ ಬಗ್ಗೆ ಶಿಕ್ಷಣ ಇಲಾಖೆಯಿಂದ ಸ್ಪಷ್ಟನೆ ಸಿಕ್ಕಿದೆ.

'ಪ್ರಧಾನಿ ಮೋದಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ವಹಿಸಿದ್ರೆ ಬಿಜೆಪಿಗರು ಒಪ್ಪುವರೇ'?...

ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಸಿದಂತೆ ಪ್ರಧಾನಿ ನರೇಂದ್ರ ಮೋದಿ ಮಧ್ಯೆ ಪ್ರವೇಶ ಮಾಡಬೇಕೆನ್ನುವುದಕ್ಕೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

click me!